11:39 AM (IST) May 11

ಹನಿಮೂನ್ ಮೊಟಕುಗೊಳಿಸಿ ಯುದ್ಧಕ್ಕೆ ತೆರಳಿದ ಉತ್ತರ ಕನ್ನಡ ಯೋಧ

ಹನಿಮೂನ್ ಮೊಟಕುಗೊಳಿಸಿ ದೇಶಸೇವೆಯ ಪಣತೊಟ್ಟು ಯುದ್ಧ ಭೂಮಿಯತ್ತ ಹೊರಟ ಯೋಧನ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ನಿವಾಸಿವಾದ ಯೋಧ ಜಯಂತ್ ಎಂಬುವವರೇ ಇದೀಗ ದೇಶಸೇವೆಗೆ ತೆರಳಿದ ಯೋಧ. 

ಪೂರ್ತಿ ಓದಿ
11:22 AM (IST) May 11

ದಿಢೀರ್‌ ತಪಾಸಣೆ, ವಾರಕ್ಕೂ ಮುಂಚೆ ಘೋಷಣೆ: ವಾಹನ ಬಂದಾಗ ಕಂಪನಿಗಳು ಸ್ತಬ್ಧ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಪರಿಸರ ಹದಗೆಡುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಮಾಲಿನ್ಯ ತಪಾಸಣಾ ಯಂತ್ರೋಪಕರಣವುಳ್ಳ ಸುಸಜ್ಜಿತ ವಾಹನ ಇಲ್ಲೀಗ ಹರಿದಾಡುತ್ತಿದೆ. 

ಪೂರ್ತಿ ಓದಿ
10:19 AM (IST) May 11

ರಾಜ್ಯಾದ್ಯಂತ ಭದ್ರತೆಗೆ ಕಠಿಣ ಕ್ರಮ ಕೈಗೊಳ್ಳಿ: ಸಿಎಂ ಸಿದ್ದರಾಮಯ್ಯ

‘ರಾಜ್ಯದಲ್ಲಿ ಜನರ ರಕ್ಷಣೆ ಹಾಗೂ ಭದ್ರತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪ್ರಮುಖ ಸ್ಥಳಗಳಲ್ಲಿ ಮಾಕ್‌ ಡ್ರಿಲ್‌ ನಿರ್ವಹಿಸಬೇಕು. ಜತೆಗೆ ರಾಜ್ಯದಲ್ಲಿ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಿ, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಪೂರ್ತಿ ಓದಿ
10:08 AM (IST) May 11

ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಹೆಚ್ಚಳ: ಸರ್ಕಾರಕ್ಕೆ ಭಾರಿ ತಲೆಬಿಸಿ

ರಾಜ್ಯದ ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಏರಿಕೆಯಾಗುತ್ತಿರುವ ರೀತಿಯಲ್ಲೇ, ತೆರಿಗೆ ಬಾಕಿ ಪ್ರಮಾಣವೂ ಹೆಚ್ಚಳವಾಗುತ್ತಿದೆ. 2024-25ನೇ ಸಾಲಿನ ಅಂತ್ಯಕ್ಕೆ ಬಾಕಿ ತೆರಿಗೆ ಪ್ರಮಾಣ 2,657.70 ಕೋಟಿ ರು. ತಲುಪಿದೆ. 

ಪೂರ್ತಿ ಓದಿ
10:06 AM (IST) May 11

ನೀಟ್‌ ಕೋಟಾ ರದ್ದತಿ ಪರಿಣಾಮವೇನು?: ರಾಜ್ಯಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳ ಪ್ರವೇಶದಲ್ಲಿ ರಾಜ್ಯ ಅಥವಾ ನಿವಾಸಿ ಕೋಟಾ(ಡೊಮಿಸೈಲ್‌) ಮೀಸಲಾತಿ ರದ್ದಾಗುವ ಆತಂಕ ಎದುರಾಗಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ಅದರಿಂದಾಗುವ ಪರಿಣಾಮಗಳ ಬಗ್ಗೆ ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳ ಅಭಿಪ್ರಾಯ ಕೇಳಿದೆ.

ಪೂರ್ತಿ ಓದಿ

09:55 AM (IST) May 11

ಬೆಂಗಳೂರು, ಮೈಸೂರಲ್ಲಿ ಭಾನುವಾರ ಮಳೆ ಬರುತ್ತಾ? ಹವಾಮಾನ ಇಲಾಖೆ ಮುನ್ಸೂಚನೆ ಏನಿದೆ?

ಕರ್ನಾಟಕದಲ್ಲಿ ಇವತ್ತು ಭಾನುವಾರ ಬಿಸಿಲು ಜಾಸ್ತಿ ಇರುತ್ತದೆ. ದಕ್ಷಿಣ ಒಳನಾಡಿನ ಬೆಂಗಳೂರು ಹಾಗೂ ಕರಾವಳಿಯ ಮಂಗಳೂರಿನ ಕೆಲವು ಕಡೆ ಮಳೆ ಬರಬಹುದು. ಗುಡುಗು-ಸಿಡಿಲು ಜೊತೆಗೆ ಮಳೆ ಬರುವ ಸಾಧ್ಯತೆ ಇದೆ.

