ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ, ಹಣ ಪಡೆಯಲು ಬಂದಿದ್ದ ಮಹಿಳೆಗೆ ಮದ್ಯ ಕುಡಿಸಿ ನಾಲ್ವರು ಸಾಮೂಹಿಕ ಅತ್ಯಾ೧ಚಾರ ಎಸಗಿದ್ದಾರೆ. ಈ ಘೋರ ಕೃತ್ಯದಿಂದ ಗಂಭೀರವಾಗಿ ಅಸ್ವಸ್ಥಗೊಂಡಿರುವ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಲಬುರ್ಗಾ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
Karnataka News Live: ಕೊಪ್ಪಳ - ಹೊಸಪೇಟೆಯಿಂದ ಬಂದಿದ್ದ ಮಹಿಳೆಗೆ ಮದ್ಯ ಕುಡಿಸಿ ಗ್ಯಾಂಗ್ ರೇ*ಪ್!

ಬೆಂಗಳೂರು: ದೇಶ ಹಾಗೂ ರಾಜ್ಯದಲ್ಲಿ ಬಹು ಚರ್ಚಿತವಾಗಿ ಜಿದ್ದಾ ಜಿದ್ದಿಗೆ ಕಾರಣವಾಗಿದ್ದ ಅರ್ಎಸ್ಎಸ್ ಪಥಸಂಚಲನವು ಹೈಕೋರ್ಟ್ ಅನುಮತಿಯೊಂದಿಗೆ ನ.16ರಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಚಿತ್ತಾಪುರದಲ್ಲಿ ನಡೆಯಲಿದೆ. ಇದಕ್ಕಾಗಿ ತಾಲೂಕು ಆಡಳಿತ ಹಾಗೂ 1000 ಪೊಲೀಸರು ಭಾರೀ ಭದ್ರತೆ ಕಲ್ಪಿಸಲಿದ್ದಾರೆ. ಇದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಕಣ್ಗಾವಲು ಆಯೋಜಿಸಲಾಗಿದೆ.
Karnataka News Live 16 November 2025ಕೊಪ್ಪಳ - ಹೊಸಪೇಟೆಯಿಂದ ಬಂದಿದ್ದ ಮಹಿಳೆಗೆ ಮದ್ಯ ಕುಡಿಸಿ ಗ್ಯಾಂಗ್ ರೇ*ಪ್!
Karnataka News Live 16 November 2025ಕಾರು -ಸ್ಕೂಟರ್‌ಗೆ ಡಿಕ್ಕಿಯಾಗಿ ಉರುಳಿ ಬಿದ್ದ ಬಸ್, ಹಾಸನದ ಸರಣಿ ಅಪಘಾತದಲ್ಲಿ ಓರ್ವ ಸಾವು
ಕಾರು ಸ್ಕೂಟರ್‌ಗೆ ಡಿಕ್ಕಿಯಾಗಿ ಉರುಳಿ ಬಿದ್ದ ಬಸ್, ಹಾಸನದ ಸರಣಿ ಅಪಘಾತದಲ್ಲಿ ಓರ್ವ ಸಾವು, ಚನ್ನರಾಯಪಟ್ಣಣ ಬಳಿ ಈ ಅಪಘಾತ ಸಂಭವಿಸಿದೆ. ಬೈಕ್ ಸವಾರ ಸ್ಥಳಕ್ಕೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಸಂಚಾರಿ ಪೊಲೀಸರು ದೌಡಾಯಿಸಿದ್ದಾರೆ.
Karnataka News Live 16 November 2025ಸಿರುಗುಪ್ಪ - ದಾಂಪತ್ಯ ಕಲಹ, ಎರಡು ವರ್ಷದ ಹಿಂದೆ ಮದುವೆ ಆಗಿದ್ದ ದಂಪತಿ ನೇಣಿಗೆ ಶರಣು
Karnataka News Live 16 November 2025ಬೆಳಗಾವಿ ಮೃಗಾಲಯದಲ್ಲಿ ಮತ್ತೊಂದು ಕೃಷ್ಣ ಮೃಗ ಸಾವು, ಸಾವಿನ ಸಂಖ್ಯೆ 30ಕ್ಕೆ ಏರಿಕೆ!
ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣ ಮೃಗಗಳ ನಿಗೂಢ ಸಾವಿನ ಸರಣಿ ಮುಂದುವರಿದಿದ್ದು, ಒಟ್ಟು 30 ಪ್ರಾಣಿಗಳು ಮೃತಪಟ್ಟಿವೆ. ಸಾರ್ವಜನಿಕರ ಆಕ್ರೋಶದ ಹಿನ್ನೆಲೆ ಅರಣ್ಯ ಸಚಿವ ಈಶ್ವರ ಖಂಡ್ರೆ ತನಿಖೆಗೆ ಆದೇಶ, ಉಳಿದ 8 ಕೃಷ್ಣಮೃಗಗಳ ಮೇಲೆ ತಜ್ಞ ವೈದ್ಯರು ನಿಗಾ ಇರಿಸಿದ್ದಾರೆ.
Karnataka News Live 16 November 2025ರಾಜಾ ರಾಮ್ ಮೋಹನ್ ರಾಯ್ ಬ್ರಿಟಿಷ್ ಏಜೆಂಟ್ ಎಂದ ಬಿಜೆಪಿ ನಾಯಕ, ತೀವ್ರ ಆಕ್ರೋಶ ಬೆನ್ನಲ್ಲೇ ಕ್ಷಮೆಯಾಚನೆ
ಮಧ್ಯಪ್ರದೇಶದ ಉನ್ನತ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್, ಸಮಾಜ ಸುಧಾರಕ ರಾಜಾ ರಾಮ್ ಮೋಹನ್ ರಾಯ್ ಅವರನ್ನು 'ಬ್ರಿಟಿಷರ ಏಜೆಂಟ್' ಎಂದು ಕರೆದು ವಿವಾದ ಸೃಷ್ಟಿಸಿದ್ದಾರೆ. ಬಿರ್ಸಾ ಮುಂಡಾ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದು, ತೀವ್ರ ಆಕ್ರೋಶದ ಬಳಿಕ ಕ್ಷಮೆಯಾಚಿಸಿದ್ದಾರೆ.
Karnataka News Live 16 November 2025ಬೆಂಗಳೂರು - ಸಂಗೀತ ಕಾರ್ಯಕ್ರಮದ ವೇಳೆ ಅಕಾನ್ ಪ್ಯಾಂಟ್ ಎಳೆದು ಫ್ಯಾನ್ಸ್ ಹುಚ್ಚಾಟ, ನೆಟಿಜೆನ್ಸ್ ಕಿಡಿ, ವಿಡಿಯೋ ವೈರಲ್!
Akon viral video Bengaluru: ಅಮೆರಿಕದ ಗಾಯಕ ಅಕಾನ್ ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನೀಡುವಾಗ ಮುಜುಗರದ ಘಟನೆಯೊಂದು ನಡೆದಿದೆ. ವೇದಿಕೆಯಲ್ಲಿ ಹಾಡುತ್ತಿದ್ದ ಅಕಾನ್‌ರ ಪ್ಯಾಂಟ್ ಅನ್ನು ಅಭಿಮಾನಿಗಳು ಎಳೆದಿದ್ದು, ಈ ವಿಡಿಯೋ ವೈರಲ್ ಆಗಿ ಬೆಂಗಳೂರಿನ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Karnataka News Live 16 November 2025ಕಾರವಾರ - ರಾತ್ರೋರಾತ್ರಿ ಕೋಣ ಕಳ್ಳಸಾಗಾಟ, ನಾಲ್ವರು ಆರೋಪಿಗಳ ಬಂಧನ
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ, ರಾತ್ರೋರಾತ್ರಿ ಕೋಣವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯರು ವಾಹನವನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಆರೋಪಿಗಳನ್ನು ಬಂಧಿಸಿ ವಾಹನ ಹಾಗೂ ಕೋಣವನ್ನು ವಶಪಡಿಸಿಕೊಳ್ಳಲಾಗಿದೆ.
Karnataka News Live 16 November 2025Karna- Annayya ರೋಚಕ ಮಹಾಸಂಗಮ - ಮಾರಿಗುಡಿಯ ಮುಂದೆ ಎಲ್ಲಾ ಸತ್ಯಗಳೂ ಬಯಲಾಗೋ ಸಮಯ!
Karnataka News Live 16 November 2025ಬೀದರ್ - ಜೈಲು ಸಿಬ್ಬಂದಿ ನಿರ್ಲಕ್ಷ್ಯ, ಕಿರುಕುಳ ಆರೋಪ - ಜೈಲಲ್ಲೇ ವಿಚಾರಣಾಧೀನ್ ಕೈದಿ ಸಾವು
Karnataka News Live 16 November 2025'ಚಿತ್ತಾಪೂರು ಜನ ಉತ್ತರ ಕೊಟ್ಟಿದ್ದಾರೆ' ' - ಸಂಘ ಏನು ಮಾಡಿದೆ? ಎಂದವರಿಗೆ RSS ಪ್ರಮುಖ ಕೃಷ್ಣಾ ಜೋಷಿ ತಿರುಗೇಟು!
