- Home
- News
- State
- Karnataka News Live: ಅಭಿಮಾನ್ ಸ್ಟುಡಿಯೊ ಅರಣ್ಯ ಜಮೀನು ರದ್ದು ಪಡಿಸಲು ಸರ್ಕಾರ ಸೂಚನೆ, ಆದ್ರೆ ಕಂದಾಯ ಇಲಾಖೆ ಹಿಂದೇಟು!
Karnataka News Live: ಅಭಿಮಾನ್ ಸ್ಟುಡಿಯೊ ಅರಣ್ಯ ಜಮೀನು ರದ್ದು ಪಡಿಸಲು ಸರ್ಕಾರ ಸೂಚನೆ, ಆದ್ರೆ ಕಂದಾಯ ಇಲಾಖೆ ಹಿಂದೇಟು!

ಬೆಂಗಳೂರು: ಜೆಡಿಎಸ್ ಕಾರ್ಯಕರ್ತನ ಮೇಲೆ ಅಸಹಜ ಲೈಂ*ಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ತಮ್ಮನ್ನು ಕೈ ಬಿಡುವಂತೆ ಕೋರಿ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿದೆ.
ಆರೋಪಿ ಸೂರಜ್ ರೇವಣ್ಣ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿ ಕುರಿತು ಮಂಗಳವಾರ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಈ ಆದೇಶ ಪ್ರಕಟಿಸಿದರು. ಹೀಗಾಗಿ ಸೂರಜ್ ರೇವಣ್ಣಗೆ ಮುಂದಿನ ಕಾನೂನು ಸಂಕಷ್ಟ ಎದುರಿಸುವುದು ಅನಿವಾರ್ಯವಾಗಿದೆ.
Karnataka News Live 18 February 2026 ಅಭಿಮಾನ್ ಸ್ಟುಡಿಯೊ ಅರಣ್ಯ ಜಮೀನು ರದ್ದು ಪಡಿಸಲು ಸರ್ಕಾರ ಸೂಚನೆ, ಆದ್ರೆ ಕಂದಾಯ ಇಲಾಖೆ ಹಿಂದೇಟು!
Karnataka News Live 18 February 2026 ಮಾಧ್ಯಮಗಳನ್ನು ಹತ್ತಿಕ್ಕಲು ಮುಂದಾಯ್ತಾ ಸರ್ಕಾರ? ವಿಧಾನಸೌಧದಲ್ಲಿ 'ಫ್ರೀಡಂ ಆಫ್ ಪ್ರೆಸ್'ಗೆ ಬ್ರೇಕ್!
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ! ಭದ್ರತೆಯ ನೆಪದಲ್ಲಿ DPAR ಹೊರಡಿಸಿದ ಹೊಸ ಆದೇಶದ ಹಿಂದಿನ ಅಸಲಿ ಕಾರಣವೇನು? ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳುವ ತಂತ್ರವೇ? ಪೂರ್ಣ ವಿವರ ತಿಳಿಯಿರಿ.
Karnataka News Live 18 February 2026 ಮತ್ತೆ ಶಬರಿಮಲೆ ಯಾತ್ರಿ ಕನ್ನಡಿಗರ ಮೇಲೆ ಪುಂಡಾಟ; ಕನ್ನಡ ಬಾವುಟ ಬಿಚ್ಚಿಸಿ ತಮಿಳಿಗರ ದಬ್ಬಾಳಿಕೆ!
ಶಬರಿಮಲೆ ಯಾತ್ರೆ ಮುಗಿಸಿ ಚಾಮರಾಜನಗರಕ್ಕೆ ಹಿಂತಿರುಗುತ್ತಿದ್ದ ಕನ್ನಡಿಗ ಯಾತ್ರಿಗಳ ಮೇಲೆ ತಮಿಳುನಾಡಿನ ತೂತುಕುಡಿ ಬಳಿ ಸ್ಥಳೀಯರು ದೌರ್ಜನ್ಯ ಎಸಗಿದ್ದಾರೆ. ಯಾತ್ರಿಗಳ ವಾಹನಕ್ಕೆ ಕಟ್ಟಿದ್ದ ಕನ್ನಡ ಬಾವುಟವನ್ನು ತೆಗೆಯುವಂತೆ ಒತ್ತಾಯಿಸಿ ತಮಿಳಿಗರು ಪುಂಡಾಟ ಮೆರೆದಿದ್ದಾರೆ.
