06:47 PM (IST) Dec 22

Karnataka News Live 22 December 2025ಕನ್ನಡ ಇಂಡಸ್ಟ್ರಿಗೆ ಪ್ರಾಣ ಕೊಟ್ಟರೂ ಚೆನ್ನಾಗಿ ನೋಡಿಕೊಂಡಿಲ್ಲ - ಕಣ್ಣೀರು ಹಾಕಿದ ತುಪ್ಪದ ಬೆಡಗಿ ರಾಗಿಣಿ ಹೇಳಿದ್ದೇನು?

'ತುಪ್ಪದ ಬೆಡಗಿ' ಖ್ಯಾತಿಯ ನಟಿ ರಾಗಿಣಿ ದ್ವಿವೇದಿ, ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗ ತನ್ನನ್ನು ಕಡೆಗಣಿಸಿದೆ ಮತ್ತು ಕಷ್ಟದ ಸಮಯದಲ್ಲಿ ಯಾರೂ ಬೆಂಬಲಕ್ಕೆ ನಿಲ್ಲಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Read Full Story
06:45 PM (IST) Dec 22

Karnataka News Live 22 December 2025ಬರೋಬ್ಬರಿ 6 ವರ್ಷಗಳ ಬಳಿಕ ಸಂಚಾರಕ್ಕೆ ಮುಕ್ತವಾಗಲಿದೆ ಬೆಂಗಳೂರಿನ ಕಾಮರಾಜ್‌ ರಸ್ತೆ!

ನಮ್ಮ ಮೆಟ್ರೋ ಕಾಮಗಾರಿಯಿಂದಾಗಿ 2019ರಿಂದ ಭಾಗಶಃ ಮುಚ್ಚಲಾಗಿದ್ದ ಬೆಂಗಳೂರಿನ ಕಾಮರಾಜ್ ರಸ್ತೆಯು, ಜನವರಿ 2026ರ ಆರಂಭದಲ್ಲಿ ದ್ವಿಮುಖ ಸಂಚಾರಕ್ಕೆ ಸಂಪೂರ್ಣವಾಗಿ ತೆರೆಯಲಿದೆ. ಇದು ಎಂಜಿ ರಸ್ತೆ ಮತ್ತು ಕಮರ್ಷಿಯಲ್ ಸ್ಟ್ರೀಟ್ ಸುತ್ತಮುತ್ತಲಿನ ದಟ್ಟಣೆಯನ್ನು ಕಡಿಮೆ ಮಾಡಲಿದೆ.

Read Full Story
06:44 PM (IST) Dec 22

Karnataka News Live 22 December 2025ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗ - 6ನೇ ರೈಲು ಸೇರ್ಪಡೆ, ಇನ್ಮುಂದೆ 13 ನಿಮಿಷಕ್ಕೊಂದು ರೈಲು ಸಂಚಾರ!

ಬೆಂಗಳೂರು ಮೆಟ್ರೋದ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಡಿಸೆಂಬರ್ 23, 2025 ರಿಂದ 6ನೇ ರೈಲು ಸೇವೆಗೆ ಸೇರ್ಪಡೆಯಾಗಲಿದೆ. ಇದರಿಂದಾಗಿ, ಜನದಟ್ಟಣೆ ವೇಳೆ ರೈಲುಗಳ ನಡುವಿನ ಅಂತರವು 15 ನಿಮಿಷಗಳಿಂದ 13 ನಿಮಿಷಗಳಿಗೆ ಇಳಿಕೆಯಾಗಲಿದ್ದು, ಪ್ರಯಾಣಿಕರ ಕಾಯುವ ಸಮಯ ಕಡಿಮೆಯಾಗಲಿದೆ.