ಚಿತ್ತಾಪುರದಲ್ಲಿ ನಡೆದ ಆರ್‌ಎಸ್‌ಎಸ್ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮುಖರಾದ ಕೃಷ್ಣಾ ಜೋಷಿ, ಸಂಘದ ನೂರರ ಸಂಭ್ರಮದ ಹಿನ್ನೆಲೆಯಲ್ಲಿ ಅದರ ಸಾಧನೆ ವಿವರಿಸಿದರು. ಅಸಂಘಟಿತ ಹಿಂದೂಗಳನ್ನು ಒಗ್ಗೂಡಿಸುವುದು ದೇಶ ವಿರೋಧಿ ಶಕ್ತಿಗಳನ್ನು ವಿರೋಧಿಸುವುದೇ ಸಂಘದ ಗುರಿ ಎಂದು ಅವರು ಪ್ರತಿಪಾದಿಸಿದರು.
Karnataka News Live 16 November 2025Bigg Boss - ಜಾಹ್ನವಿ ಮುಚ್ಚಿಟ್ಟಿದ್ದ ಸೀಕ್ರೆಟ್ ಎಲ್ಲರೆದುರೇ ರಟ್ಟು ಮಾಡಿದ ಸುದೀಪ್- ಬೇಕಿತ್ತಾ ಹಳ್ಳ ತೋಡಿಕೊಳ್ಳೋ ಕೆಲ್ಸ?
Karnataka News Live 16 November 2025Amruthadhaare - ಗೌತಮ್ ವಿರುದ್ಧ ಹೀಗೆ ಮಾತನಾಡಿ ಅಂತ ವಠಾರದವ್ರಿಗೆ ಹೇಳ್ಕೊಟ್ಟಿದ್ದೇ ಭೂಮಿಕಾ! ಬಯಲಾಯ್ತು ಸತ್ಯ
ಅಮೃತಧಾರೆ ಧಾರಾವಾಹಿಯಲ್ಲಿ, ಅನಾರೋಗ್ಯದಿಂದ ಬಳಲುತ್ತಿದ್ದ ಪತಿ ಗೌತಮ್ ಪರವಾಗಿ ಭೂಮಿಕಾ ವಠಾರದವರ ವಿರುದ್ಧ ರೊಚ್ಚಿಗೆದ್ದಿದ್ದಳು. ಆದರೆ, ವೈರಲ್ ಆದ ವಿಡಿಯೋವೊಂದರಲ್ಲಿ, ಗೌತಮ್ ವಿರುದ್ಧ ಹೇಗೆ ಮಾತನಾಡಬೇಕೆಂದು ಭೂಮಿಕಾ ಅವರೇ ಹೇಳಿಕೊಡುತ್ತಿರುವ ದೃಶ್ಯವಿದೆ. ಇದೇನಿದು ಟ್ವಿಸ್ಟ್?
Karnataka News Live 16 November 2025ಬೆಂಗಳೂರಲ್ಲಿ ಮುದ್ದೆ ಸ್ಪರ್ಧೆ - 45 ನಿಮಿಷದಲ್ಲಿ 10, 12 ಮುದ್ದೆ ತಿಂದ ಅಕ್ಕ-ತಮ್ಮ ಗೆಲುವು
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಕೀಲರ ಒಕ್ಕೂಟವು ಗ್ರಾಮೀಣ ಸೊಗಡಿನ ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆ ಆಯೋಜಿಸಿತ್ತು. ಪುರುಷರ ವಿಭಾಗದಲ್ಲಿ 12 ಮುದ್ದೆ ತಿಂದು ಅಜಯ್ ಕುಮಾರ್ ಟಗರು ಬಹುಮಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ 10 ಮುದ್ದೆ ಸೇವಿಸಿದ ಸೌಮ್ಯ ವಿಜೇತರಾದರು.
Karnataka News Live 16 November 2025Bigg boss ಮನೆಯಲ್ಲಿ ಯಾರೂ ಗಂಡಸ್ರೇ ಅನ್ಸಲ್ಲ, ಗಿಲ್ಲಿಗೆ ಸೊಂಟನೇ ಇಲ್ಲ ಎಂದ ಜಾಹ್ನವಿ - ಸುದೀಪ್ ಕಕ್ಕಾಬಿಕ್ಕಿ!
Karnataka News Live 16 November 2025ಕಲಬುರಗಿ - ಚಿತ್ತಾಪೂರ ಆರೆಸ್ಸೆಸ್ ಪಥ ಸಂಚಲನ, ಭಾರೀ ಜನ ಬೆಂಬಲ, ಭಾರತ್ ಮಾತಾಕೀ ಜೈ ಘೋಷಣೆ!