Karnataka News Live 18 February 2026 ಬ್ರಹ್ಮಗಂಟು - ಸೂತಕವಿದ್ರೆ ಗಂಡ-ಹೆಂಡ್ತಿ ಜೊತೆಯಾಗಿ ಮಲಗುವಂತಿಲ್ಲವಾ? ವಿರಹ ವೇದನೆಯಲ್ಲಿ ಚಿರು-ದೀಪಾ
'ಬ್ರಹ್ಮಗಂಟು' ಧಾರಾವಾಹಿಯಲ್ಲಿ, ಒಂದಾದ ಚಿರು ಮತ್ತು ದೀಪಾ ಜೋಡಿಯನ್ನು ದೂರದ ಸಂಬಂಧಿಯ ಸಾವಿನ ಸೂತಕದ ಕಾರಣ ನೀಡಿ ಪ್ರತ್ಯೇಕವಾಗಿ ಮಲಗಿಸಲಾಗುತ್ತದೆ. ಈ ಅನಿರೀಕ್ಷಿತ ಬೇರ್ಪಡುವಿಕೆಯಿಂದ ವಿರಹ ವೇದನೆ ಅನುಭವಿಸುವ ದಂಪತಿ, ವಿಡಿಯೋ ಕಾಲ್ ಮೂಲಕ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ.
Karnataka News Live 18 February 2026 ಡಾಲಿ ನಿರ್ಮಾಣದ ಚಿತ್ರದ ನಟನಿಗೆ ಶಾಕ್, ಅಭಿಮಾನಿ ಕೊಟ್ಟ ಮಚ್ಚು ಹಿಡಿದು ಎಡವಟ್ಟು, ಪೂಲೀಸರಿಂದ ನೋಟೀಸ್?
ಡಾಲಿ ಧನಂಜಯ್ ನಿರ್ಮಾಣದ 'JC: The University' ಚಿತ್ರದ ನಾಯಕ ನಟ ಪ್ರಖ್ಯಾತ್, ಚಿತ್ರಮಂದಿರದಲ್ಲಿ ಅಭಿಮಾನಿಯೊಬ್ಬ ನೀಡಿದ ಮಚ್ಚನ್ನು ಹಿಡಿದು ಪೋಸ್ ನೀಡಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ಪೊಲೀಸರು ನಟನಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.
Karnataka News Live 18 February 2026 ಆಟೋ ಓವರ್‌ಟೇಕ್ ಮಾಡಲು ಹೋಗಿ ಮಹಿಳೆ ಸೆಲ್ಫ್ ಆಕ್ಸಿಡೆಂಟ್, ಕಾರ್ ಪಲ್ಟಿ!
Karnataka News Live 18 February 2026 ರಂಜಾನ್ ಮಾಸದಲ್ಲಿ ರಿಫ್ರೆಶ್ ಅನುಭವ ನೀಡುವ ಮೊಹಬ್ಬತ್ ಕಾ ಶರಬತ್ ಪಾನೀಯ ತಯಾರಿಸುವ ವಿಧಾನ
Karnataka News Live 18 February 2026 ಮಂಗಳೂರು ಪೊಲೀಸರಿಗೆ ವರ್ಷದೊಳಗೆ 100 ವಸತಿಗೃಹ - ಗೃಹಸಚಿವ ಪರಮೇಶ್ವರ್ ಭರವಸೆ
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಂಗಳೂರಿಗೆ ಭೇಟಿ ನೀಡಿ, ನಗರ ಪೊಲೀಸ್ ಸಿಬ್ಬಂದಿಗೆ ಮುಂದಿನ ವರ್ಷದೊಳಗೆ 100 ಹೊಸ ವಸತಿಗೃಹಗಳನ್ನು ಮಂಜೂರು ಭರವಸೆ ನೀಡಿದ್ದಾರೆ. ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಮತ್ತು ನಗರದ ಜಿಲ್ಲಾ ಕಾರಾಗೃಹವನ್ನು ಶೀಘ್ರದಲ್ಲೇ ಸ್ಥಳಾಂತರಿಸುವ ಬಗ್ಗೆಯೂ ಮಾತನಾಡಿದರು.
