- Home
- News
- State
- Karnataka News Live: ಮಂಡ್ಯ - ಸ್ಟ್ಯಾಲಿನ್ ಗೆ ಬುದ್ದಿ ಇಲ್ಲ ಬುದ್ದಿ ಕಡಿಮೆ, ಆರ್. ಅಶೋಕ್ ಮಾತಿನ ಸಮರ
Karnataka News Live: ಮಂಡ್ಯ - ಸ್ಟ್ಯಾಲಿನ್ ಗೆ ಬುದ್ದಿ ಇಲ್ಲ ಬುದ್ದಿ ಕಡಿಮೆ, ಆರ್. ಅಶೋಕ್ ಮಾತಿನ ಸಮರ

ಬೆಂಗಳೂರಿನಲ್ಲಿ ಮತ್ತೆ ನಾಯಿಗಳ ಹಾವಳಿ ಹೆಚ್ಚಾಗಿದೆ. ಒಂದೇ ವಾರದಲ್ಲಿ ಇದೀಗ 2ನೇ ಪ್ರಕರಣ ದಾಖಲಾಗಿದೆ. ಹೆಚ್ಆರ್ಬಿಆರ್ ಲೇಔಟ್ನಲ್ಲಿ ವೃದ್ಧನ ಮೇಲೆ ಸಾಕು ನಾಯಿಯೊಂದು ದಾಳಿ ಮಾಡಿದೆ. ಮಾಲೀಕನ ಎದುರೇ ವೃದ್ಧನ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ. ನಾಯಿ ದಾಳಿಗೆ ವೃದ್ಧನ ಕಾಲಿಗೆ ಗಂಭೀರ ಗಾಯವಾಗಿದೆ. ಕುಟುಂಬಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಹಲವು ಬಾರಿ ಈ ರೀತಿ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇತ್ತ ರಾಜ್ಯ ಸರ್ಕಾರ ಒಳ ಮೀಸಲಾತಿ ವಿಚಾರದ ಬಗ್ಗೆ ಅನೌಪಚಾರಿಕ ಚರ್ಚೆ ನಡೆಸಿದೆ. ಯಾವಾಗ ಮತ್ತೊಮ್ಮೆ ಸಭೆ ಮಾಡಬೇಕು ಎಂಬ ಬಗ್ಗೆ ಸಚಿವ ಸಂಪುಟ ಚರ್ಚೆ ನಡೆಸಿದೆ. ಕರ್ನಾಟಕದ ಇಂದಿನ ಕ್ಷಣ ಕ್ಷಣದ ಅಪ್ಡೇಟ್ ಇಲ್ಲಿದೆ.
Karnataka News Live 17 April 2026ಮಂಡ್ಯ - ಸ್ಟ್ಯಾಲಿನ್ ಗೆ ಬುದ್ದಿ ಇಲ್ಲ ಬುದ್ದಿ ಕಡಿಮೆ, ಆರ್. ಅಶೋಕ್ ಮಾತಿನ ಸಮರ
Karnataka News Live 17 April 20262024ರ ಟಾಪರ್ ಈಗ ಎಸಿಬಿ ಬಲೆಗೆ - 60 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ SDM ಕಾಜಲ್ ಮೀನಾ - ಕಚೇರಿಯಲ್ಲಿದ್ದ 4 ಲಕ್ಷ ಜಪ್ತಿ
Karnataka News Live 17 April 2026ಅಂಕೋಲಾ ಹೆದ್ದಾರಿಯಲ್ಲಿ ಎಥನಾಲ್ ದ್ರಾವಣ ತುಂಬಿದ ಟ್ಯಾಂಕರ್ ಸ್ಟೋಟ, ಅಗ್ನಿ ಜ್ವಾಲೆಗೆ ತುಮಕೂರು ಮೂಲದ ಚಾಲಕ ಗಂಭೀರ
Karnataka News Live 17 April 2026ಎಲೆಕ್ಷನ್ ಗೆಲ್ಲಲು ಒಂದೇ ಗ್ಯಾರೆಂಟಿ ಸಾಕೆಂದು ತೋರಿದ Brahmagantu ದೀಪಾ - ಕೇಸ್ ಹಾಕಲು ವೀಕ್ಷಕರು ರೆಡಿ
Karnataka News Live 17 April 2026ಯಾದಗಿರಿ ಭೀಕರ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ, ರಾಯಚೂರು ಪಟ್ಟಣದ ಪಂಚಾಯತ್ ಸದಸ್ಯನ ಇಡೀ ಕುಟುಂಬ ನಾಶ!