ಪೂರ್ತಿ ಓದಿ
08:59 AM (IST) May 11

ಸಾಲ ಮರುಪಾವತಿಯಲ್ಲಿ ದ.ಕನ್ನಡ ನಂ.1: ಡಿ.ಕೆ.ಶಿವಕುಮಾರ್‌

ರಾಜ್ಯದಲ್ಲಿ ಅತಿ ಹೆಚ್ಚು ಶಿಸ್ತಿನಿಂದ ಬ್ಯಾಂಕು, ಸಹಕಾರಿ ಸಂಘಗಳಲ್ಲಿ ಸಾಲಗಳು ಮರುಪಾವತಿಯಾಗುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಶ್ಲಾಘಿಸಿದ್ದಾರೆ. 

ಪೂರ್ತಿ ಓದಿ
08:24 AM (IST) May 11

ಶುದ್ಧ ನೀರು ಘಟಕದಲ್ಲಿನ್ನು ಯುಪಿಐ ಪೇಮೆಂಟ್: ದಿನದ 24 ಗಂಟೆ ಸೇವೆ

ಶುದ್ಧ ಕುಡಿಯುವ ನೀರಿನ ಘಟಕಗಳನ್ನು (ಆರ್‌ಒ) ಮೇಲ್ದರ್ಜೆಗೇರಿಸುವುದಕ್ಕೆ ಚಿಂತನೆ ನಡೆಸಿರುವ ಬೆಂಗಳೂರು ಜಲಮಂಡಳಿಯು, ದಿನದ 24 ಗಂಟೆ ಸೇವೆ ನೀಡುವುದರೊಂದಿಗೆ ನಾಣ್ಯ ಸಮಸ್ಯೆ ಪರಿಹಾರಕ್ಕೆ ಯುಪಿಐ ಪೇಮೆಂಟ್‌ ಸಿಸ್ಟಂ ಅಳವಡಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಪೂರ್ತಿ ಓದಿ
08:05 AM (IST) May 11

ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ. ಸುಬ್ಬಣ್ಣ ಅಯ್ಯಪ್ಪನ್ ನಿಗೂಢ ಶವವಾಗಿ ಪತ್ತೆ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೃಷಿ ವಿಜ್ಞಾನಿ ಡಾ. ಸುಬ್ಬಣ್ಣ ಅಯ್ಯಪ್ಪನ್ ಅವರ ಶವ ಮೈಸೂರಿನ ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ. ಮೇ 7 ರಿಂದ ನಾಪತ್ತೆಯಾಗಿದ್ದ ಅವರ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೂರ್ತಿ ಓದಿ
06:21 AM (IST) May 11

ಮೇ.27ಕ್ಕೆ ಕೇರಳಕ್ಕೆ ಮಾನ್ಸೂನ್ ಪ್ರವೇಶ ಸಾಧ್ಯತೆ: ವಾಡಿಕೆಗಿಂತ ಮೊದಲೇ ಮಳೆ ಆಗಮನದ ನಿರೀಕ್ಷೆ

ಕೇರಳಕ್ಕೆ ನೈಋತ್ಯ ಮಾನ್ಸೂನ್ ಮಳೆ ಮೇ.27ರಂದು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ವಾಡಿಕೆಯಂತೆ ಜೂ.1ರಂದು ಮಳೆ ಕೇರಳಕ್ಕೆ ಕಾಲಿಡುತ್ತದೆ. 

ಪೂರ್ತಿ ಓದಿ
05:35 AM (IST) May 11

ದೇಶ ಕಾಯುವ ಯೋಧರ ನಿಧಿಗೆ ರಾಜೇಂದ್ರ ಕುಮಾರ್‌ ₹3 ಕೋಟಿ

ದೇಶ ಕಾಯುವ ಸೈನಿಕರ ಅಭಿವೃದ್ಧಿಗಾಗಿ 3 ಕೋಟಿ ರು.ನೀಡುವುದಾಗಿ ‘ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌’ ಸಂಸ್ಥಾಪಕ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ‘ಸಹಕಾರ ರತ್ನ’ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಘೋಷಿಸಿದ್ದಾರೆ. 

ಪೂರ್ತಿ ಓದಿ
05:00 AM (IST) May 11

ದೇಶದ ಅಭಿವೃದ್ಧಿಗೆ ಮಹಿಳೆಯರು ಸಹಕಾರಿ: ಡಿಸಿಎಂ ಡಿ.ಕೆ.ಶಿವಕುಮಾರ್‌

ಸಹಕಾರಿ ತತ್ವಕ್ಕೆ ಮಹಿಳೆಯರು ಶಕ್ತಿ ತುಂಬುತ್ತಿದ್ದು, ಇದು ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಪೂರ್ತಿ ಓದಿ