Karnataka News Live 18 February 2026 Valentine s Day Special - ಪ್ರೇಮಿಗಳ ದಿನಕ್ಕೆ ಬೆಂಗ್ಳೂರಿಂದ 6 ಕೋಟಿ ಗುಲಾಬಿ ರಫ್ತು!
ಪ್ರೇಮಿಗಳ ದಿನದ ಪ್ರಯುಕ್ತ ಬೆಂಗಳೂರಿನಿಂದ 6 ಕೋಟಿ ಗುಲಾಬಿ ಹೂವುಗಳನ್ನು ದೇಶ-ವಿದೇಶಗಳಿಗೆ ರಫ್ತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನಡೆದ ಈ ಬೃಹತ್ ರಫ್ತು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.38ರಷ್ಟು ಹೆಚ್ಚಳ. ಸಿಂಗಾಪುರ, ಲಂಡನ್, ದೆಹಲಿ, ಕೋಲ್ಕತಾದಂತಹ ನಗರಗಳಿಗೆ ಹೂವುಗಳು ಪೂರೈಕೆ
Karnataka News Live 18 February 2026 ರಣಜಿ ಟ್ರೋಫಿ - ಕರ್ನಾಟಕ 736 ರನ್, ಮೂರನೇ ಗರಿಷ್ಠ ಸ್ಕೋರ್! ಫೈನಲ್ ಹೊಸ್ತಿಲಲ್ಲಿ ರಾಜ್ಯ ತಂಡ
ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಉತ್ತರಾಖಂಡ ವಿರುದ್ಧ ಕರ್ನಾಟಕವು 736 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ್ದು, ಇದು ರಣಜಿ ಇತಿಹಾಸದಲ್ಲಿ ತಂಡದ 3ನೇ ಗರಿಷ್ಠ ಸ್ಕೋರ್ ಆಗಿದೆ. ಕರ್ನಾಟಕವು ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಫೈನಲ್‌ಗೆ ಪ್ರವೇಶಿಸುವ ಸನಿಹದಲ್ಲಿದೆ.
Karnataka News Live 18 February 2026 Bengaluru - ಜಂಟಿಯಾಗಿ ಎಐ ಸೇವೆಗಾಗಿ ಮೈತ್ರಿ ಮಾಡಿಕೊಂಡ ಆ್ಯಂಥ್ರೋಪಿಕ್-ಇನ್ಫೋಸಿಸ್
ಐಟಿ ದೈತ್ಯ ಇನ್ಫೋಸಿಸ್ ಮತ್ತು ಎಐ ಕಂಪನಿ ಆ್ಯಂಥ್ರೋಪಿಕ್ ಜಂಟಿಯಾಗಿ ಎಐ ಸೇವೆಗಳನ್ನು ಒದಗಿಸಲು ಮೈತ್ರಿ ಮಾಡಿಕೊಂಡಿವೆ. ಈ ಒಪ್ಪಂದದ ಭಾಗವಾಗಿ, ಆ್ಯಂಥ್ರೋಪಿಕ್ ತನ್ನ ಮೊದಲ ಭಾರತೀಯ ಕಚೇರಿಯನ್ನು ಬೆಂಗಳೂರಿನಲ್ಲಿ ತೆರೆದಿದೆ .
Karnataka News Live 18 February 2026 ಆಡಳಿತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ರಾಂತಿ - ಇನ್ನು ಸರ್ಕಾರಕ್ಕೆ ದೂರು ನೀಡಿದರೆ ಕ್ಷಣಾರ್ಧದಲ್ಲಿ ಪ್ರತಿಕ್ರಿಯೆ!
ಕರ್ನಾಟಕ ಸರ್ಕಾರವು ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೃತಕ ಬುದ್ಧಿಮತ್ತೆ (AI) ಆಧಾರಿತ 'ಐಪಿಜಿಆರ್‌ಎಸ್ 2.0' ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.