Karnataka News Live 17 April 2026ಪದೇ ಪದೇ ಸಿದ್ದರಾಮಯ್ಯ ಆಪ್ತರ ಟಾರ್ಗೆಟ್; ರಕ್ಷಣೆಗೆ ಮುಂದಾಗದ ಸಿಎಂ, ಆಪ್ತರಿಂದಲೇ ಬಹಿರಂಗ ಅಸಮಾಧಾನ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದ ನಾಯಕರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಚರ್ಚೆ ಕಾಂಗ್ರೆಸ್‌ನಲ್ಲೇ ಶುರುವಾಗಿದೆ. ಈ ಷಡ್ಯಂತ್ರದ ನಡುವೆಯೂ ಸಿಎಂ ತಮ್ಮ ಆಪ್ತರ ರಕ್ಷಣೆಗೆ ನಿಲ್ಲದೆ ಮೌನ ವಹಿಸಿರುವುದು ಅವರ ಬೆಂಬಲಿಗರಲ್ಲಿ ತೀವ್ರ ಅಸಮಾಧಾನ ಆತಂಕಕ್ಕೆ ಕಾರಣವಾಗಿದೆ.
Karnataka News Live 17 April 2026ಹಿಂಡಲಗಾ ಜೈಲಿನ ಮೇಲೆ ದಾಳಿ, ಸಿಗರೆಟ್, ಜೀಮ್ ಡೆಂಬಲ್ಸ್ ಪತ್ತೆ! ಜೈಲು ಸಿಬ್ಬಂದಿ ಚಳಿಬಿಡಿಸಿದ ಡಿಜಿಪಿ ಅಲೋಕ ಕುಮಾರ
Karnataka News Live 17 April 2026No 1 ಆಗಿ ಮೆರೆದಿದ್ದ ಜನಪ್ರಿಯ ಧಾರಾವಾಹಿ ಅಂತ್ಯ ಆಗ್ತಿದ್ಯಾ? ಹೀರೋ ಕ್ಲಾರಿಟಿ ಕೊಟ್ರು!
Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್ ದಿವಾನ್ ದಿವಾಳಿಯಾದ್ರೆ, ಗೌತಮ್ ದಿವಾನ್ ಹೊಸ ಸಾಮ್ರಾಜ್ಯ ಕಟ್ಟಿದರೆ ಈ ಸೀರಿಯಲ್ ಅಂತ್ಯಕ್ಕೆ ಬಂದಂತೆ. ಗೌತಮ್ ಮಗಳ ಹುಡುಕಾಟವನ್ನು ಕೂಡ ಮಾಡಬೇಕಿತ್ತು. ಈ ಬಗ್ಗೆ ರಾಜೇಶ್ ನಟರಂಗ ಯುಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದಾರೆ.
Karnataka News Live 17 April 2026ಕೂಲಿ ಕೆಲ್ಸ ಮಾಡಿದ್ದೆ, ಜೈಲೂ ಸೇರಿದೆ - Amruthadhaare ನಟ ರಾಣವ್ ಬದುಕಿನ ಯಾರೂ ತಿಳಿಯದ ಸತ್ಯ
ಅಮೃತಧಾರೆ ಸೀರಿಯಲ್ ಖ್ಯಾತಿಯ ನಟ ಜೈದೇವ್ ಅಲಿಯಾಸ್ ರಾಣವ್ ಗೌಡ, ಸಹನಟಿ ರಾಧಾ ಭಗವತಿ ಅವರನ್ನು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ನಟನಾ ಪಯಣದ ಹಿಂದಿನ ಕಷ್ಟಹಂಚಿಕೊಂಡಿದ್ದು, ಕೂಲಿ ಕೆಲಸ ಮಾಡಿದ್ದರಿಂದ ಹಿಡಿದು ಜೈಲು ಸೇರಿದ್ದರ ಬಗ್ಗೆಯೂ ಮಾತನಾಡಿದ್ದಾರೆ.
Karnataka News Live 17 April 2026ಯಾದಗಿರಿ ಬಳಿ ಬಸ್ ಮತ್ತು ಕಾರು ನಡುವೆ ಭಯಾನಕ ಅಪಘಾತ - ಕಾರಲ್ಲಿದ್ದ 6 ಮಂದಿ ಸುಟ್ಟು ಭಸ್ಮ!
