ವಿಶ್ವದ ಶ್ರೀಮಂತ ಸಂಸ್ಥೆ ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಮಸೂದೆ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮಸೂದೆ ಪ್ರಕಾರ ಇತರ ಕ್ರೀಡಾ ಫೆಡರೇಷನ್ ಮಾದರಿಯಲ್ಲಿ ಬಿಸಿಸಿಐಗೂ ಕೂಡ ಈ ನೆಲಸದ ಕಾನೂನು ಅನ್ವಯವಾಗಲಿದೆ.
- Home
- News
- State
- Karnatata Latest News Live: ಸರ್ಕಾರದ ನಿಯಂತ್ರಣಕ್ಕೆ ಬಿಸಿಸಿಐ, ರಾಷ್ಟ್ರೀಯ ಕ್ರೀಡಾ ವ್ಯಾಪ್ತಿಗೆ ತರಲು ಮಸೂದೆ ಮಂಡನೆಗೆ ಸಿದ್ಧತೆ
Karnatata Latest News Live: ಸರ್ಕಾರದ ನಿಯಂತ್ರಣಕ್ಕೆ ಬಿಸಿಸಿಐ, ರಾಷ್ಟ್ರೀಯ ಕ್ರೀಡಾ ವ್ಯಾಪ್ತಿಗೆ ತರಲು ಮಸೂದೆ ಮಂಡನೆಗೆ ಸಿದ್ಧತೆ

ಬೆಂಗಳೂರು (ಜು.22): ಮುಡಾ ಹಗರಣದ ವಿಚಾರವಾಗಿ ಜಾರಿ ನಿರ್ದೇಶನಾಲದ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಕೇಸ್ ಇಡಿ ಕುಣಿಕೆಯಿಂದ ಸಿಎಂ ಸಿದ್ದರಾಮಯ್ಯ ಪತ್ನಿ ಬಿಎಂ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ಗೆ ರಿಲೀಫ್ ನೀಡಿದೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ರಾಜಕೀಯ ಹೋರಾಟಗಳು ಚುನಾವಣೆಯಲ್ಲಿ ನಡೆಯಲಿ, ಇಲ್ಲಿ ಬೇಡ ಎಂದು ದೇಶದ ಅತ್ಯುನ್ನತ ನ್ಯಾಯಾಲಯ ತಿಳಿಸಿದೆ. ಅದರೊಂದಿಗೆ ಅಧಿಕಾರ ಹಸ್ತಾಂತರದ ಗೊಂದಲದ ವೇಳೆ ಸಿಎಂಗೆ ಮಹತ್ವದ ರಾಜಕೀಯ ಜಯ ಸಿಕ್ಕಂತಾಗಿದೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 22nd July:ಸರ್ಕಾರದ ನಿಯಂತ್ರಣಕ್ಕೆ ಬಿಸಿಸಿಐ, ರಾಷ್ಟ್ರೀಯ ಕ್ರೀಡಾ ವ್ಯಾಪ್ತಿಗೆ ತರಲು ಮಸೂದೆ ಮಂಡನೆಗೆ ಸಿದ್ಧತೆ
Karnataka News Live 22nd July:Breaking News - ಬೆಳಗಾವಿಯಲ್ಲಿ ಬಿಸಿಯೂಟ ಸೇವಿಸಿ 30ಕ್ಕೂ ಅಧಿಕ ಶಾಲಾ ಮಕ್ಕಳು ಅಸ್ವಸ್ಥ!
Karnataka News Live 22nd July:ನೋ ಕ್ಯಾಪ್ ನೋ ಎಂಟ್ರಿ, ಹಿಮೇಶ್ ರೆಶಮಿಯಾ ಕಾನ್ಸರ್ಟ್ ಬೆನ್ನಲ್ಲೇ ಕಾಂಡೋಮ್ ಆ್ಯಡ್ ವೈರಲ್
ಹಿಮೇಶ್ ರೆಶಮಿಯಾ ದೆಹಲಿ ಮ್ಯೂಸಿಕ್ ಕಾನ್ಸರ್ಟ್ ಅದ್ಧೂರಿಯಾಗಿ ನಡೆದಿದೆ. ಜನಸಾಗರವೇ ಸೇರಿತ್ತು. ಹಿಮೇಶ್ ಹಾಡು, ಮ್ಯೂಸಿಕ್ ಕಾರ್ಯಕ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಕಾಂಡೋಮ್ ಜಾಹೀರಾತು ಭಾರಿ ವೈರಲ್ ಆಗಿದೆ.