Karnataka News Live 16 November 2025'ಸುದೀಪ್ ಸರ್ ನಿಮ್ಮ ವರ್ತನೆ ತುಂಬಾ ಬೇಸರ ತರಿಸ್ತಿದೆ' ಎಂದ Bigg Boss ವೀಕ್ಷಕರು! ಈ ಪರಿ ಆಕ್ರೋಶ ಯಾಕೆ?
ಬಿಗ್‌ಬಾಸ್ ನಿರೂಪಕ ಕಿಚ್ಚ ಸುದೀಪ್ ಅವರ ವಿರುದ್ಧ ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ. ರಕ್ಷಿತಾ ಅವರಂತಹ ಸ್ಪರ್ಧಿಗಳ ಮೇಲೆ ಕಠಿಣವಾಗಿ ನಡೆದುಕೊಳ್ಳುವ ಸುದೀಪ್, ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರ ವಿಷಯದಲ್ಲಿ ಮೃದು ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
Karnataka News Live 16 November 2025BBK 12 - ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ನಾಲ್ವರು; ಇರೋವಾಗ ಕುತಂತ್ರ, ಹೋಗುವಾಗ ವೇದಾಂತ ಎಂದ ವೀಕ್ಷಕರು
ಬಿಗ್‌ಬಾಸ್ ಮನೆಯಲ್ಲಿ ಈ ವಾರ ನಾಲ್ವರು ಸ್ಪರ್ಧಿಗಳು ಎಲಿಮಿನೇಷನ್‌ಗೆ ನಾಮಿನೇಟ್ ಆಗಿದ್ದಾರೆ. ರಿಷಾ ಗೌಡ, ರಘು, ಕಾಕ್ರೋಚ್ ಸುಧಿ ಮತ್ತು ಜಾನ್ವಿ ಮುಖ್ಯದ್ವಾರದ ಬಳಿ ನಿಂತಿದ್ದು, ವಿಶೇಷ ಪ್ರಕ್ರಿಯೆಯ ಮೂಲಕ ಒಬ್ಬರು ಮನೆಯಿಂದ ಹೊರನಡೆಯಲಿದ್ದಾರೆ.
Karnataka News Live 16 November 2025ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಮತ್ತೆ ಅಡೆ ತಡೆ, ಸಂಘ ಸದಸ್ಯನ ತಡೆದ ಪೊಲೀಸ್
ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಮತ್ತೆ ಅಡೆ ತಡೆ, ಸಂಘ ಸದಸ್ಯನ ತಡೆದ ಪೊಲೀಸ್ , ಬ್ಯಾಂಡ್ ವಾದಕನನ್ನು ಪೊಲೀಸರು ತಡೆದಿದ್ದಾರೆ. ವಾಹನದಿಂದ ಇಳಿಸಿದ್ದಾರೆ. ಆರ್‌ಎಸ್ಎಸ್ ಮನವರಿಕೆ ಮಾಡುವ ಪ್ರಯತ್ನ ಮಾಡಿದರೂ ಪೊಲೀಸರು ನಿರಾಕರಿಸಿದ್ದಾರೆ.
Karnataka News Live 16 November 2025Bengaluru - ನಾಳೆಯಿಂದ ಕಡಲೆಕಾಯಿ ಪರಿಷೆ ಆರಂಭ - 7 ದಿನ ಬೆಂಗಳೂರಿನ ಪ್ರಮುಖ ರಸ್ತೆ ಬಂದ್
Karnataka News Live 16 November 2025ಚಿರಂಜೀವಿ ಖತರ್ನಾಕ್ ಶೋ ಮುಂದೆ ಬಾಲಯ್ಯ-ವಿಜಯಶಾಂತಿ ಕಷ್ಟ ವ್ಯರ್ಥ.. ಕಾಣೆಯಾದ ಫ್ಲಾಪ್ ಸಿನಿಮಾ ಯಾವ್ದು?
ಮೆಗಾಸ್ಟಾರ್ ಚಿರಂಜೀವಿ ನಟನೆಯ 'ದೊಂಗ ಮೊಗುಡು' ಸಿನಿಮಾದ ವಿಶೇಷತೆಗಳನ್ನು ಈ ಲೇಖನದಲ್ಲಿ ತಿಳಿಯಿರಿ. ಈ ಚಿತ್ರಕ್ಕೆ ಸ್ಪರ್ಧಿಯಾಗಿ ಬಂದ ಬಾಲಯ್ಯ, ವಿಜಯಶಾಂತಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿತು.