ಚಿತ್ರದುರ್ಗದ ಭರಮಸಾಗರ ಗ್ರಾಮದ ಡಿವಿಎಸ್ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಕೊಟ್ರೇಶ್, ಹಾಸ್ಟೆಲ್ ವಾರ್ಡನ್ ಕಿರುಕುಳದಿಂದ ನೊಂದು ಶಾಲಾ ಕಟ್ಟಡದ ಎರಡನೇ ಮಹಡಿಯಿಂದ ಜಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
- Home
- News
- State
- Karnataka News Live: 2ನೇ ಮಹಡಿಯಿಂದ ಜಿಗಿದ SSLC ವಿದ್ಯಾರ್ಥಿ; ನಿನ್ನೆಯೇ ಅಪ್ಪನಿಗೆ ವಿಷಯ ಹೇಳಿದ್ದ ಮಗ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
Karnataka News Live: 2ನೇ ಮಹಡಿಯಿಂದ ಜಿಗಿದ SSLC ವಿದ್ಯಾರ್ಥಿ; ನಿನ್ನೆಯೇ ಅಪ್ಪನಿಗೆ ವಿಷಯ ಹೇಳಿದ್ದ ಮಗ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬೆಂಗಳೂರು: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಫೈರ್ಮ್ಯಾನ್ ಹುದ್ದೆಯನ್ನು ‘ಫೈರ್ ಫೈಟರ್’ ಮತ್ತು ಲೀಡಿಂಗ್ ಫೈರ್ಮ್ಯಾನ್ ಹುದ್ದೆಯನ್ನು ‘ಲೀಡಿಂಗ್ ಫೈಯರ್ ಫೈಟರ್’ ಎಂದು ಮರು ನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಕೇಂದ್ರ ಗೃಹ ಮಂತ್ರಾಲಯದ ಸ್ಟ್ಯಾಂಡಿಂಗ್ ಫೈರ್ ಅಡ್ವೈಸರಿ ಕಮಿಟಿ(ಎಸ್ಎಫ್ಎಸಿ) ಸಭೆಯ ತೀರ್ಮಾನದಂತೆ ಅಗ್ನಿಶಾಮಕ ಇಲಾಖೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಎರಡೂ ಹುದ್ದೆಗಳ ಹೆಸರನ್ನು ಬದಲಿಸಿದೆ.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ(ವೃಂದ ಮತ್ತು ನೇಮಕಾತಿ) ನಿಯಮಗಳು 2013ರ ಸಮಗ್ರ ಪರಿಷ್ಕರಣೆ ವೇಳೆ ಈ ಮರು ನಾಮಕರಣವನ್ನು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಿಕೊಳ್ಳಲು ಆದೇಶದಲ್ಲಿ ಸೂಚಿಸಲಾಗಿದೆ
Karnataka News Live 16 february 2026 2ನೇ ಮಹಡಿಯಿಂದ ಜಿಗಿದ SSLC ವಿದ್ಯಾರ್ಥಿ; ನಿನ್ನೆಯೇ ಅಪ್ಪನಿಗೆ ವಿಷಯ ಹೇಳಿದ್ದ ಮಗ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
Karnataka News Live 16 february 2026 ಮಧ್ಯಾಹ್ನ ಸ್ಫೋಟಿಸುವುದಾಗಿ ರಾಜ್ಯದ ಹಲವು ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ, ಆಘಾತಕಾರಿ ಇ-ಮೇಲ್
ಧಾರವಾಡ, ದಾವಣಗೆರೆ, ಮತ್ತು ಕೊಡಗು ಜಿಲ್ಲೆಗಳ ನ್ಯಾಯಾಲಯಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ರಾಜ್ಯಾದ್ಯಂತ ಆತಂಕ ಸೃಷ್ಟಿಯಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳಗಳು, ನ್ಯಾಯಾಲಯದ ಆವರಣಗಳನ್ನು ಖಾಲಿ ಮಾಡಿಸಿ ತೀವ್ರ ಶೋಧ ಕಾರ್ಯ ನಡೆಸಿವೆ.