Read Full Story
06:12 PM (IST) Dec 22

Karnataka News Live 22 December 2025Bigg Bossನಲ್ಲಿ 10 ಪಟ್ಟು ಹೆಚ್ಚು ಸಂಭಾವನೆ ಸಿಕ್ಕಿದ್ದು ನಿಜ - ರಜತ್, ಚೈತ್ರಾ​ ಕುಂದಾಪುರ ರಿವೀಲ್​ ಮಾಡಿದ್ದೇನು?

ಬಿಗ್​ಬಾಸ್​ ಸೀಸನ್​ 12ಕ್ಕೆ ಅತಿಥಿಗಳಾಗಿ ಪ್ರವೇಶಿಸಿದ್ದ ರಜತ್​ ಮತ್ತು ಚೈತ್ರಾ ಕುಂದಾಪುರ ಇದೀಗ ಮನೆಯಿಂದ ಹೊರಬಂದಿದ್ದಾರೆ. ತಮ್ಮ ಎರಡನೇ ಬಾರಿಯ ಬಿಗ್​ಬಾಸ್​ ಅನುಭವವನ್ನು ಹಂಚಿಕೊಂಡ ಅವರು, ಸೀಸನ್ 11 ಕ್ಕಿಂತ 10 ಪಟ್ಟು ಹೆಚ್ಚು ಸಂಭಾವನೆ ಪಡೆದಿರುವುದಾಗಿ ರಜತ್ ಬಹಿರಂಗಪಡಿಸಿದ್ದಾರೆ.
Read Full Story
05:52 PM (IST) Dec 22

Karnataka News Live 22 December 2025ರಾಮೇಶ್ವರಂ ಕೆಫೆಗೆ ಬಿಗ್ ರಿಲೀಫ್ - ವಿಮಾನ ನಿಲ್ದಾಣ ಮಳಿಗೆ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ 'ರಾಮೇಶ್ವರಂ ಕೆಫೆ' ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಮೇಲ್ನೋಟಕ್ಕೆ ಆರೋಪಗಳು ಸುಳ್ಳು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ತನಿಖೆಯನ್ನು ಸ್ಥಗಿತಗೊಳಿಸಲು ಆದೇಶಿಸಿದೆ.

Read Full Story
05:48 PM (IST) Dec 22

Karnataka News Live 22 December 2025ಶಾಸಕ ಕೆ.ಎನ್ ರಾಜಣ್ಣ-ಡಿಕೆಶಿ ಭೇಟಿಯಲ್ಲಿ ತಪ್ಪಿಲ್ಲ, ಸಿಎಂ ಸ್ಥಾನ ಬದಲಾವಣೆ ವಿಷಯದ ಚರ್ಚೆ ಇಲ್ಲ - ಶಾಸಕ ಪೊನ್ನಣ್ಣ

ಸಿಎಂ ಸ್ಥಾನದ ಗೊಂದಲದ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿಎಂ ಮತ್ತು ಡಿಸಿಎಂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಿಎಂ ಬದಲಾವಣೆಯ ಚರ್ಚೆಯೇ ಇಲ್ಲ ಎಂದರು.

Read Full Story
05:15 PM (IST) Dec 22

Karnataka News Live 22 December 2025ಚಿಂದಿ ಬಟ್ಟೆ ಧರಿಸಿ ಜಾಲತಾಣದಲ್ಲಿ ಚಿಂದಿ ಉಡಾಯಿಸಿದ Toxic ನಟಿ - ಬೆಲೆ ಕೇಳಿದ್ರೆ ಹೌಹಾರಿ ಹೋಗ್ತೀರಾ!