Karnataka News Live 22nd July:ವಿದ್ಯುತ್ ಬಿಲ್ ಪಾವತಿ ಸೇರಿ ಬೆಸ್ಕಾಂ, 5 ಎಸ್ಕಾಂ ಆನ್‌ಲೈನ್ ಸೇವೆ 2 ದಿನ ಬಂದ್
ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಸೇರಿದಂತೆ ಯಾವುದೇ ರೀತಿಯ ಬೆಸ್ಕಾಂ ಹಾಗೂ 5 ಎಸ್ಕಾಂಗಳ ಆನ್‌ಲೈನ್ ಸೇವೆಗಳು ಎರಡು ದಿನ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ.
Karnataka News Live 22nd July:ಉದ್ಯೋಗಿ ವೀಕ್ ಪಾಸ್‌ವಾರ್ಡ್ ಹ್ಯಾಕ್, 150 ವರ್ಷದ ಕಂಪನಿಗೆ ಬೀಗ, 700 ಮಂದಿ ಬೀದಿಗೆ
ಪ್ರತಿ ದಿನ ಕೆಲಸ ಸುಲಭವಾಗಲು ಸುಲಭದ ಪಾಸ್‌ವರ್ಡ್ ಹಾಕಿದ್ದಾನೆ. ಆದರೆ ಹ್ಯಾಕರ್ಸ್ ಈ ಪಾಸ್‌ವರ್ಡ್ ಗೆಸ್ ಮಾಡಿ ಹ್ಯಾಕ್ ಮಾಡಿದ್ದಾರೆ. ಇಷ್ಟೇ ಆಗಿದ್ದರೆ ಅಲ್ಪ ಸ್ವಲ್ಪ ನಷ್ಟವಾಗುತ್ತಿತ್ತು. ಆದರೆ ಖದೀಮರು ಕಂಪನಿಯನ್ನೇ ಹ್ಯಾಕ್ ಮಾಡಿ ಸ್ಥಗಿತಗೊಳಿಸಿದ್ದಾರೆ. ಪರಿಣಾಮ ಕಂಪನಿಗೆ ಬೀಗ ಬಿದ್ದಿದೆ.
Karnataka News Live 22nd July:ಕೊಪ್ಪಳ - ಆಗ್ನಿ ದುರಂತದಲ್ಲಿ ಗಂಭೀರ ಗಾಯಗೊಂಡಿದ್ದ ವಿಕಲಚೇತನ ಸಾವು
Karnataka News Live 22nd July:ಮಗನೊಂದಿಗೆ ನದಿಗೆ ಜಿಗಿದ ತಾಯಿ, 4 ದಿನಗಳ ಬಳಿಕ 3 ವರ್ಷದ ಮಗುವಿನ ಮೃತದೇಹ ಪತ್ತೆ
ಎರಡೂ ವರೆ ವರ್ಷದ ಮಗುವಿನೊಂದಿಗೆ ಸೇತುವೆ ಮೇಲಿನಿಂದ ನದಿಗೆ ಜಿಗಿದ ಘಟನೆ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ತೀವ್ರ ಹುಟುಕಾಟ ನಡೆಸಿದ್ದ ರಕ್ಷಣಾ ತಂಡ ಕೊನೆಗೂ ಮಗುವಿನ ಮೃತದೇಹ ಪತ್ತೆ ಹಚ್ಚಿ ಹೊರತೆಗಿದಿದ್ದಾರೆ.
Karnataka News Live 22nd July:ಮಾಜಿ ಶಾಸಕ ಯಡವಟ್ಟು ಭಾಷಣ; 'ಸರ್ಕಾರಿ ಆಸ್ಪತ್ರೆ ದುರುಪಯೋಗ ಪಡೆಸಿಕೊಳ್ಳಿ' ಎಂದ ರಾಮಪ್ಪ ಲಮಾಣಿ!