Karnataka News Live 16 february 2026 ಆನಂದಪುರ - ಮರದ ರಂಬೆ ಮರ್ಮಾಂಗಕ್ಕೆ ತಗುಲಿ ವ್ಯಕ್ತಿ ಸಾವು
ಜಾನುವಾರಿಗೆ ಮೇವು ಮತ್ತು ಸೊಪ್ಪು ತರಲು ಕಾಡಿಗೆ ಹೋಗಿ ಮರ ಹತ್ತಿ ಸೊಪ್ಪು ಕಡಿಯುತ್ತಿರುವಾಗ ಕಡಿದ ರಂಬೆ ಮರ್ಮಾಂಗಕ್ಕೆ ತಗುಲಿ ವ್ಯಕ್ತಿ ಸಾವನಪ್ಪಿದ ದುರ್ಘಟನೆ ಶನಿವಾರ ನಡೆದಿದೆ.
ಸಮೀಪದ ಉಳ್ಳೂರು ಬ್ರಾಹ್ಮಣ ಮಂಚಾಲೆ ಗ್ರಾಮದ ನಿವಾಸಿಯಾದ ಹೇಮಂತ್ (27) ಮೃತ ವ್ಯಕ್ತಿ.
Karnataka News Live 16 february 2026 ಮಹಾಮಾರಿ ಕಾಯಿಲೆ ಬಂತು, ಆರು ತಿಂಗಳಿಗೆ ಮದುವೆ ಮುಗೀತು - ಗೂಳಿ ಸಿನಿಮಾ ನಟಿ ಮಮತಾ ಹೆಗಲೇರಿದ ಶನಿ! ಪಾಪ..!
Gooli Kannada Movie: ಕಿಚ್ಚ ಸುದೀಪ್ ನಟನೆಯ ಗೂಳಿ ಸಿನಿಮಾ ಹೀರೋಯಿನ್ ಮಮತಾ ಮೋಹನ್‌ದಾಸ್ ಅವರು ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದರು, ಆದರೆ ವೈಯಕ್ತಿಕ ಜೀವನ ಮಾತ್ರ ಸರಿ ಹೋಗಲೇ ಇಲ್ಲ. ಈ ಬಗ್ಗೆ ಅವರು ಮಾತನಾಡಿದ್ದಾರೆ.
Karnataka News Live 16 february 2026 ಬೇಲೂರು To ಕುಣಿಗಲ್ To ಬಿಹಾರ - ರಿವೀಲ್ ಆಯ್ತು ಆಂಟಿ ಪ್ರಿಯಾಂಕಾ ಖತರ್ನಾಕ್ ಪ್ಲಾನ್
ತನ್ನ ಕೊ*ಲೆಯಾಗಿದೆ ಎಂದು ಬಿಂಬಿಸಿ, ಪ್ರಿಯಕರ ಡೇವಿಡ್ ಜೊತೆ 30 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಲು ಪ್ರಿಯಾಂಕಾ ಪ್ಲಾನ್ ಮಾಡಿದ್ದಳು. ಆದರೆ, ಬಿಹಾರಕ್ಕೆ ತೆರಳುವ ಮುನ್ನವೇ ಬೇಲೂರು ಪೊಲೀಸರು ಟವರ್ ಲೊಕೇಶನ್ ಆಧರಿಸಿ ಕುಣಿಗಲ್‌ನಲ್ಲಿ ಇಬ್ಬರನ್ನೂ ಪತ್ತೆಹಚ್ಚಿದ್ದಾರೆ.
Karnataka News Live 16 february 2026 ಹಾಸನ ನಿವೇಶನ ಒತ್ತುವರಿ ಪ್ರಕರಣ - ಪುಷ್ಪಾ ಅರುಣ್‌ಕುಮಾರ್‌ಗೆ ಮೊದಲ ಹಂತದ ಗೆಲುವು
ಹಾಸನದ ವಿದ್ಯಾನಗರ ಬಡಾವಣೆಯ ನಿವೇಶನ ಒತ್ತುವರಿ ಪ್ರಕರಣದಲ್ಲಿ, ಸ್ಯಾಂಡಲ್‌ವುಡ್ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್‌ಗೆ ತಾತ್ಕಾಲಿಕ ಮುನ್ನಡೆ ಸಿಕ್ಕಿದೆ. ಪ್ರಕರಣ ಇತ್ಯರ್ಥವಾಗುವವರೆಗೆ ವಿವಾದಿತ ನಿವೇಶನದ ಸ್ವರೂಪ ಬದಲಾಯಿಸದಂತೆ ಎರಡೂ ಕಕ್ಷಿದಾರರಿಗೆ ನಿರ್ಬಂಧ ವಿಧಿಸಲಾಗಿದೆ.