ಬಾಲಿವುಡ್ ನಟಿ ಹುಮಾ ಖುರೇಷಿ ಇತ್ತೀಚೆಗೆ ಧರಿಸಿದ್ದ ಹರಿದು ಚಿಂದಿಯಾದ ಡ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಫ್ಯಾಷನ್ ಹೆಸರಿನಲ್ಲಿ ಗಮನ ಸೆಳೆಯಲು ಯತ್ನಿಸಿರುವ ನಟಿಯ ಈ ಡ್ರೆಸ್‌ನ ಬೆಲೆ ಕೇಳಿ ಫ್ಯಾನ್ಸ್​ ಹೌಹಾರಿದ್ದಾರೆ. ಸೆಲೆಬ್ರಿಟಿಗಳ ವಿಚಿತ್ರ ಫ್ಯಾಷನ್ ಕುರಿತು ಚರ್ಚೆ ಹುಟ್ಟುಹಾಕಿದೆ

Read Full Story
05:06 PM (IST) Dec 22

Karnataka News Live 22 December 2025ಕಲಬುರಗಿ - ಮಠದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ! ಎಸ್ಕೇಪ್ ಆಗಿದ್ದಾತ ಮರಳಿ ಬಂದು ಕೃತ್ಯ

ಕಲಬುರಗಿ ಜಿಲ್ಲೆಯ ಉಡಚಣ ಗ್ರಾಮದ ಶಂಕರಲಿಂಗೇಶ್ವರ ಮಠದಲ್ಲಿ, ಎಂಟು ತಿಂಗಳ ನಂತರ ಮರಳಿದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಗಾಳಿಯಲ್ಲಿ ಗುಂಡು ಹಾರಿಸಿ ಆತಂಕ ಸೃಷ್ಟಿಸಿದ್ದಾರೆ. ಹೊಸ ಪೀಠಾಧಿಪತಿ ನೇಮಕದ ಚರ್ಚೆಯ ನಡುವೆ ನಡೆದ ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

Read Full Story
04:23 PM (IST) Dec 22

Karnataka News Live 22 December 2025'ಯಾವುದಾದರೂ ಪುಸ್ತಕ ಸುಟ್ಟುಹಾಕಿದ್ದರೆ ಅದರು ಹೇಳಿ ಹೋಗು ಕಾರಣ..' ಲೇಖಕಿಯ ಪೋಸ್ಟ್‌ಗೆ ಭಾರೀ ಕಾಮೆಂಟ್ಸ್‌!

ರವಿ ಬೆಳಗರೆಯವರ 'ಹೇಳಿ ಹೋಗು ಕಾರಣ' ಪುಸ್ತಕವು ಯುವಜನರಲ್ಲಿ ಇಂದಿಗೂ ಜನಪ್ರಿಯವಾಗಿದೆ. ಇತ್ತೀಚೆಗೆ ಲೇಖಕಿ ಪೂರ್ಣಿಮಾ ಹೆಗ್ಗಡೆ ಅವರು ಈ ಪುಸ್ತಕವನ್ನು ತಾನು ಸುಟ್ಟುಹಾಕಿದ್ದೆ ಎಂದು ಹೇಳಿಕೊಂಡಿದ್ದು, ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
Read Full Story
04:22 PM (IST) Dec 22

Karnataka News Live 22 December 2025ಗಂಡನೂ ಇಲ್ಲ, ಪ್ರೇಮಿಯೂ ಸೇರಿಸ್ತಿಲ್ಲ; 'ಯಾರಿಗೆ ಬೇಕು ಈ ಲೋಕ'ವೆಂದು ಲೈವ್‌ನಲ್ಲಿ ನೇಣಿಗೆ ಶರಣಾದ ಗೃಹಿಣಿ!

ಬಳ್ಳಾರಿಯ ಹುಸೇನ್ ನಗರದಲ್ಲಿ ಮುನ್ನಿ ಎಂಬ 23 ವರ್ಷದ ಗೃಹಿಣಿ ವಿಡಿಯೋ ಮಾಡುತ್ತಲೇ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮ ವೈಮನಸ್ಸು ಘಟನೆಗೆ ಕಾರಣ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

Read Full Story
03:52 PM (IST) Dec 22

Karnataka News Live 22 December 2025Bigg Boss ಬಿಗ್​ ಟ್ವಿಸ್ಟ್​ - ಜಾಹ್ನವಿ ಹಾದಿ ಹಿಡಿದ್ರಾ ಅಶ್ವಿನಿ ಗೌಡ? ಗಿಲ್ಲಿ ಬಹಳ ಮೋಸಗಾರ ಅಂದದ್ದು ಯಾರು?

