‘ಮಹಿಳಾ ಮೀಸಲಾತಿ ವಿಧೇಯಕ 2023ರಲ್ಲೇ ಅಂಗೀಕಾರವಾಗಿದ್ದರೂ ಜಾರಿ ಮಾಡದೆ ಕತ್ತೆ ಕಾಯತ್ತಿದ್ದರೇ ಅಥವಾ ಮಂಡಕ್ಕಿ ತಿನ್ನುತ್ತಿದ್ದರೇ? ಕೂಡಲೇ ಮಹಿಳಾ ಮೀಸಲಾತಿ ಜಾರಿ ಮಾಡಬೇಕು’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
- Home
- News
- State
- Karnataka News Live: 2023ರಿಂದ ಮಹಿಳಾ ಮೀಸಲಾತಿ ಏಕೆ ಜಾರಿ ಮಾಡಿಲ್ಲ? - ಸಚಿವ ಪ್ರಿಯಾಂಕ್ ಖರ್ಗೆ ಕಿಡಿ
Karnataka News Live: 2023ರಿಂದ ಮಹಿಳಾ ಮೀಸಲಾತಿ ಏಕೆ ಜಾರಿ ಮಾಡಿಲ್ಲ? - ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ವಿಜಯನಗರ: ಭೀಕರ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆ ಡಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದೆ. 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಕಿತ್ನೂರು ಗ್ರಾಮದ ಒಂದೇ ಕುಟುಂಬದ ಮೂವರಾದ ನಾಗಪ್ಪ (56), ಪುತ್ರ ಕೊಟ್ರೇಶ್ (22), ಪುತ್ರಿ ಸುಜಾತಾ (35), ತಿಮ್ಮಲಾಪುರ ಗ್ರಾಮದ ದುರುಗಪ್ಪ (55) ಮೃತರು.
ಕಿತ್ನೂರು ಗ್ರಾಮದ ನಾಲ್ವರು 2 ಬೈಕ್ನಲ್ಲಿ ಕೊಟ್ರೇಶ್ಗೆ ಕನ್ಯೆ ನೋಡಲು ಹೊರಟಿದ್ದಾಗ ಡಣಾಪುರ ಸೇತುವೆ ಬಳಿ ಲಾರಿ 2 ಬೈಕ್ಗಳಿಗೆ ಡಿಕ್ಕಿ ಹೊಡೆದಿದ್ದರಿಂದ 3 ಮಂದಿ ಸಾವನ್ನಪ್ಪಿದ್ದಾರೆ. ಈ ಮೊದಲೇ 2 ಬೈಕ್ಗೆ ಲಾರಿ ಡಿಕ್ಕಿ ಹೊಡೆದಿದ್ದು, ಒಬ್ಬ ಬೈಕ್ ಸವಾರ ಮೃತಪಟ್ಟಿದ್ದಾನೆ. ನಂತರ ಕಾರು ಹಾಗೂ ಸೇತುವೆ ಮೇಲೆ ಬಸ್ ಹಿಂಭಾಗಕ್ಕೆ ಗುದ್ದಿದೆ. ಡಿಕ್ಕಿಯ ತೀವ್ರತೆಗೆ ಲಾರಿ ಪಲ್ಟಿಯಾಗಿ ಸೇತುವೆ ಕೆಳಗೆ ಬಿದ್ದಿದೆ.
Karnataka News Live 20 April 20262023ರಿಂದ ಮಹಿಳಾ ಮೀಸಲಾತಿ ಏಕೆ ಜಾರಿ ಮಾಡಿಲ್ಲ? - ಸಚಿವ ಪ್ರಿಯಾಂಕ್ ಖರ್ಗೆ ಕಿಡಿ
Karnataka News Live 20 April 2026ಬೆಂಗಳೂರಿನ ಬಿಸಿಲ ಬೇಗೆಗೆ ಹೋಟೆಲ್ ಸೇರಿದ ಯುವತಿ, ಮಾಡರ್ನ್ ಪ್ರಾಬ್ಲಂಗೆ ಮಾಡರ್ನ್ ಸೊಲ್ಯೂಷನ್
ಬೆಂಗಳೂರಿನ ಬಿಸಿಲ ಬೇಗೆಗೆ ಹೋಟೆಲ್ ಸೇರಿದ ಯುವತಿ, ಮಾಡರ್ನ್ ಪ್ರಾಬ್ಲಂಗೆ ಮಾಡರ್ನ್ ಸೊಲ್ಯೂಷನ್ , ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಸುಸ್ತಾಗುವ ಈ ವಾತಾವರಣಕ್ಕೆ ಯುವತಿ ಹೊಸ ಪ್ಲಾನ್ ಮಾಡಿದ್ದಾಳೆ.