Karnataka News Live 16 february 2026 ಅಜ್ಜಿಯ ಇಷ್ಟ ತಂದಿತು ಸಂಕಷ್ಟ - ಅಜ್ಜಿ ತಿಥಿಗೆ ಆಮೆ ಬೇಟೆ ಆಡಿದವರ ಸೆರೆ
ಅಜ್ಜಿಯ ತಿಥಿ ಕಾರ್ಯಕ್ಕೆ ಮಾಂಸಾಹಾರ ಮಾಡಲು ನದಿಯಲ್ಲಿ ಆಮೆ ಬೇಟೆಯಾಡಿ ಮಾಂಸ ಸುಡುವಾಗ ನಾಲ್ವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಮಣಿಕಂಠ(42), ರಾಜೇಂದ್ರ (54), ವಿಘ್ನೇಶ್ (32), ಪ್ರಶಾಂತ್(35) ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Karnataka News Live 16 february 2026 ಗಂಡನೂ ಇಲ್ಲ, ಡೇವಿಡ್ಡೂ ಸಿಗಲಿಲ್ಲ - ಪೊಲೀಸ್ ಠಾಣೆಯಿಂದ ಹೋಗಿದ್ದೆಲ್ಲಿಗೆ ಡ್ರಾಮಾ ಕ್ವೀನ್ ಪ್ರಿಯಾಂಕಾ!
Karnataka News Live 16 february 2026 ಲಕ್ಷಾಂತರ ಭಕ್ತಸಾಗರದ ನಡುವೆ ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಮಹಾಶಿವರಾತ್ರಿ
ಗುರುದೇವ್ ಶ್ರೀ ಶ್ರೀ ರವಿ ಶಂಕರ್ ಅವರ ಸಾನ್ನಿಧ್ಯದಲ್ಲಿ 45ನೇ ವರ್ಷದ ಶಿವರಾತ್ರಿ ಆಚರಣೆ; ಮೂಲ ಸೋಮನಾಥ ಜ್ಯೋತಿರ್ಲಿಂಗದ ಐತಿಹಾಸಿಕ ಅವಶೇಷಗಳ ದರ್ಶನ ಭಕ್ತರಿಗೆ ಲಭಿಸಿದ ಅಪರೂಪದ ಅವಕಾಶ
Karnataka News Live 16 february 2026 ಪ್ರಿನ್ಸಿಪಾಲ್ ವಾರ್ನಿಂಗ್ ಬೆನ್ನಲ್ಲೇ 10ನೇ ಕ್ಲಾಸ್ ಎಕ್ಸಾಂಗೆ ವೈಭವ್ ಸೂರ್ಯವಂಶಿ ಚಕ್ಕರ್! ಅಷ್ಟಕ್ಕೂ ಆಗಿದ್ದೇನು?
ಸಮಸ್ತಿಪುರ(ಬಿಹಾರ): ಭಾರತ ಅಂಡರ್-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿ 10ನೇ ಕ್ಲಾಸ್ ಎಕ್ಸಾಂಗೆ ಚಕ್ಕರ್ ಹೊಡೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಯಾಕೆ ಹೀಗೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಡೀಟೈಲ್ಸ್
Karnataka News Live 16 february 2026 ಭೀಕರ ಅಪಘಾತದಲ್ಲಿ ಐವರ ಸಾವು - ಯುವಕರು ಮದ್ಯಪಾನ ಮಾಡಿದ್ರಾ? ಪೊಲೀಸರು ಹೇಳಿದ್ದೇನು?
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೊಡ್ಡಬಳ್ಳಾಪುರ ಮೂಲದ ಐವರು ಕಾರಿನಲ್ಲಿ ಅತಿ ವೇಗವಾಗಿ ಚಲಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
Karnataka News Live 16 february 2026 ಒಲ್ಲೆ ಎಂದರೂ ಜೆನ್‌ಝಿ ಕತ್ತೆಗಳಿಗೆ ಮದುವೆ ಭಾಗ್ಯ!