Karnataka News Live 18 February 2026 Santosh Lad Intervie - ಸಂತೋಷ್ ಲಾಡ್ ಸಂದರ್ಶನ - ಶ್ರಮಯೋಗಿಗಳ ಕಲ್ಯಾಣಕ್ಕೆ ಸರ್ಕಾರದ ಆದ್ಯತೆ
ರಾಜ್ಯ ಸರ್ಕಾರದ 1000 ದಿನಗಳ ಆಡಳಿತ ಪೂರ್ಣಗೊಂಡಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಾರ್ಮಿಕ ಇಲಾಖೆಯ ಸಾಧನೆಗಳನ್ನು ಹಂಚಿಕೊಂಡಿದ್ದಾರೆ. ಗಿಗ್ ಕಾರ್ಮಿಕರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಶ್ರಮಿಕರಿಗಾಗಿ ಜಾರಿಗೆ ತಂದಿರುವ ಯೋಜನೆಗಳು ಮತ್ತು ಭವಿಷ್ಯದ ಗುರಿಗಳ ಬಗ್ಗೆ ವಿವರಿಸಿದ್ದಾರೆ.
Karnataka News Live 18 February 2026 ಉದ್ಯಮಿ ಸಿ.ಜೆ.ರಾಯ್ ಕೇಸ್; ಕಾರಣ ಮಾತ್ರ ಇನ್ನೂ ನಿಗೂಢ - ಹಿರಿಯ ಅಧಿಕಾರಿಗಳು ಹೇಳಿದ್ದೇನು?
ಉದ್ಯಮಿ ಸಿ.ಜೆ.ರಾಯ್ ಆತ್ಮ*ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಶೀಘ್ರದಲ್ಲೇ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಿದೆ. ಆರ್ಥಿಕ, ಕೌಟುಂಬಿಕ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದರೂ, ಆತ್ಮ*ಹತ್ಯೆಗೆ ನಿಖರ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.
Karnataka News Live 18 February 2026 ಗೋಡೆ ಮೇಲೆ ಮೂತ್ರ ವಿಸರ್ಜನೆ ಪ್ರಶ್ನಿಸಿದ ವಕೀಲನ ಮೇಲೆ ಹಲ್ಲೆ - ಪೊಲೀಸ್ ವಶಕ್ಕೆ
ಬೆಂಗಳೂರಿನಲ್ಲಿ ಗೋಡೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ವಕೀಲರೊಬ್ಬರ ಮೇಲೆ ಹೆಡ್ ಕಾನ್‌ಸ್ಟೇಬಲ್ ಸೇರಿದಂತೆ ಮೂವರು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು ಕೋರಮಂಗಲ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸತೀಶ್‌ನನ್ನು ವಶಕ್ಕೆ ಪಡೆದಿದ್ದಾರೆ.
Karnataka News Live 18 February 2026 ಮನೆ ಕಟ್ಟಲು ಪರವಾನಗಿ ನೀಡದ ಪಿಡಿಒ; ಪೆಟ್ರೋಲ್ ಸುರಿದುಕೊಂಡು ಸಾಯಲು ಯತ್ನ!
ಹರಪನಹಳ್ಳಿ ತಾಲೂಕಿನ ಕಡಬಗೆರೆ ಗ್ರಾಮ ಪಂಚಾಯಿತಿಯಲ್ಲಿ, ಮನೆ ನಿರ್ಮಾಣಕ್ಕೆ ಇ-ಸ್ವತ್ತು ಹಾಗೂ ಪರವಾನಗಿ ನೀಡದ ಪಿಡಿಒ ಕ್ರಮಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ಕಚೇರಿಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮ೧ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
Karnataka News Live 18 February 2026 ಹಾಸನ ಸೈಟ್ ವಿವಾದ - ಕಾನೂನು ಹೋರಾಟ ಮುಂದುವರಿಸಿದ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್
ನಿರ್ಮಾಪಕಿ ಪುಷ್ಪ ಮತ್ತು ದೇವರಾಜ್ ನಡುವಿನ ವಿವಾದ ತೀವ್ರಗೊಂಡಿದೆ. ಕೋರ್ಟ್ ಆದೇಶದ ಮೇಲೆ ಕಾಂಪೌಂಡ್ ತೆರವುಗೊಳಿಸಲಾಗಿದೆ ಎನ್ನಲಾಗಿದ್ದು, ಅದೇ ಆದೇಶಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿರುವುದಾಗಿ ಪುಷ್ಪ ಅವರು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿ ಕಾನೂನು ಹೋರಾಟ ಮುಂದುವರೆಸಿದ್ದಾರೆ.