Karnataka News Live 20 April 2026ಆಕಾಶವನ್ನೇ ಭೂಮಿಗಿಳಿಸಲು ನನ್ನಿಂದ ಸಾಧ್ಯವಿಲ್ಲ - ಸಚಿವ ಚಲುವರಾಯಸ್ವಾಮಿ ಬೇಸರ
ಇಷ್ಟೊಂದು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರೂ ಸಹ ತೃಪ್ತಿ ಇಲ್ಲವೆಂದರೆ ಆಕಾಶವನ್ನು ಭೂಮಿಗಿಳಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.
Karnataka News Live 20 April 2026ರಾಜ್ಯದ ಶೇ. 27.7ರಷ್ಟು ನಿರ್ಮಾಣ ಕಾರ್ಮಿಕರಲ್ಲಿ ಯಕೃತ್ತಿನ ಕಾಯಿಲೆ, ಸಂಶೋಧನೆ ಬಿಚ್ಚಿಟ್ಟಿತು ಶಾಕಿಂಗ್ ಸಂಗತಿ!
Karnataka News Live 20 April 2026ಬೆಂಗಳೂರು ಗಿಗ್ ಮಹಿಳಾ ಕಾರ್ಮಿಕರ ಸಂಕಷ್ಟ, ಮನೆಕೆಲಸ, ಬ್ಯೂಟಿಷನ್ ಗಾಗಿ ತೆರಳುವ ಮನೆಗಳಲ್ಲಿ 1 ತೊಟ್ಟು ನೀರೂ ಇಲ್ಲ, ಶೌಚವೂ ಇಲ್ಲ!
Karnataka News Live 20 April 2026Sher Movie - ಇದುವರೆಗೂ ಕಾಣಿಸಿಕೊಳ್ಳದ ಪೋಷಾಕು ಧರಿಸಿದ ಕಿರುತೆರೆಯ ಕರ್ಣ, ನಟ ಕಿರಣ್ ರಾಜ್!
Kiran Raj Movies: ಪ್ರಸಿದ್ಧ್ ನಿರ್ದೇಶನದಲ್ಲಿ ಕಿರಣ್ ರಾಜ್ ನಟಿಸಿರುವ ಚಿತ್ರ "ಶೇರ್". ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಗ್ರೇಸ್ ರಾಜ್ ಪ್ರೊಡಕ್ಷನ್ ಲಾಂಛನದಲ್ಲಿ ಡಾ.ಸುದರ್ಶನ್ ಸುಂದರರಾಜ್ ನಿರ್ಮಿಸಿರುವ ಸಿನಿಮಾ ಇದಾಗಿದೆ. ಎಚ್.ಕುಮಾರ್ (ರಾಟೆ) ಕಾರ್ಯಕಾರಿ ನಿರ್ಮಾಪಕರು.
Karnataka News Live 20 April 2026Summer Diet - ಈ ಆಹಾರಗಳಿಂದ ದೇಹದ ಉಷ್ಣಾಂಶ ಹೆಚ್ಚಾಗುತ್ತೆ - ಬೇಸಿಗೆಯಲ್ಲಿ ಕೂಲ್ ಆಗಿರಲು ಇವುಗಳಿಂದ ದೂರವಿರಿ
ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಹೆಚ್ಚಿಸುವ ಆಹಾರಗಳಿಂದ ದೂರವಿರುವುದು ಬಹಳ ಮುಖ್ಯ. ಮಸಾಲೆಯುಕ್ತ, ಕರಿದ ಪದಾರ್ಥ, ಕೆಫೀನ್ ಮತ್ತು ಜಂಕ್ ಫುಡ್‌ಗಳಿಂದ ಯಾಕೆ ದೂರವಿರಬೇಕು? ಇವುಗಳಿಂದ ದೂರವಿದ್ದರೆ ನಿರ್ಜಲೀಕರಣ ಮತ್ತು ಅಸಿಡಿಟಿಯಿಂದ ಹೇಗೆ ಪಾರಾಗಬಹುದು? ಇಲ್ಲಿದೆ ಮಾಹಿತಿ.