ಬಿಗ್‌ಬಾಸ್ ಮನೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ಸ್ಪರ್ಧಿಗಳು ಇತರರನ್ನು ನಾಮಿನೇಟ್ ಮಾಡಿದ್ದಾರೆ. ಅಶ್ವಿನಿ ಗೌಡ ಅವರು ಸ್ಪಂದನಾ ಸೋಮಣ್ಣರನ್ನು ವೀಕ್ ಎಂದು ಹೇಳಿದರೆ, ರಕ್ಷಿತಾ ಶೆಟ್ಟಿ ಧನುಷ್ ಹೆಸರನ್ನು ತೆಗೆದುಕೊಂಡರು. ಇತ್ತ ರಾಷಿಕಾ, ಗಿಲ್ಲಿ ನಟನನ್ನು ಬಹುದೊಡ್ಡ ಮೋಸಗಾರ ಎಂದಿದ್ದಾರೆ.

Read Full Story
03:11 PM (IST) Dec 22

Karnataka News Live 22 December 2025ಡಿಜಿಟಲ್ ಬ್ಯಾನ್ ಮಾಡಿ ದೇಶಕ್ಕೆ ಮಾದರಿಯಾದ ಗಡಿಗ್ರಾಮ - ಪ್ರತಿನಿತ್ಯ ಮೊಬೈಲ್, ಟಿವಿ 2 ಗಂಟೆ ಬಂದ್!

ಬೆಳಗಾವಿಯ ಹಲಗಾ ಗ್ರಾಮವು ಡಿಜಿಟಲ್ ವ್ಯಸನಕ್ಕೆ ಕಡಿವಾಣ ಹಾಕಲು 'ಡಿಜಿಟಲ್ ಆಫ್' ಎಂಬ ಮಾದರಿ ಪ್ರಯೋಗವನ್ನು ಆರಂಭಿಸಿದೆ. ಪ್ರತಿದಿನ ಸಂಜೆ 7 ರಿಂದ 9 ರವರೆಗೆ ಸೈರನ್ ಮೊಳಗಿಸಿ, ಗ್ರಾಮಸ್ಥರು ಮೊಬೈಲ್ ಮತ್ತು ಟಿವಿಗಳನ್ನು ಆಫ್ ಮಾಡಿ ಮಕ್ಕಳು ಓದುತ್ತಾರೆ. 

Read Full Story
02:29 PM (IST) Dec 22

Karnataka News Live 22 December 2025Bigg Bossನಲ್ಲಿ ಅಶ್ವಿನಿ ಗೌಡ ವ್ಯವಹಾರದ ಕುರಿತು ಯಾರೂ ತಿಳಿಯದ ಬಹುದೊಡ್ಡ ಸೀಕ್ರೆಟ್​ ಬಿಚ್ಚಿಟ್ಟ ಅಭಿಷೇಕ್​!

ಬಿಗ್​ಬಾಸ್​ ಮನೆಯಲ್ಲಿ ಜಗಳದಿಂದಲೇ ಗುರುತಿಸಿಕೊಂಡಿರುವ ಅಶ್ವಿನಿ ಗೌಡ ಅವರ ಬಗ್ಗೆ ಸಹ ಸ್ಪರ್ಧಿ ಅಭಿಷೇಕ್​ ಶ್ರೀಕಾಂತ್​ ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಯಾರಿಗೂ ತಿಳಿಯದ ಕೆಲವೊಂದು ಗುಟ್ಟುಗಳನ್ನು ಹೇಳಿದ್ದಾರೆ. ಅವರು ಹೇಳಿದ್ದೇನು? 