ಬೇರೇನೋ ಕಾರಣ ಹೇಳಿ ಕರೆದುಕೊಂಡು ಬಂದು ಈಗ ಮದುವೆ ಮಾಡಲು ಹೊರಟಿದ್ದಾರೆಂದು ತಿಳಿದುಕೊಂಡ ಕತ್ತೆ ‘ಮದುವೆ ಬೇಡಪ್ಪಾ ಬೇಡಾ..’ಎಂದು ಓಟಕ್ಕಿತ್ತಿತು. ಮದುವೆಗೆ ಗಂಡೇ ಇರದಿದ್ದರೆ ಕಷ್ಟ ಅಂತ ಒಂದಿಬ್ಬರು ಅದರ ಹಿಂದೆ ಓಡಿ ಹಿಡಿದುಕೊಂಡರು.
Karnataka News Live 16 february 2026 ಅಮೆರಿಕದಲ್ಲಿ ನಾಪತ್ತೆಯಾಗಿದ್ದ ತುಮಕೂರಿನ ಸಾಕೇತ್ ಆತ್ಮ*ತ್ಯೆ ಶಂಕೆ - ನಡವಳಿಕೆಯು ಬದಲಾಗಿತ್ತು
ಎರಡು ವಾರದ ಹಿಂದೆ ನಾಪತ್ತೆಯಾಗಿದ್ದ ಬರ್ಕ್‌ಲೆಯ ಕ್ಯಾಲಿಫೋರ್ನಿಯಾ ವಿವಿಯ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಬರ್ಕಲಿ ಹಿಲ್ಸ್ ಸಮೀಪದ ಅನ್ಜಾ ಕೆರೆಯಲ್ಲಿ ಸಾಕೇತ್ ಶವ ಪತ್ತೆಯಾಗಿದೆ ಎನ್ನಲಾಗಿದೆ.
Karnataka News Live 16 february 2026 KSRTC ಬಸ್ ಡಿಕ್ಕಿಯಿಂದ ಎರಡೂ ಕೈ ಊನ - ನೊಂದ ಟೆಕ್ಕಿ ಯುವತಿಗೆ ಹೈಕೋರ್ಟ್ ಮಹಾ ತೀರ್ಪು
KSRTC ಬಸ್ ಡಿಕ್ಕಿಯಿಂದ ಕೈಗಳನ್ನು ಕಳೆದುಕೊಂಡು ಐಟಿ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದ ಮಹಿಳೆಗೆ ಅಪಘಾತ ಪರಿಹಾರ ನ್ಯಾಯಾಧಿಕರಣವು ಕೇವಲ 2.80 ಲಕ್ಷ ರೂ. ಪರಿಹಾರ ನೀಡಿತ್ತು. ಹೈಕೋರ್ಟ್ ಮಹಿಳೆ ಭವಿಷ್ಯದ ಆದಾಯ ನಷ್ಟ ಪರಿಗಣಿಸಿ ಪರಿಹಾರದ ಮೊತ್ತವನ್ನು 15 ಲಕ್ಷ ರೂ.ಗೆ ಹೆಚ್ಚಿಸಿ ಮಹತ್ವದ ಆದೇಶ ನೀಡಿದೆ.
Karnataka News Live 16 february 2026 ಬೇಡವಾಗಿದ್ದ ಗಂಡ, ಬೇಕಿದ್ದ ಡೇವಿಡ್ - ಪೊಲೀಸರ ಮುಂದೆ ಇಂಚಿಂಚು ಲವ್ ಕಹಾನಿ ಹೇಳಿದ ಪ್ರಿಯಾಂಕಾ
30 ಲಕ್ಷ ಮೌಲ್ಯದ ಒಡವೆಗಳೊಂದಿಗೆ ನಾಪತ್ತೆಯಾಗಿದ್ದ ಪ್ರಿಯಾಂಕಾ, ತಾನು ಕೊ*ಲೆಯಾಗಿದ್ದೇನೆಂದು ಬಿಂಬಿಸಿ ಪ್ರಿಯಕರನೊಂದಿಗೆ ಪರಾರಿಯಾಗಲು ಯತ್ನಿಸಿದ್ದಳು. ಪತಿ ಜೊತೆಗಿನ ಜೀವನದಲ್ಲಿ ಅಸಮಾಧಾನಗೊಂಡಿದ್ದ ಆಕೆ, ತನ್ನ ಕೊಲೆ ನಾಟಕದ ಮೂಲಕ ಮಧ್ಯಪ್ರದೇಶಕ್ಕೆ ಹೋಗಲು ಯೋಜಿಸಿದ್ದಳು.