Karnataka News Live 20 April 2026Jackfruit Pickle - ಅಜ್ಜಿ ಕೈರುಚಿಯ ಹಲಸಿನಕಾಯಿ ಉಪ್ಪಿನಕಾಯಿ - ಮನೆಯಲ್ಲೇ ಮಾಡಿ, ವರ್ಷವಿಡೀ ಸವಿಯಿರಿ!
ಹಲಸಿನಕಾಯಿ ಉಪ್ಪಿನಕಾಯಿ ಒಂದು ಸಾಂಪ್ರದಾಯಿಕ ಮತ್ತು ರುಚಿಕರವಾದ ರೆಸಿಪಿ. ಇದನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು. ಸಾಸಿವೆ ಎಣ್ಣೆ ಮತ್ತು ದೇಸಿ ಮಸಾಲೆಗಳನ್ನು ಬಳಸಿ ಮಾಡುವ ಈ ಉಪ್ಪಿನಕಾಯಿ, ಊಟದ ರುಚಿಯನ್ನು ಹೆಚ್ಚಿಸುವುದಲ್ಲದೆ, ಹೆಚ್ಚು ದಿನಗಳ ಕಾಲ ಸಂಗ್ರಹಿಸಿಡಬಹುದು.
Karnataka News Live 20 April 2026Elra Kaleleyutte Kala Movie - ರಾಜ್‌ಕುಮಾರ್ ಹುಟ್ಟುಹಬ್ಬದಂದು ಚಂದನ್ ಶೆಟ್ಟಿ ಕನಸು ನನಸಾಗತ್ತೆ!
elra kaleleyutte kala movie: ಸುಜಯ್ ಶಾಸ್ತ್ರಿ ನಿರ್ದೇಶನದ, ಗೋಕುಲ ಎಂಟರ್ಟೈನರ್ಸ್ ಲಾಂಛನದಲ್ಲಿ ಗೋವಿಂದರಾಜು ನಿರ್ಮಿಸಿರುವ,ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ "ಎಲ್ರ ಕಾಲೆಳಿಯತ್ತೆ ಕಾಲ". ಇತ್ತೀಚೆಗೆ ನಡೆದ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಸಿನಿಮಾ ಬಗ್ಗೆ ಮಾಹಿತಿ ನೀಡಲಾಯ್ತು.
Karnataka News Live 20 April 2026ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗೆ 14 ಸಾವಿರ ದಾಟಿದ ವಿದ್ಯಾರ್ಥಿಗಳ ಸಂಖ್ಯೆ! ಈ ಬಾರಿ ಹೊಸ ದಾಖಲೆ
Karnataka News Live 20 April 2026OTT Releases - ಒಟಿಟಿಯಲ್ಲಿ ರಿಲೀಸ್ ಆಯ್ತು ಕೊನೇವರೆಗೂ ಸಸ್ಪೆನ್ಸ್, ಕಾಮಿಡಿಯಿಂದಲೇ ಕಾಡಿಸುವ ಸಿನಿಮಾಗಳು
ಏಪ್ರಿಲ್ 20 ರಿಂದ 27ರ ನಡುವೆ ಒಟಿಟಿಯಲ್ಲಿ ಭರ್ಜರಿ ಸಿನಿಮಾ ಮತ್ತು ವೆಬ್ ಸೀರೀಸ್‌ಗಳು ಬಿಡುಗಡೆಯಾಗುತ್ತಿವೆ. ಮನೆಯಲ್ಲೇ ಕೂತು ಆ್ಯಕ್ಷನ್, ಕಾಮಿಡಿ ಮತ್ತು ಥ್ರಿಲ್ಲರ್ ಸಿನಿಮಾಗಳನ್ನು ಎಂಜಾಯ್ ಮಾಡಬಹುದು. ಯಾವೆಲ್ಲಾ ಸಿನಿಮಾ, ಸೀರೀಸ್‌ಗಳು ಯಾವ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿವೆ?