Karnataka News Live 22nd July:ಯುಪಿಐ ಇಲ್ಲ ಕ್ಯಾಶ್ ಓನ್ಲಿ ಅಂದ ಆಟೋ ಚಾಲಕನಿಗೆ ಹಣ ಕೊಡದೇ ಹೋದ ಪ್ರಯಾಣಿಕ
Karnataka News Live 22nd July:ವೈದ್ಯರ ಭೇಟಿಗೆ 5 ನಿಮಿಷ ಕಾಯುವಂತೆ ಹೇಳಿದ ರಿಸೆಪ್ಶನಿಸ್ಟ್ ಮೇಲೆ ವ್ಯಕ್ತಿಯಿಂದ ಹಲ್ಲೆ, ವಿಡಿಯೋ
ವೈದ್ಯರ ಭೇಟಿಗೆ ಒಂದ್ ಐದ್ ನಿಮಿಷ ಕುಳಿತುಕೊಳ್ಳಿ. ಕ್ಲೀನಿಕ್ ರಿಸೆಪ್ಶನಿಸ್ಟ್ ಇಷ್ಟು ಹೇಳಿದ್ದೇ ತಡ, ವ್ಯಕ್ತಿಯೊಬ್ಬ ಗರಂ ಆಗಿದ್ದಾನೆ. ಮಹಿಳಾ ರೆಸೆಪ್ಶನಿಸ್ಟ್ ಕೂದಲು ಹಿಡಿದೆಳೆದು ಹಲ್ಲೆ ಮಾಡಿದ ಘಟನೆ ನಡೆದಿದೆ.
Karnataka News Live 22nd July:ಧರ್ಮಸ್ಥಳದಲ್ಲಿ ನಿಗೂಢ ಸಾವು ಪ್ರಕರಣ - ಈ ಕಾರಣಕ್ಕೆ ಘಟನಾ ಸ್ಥಳಕ್ಕೆ ಎಸ್ ಐ ಟಿ ಭೇಟಿ ನೀಡ್ತಿಲ್ಲ
Karnataka News Live 22nd July:ಸವದತ್ತಿಯಲ್ಲಿ ಆಘಾತಕಾರಿ ಘಟನೆ, ಕೋರ್ಟ್ ಆವರಣದಲ್ಲೇ ಗಂಡನಿಂದ ಪತ್ನಿ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ!
Karnataka News Live 22nd July:Breaking ದೆಹಲಿ ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ವಿಮಾನಕ್ಕೆ ಹೊತ್ತಿಕೊಂಡ ಬೆಂಕಿ
ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. ಲ್ಯಾಂಡ್ ಆಗುತ್ತಿದ್ದಂತೆ ದಿಡೀರ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
Karnataka News Live 22nd July:ದಾವಣಗೆರೆ - ವೀರಶೈವ ಲಿಂಗಾಯತ ಶೃಂಗ ಸಮ್ಮೇಳನದಲ್ಲಿ ರಂಭಾಪುರಿ ಶ್ರೀಗಳಿಂದ 12 ಮಹತ್ವದ ನಿರ್ಣಯಗಳು, ಸಂಪೂರ್ಣ ವಿವರ ಇಲ್ಲಿದೆ
ದಾವಣಗೆರೆಯಲ್ಲಿ ನಡೆದ ವೀರಶೈವ ಪೀಠಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಲಿಂಗಾಯತ ಸಮುದಾಯದ ಏಕತೆ ಮತ್ತು ಹಕ್ಕುಗಳಿಗಾಗಿ 12 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಜನಗಣತಿಯಲ್ಲಿ 'ವೀರಶೈವ ಲಿಂಗಾಯತ' ಎಂದು ನೋಂದಾಯಿಸಿಕೊಳ್ಳುವಂತೆ ಸೂಚಿಸಿಲಾಗಿದೆ.
Karnataka News Live 22nd July:18 ತಿಂಗಳ ಸಂಸಾರಕ್ಕೆ ವಿಚ್ಛೇದನ ವೇಳೆ 18 ಕೋಟಿ ರೂಪಾಯಿಗೂ ಜೀವನಾಂಶ ಕೇಳಿದ ಪತ್ನಿ
ಮದುವೆಯಾಗಿ 18 ತಿಂಗಳಿಗೆ ವಿಚ್ಚೇದನ ಅರ್ಜಿ ಕೋರ್ಟ್ ಮೆಟ್ಟಿಲೇರಿದೆ. ಪತಿಯಿಂದ ಜೀವನಾಂಶವಾಗಿ ಪತ್ನಿ ಕೇಳಿದ್ದು 12 ಕೋಟಿ ರೂಪಾಯಿ, ಮುಂಬೈನಲ್ಲೊಂದು ಮನೆ, BMW ಕಾರು. ಈ ಬೇಡಿಕೆ ಆಲಿಸಿದ ಸುಪ್ರೀಂ ಕೋರ್ಟ್ ಖಡಕ್ ಪ್ರಶ್ನೆಯೊಂದನ್ನು ಕೇಳಿದೆ.
