10:32 PM (IST) Aug 23

Karnataka News Live 23rd August: Tumakuru - ಜಿಲ್ಲಾಸ್ಪತ್ರೆಯಲ್ಲೇ ಹೃದಯಾಘಾತದಿಂದ ಸಾವನಪ್ಪಿದ ಡ್ಯುಟಿಯಲ್ಲಿದ್ದ ನರ್ಸ್

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ 32 ವರ್ಷದ ನರ್ಸ್ ಲತಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಾತ್ರಿ ಊಟದ ನಂತರ ವಾಶ್ ರೂಮ್ ಬಳಿ ತೆರಳಿದಾಗ ವಾಂತಿ, ಸುಸ್ತು ಮತ್ತು ಎದೆನೋವಿನಿಂದ ಕುಸಿದು ಬಿದ್ದ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
Read Full Story
10:04 PM (IST) Aug 23

Karnataka News Live 23rd August: ಮಾಸ್ಕ್ ಮ್ಯಾನ್ ಚಿನ್ನಯ್ಯ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಿದ್ದು ಹೇಗೆ?

ಮಾಸ್ಕ್ ಮ್ಯಾನ್ ಚಿನ್ನಯ್ಯನ ಹೆಸರು, ಊರು ಸೇರಿದಂತೆ ಎಲ್ಲ ಮಾಹಿತಿ ಬಹಿರಂಗ. ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿದ್ದ ಚಿನ್ನಯ್ಯನನ್ನು ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಬಳಸಿಕೊಂಡು ಬೆದರಿಸಿತ್ತು.
Read Full Story
09:22 PM (IST) Aug 23

Karnataka News Live 23rd August: ದೇವರು ಹೇಳಿದ್ರೂ ನಾನು ಕೇಳುವನಲ್ಲ - ವಿ.ಸೋಮಣ್ಣ ಅಚ್ಚರಿಯ ಮಾತು

ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಅವರು, ದೇವರೇ ಬಂದು ಹೇಳಿದರೂ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ತಮ್ಮ ರಾಜಕೀಯ ಜೀವನದ ಹೆಜ್ಜೆಗುರುತು ಎಂದು ಬಣ್ಣಿಸಿದ್ದಾರೆ.

Read Full Story
08:46 PM (IST) Aug 23

Karnataka News Live 23rd August: ನಜ್ಮಾ ನಜೀರ್-ಸಸಿಕಾಂತ್ ಸೆಂಥಿಲ್-ಸಮೀರ್ - ಮೂವರಿಗೂ ಲಿಂಕ್ ಇದೆ ಎಂದ ವಸಂತ್ ಗಿಳಿಯಾರ್

ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರದ ಶಂಕೆ ವ್ಯಕ್ತಪಡಿಸಿರುವ ವಸಂತ್ ಗಿಳಿಯಾರ್, ಸಂಸದ ಸಸಿಕಾಂತ್ ಸೆಂಥಿಲ್ ಮತ್ತು ನಜ್ಮಾ ನಜೀರ್ ಚಿಕ್ಕನೇರಳೆ ಕೈವಾಡದ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ. 

Read Full Story
07:57 PM (IST) Aug 23

Karnataka News Live 23rd August: ತಿಮರೋಡಿ ಮನೆಯಲ್ಲಿ ಚಿನ್ನಯ್ಯನ ಮೇಲೆ ಹಲ್ಲೆ? ಅನಾಮಿಕನ ವೀಕ್‌ನೆಸ್ ಬಳಸಿಕೊಂಡಿತ್ತು ಗ್ಯಾಂಗ್!

ಚಿನ್ನಯ್ಯನ ತಪ್ಪೊಪ್ಪಿಗೆಯಲ್ಲಿ ತಿಮರೋಡಿ ಗ್ಯಾಂಗ್‌ನ ಷಡ್ಯಂತ್ರ ಬಯಲು. ಸೌಜನ್ಯ ಪ್ರಕರಣದಲ್ಲಿ ಹೊಸ ತಿರುವು. ನ್ಯಾಯಾಲಯದ ಮುಂದೆ ಸ್ಫೋಟಕ ಮಾಹಿತಿ ಬಹಿರಂಗ.
Read Full Story
07:43 PM (IST) Aug 23

Karnataka News Live 23rd August: ತಿಮರೋಡಿ ಗ್ಯಾಂಗ್ ಚಿನ್ನಯ್ಯನನ್ನು ಷಡ್ಯಂತ್ರಕ್ಕೆ ಸಿಲುಕಿಸಿದ್ದು ಹೇಗೆ? ಸೌಜನ್ಯಾ ಮಾವನ ಪಾತ್ರವೇನು?

ಧರ್ಮಸ್ಥಳ ಪ್ರಕರಣದಲ್ಲಿ ಸಿ.ಎನ್‌. ಚಿನ್ನಯ್ಯನ ಬಂಧನದ ಹಿಂದಿನ ಸತ್ಯ ಬಯಲು. ಹಣದ ಆಮಿಷ ಮತ್ತು ಬೆದರಿಕೆಗೆ ಮಣಿದು ಸುಳ್ಳು ದೂರು ನೀಡಿದ್ದಾಗಿ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದಾನೆ. 'ತಿಮರೋಡಿ ಗ್ಯಾಂಗ್'ನ ಷಡ್ಯಂತ್ರದ ಬಲೆಗೆ ಬಿದ್ದ ಚಿನ್ನಯ್ಯನ ಕಥೆ.
Read Full Story
07:24 PM (IST) Aug 23

Karnataka News Live 23rd August: ಕೋರ್ಟ್‌ನಲ್ಲಿ ಬುರುಡೆ ಗ್ಯಾಂಗ್ ತಿಮರೋಡಿ & ಕಂಪನಿಯ ಷಡ್ಯಂತ್ರ ಬಿಚ್ಚಿಟ್ಟ ದೂರುದಾರ ಚಿನ್ನಯ್ಯ!

ಧರ್ಮಸ್ಥಳದ ವಿರುದ್ಧ ಸುಳ್ಳು ದೂರು ನೀಡಿದ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಚಿನ್ನಯ್ಯನನ್ನು ಬಂಧಿಸಲಾಗಿದೆ. ನ್ಯಾಯಾಧೀಶರ ಮುಂದೆ ಚಿನ್ನಯ್ಯ ಸಂಪೂರ್ಣ ಷಡ್ಯಂತ್ರವನ್ನು ಬಾಯ್ಬಿಟ್ಟಿದ್ದು, ಹಲವರ ಹೆಸರು ಬಹಿರಂಗವಾಗಿದೆ. ದುಡ್ಡು ಮತ್ತು ಕೊಲೆ ಬೆದರಿಕೆಯೊಡ್ಡಿದ ಬಗ್ಗೆ ಚಿನ್ನಯ್ಯ ಹೇಳಿಕೆ ನೀಡಿದ್ದಾನೆ.

Read Full Story
06:57 PM (IST) Aug 23

Karnataka News Live 23rd August: ಉತ್ತಮ ಆರೋಗ್ಯಕ್ಕೆ ಎಳನೀರು ಅಥವಾ ನಿಂಬೆ ಹಣ್ಣಿನ ನೀರು ಯಾವುದು ಒಳ್ಳೆಯದು?

ಕೆಲವರು ನಿಂಬೆ ನೀರು ಕುಡಿಯೋದನ್ನ ಇಷ್ಟಪಟ್ಟರೆ, ಇನ್ನು ಕೆಲವರು ತೆಂಗಿನಕಾಯಿ ಎಳನೀರು ಕುಡಿಯೋದನ್ನ ಇಷ್ಟಪಡ್ತಾರೆ. ಹಾಗಾದ್ರೆ ಆರೋಗ್ಯಕ್ಕೆ ಯಾವುದು ಒಳ್ಳೇದು ಅಂತ ಈಗ ನೋಡೋಣ.

Read Full Story
06:39 PM (IST) Aug 23

Karnataka News Live 23rd August: ವಸಂತಿ ಸಾವಿನ ಹಿಂದೆ ಸುಜಾತ ಭಟ್ ಕೈವಾಡ?; ಸಂಬಂಧ ಇಟ್ಟುಕೊಂಡವರ ಕುಟುಂಬಕ್ಕೆಲ್ಲಾ ಕೊಳ್ಳಿ ಇಟ್ಟಳಾ?

ವಸಂತಿಯ ಸಹೋದರ ವಿಜಯ್, ಸುಜಾತ ಭಟ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವಸಂತಿಯ ಡೆತ್ ಸರ್ಟಿಫಿಕೇಟ್ ಅನ್ನು ಸುಜಾತ ಭಟ್ ಪಡೆದಿರುವುದು ಮತ್ತು ಅವರ ಸಾವಿನಲ್ಲಿ ಸುಜಾತ ಭಟ್ ಕೈವಾಡವ ಶಂಕೆ ವ್ಯಕ್ತಪಡಿಸಿದ್ದಾರೆ. ಸುಜಾತ ಭಟ್ ಅವರ ವರ್ತನೆಯಿಂದ ತಮ್ಮ ಕುಟುಂಬದ ಮರ್ಯಾದೆಗೆ ಧಕ್ಕೆಯಾಗಿದೆ ಎಂದಿದ್ದಾರೆ.

Read Full Story
05:44 PM (IST) Aug 23

Karnataka News Live 23rd August: ಮಹೇಶ್ ಶೆಟ್ಟಿ ತಿಮರೋಡಿಗೆ ಷರತ್ತುಬದ್ಧ ಜಾಮೀನು ಮಂಜೂರು!

ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾಗಿದ್ದ ಮಹೇಶ್ ಶೆಟ್ಟಿ ತಿಮ್ಮರೋಡಿಗೆ ಉಡುಪಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಬಂಧನ ಪ್ರಕ್ರಿಯೆ ಕ್ರಮಬದ್ಧವಾಗಿಲ್ಲ ಎಂದು ವಕೀಲರು ವಾದ ಮಂಡಿಸಿದರು.
Read Full Story
05:03 PM (IST) Aug 23

Karnataka News Live 23rd August: ಒಂದೇ ಮ್ಯೂಸಿಕ್ ಇಬ್ಬರು ಸ್ಟಾರ್‌ಗಳಿಗೆ ನೀಡಿದ ಇಳಯರಾಜ್; ಒಂದು ಕೆಲಸಕ್ಕೆ ಡಬಲ್ ಪೇಮೆಂಟ್ ಎಂದ ನೆಟ್ಟಿಗರು

ಇಳಯರಾಜಾ ಅವರು ಒಂದೇ ಸಂಗೀತವನ್ನು ಬಳಸಿ ರಜನಿಕಾಂತ್ ಮತ್ತು ಕಮಲ್ ಹಾಸನ್ ಚಿತ್ರಗಳಿಗೆ ಎರಡು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಈ ವಿಷಯ ತಿಳಿದ ನೆಟ್ಟಿಗರು ಒಂದು ಮ್ಯೂಸಿಕ್‌ಗೆ ಡಬಲ್ ಪೇಮೆಂಟ್ ಎಂದು ಕಮೆಂಟ್ ಮಾಡಿದ್ದಾರೆ.

Read Full Story
04:49 PM (IST) Aug 23

Karnataka News Live 23rd August: Karnataka Pulse - ಧರ್ಮಸ್ಥಳ To ಬಾಹ್ಯಾಕಾಶ- ಈ ವಾರ ಸಂಚಲನ ಸೃಷ್ಟಿಸಿದ Top 10 ಸುದ್ದಿಗಳು

ಆಗಸ್ಟ್‌ ತಿಂಗ್ಳ ಮೂರನೇ ವಾರ ಕೂಡಾ ತುಂಬಾ ಹ್ಯಾಪನಿಂಗ್‌ ವಾರವಾಗಿತ್ತು. ಸಮಾಜ, ರಾಜಕಾರಣ, ದೇಶ- ವಿದೇಶಗಳಲ್ಲಿ ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾಯ್ತು. ರಾಜ್ಯದಲ್ಲಂತೂ ಈ ವಾರ ಅತೀ ಹೆಚ್ಚು ಸಂಚಲನ ಸೃಷ್ಟಿಸಿದ್ದ ವಾರವಾಗಿತ್ತು. ಬನ್ನಿ ಏನೇನಾಯ್ತು ನೋಡ್ಕೊಂಡು ಬರೋಣ... ಕರ್ನಾಟಕ ಪಲ್ಸ್‌ನಲ್ಲಿ.

Read Full Story
04:48 PM (IST) Aug 23

Karnataka News Live 23rd August: ಡಿಸಿಎಂ ಡಿ.ಕೆ. ಶಿವಕುಮಾರ್ ಜೊತೆ ಬಿಹಾರಕ್ಕೆ ಹಾರಿದ 10 ಕಾಂಗ್ರೆಸ್ ಶಾಸಕರು

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕರ್ನಾಟಕದ ಹತ್ತು ಶಾಸಕರ ತಂಡ ರಾಹುಲ್ ಗಾಂಧಿಯವರ 'ಮತಾಧಿಕಾರ ಯಾತ್ರೆ'ಯಲ್ಲಿ ಭಾಗವಹಿಸಲು ಬಿಹಾರಕ್ಕೆ ತೆರಳಿದೆ. ಈ ಯಾತ್ರೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಹುರುಪು ನೀಡುವ ನಿರೀಕ್ಷೆಯಿದೆ.
Read Full Story
04:18 PM (IST) Aug 23

Karnataka News Live 23rd August: 'ಧರ್ಮಸ್ಥಳ ದೇವಸ್ಥಾನದ ಮೇಲೆ ಪದೇ ಪದೇ ಅಪವಾದ ಬರೋಕೆ ಆ ಗುರುಶಾಪವೇ ಕಾರಣ' - ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ

Astrologer prakash ammannaya On Dharmasthala Temple: ಧರ್ಮಸ್ಥಳದ ಮೇಲೆ ಪದೇ ಪದೇ ಒಂದಿಲ್ಲೊಂದು ಅಪವಾದ ಬರುತ್ತಿದೆ. ಇದಕ್ಕೆ ಕಾರಣ ಏನು? ಇದಕ್ಕೆ ಪರಿಹಾರ ಏನು ಎಂದು ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ ಅವರು ಹೇಳಿದ್ದಾರೆ. 

Read Full Story
03:54 PM (IST) Aug 23

Karnataka News Live 23rd August: ಮನೆಯಲ್ಲೇ ಇದ್ದು ತಿಂಗಳಿಗೆ ₹50 ಸಾವಿರ ಗಳಿಸಿ; ಎಂದೂ ನಷ್ಟ ಅನುಭವಿಸದ ಚಾಕೋಲೇಟ್ ಬಿಸಿನೆಸ್ ಆರಂಭಿಸಿ!

ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿಯೇ ಕಡಿಮೆ ಹಣ ಹೂಡಿಕೆಯಲ್ಲಿ ಉತ್ತಮ ಆದಾಯ ಗಳಿಸುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅನೇಕ ಉದ್ಯೋಗಿಗಳು ಸೈಡ್ ಬಿಸಿನೆಸ್ ಮಾಡಬೇಕೆಂಬ ಆಸಕ್ತಿ ತೋರಿಸುತ್ತಿದ್ದಾರೆ. ಅಂತಹ ಒಂದು ಬಿಸಿನೆಸ್ ಐಡಿಯಾ ಬಗ್ಗೆ ಈಗ ತಿಳಿದುಕೊಳ್ಳೋಣ.

Read Full Story
03:21 PM (IST) Aug 23

Karnataka News Live 23rd August: ಶಾಸಕ ವೀರೇಂದ್ರ ಪಪ್ಪಿ ಬಂಧನ; ಇಡಿ ದಾಳಿಯಲ್ಲಿ ಅಗೆದಷ್ಟೂ ಹಣ, ಬಗೆದಷ್ಟೂ ಚಿನ್ನ! ಗ್ಯಾಂಬ್ಲಿಂಗ್ ಜಾಲ ಬಯಲು

ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರನ್ನು ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಆರೋಪದ ಮೇಲೆ ಇ.ಡಿ. ಬಂಧಿಸಿದೆ. ದಾಳಿಯಲ್ಲಿ ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣ, ವಿದೇಶಿ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ. ದುಬೈ ಮೂಲಕ ಹಣ ವರ್ಗಾವಣೆ ನಡೆದಿರುವುದು ಬೆಳಕಿಗೆ ಬಂದಿದೆ.
Read Full Story
03:08 PM (IST) Aug 23

Karnataka News Live 23rd August: ಮಾಸ್ಕ್‌ಮ್ಯಾನ್ ಬಂಧನ - ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ

ಮಾಸ್ಕ್‌ ಮ್ಯಾನ್‌ ಚಿನ್ನಯ್ಯನ ಬಂಧನದ ನಂತರ ಬುರುಡೆಗ್ಯಾಂಗ್‌ನ ಒಂದೊಂದೇ ಬಣ್ಣ ಬಯಲಾಗ್ತಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Read Full Story
02:20 PM (IST) Aug 23

Karnataka News Live 23rd August: ಬುರುಡೆ ಗ್ಯಾಂಗ್‌ನ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನ ಅಣ್ಣನೂ ಎಸ್‌ಐಟಿ ವಶಕ್ಕೆ

ಬುರುಡೆ ಪ್ರಕರಣದಲ್ಲಿ ಮಾಸ್ಕ್‌ಮ್ಯಾನ್ ಚಿನ್ನಯ್ಯ ತನ್ನ ಅಣ್ಣ ತಾನಾಸಿ ಹೆಸರು ಪ್ರಸ್ತಾಪಿಸಿದ್ದರಿಂದ ಪೊಲೀಸರು ತಾನಾಸಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Read Full Story
02:01 PM (IST) Aug 23

Karnataka News Live 23rd August: ಮಾಸ್ಕ್ ಮ್ಯಾನ್ ಫ್ರಾಡ್ ಎಂದು ನಾನು ಮುಂಚೆಯೇ ಹೇಳಿದ್ದೆ - ಕೇಂದ್ರ ಸಚಿವ ಸೋಮಣ್ಣ ಸಿಡಿಮಿಡಿ

ಸತ್ಯ ಎಷ್ಟೇ ಕಹಿಯಾಗಿದ್ದರು ಕೊನೆಗೆ ಅದು ಗೆಲ್ಲುತ್ತದೆ ಎಂದು ಎಸ್‌ಐಟಿಯಿಂದ ಮಾಸ್ಕ್ ಮ್ಯಾನ್ ಬಂಧನ ವಿಚಾರವಾಗಿ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

Read Full Story
01:30 PM (IST) Aug 23

Karnataka News Live 23rd August: ಬುರುಡೆ ಗ್ಯಾಂಗ್‌ನ ಮಾಸ್ಕ್‌ಮ್ಯಾನ್‌ ಚಿನ್ನಯ್ಯ ಎಸ್‌ಐಟಿ ಕಸ್ಟಡಿಗೆ - ಬೆಳ್ತಂಗಡಿ ಕೋರ್ಟ್ ಆದೇಶ

ಬುರುಡೆ ಗ್ಯಾಂಗ್‌ನ ಮಾಸ್ಕ್‌ಮ್ಯಾನ್ ಚಿನ್ನಯ್ಯನನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ಆತನನ್ನು ಬೆಳ್ತಂಗಡಿ ನ್ಯಾಯಾಲಯ 10 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿದೆ.

Read Full Story