Karnataka News Live 17 April 2026ಕ್ಷೇತ್ರ ವಿಂಗಡಣೆ - ಕನ್ನಡಿಗರ ಪಾಲೇ ಕಡಿಮೆ ಆಗುತ್ತೆ, ಅದನ್ನೇಕೆ ಹೇಳ್ತಿಲ್ಲ? - ಕರವೇ ನಾರಾಯಣಗೌಡ
ಕ್ಷೇತ್ರ ಪುನರ್ ವಿಂಗಡಣೆ ಜನಸಂಖ್ಯೆ ನಿಯಂತ್ರಿಸಿದ ಕರ್ನಾಟಕದಂತಹ ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ಕುಗ್ಗಿಸುವ ಅಪಾಯ ಒಡ್ಡಿದೆ. ಇದು ದಕ್ಷಿಣದ ರಾಜ್ಯಗಳು ತಮ್ಮ ಯಶಸ್ವಿ ಜನಸಂಖ್ಯಾ ನೀತಿಗಾಗಿ ಶಿಕ್ಷೆ ಅನುಭವಿಸಿದಂತೆ ಆಗಲಿದ್ದು, ತೆರಿಗೆ ಹಂಚಿಕೆಯಲ್ಲಿ ಅನ್ಯಾಯವನ್ನು ಮತ್ತಷ್ಟು ಹೆಚ್ಚಿಸಲಿದೆ.
Karnataka News Live 17 April 2026ನಾಲ್ವರಿಗೆ 2 ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ಕೋರ್ಟ್, ಮಹಿಳೆ ಮೇಲೆ ಹಲ್ಲೆ ಕೊಲೆ ಬೆದರಿಕೆ ಕೇಸ್
ನಾಲ್ವರಿಗೆ 2 ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ಕೋರ್ಟ್, ಮಹಿಳೆ ಮೇಲೆ ಹಲ್ಲೆ ಕೊಲೆ ಬೆದರಿಕೆ ಕೇಸ್ ಸಂಬಂಧ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ತೀರ್ಪು ಪ್ರಕಟಿಸಿದೆ. ಏನಿದು ಪ್ರಕರಣ?
Karnataka News Live 17 April 2026ಅನಂತಕುಮಾರ್ ಹೆಗಡೆ ಪುತ್ರನ ವಿರುದ್ಧದ ಗಲಾಟೆ ಪ್ರಕರಣಕ್ಕೆ ಹೈಕೋರ್ಟ್ ತಡೆ; ಎಫ್‌ಐಆರ್‌ನಲ್ಲಿ ಹೆಸರಿಲ್ಲದಿದ್ದರೂ ಕೇಸಿನಲ್ಲಿ ಸಿಲುಕಿದ್ದೇಕೆ?
ಮಾಜಿ ಸಚಿವ ಅನಂತಕುಮಾರ್ ಹೆಗಡೆ ಪುತ್ರ ಅಶುತೋಷ್ ಹೆಗಡೆ ವಿರುದ್ಧದ ಗಲಾಟೆ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಎಫ್‌ಐಆರ್ ಅಥವಾ ಆರೋಪಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಮತ್ತು ಮೇಲ್ನೋಟಕ್ಕೆ ಅಪರಾಧದ ಆರೋಪಗಳಿಲ್ಲವೆಂದು ಪರಿಗಣಿಸಿ, ನ್ಯಾಯಪೀಠವು ಈ ಮಧ್ಯಂತರ ಆದೇಶವನ್ನು ನೀಡಿದೆ.
Karnataka News Live 17 April 2026ಚಿನ್ನ ಸ್ಮಗ್ಲಿಂಗ್ ಕೇಸ್‌ನಲ್ಲಿ ನಟಿ ರನ್ಯಾಗೆ ಸುಪ್ರೀಂನಲ್ಲಿ ಹಿನ್ನಡೆ, ಸಿಇಐಬಿ ಕಾಫಿಪೋಸಾ ಬಂಧನ ಎತ್ತಿಹಿಡಿದ ಕೋರ್ಟ್
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆಯಾಗಿದೆ. ಕಾಫಿಪೋಸಾ ಕಾಯ್ದೆಯಡಿ ಅವರ ಮುನ್ನೆಚ್ಚರಿಕಾ ಬಂಧನವನ್ನು ನ್ಯಾಯಾಲಯ ಎತ್ತಿಹಿಡಿದಿದ್ದು, ಅವರ ಪರವಾಗಿ ಸಲ್ಲಿಸಲಾದ ಮೇಲ್ಮನವಿಗಳನ್ನು ವಜಾಗೊಳಿಸಿದೆ.
Karnataka News Live 17 April 2026ಕರ್ನಾಟಕದಲ್ಲಿ H5N1 ವೈರಸ್ ಪತ್ತೆ, ಕೋಳಿ ಸಾಕಾಣೆಗಾರರ ಕ್ವಾರಂಟೈನ್ ಮಾಡಿದ ವೈದ್ಯರು
ಕರ್ನಾಟಕದಲ್ಲಿ H5N1 ವೈರಸ್ ಪತ್ತೆ, ಕೋಳಿ ಸಾಕಾಣೆಗಾರರ ಕ್ವಾರಂಟೈನ್ ಮಾಡಿದ ವೈದ್ಯರು, ಕೇಂದ್ರ ಸರ್ಕಾರದ ಅನುಮತಿ ಮೇರೆ ರಾಜ್ಯದಲ್ಲಿ ತಪಾಸಣೆ ನಡೆಯುತ್ತಿದೆ. ಈ ವೇಳೆ ವೈರಸ್ ಪತ್ತೆಯಾಗಿದೆ.