Karnataka News Live 20 April 2026'ಯೂತ್' ಚಿತ್ರಕ್ಕೆ ಮನಸೋತ ರಿಷಬ್ ಶೆಟ್ಟಿ - "ಇದು ಪ್ರತಿ ಪೋಷಕರಿಗೆ ಅರ್ಪಿಸಿದ ಸಿನಿಮಾ" ಎಂದ 'ಕಾಂತಾರ' ಸ್ಟಾರ್
ರಿಷಬ್ ಶೆಟ್ಟಿಯಂತಹ ಸ್ಟಾರ್ ನಟರು ಇಂತಹ ಭಾವನಾತ್ಮಕ ಸಿನಿಮಾಗಳನ್ನು ಗುರುತಿಸಿ ಬೆಂಬಲ ನೀಡುತ್ತಿರುವುದು ಸಿನಿರಂಗಕ್ಕೆ ಹೊಸ ಶಕ್ತಿ ತಂದಂತಾಗಿದೆ. ನೀವು ಈ ವಾರಾಂತ್ಯದಲ್ಲಿ ಯಾವುದಾದರೂ ಒಳ್ಳೆಯ ಫೀಲ್ ಗುಡ್ ಸಿನಿಮಾ ನೋಡಬೇಕೆಂದು ಅಂದುಕೊಂಡಿದ್ದರೆ, ರಿಷಬ್ ಶೆಟ್ಟಿ ಶಿಫಾರಸು ಮಾಡಿರುವ ಈ 'ಯೂತ್' ಸಿನಿಮಾ ನೋಡಬಹುದು.
Karnataka News Live 20 April 2026ಕೊನೆಗೂ ಮಾತಾಡಿದ ನಟಿ ಶ್ರೀದೇವಿ ಆತ್ಮ; ಸತ್ತ ಜಾಗದಲ್ಲೇ ಸಾವಿನ ರಹಸ್ಯ ಬಯಲು ಮಾಡಿದ ತನಿಖಾಧಿಕಾರಿ!
Actress Sridevi Death: ಭಾರತೀಯ ಚಿತ್ರರಂಗದ ಅಪ್ರತಿಮ ನಟಿ, 'ಅತಿಲೋಕ ಸುಂದರಿ' ಶ್ರೀದೇವಿ ಸಾವು ಹೇಗೆ ಆಯ್ತು ಎಂದು ಇನ್ನೂ ಅನೇಕರಿಗೆ ಡೌಟ್ ಇದೆ. Paranormal Investigation ಆಗಿರುವ Saurabh Poonia ಅವರು ಈ ಬಗ್ಗೆ ಶಲೀನ್ ಶ್ರೋತ್ರಿಯಾ ಜೊತೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Karnataka News Live 20 April 2026ಹುಬ್ಬಳ್ಳಿಯಿಂದ ನ್ಯೂ ಟಿನ್ಸುಕಿಯಾ ನಡುವೆ ವಿಶೇಷ ರೈಲು, ಈಶಾನ್ಯ ಭಾರತ ಭೇಟಿ ಈಗ ಸುಲಭ, ಎಲ್ಲೆಲ್ಲಿ ನಿಲುಗಡೆ?
Karnataka News Live 20 April 2026ಜೆಡಿಎಸ್ ಎಲ್ಲಿದೆ ಎಂಬ ಟೀಕೆಗೆ ಸೇರಿರುವ ಸಾವಿರಾರು ಜನರೇ ಸಾಕ್ಷಿ - ನಿಖಿಲ್ ಕುಮಾರಸ್ವಾಮಿ
ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಟೀಕಿಸುವವರಿಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಜನರೇ ಸಾಕ್ಷಿಯಾಗಿದ್ದಾರೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
Karnataka News Live 20 April 2026ಮೀಸಲಾತಿ ಹೆಚ್ಚಳಕ್ಕೆ 9ನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರ ಬಳಿ ನಿಯೋಗ - ವಿ.ಎಸ್.ಉಗ್ರಪ್ಪ
ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿ ಹೆಚ್ಚಿಸುವ ಸಂಬಂಧ ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ಸರ್ವ ಪಕ್ಷಗಳ ನಿಯೋಗದೊಂದಿಗೆ ಪ್ರಧಾನಮಂತ್ರಿ ಭೇಟಿ ಮಾಡಿ ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸಲು ಪ್ರಯತ್ನಿಸಬೇಕು ಎಂದು ವಿ.ಎಸ್.ಉಗ್ರಪ್ಪ ಎಚ್ಚರಿಸಿದರು.
Karnataka News Live 20 April 2026ಮಹಿಳಾ ಮೀಸಲಾತಿಗಲ್ಲ, ಕ್ಷೇತ್ರ ವಿಂಗಡಣೆಗೆ ವಿಪಕ್ಷಗಳ ವಿರೋಧ - ಸಿಎಂ ಸಿದ್ದರಾಮಯ್ಯ
ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಪ್ರಸ್ತುತ ಕ್ಷೇತ್ರ ಮರುವಿಂಗಡನೆಯನ್ನು ಅದಕ್ಕೆ ಸೇರಿಸಿ ಮಂಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Karnataka News Live 20 April 2026ಶಿರಸಿಯಲ್ಲಿ ಎರಡನೇ ಮದುವೆಗೆ ತಯಾರಾಗಿದ್ದ ವೈದ್ಯನ ಭೀಕರ ಹತ್ಯೆ! ಆರೋಪಿಯ ಹೆಸರು ಬಹಿರಂಗಪಡಿಸದ ಪೊಲೀಸ್
Karnataka News Live 20 April 2026ಬಿಟ್‌ಕಾಯಿನ್ ಹಗರಣ ಮತ್ತೆ ಮುನ್ನಲೆಗೆ, ಹೈಪ್ರೊಫೈಲ್ ವ್ಯಕ್ತಿಗಳ ಮೇಲೆ ಇಡಿ ದಾಳಿ! ಯಾರ ಮೇಲೆಲ್ಲ ಕಣ್ಣಿಟ್ಟಿದೆ ?
ಬೆಂಗಳೂರಿನಲ್ಲಿ ನಡೆದ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ED 17ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಈ ಶಾಸಕ ನಲಪಾಡ್ ಹ್ಯಾರಿಸ್, ಮಾಜಿ ಸಚಿವ ಕೆ. ರೆಹಮಾನ್ ಖಾನ್ ಅವರ ಸಂಬಂಧಿಕರು ಹಾಗೂ ಹಲವು ಕ್ರಿಪ್ಟೋ ಕಂಪನಿಗಳ ಮೇಲೆ ಶೋಧ ನಡೆಸಲಾಗಿದ್ದು, ಹಣಕಾಸು ವ್ಯವಹಾರಗಳನ್ನು ಪರಿಶೀಲಿಸಲಾಗುತ್ತಿದೆ. 2020ರ ವಂಚನೆ ಪ್ರಕರಣದಿಂದ ಆರಂಭವಾದ ಈ ತನಿಖೆಯು ಇದೀಗ ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ತೀವ್ರಗೊಂಡಿದೆ.
Karnataka News Live 20 April 2026ಎಂಗೇಜ್‌ಮೆಂಟ್ ಟೈಮ್‌ನಲ್ಲೇ ಕಣ್ಣೀರು ಹಾಕಿದ ಟಾಲೆಂಟೆಡ್ ಕಲಾವಿದ ಪ್ರಶಾಂತ್ ಮನದರಸಿ; ಕೃತಿ ಗೌಡ ಯಾರು?
Gicchi Gili Gili Prashanth Gowda Wedding: ಕ್ವಾಟ್ಲೆ ಕಿಚನ್, ಗಿಚ್ಚಿ ಗಿಲಿಗಿಲಿ ಶೋ ಖ್ಯಾತಿಯ ನಟ ಟಾಲೆಂಟೆಡ್ ಕಲಾವಿದ ಅವರು ಎಂಗೇಜ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.