Karnataka News Live 16 february 2026 ಬಿಡಿಎ ಖಾಲಿ ನಿವೇಶನಗಳ ದಂಡದ ಶುಲ್ಕ ಇಳಿಕೆ
ಬೆಂಗಳೂರು ಅಭಿವೃದ್ಧಿ ಪ್ರಾಕಾರದಿಂದ ಹಂಚಿಕೆ ಮಾಡಿರುವ ನಿವೇಶನಗಳಲ್ಲಿ ಗುತ್ತಿಗೆ ಮತ್ತು ಕರಾರು ಪತ್ರದ ಪ್ರಕಾರ ನಿಗದಿತ ಅವಧಿಯೊಳಗೆ ಮನೆ ಅಥವಾ ಕಟ್ಟಡ ನಿರ್ಮಿಸದ ಮಾಲೀಕರಿಗೆ ವಿಧಿಸುತ್ತಿದ್ದ ಶೇ.10ರಷ್ಟು ದಂಡ ಶುಲ್ಕ ಪರಿಷ್ಕರಣೆ ಮಾಡಿ ಶೇ.2.5 ರಿಂದ ಶೇ.10 ರವರೆಗೆ ನಾಲ್ಕು ವಿಭಾಗಗಳಲ್ಲಿ ದರ ನಿಗದಿ
Karnataka News Live 16 february 2026 ₹400 ಕೋಟಿ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು; ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ?
₹400 ಕೋಟಿ ನಾಪತ್ತೆ ಪ್ರಕರಣದಲ್ಲಿ, ದೂರುದಾರ ಸಂದೀಪ್ ಪಾಟೀಲ್ ಮಹಾರಾಷ್ಟ್ರ ಎಸ್‌ಐಟಿ ತನಿಖೆ ಪಾರದರ್ಶಕವಾಗಿಲ್ಲ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಬೆಳಗಾವಿಯಲ್ಲಿ ಹೊಸ ಎಫ್‌ಐಆರ್ ದಾಖಲಿಸಿ ಸ್ವತಂತ್ರ ತನಿಖೆ ನಡೆಸುವಂತೆ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದಿದ್ದಾರೆ.
Karnataka News Live 16 february 2026 ಇಂದಿನಿಂದ ಕೆಎಸ್‌ಆರ್‌ಟಿಸಿ ಬಸ್ಸಲ್ಲಿ ಲಗೇಜ್ ದರ ಹೆಚ್ಚಳ
ಡೀಸೆಲ್ ದರ ಹೆಚ್ಚಳ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಾಗಿಸುವ ಲಗೇಜ್ ದರ ಪರಿಷ್ಕರಿಸಲಾಗಿದ್ದು, ಪರಿಷ್ಕೃತ ದರ ಸೋಮವಾರದಿಂದ ಜಾರಿಗೆ ಬರಲಿದೆ. ಡೀಸೆಲ್, ಸಿಬ್ಬಂದಿ ಹಾಗೂ ಇತರೆ ವೆಚ್ಚಗಳ ಹೆಚ್ಚಳ ಹಿನ್ನೆಲೆಯಲ್ಲಿ ನಿಗಮದ ಬಸ್‌ಗಳಲ್ಲಿ ಸಾಗಿಸುವ ಲಗೇಜ್ ದರವನ್ನು ಪರಿಷ್ಕರಿಸಲಾಗಿದೆ.
Karnataka News Live 16 february 2026 ಮಡುರೋ ಕಿಡ್ನಾಪ್‌ಗೆ ಆ್ಯಂಥ್ರೋಪಿಕ್ ಎಐ ಟೂಲ್ ಕ್ಲಾಡ್ ಬಳಸಿದ್ದ ಅಮೆರಿಕ
ಇತ್ತೀಚೆಗಷ್ಟೇ ಕೋಡರ್‌ಗಳ ಕೆಲಸ ಕಸಿಯುವ ಭೂತದಂತೆ ಬಿಂಬಿತವಾಗಿದ್ದ ಆ್ಯಂಥ್ರೋಪಿಕ್ ಸಂಸ್ಥೆಯ ಎಐ ಟೂಲ್ ಕ್ಲಾಡ್, ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ ಅವರ ಅಪಹರಣದಲ್ಲಿ ಅಮೆರಿಕ ಸೇನೆಗೆ ಸಹಾಯ ಮಾಡಿತ್ತು ಎಂಬ ಅಚ್ಚರಿಯ ಮಾಹಿತಿ ಬೆಳಕಿಗೆ ಬಂದಿದೆ.