ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರವನ್ನು ಅಧಿಕೃತವಾಗಿ ರಾಮಕೃಷ್ಣ ಮಿಷನ್‌ಗೆ ಹಸ್ತಾಂತರಿಸಲಾಗಿದೆ. ಆಶ್ರಮದ ಮೂಲಕ ಶೈಕ್ಷಣಿಕ, ವೈದ್ಯಕೀಯ ಸೇರಿದಂತೆ ವಿವಿಧ ಸೇವಾ ಚಟುವಟಿಕೆಗಳನ್ನು ವಿಸ್ತರಿಸಲು ಯೋಜಿಸಲಾಗಿದೆ.
- Home
- News
- State
- Karnataka News Live: ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರ ಕೊಲ್ಕತ್ತಾದ ರಾಮಕೃಷ್ಣ ಮಿಷನ್‌ಗೆ ಹಸ್ತಾಂತರ
Karnataka News Live: ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರ ಕೊಲ್ಕತ್ತಾದ ರಾಮಕೃಷ್ಣ ಮಿಷನ್‌ಗೆ ಹಸ್ತಾಂತರ

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಗರು. ಅವರು ಮೊದಲು ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ. ಟಗರು ಎಂದಿಗೂ ಟಗರೇ. ಅವರು ಸೈಲೆಂಟ್ ಆಗಿರಬಹುದು, ಅವರು ಮಾತನಾಡಿದರೆ ಬೇರೆ ರೀತಿಯೇ ಸೌಂಡ್ ಆಗುತ್ತದೆ’ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
‘ಸಿದ್ದರಾಮಯ್ಯ ಅವರಿಗೆ ಎಲ್ಲರೂ ಆಪ್ತರೇ. ಅವರು ನಮ್ಮ ಮುಖ್ಯಮಂತ್ರಿಗಳು, ಅವರು ಈಗ ಸೈಲೆಂಟ್ ಆಗಿರಬಹುದು. ಆದರೆ ಅವರು ಮಾತನಾಡಿದರೆ ಬೇರೆ ರೀತಿಯೇ ಸೌಂಡ್ ಬರುತ್ತದೆ. ಸದ್ಯ ಅವರು ಮಾತನಾಡುವ ಅಗತ್ಯವಿಲ್ಲ’ ಎಂದು ಹೇಳಿದರು.
ಪಕ್ಷದಲ್ಲಿ ಮುಸ್ಲಿಮರಿಗೆ ಯಾವುದೇ ತಾರತಮ್ಯ ಆಗಿಲ್ಲ. ಒಬ್ಬರು ನನ್ನ ಪರ ಮಾತನಾಡುತ್ತಾರೆ. ಇನ್ನೊಬ್ಬರು ಮತ್ತೊಬ್ಬರ ಪರ ಮಾತನಾಡುತ್ತಾರೆ. ಅದನ್ನೆಲ್ಲ ಪರಿಗಣಿಸಬೇಕಾಗಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
Karnataka News Live 22 April 2026ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರ ಕೊಲ್ಕತ್ತಾದ ರಾಮಕೃಷ್ಣ ಮಿಷನ್‌ಗೆ ಹಸ್ತಾಂತರ
Karnataka News Live 22 April 2026Belagavi - ಸೀರೆ ಬದಲು ನೈಟ್ ಧರಿಸಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಕ್ರೂರ ಪತಿರಾಯ
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ, ನೈಟಿ ಧರಿಸಿದ್ದಕ್ಕೆ ಪತಿ ಕೃಷ್ಣಾ ಪಾಟೀಲ್ ತನ್ನ ಪತ್ನಿ ಮಂಜುಳಾಗೆ ಬೆಂಕಿ ಹಚ್ಚಿದ್ದಾನೆ. ಸುಟ್ಟ ಗಾಯಗಳಿಂದ ಬಳಲುತ್ತಿರುವ ಮಂಜುಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.
Karnataka News Live 22 April 2026ಬತ್ತಿದ ಜಲಮೂಲ, ಧಾರವಾಡ ಜಿಲ್ಲೆಯ 15 ಹಳ್ಳಿಗೆ ನೀರಿನ ಬರ; ಗ್ರಾಮಗಳ ಸಂಖ್ಯೆ ಹೆಚ್ಚಾಗುವ ಆತಂಕ
ಧಾರವಾಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬೇಸಿಗೆಯ ತಾಪಮಾನದಿಂದಾಗಿ 15 ಹಳ್ಳಿಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕೆರೆಗಳು ಮತ್ತು ಬೋರ್‌ವೆಲ್‌ಗಳು ಬತ್ತುತ್ತಿರುವುದರಿಂದ, ಜಿಲ್ಲಾಡಳಿತವು ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸುತ್ತಿದೆ.
Karnataka News Live 22 April 2026Ramanuja Jayanti 2026 - ಅಸ್ಪೃಶ್ಯರಿಗೂ ದೀಕ್ಷೆ ಕೊಟ್ಟಿದ್ದ ರಾಮಾನುಜಾಚಾರ್ಯರು
ಯತಿ ಸಾರ್ವಭೌಮ ರಾಮಾನುಜಾಚಾರ್ಯರು ಸಾಮಾಜಿಕ ಸಮಾನತೆಯ ಹರಿಕಾರರಾಗಿದ್ದರು. ಗುರುಗಳಿಂದ ಪಡೆದ ರಹಸ್ಯ ಮಂತ್ರವನ್ನು ಸಮಾಜದ ಎಲ್ಲ ವರ್ಗದವರಿಗೂ ಉಪದೇಶಿಸಿ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ, ಶ್ರೀವೈಷ್ಣವ ಸಿದ್ಧಾಂತವನ್ನು ಪ್ರತಿಪಾದಿಸಿದರು. ,