- Home
- News
- State
- Karnataka News Live: MLC ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ - 2ನೇ ಆರೋಪಿಯಿಂದ ಅಚ್ಚರಿಯ ನಡೆ!
Karnataka News Live: MLC ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ - 2ನೇ ಆರೋಪಿಯಿಂದ ಅಚ್ಚರಿಯ ನಡೆ!

ಬೆಂಗಳೂರು: ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಗುರುವಾರ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಬೆಳಗ್ಗೆ 9.30ಕ್ಕೆ ಹಮ್ಮಿಕೊಂಡಿರುವ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಶಾಸಕರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Karnataka News Live 23 April 2026MLC ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ - 2ನೇ ಆರೋಪಿಯಿಂದ ಅಚ್ಚರಿಯ ನಡೆ!
Karnataka News Live 23 April 2026'ಮಗ ವಾಪಸ್ ಬರದಿದ್ರೂ ಉಗ್ರರ ಮೇಲೆ ಪ್ರಧಾನಿ ಮೋದಿ ತೆಗೆದುಕೊಂಡ ಆ ಪ್ರತಿಕಾರ ಸಮಾಧಾನ ತಂದಿದೆ, ಮೃತ ಮಂಜುನಾಥ ತಾಯಿಯ ಮನಕಲುಕುವ ಮಾತು
ಪಹಲ್ಗಾಂನಲ್ಲಿ ಮೃತಪಟ್ಟ ಮಂಜುನಾಥ್ ರಾವ್ ಅವರ ತಾಯಿ ಸುಮತಿ, ಮಗನ ಸಾವಿನ ದುಃಖದ ನಡುವೆಯೂ ಭಯೋತ್ಪಾದಕರ ವಿರುದ್ಧ ಪ್ರಧಾನಿ ಮೋದಿ ಪ್ರತೀಕಾರ ತೀರಿಸಿದ್ದು ಅಲ್ಪ ಸಮಾಧಾನ ತಂದಿದೆ ಎಂದು ಹೇಳಿದ್ದಾರೆ.
Karnataka News Live 23 April 2026ವಾಣಿಜ್ಯ ತೆರಿಗೆ ಇಲಾಖೆಗೆ 410 ಕೋಟಿ ಜಿಎಸ್‌ಟಿ ವಂಚನೆ; ಬೆಂಗಳೂರಿನಲ್ಲಿ ಓರ್ವನ ಬಂಧನ
ವಾಣಿಜ್ಯ ತೆರಿಗೆ ಇಲಾಖೆಯು ಬೆಂಗಳೂರಿನಲ್ಲಿ 410 ಕೋಟಿ ರೂಪಾಯಿಗಳ ಬೃಹತ್ ಜಿಎಸ್‌ಟಿ ವಂಚನೆ ಜಾಲವನ್ನು ಪತ್ತೆಹಚ್ಚಿದೆ. ಈ ಸಂಬಂಧ, ನಕಲಿ ಕಂಪನಿಗಳನ್ನು ಸೃಷ್ಟಿಸಿ ಸುಳ್ಳು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ನೀಡುತ್ತಿದ್ದ ಆರೋಪದ ಮೇಲೆ ಮೊಹಮ್ಮದ್ ತೌಕೀರ್ ಎಂಬಾತನನ್ನು ಬಂಧಿಸಲಾಗಿದೆ.
Karnataka News Live 23 April 2026₹23 ಕೋಟಿ ಬೆಲೆಬಾಳುವ ಜಾಗಕ್ಕೆ ₹17 ಲಕ್ಷ ಪಾವತಿ ಆರೋಪ, ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಜಾಗ ನೀಡಿದ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ತುಮಕೂರು ನಗರದ ಹೊರವಲಯದಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
Karnataka News Live 23 April 2026ಮತ್ತೆ ಗಂಟೆಗಟ್ಟಲೇ ಸುತ್ತಾಡಿದ ಫ್ಲೈ-91; ಇದೇ ಅವಧಿ ಲ್ಯಾಂಡ್-ಟೇಕಾಫ್ ಆದ ಇಂಡಿಗೋ ಪ್ಲೇನ್
ಮಂಗಳವಾರ ರಾತ್ರಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಫ್ಲೈ-91 ವಿಮಾನವು ಹವಾಮಾನ ವೈಪರೀತ್ಯದ ಕಾರಣ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ಆಗಸದಲ್ಲೇ ಸುತ್ತಾಡಿದೆ. ಐದು ದಿನಗಳಲ್ಲಿ ಇದು ಎರಡನೇ ಬಾರಿಯಾಗಿದ್ದು, ಇದೇ ಸಮಯದಲ್ಲಿ ಇಂಡಿಗೋ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
Karnataka News Live 23 April 2026ಅಮೆರಿಕದೊಂದಿಗೆ ಭಾರತ ವ್ಯಾಪಾರ ಒಪ್ಪಂದ, ಮೋದಿ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ - ಸಲೀಂ
ಬೆಂಗಳೂರಿನಲ್ಲಿ ನಡೆದ 'ಕಿಸಾನ್ ನ್ಯಾಯ ಸತ್ಯಾಗ್ರಹ'ದಲ್ಲಿ, ವಿಧಾನಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹ್ಮದ್ ಅವರು ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ತೀವ್ರವಾಗಿ ವಿರೋಧಿಸಿದರು. ಪ್ರಧಾನಿ ಮೋದಿ ಅವರು ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಾರತೀಯ ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.
Karnataka News Live 23 April 2026Kalaburagi - ಮಗ ಬಂಗಾರ ಪದಕ ಪಡೆಯುವುದನ್ನುನೋಡಬೇಕಿದ್ದ ತಂದೆ ಅಪಘಾತಕ್ಕೆ ಬಲಿ
Karnataka News Live 23 April 2026ಬೆಂಗಳೂರು ನಗರದಲ್ಲಿ ಅಸಹನೀಯ ಬೇಸಿಗೆ, ಹೀಟ್ ಸ್ಟ್ರೋಕ್ - ಅಂಗಾಂಗ ವೈಫಲ್ಯ ಭೀತಿ!
ಬೆಂಗಳೂರಿನಲ್ಲಿ ಅಸಹನೀಯ ಬೇಸಿಗೆಗೆ 'ಎಲ್ ನಿನೋ' ಮತ್ತು 'ಅರ್ಬನ್ ಹೀಟ್ ಐಲ್ಯಾಂಡ್' ಪರಿಣಾಮಗಳು ಕಾರಣವಾಗಿವೆ. ಈ ತೀವ್ರ ಬಿಸಿಲು ಮಕ್ಕಳ ಮತ್ತು ಹಿರಿಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಹೀಟ್ ಸ್ಟ್ರೋಕ್, ಹೃದಯ ಮತ್ತು ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
Karnataka News Live 23 April 2026Abbigere viral video incident - 'ನೀನು ಮುಸ್ಲಿಂ ನೀನು ಟೆರರಿಸ್ಟ್' ಎಂದ ದಂಪತಿ ವಿಡಿಯೋ ವೈರಲ್! ಅಸಲಿಗೆ ಅಲ್ಲಿ ನಡೆದಿದ್ದೇನು?
Abbigere viral video incident: ಬೆಂಗಳೂರಿನ ಅಬ್ಬಿಗೆರೆಯಲ್ಲಿ ಮಾಜಿ ಸೈನಿಕರೊಬ್ಬರ ಪತ್ನಿ, ಮುಸ್ಲಿಂ ಯುವಕನಿಗೆ 'ಟೆರರಿಸ್ಟ್' ಎಂದು ನಿಂದಿಸಿದ್ದಾರೆ. ಇದರಿಂದ ಕೋಪಗೊಂಡ ಯುವಕರು ದಂಪತಿಯ ಮನೆಗೆ ಬಂದು ವಾಗ್ವಾದ ನಡೆಸಿದ್ದು, ಕೊನೆಗೆ ದಂಪತಿ ಕ್ಷಮೆಯಾಚಿಸಿದ ನಂತರ ವಿವಾದ ಅಂತ್ಯಗೊಂಡಿದೆ.