Karnataka News Live 22nd July:ಧರ್ಮಸ್ಥಳ ವಿರುದ್ಧವಲ್ಲ, ವ್ಯಕ್ತಿಗಳ ವಿರುದ್ಧ ತನಿಖೆ ಆಗಲಿ - ಸಿಟಿ ರವಿ
Karnataka News Live 22nd July:'ಗುಂಡೇಟಿಗೆ ಖ್ಯಾತ ನಟಿ Shilpa Shirodkar ಬಲಿ'! ಪತ್ರಿಕೆಗಳಲ್ಲಿ ಬಂದ ಸುದ್ದಿಯ ಹಿಂದಿತ್ತು ವಿಚಿತ್ರ ಕಾರಣ...
ಸಿನಿಮಾದ ಶೂಟಿಂಗ್ ಸಮಯದಲ್ಲಿ ಗುಂಡೇಟಿಗೆ ತಾವು ಬಲಿಯಾಗಿರುವ ಸುದ್ದಿ ಪತ್ರಿಕೆಗಳಲ್ಲಿ ನೋಡಿ ನಟಿ ಶಿಲ್ಪಾ ಶಿರೋಡ್ಕರ್ ಮೂರ್ಚೆ ಹೋಗಿದ್ದರಂತೆ. ಆ ಘಟನೆಯನ್ನು ವಿವರಿಸಿದ್ದಾರೆ ನೋಡಿ!
Karnataka News Live 22nd July:ಧರ್ಮಸ್ಥಳಕ್ಕೆ ತೆರಳಿದ್ದ ಕೊಪ್ಪಳದ ಶಿಕ್ಷಕ ಕೊಳೆತ ಶವವಾಗಿ ಪತ್ತೆ!
Karnataka News Live 22nd July:Vinay Kashyap Simha - ಬೀಡಿ ಸೇದಲು ಹೋಗಿ ತುಟಿ, ರೆಪ್ಪೆ ಸುಟ್ಟುಕೊಂಡ 'ಕರ್ಣ' ಸೀರಿಯಲ್ ನಾಯಕ!
ನಾಟಕಕ್ಕಾಗಿ ಮೊದಲ ಬಾರಿಗೆ ಬೀಡಿ ಸೇದಲು ಹೋಗಿ ತುಟಿ, ರೆಪ್ಪೆ ಎಲ್ಲಾ ಸುಟ್ಟುಕೊಂಡು ಪಡಬಾರದ ಪಾಡುಪಟ್ಟ ಬಗ್ಗೆ ಕರ್ಣ ಸೀರಿಯಲ್ ಕರ್ಣ ಉರ್ಫ್ ವಿನಯ್ ಕಶ್ಯಪ್ ಹೇಳಿದ್ದಾರೆ ಕೇಳಿ...
Karnataka News Live 22nd July:Gagan Chinnappa - ಸೀತಾ ಮದ್ವೆಯಾಯ್ತು, ರಾಮಂದು ಯಾವಾಗ? ಕುತೂಹಲದ ಪೋಸ್ಟ್ ಹಾಕಿದ ನಟನಿಗೆ ಪ್ರಶ್ನೆ
ಸೀತಾರಾಮ ಸೀರಿಯಲ್ ಸೂಪರ್ ಜೋಡಿಯಾಗಿದ್ದ ವೈಷ್ಣವಿ ಗೌಡ ಮತ್ತು ಗಗನ್ ಚಿನ್ನಪ್ಪ ಅವರ ಕೆಮೆಸ್ಟ್ರಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ವೈಷ್ಣವಿ ಅವರ ಮದುವೆಯಾಗಿದ್ದು, ಈಗ ಗಗನ್ ಅವರ ಮದ್ವೆ ಯಾವಾಗ ಎಂದು ಕೇಳ್ತಿರೋ ನಡುವೆಯೇ ನಟ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಏನಿದೆ ಅದರಲ್ಲಿ?