Read Full Story
02:29 PM (IST) Dec 22

Karnataka News Live 22 December 2025ಕ್ರಿಸ್‌ಮಸ್‌ ಹಿನ್ನಲೆ, ಕೆಸ್ಸಾರ್ಟಿಸಿ ಪ್ರಯಾಣಿಕರಿಗೆ ಗುಡ್‌ನ್ಯೂಸ್‌!

ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ, ಕೆಎಸ್‌ಆರ್‌ಟಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಡಿಸೆಂಬರ್‌ 22 ರಿಂದ 24ರ ವರೆಗೆ 1000 ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಮಾಡಿದೆ. ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣಗಳಿಂದ ರಾಜ್ಯದ ಹಾಗೂ ಅಂತರರಾಜ್ಯದ ವಿವಿಧ ಸ್ಥಳಗಳಿಗೆ ಈ ವಿಶೇಷ ಸಾರಿಗೆಗಳು ಸಂಚರಿಸಲಿದೆ.

Read Full Story
02:14 PM (IST) Dec 22

Karnataka News Live 22 December 2025ಮಹಿಳಾ ಆಯೋಗ ವಿರೋಧಕ್ಕೂ ಡೋಂಟ್ ಕೇರ್ , 569 ಮದ್ಯದ ಲೈಸೆನ್ಸ್ ಇ-ಹರಾಜು; ಸರ್ಕಾರದ ಖಜಾನೆಗೆ ಬರಲಿದೆಯೇ ₹1,000 ಕೋಟಿ?

ಮದ್ಯ ಮಾರಾಟ ಇಳಿಕೆಯಿಂದಾಗಿ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿರುವ ಅಬಕಾರಿ ಇಲಾಖೆಯು, ರಾಜ್ಯದ 477 ವೈನ್‌ ಶಾಪ್‌ ಹಾಗೂ 92 ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ಲೈಸೆನ್ಸ್‌ಗಳನ್ನು ಇ-ಹರಾಜು ಮಾಡಲು ಅಧಿಸೂಚನೆ ಹೊರಡಿಸಿದೆ. 

Read Full Story
02:09 PM (IST) Dec 22

Karnataka News Live 22 December 2025ಓಮನ್‌ ಮಾರುಕಟ್ಟೆಗೆ ಲಗ್ಗೆ ಇಟ್ಟ ವಿಜಯಪುರದ ಲಿಂಬೆ ಹಣ್ಣು!

ರಾಜ್ಯದ ವಿಜಯಪುರ ಜಿಲ್ಲೆಯಿಂದ 3 ಮೆಟ್ರಿಕ್ ಟನ್ ಜಿಐ-ಟ್ಯಾಗ್ ಹೊಂದಿರುವ ಲಿಂಬೆಹಣ್ಣನ್ನು ಯಶಸ್ವಿಯಾಗಿ ಓಮನ್‌ಗೆ ರಫ್ತು ಮಾಡಲಾಗಿದೆ. ಈ ಹಿಂದೆ ದುಬೈ ಹಾಗೂ ಯುನೈಟೆಡ್ ಕಿಂಗ್‌ಡಮ್‌ಗೂ ರಫ್ತು ಮಾಡಲಾಗಿದೆ.

Read Full Story
01:58 PM (IST) Dec 22

Karnataka News Live 22 December 2025ಕೊಪ್ಪಳ - ಆಟವಾಡುತ್ತಿದ್ದ 6 ವರ್ಷದ ಮಗು ಮೊದಲ ಮಹಡಿಯಿಂದ ಬಿದ್ದು ಗಂಭೀರ ಗಾಯ, ಪ್ರಾಣಾಪಾಯದಿಂದ ಪಾರು!