Karnataka News Live 17 April 2026ರಾಹುಲ್ ಗಾಂಧಿ ತಮಿಳುನಾಡು ಸಮಾವೇಶದ ಉಸ್ತುವಾರಿ ಡಿಕೆ ಸುರೇಶ್ ಹೆಗಲಿಗೆ!
Karnataka News Live 17 April 2026ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಇನ್ನು ಇರೋಲ್ಲ? 13,262 ಕೋಟಿ ವೆಚ್ಚದಲ್ಲಿ 11 ಎಲಿವೇಟೆಡ್ ಕಾರಿಡಾರ್‌ಗೆ ಸಂಪುಟ ಅಸ್ತು!
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 13,262.70 ಕೋಟಿ ರು. ವೆಚ್ಚದಲ್ಲಿ 72.60 ಕಿ.ಮೀ ಉದ್ದದ 11 ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿ. (ಬಿ-ಸ್ಮೈಲ್) ಸಂಸ್ಥೆಯು ಈ ಯೋಜನೆ ಅನುಷ್ಠಾನಗೊಳಿಸಲಿದೆ.
Karnataka News Live 17 April 2026ರಾಜ್ಯದಲ್ಲಿ ಮೇ.29ರಿಂದ ಶಾಲೆ ಪುನಾರಂಭ, ದಸರಾ ರಜೆ ಸೇರಿ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ
ರಾಜ್ಯದಲ್ಲಿ ಮೇ.29ರಿಂದ ಶಾಲೆ ಪುನಾರಂಭ, ದಸರಾ ರಜೆ ಸೇರಿ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಗೊಂಡಿದೆ. ರಾಜ್ಯದ ಸರಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ದಸರಾ ರಜೆ ದಿನವನ್ನು ನಿರ್ಧರಿಸಲಾಗಿದೆ.
Karnataka News Live 17 April 2026ಕುಡಿದ ಗ್ರಾಹಕನಿಗೆ ಟೆಸ್ಟ್ ಡ್ರೈವ್ ಕೊಟ್ಟ ಎಡವಟ್ಟು ಮಾಡಿದ ಮಹೀಂದ್ರ ಶೋ ರೂಂ, ಹಲವು ಕಾರಿಗೆ ಡಿಕ್ಕಿ
ಕುಡಿದ ಗ್ರಾಹಕನಿಗೆ ಟೆಸ್ಟ್ ಡ್ರೈವ್ ಕೊಟ್ಟ ಎಡವಟ್ಟು ಮಾಡಿದ ಮಹೀಂದ್ರ ಶೋ ರೂಂ, ಹಲವು ಕಾರಿಗೆ ಡಿಕ್ಕಿ, ಕುಡಿದ ಮತ್ತಿನಲ್ಲಿ ಮನಸ್ಸೋ ಇಚ್ಚೆ ಕಾರು ಚಲಾಯಿಸಿ ಡಿಕ್ಕಿ ಹೊಡೆದ ಘಟನೆ ನಡೆದಿದೆ.
Karnataka News Live 17 April 2026ಮಹಾರಾಷ್ಟ್ರ ಮಾದರಿಯಲ್ಲಿ ಕನ್ನಡ ಮಾತಾಡಲು ಬಾರದ ಟ್ಯಾಕ್ಸಿ ಚಾಲಕರ ಡಿಎಲ್ ರದ್ದಾಗಲಿ - ಕರವೇ
ಮಹಾರಾಷ್ಟ್ರದಲ್ಲಿ ಮರಾಠಿ ಬಾರದ ಚಾಲಕರ ಪರವಾನಗಿ ರದ್ದುಗೊಳಿಸುವ ನಿರ್ಧಾರವನ್ನು ಸ್ವಾಗತಿಸಿರುವ ಕರವೇ, ಕರ್ನಾಟಕದಲ್ಲೂ ಇದೇ ನಿಯಮ ಜಾರಿಗೆ ತರಲು ಆಗ್ರಹಿಸಿದೆ. ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ಬಾರದ ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರ ಪರವಾನಗಿ ರದ್ದುಗೊಳಿಸಲು ಕರವೇ ಆಗ್ರಹಿಸಿದೆ.