ಕೊಪ್ಪಳದ ಹಮಾಲರ ಕಾಲೋನಿಯಲ್ಲಿ, ಆರು ವರ್ಷದ ಬಾಲಕನೊಬ್ಬ ಪಾರಿವಾಳ ಹಿಡಿಯಲು ಹೋಗಿ ಮೊದಲ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾನೆ. ತಲೆಗೆ ಗಂಭೀರ ಪೆಟ್ಟಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪಾಲಕರಿಗೆ ಎಚ್ಚರಿಕೆಯ ಗಂಟೆಯಾಗಿದೆ.
Read Full Story
01:29 PM (IST) Dec 22

Karnataka News Live 22 December 2025ಕುಡಿದು ರಸ್ತೆಗೆ ಬಿದ್ದ ವ್ಯಕ್ತಿ ಬಸ್ ಚಕ್ರಕ್ಕೆ ಸಿಲುಕಿ ಸಾವು - ಸಾವಿಗೆ ಹೊಣೆ ಯಾರು? ಬಸ್ ಚಾಲಕನೇ? ಸರ್ಕಾರವೇ? ಬಾರ್ ಮಾಲೀಕರೇ?

ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ರಸ್ತೆಗೆ ಬಿದ್ದಾಗ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕನನ್ನು ಬಂಧಿಸಲಾಗಿದ್ದು, ಈ ಸಾವಿಗೆ ಕಾರಣ ಯಾರು? ಮದ್ಯ ನಿಷೇಧದ ಅಗತ್ಯತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Read Full Story
01:02 PM (IST) Dec 22

Karnataka News Live 22 December 20252025 ಭಾರತೀಯ ಕ್ರಿಕೆಟ್ ಪಾಲಿಗೆ ಮುಟ್ಟಿದ್ದೆಲ್ಲಾ ಚಿನ್ನ; ಇಲ್ಲಿವೆ ನೋಡಿ 5 ಅವಿಸ್ಮರಣೀಯ ಕ್ಷಣಗಳು!

ಬೆಂಗಳೂರು: 2025ರ ಮುಕ್ತಾಯಕ್ಕೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಭಾರತ ಕ್ರಿಕೆಟ್ ಪಾಲಿಗೆ ಈ ವರ್ಷ ಹಲವು ಅವಿಸ್ಮರಣೀಯ ಕ್ಷಣಗಳು ಸಿಕ್ಕಿವೆ. ಭಾರತ ಕ್ರಿಕೆಟ್‌ ಪಾಲಿಗೆ ಸಿಕ್ಕ ಐದು ಅಪರೂಪದ ಕ್ಷಣಗಳನ್ನು ಮತ್ತೊಮ್ಮೆ ಮೆಲುಕು ಹಾಕೋಣ ಬನ್ನಿ.

Read Full Story
12:48 PM (IST) Dec 22

Karnataka News Live 22 December 2025ಕನ್ನಡ ಕ್ಯಾಲಿಗ್ರಫಿಗೆ ಲಭಿಸಿದ ಅಂತಾರಾಷ್ಟ್ರೀಯ ಪ್ರಶಸ್ತಿ

ದಕ್ಷಿಣ ಕೊರಿಯಾದಲ್ಲಿ ನಡೆದ ವಿಶ್ವ ಕ್ಯಾಲಿಗ್ರಫಿ ಪ್ರದರ್ಶನದಲ್ಲಿ ಕನ್ನಡ ಕ್ಯಾಲಿಗ್ರಾಫರ್ ಸುರೇಶ್ ಎಸ್.ವಾಘ್ಮೋರೆಗೆ 'ಟಾಪ್ ಎಕ್ಸಲೆನ್ಸ್ ಅವಾರ್ಡ್' ಲಭಿಸಿದೆ. ಕನ್ನಡ ಕ್ಯಾಲಿಗ್ರಫಿ ಕ್ಷೇತ್ರಕ್ಕೆ ಸಿಕ್ಕ ಮೊದಲ ಅಂತರಾಷ್ಟ್ರೀಯ ಗೌರವ, ಕನ್ನಡ ಲಿಪಿಯ ಸೌಂದರ್ಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಜಾಗತಿಕ ಮನ್ನಣೆ

Read Full Story