06:31 AM (IST) Apr 27

Karnataka News Live 27 April 2026ರಾಜಕೀಯಕ್ಕಲ್ಲ, ಜನಜಾಗೃತಿಗಾಗಿ ಅಹಿಂದ ಸಂಘಟನೆ - ಸಚಿವ ಸತೀಶ್‌ ಜಾರಕಿಹೊಳಿ

ಹುಬ್ಬಳ್ಳಿಯಲ್ಲಿ ನಡೆದ ಅಹಿಂದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಸಚಿವ ಸತೀಶ್‌ ಜಾರಕಿಹೊಳಿ, ಅಹಿಂದ ಸಂಘಟನೆಯು ರಾಜಕೀಯ ಲಾಭಕ್ಕಾಗಿ ಅಲ್ಲ, ಜನಜಾಗೃತಿಗಾಗಿ ಎಂದರು. ಇದು ಅಹಿಂದ ವರ್ಗದ ಎರಡನೇ ಹಂತದ ಹೋರಾಟವಾಗಿದ್ದು, ತಮ್ಮದೇ ಸರ್ಕಾರದಲ್ಲಿರುವ ಕೆಲವರು ಭರವಸೆ ಈಡೇರಿಸಲು ಬಿಡುತ್ತಿಲ್ಲ ಎಂದು ಹೇಳಿದರು.

Read Full Story
06:05 AM (IST) Apr 27

Karnataka News Live 27 April 2026ಇನ್ನೂ ಗಂಭೀರ ಸ್ಥಿತಿಯಲ್ಲೇ ಸಚಿವ ಡಿ.ಸುಧಾಕರ್‌ - ಆಸ್ಪತ್ರೆಗೆ ಡಿಕೆ ಭೇಟಿ, ವೈದ್ಯರ ಜತೆ ಚರ್ಚೆ

ಯೋಜನಾ ಸಚಿವ ಡಿ.ಸುಧಾಕರ್ ಅವರು ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಮುಂದುವರೆದಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು.
Read Full Story
05:59 AM (IST) Apr 27

Karnataka News Live 27 April 2026ಪಂಚಮಸಾಲಿ ಪೀಠದ ಸಂಘರ್ಷ - ವಚನಾನಂದಶ್ರೀಗಳ ಉಚ್ಚಾಟಿಸಿದ್ದವರೇ ಉಚ್ಚಾಟನೆ! ಟ್ರಸ್ಟಿಗಳಿಗೆ ಶಾಕ್

ಅವ್ಯವಹಾರ, ಅಧರ್ಮ, ಅಪನಂಬಿಕೆಯ ಆರೋಪಗಳ ಹಿನ್ನೆಲೆಯಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಮೂವರು ಟ್ರಸ್ಟಿಗಳನ್ನು ಟ್ರಸ್ಟ್‌ನಿಂದ ಉಚ್ಚಾಟಿಸಲಾಗಿದೆ. ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘವು ಈ ಕಠಿಣ ಕ್ರಮ ಕೈಗೊಂಡಿದ್ದು, ಸಂಘವೇ ಟ್ರಸ್ಟ್‌ಗಿಂತ ಸುಪ್ರೀಂ ಎಂದು ಪ್ರತಿಪಾದಿಸಿದೆ.

Read Full Story
05:52 AM (IST) Apr 27

Karnataka News Live 27 April 2026ಶಿವಮೊಗ್ಗ ಜಿಲ್ಲೆಯಲ್ಲಿ ಅಪರೂಪ ಮಾಹಿತಿಯುಳ್ಳ ವಿಜಯನಗರ ಕಾಲದ ನಂದಿಗಂಬ ದಾನ ಶಾಸನ ಪತ್ತೆ

ಶಿವಮೊಗ್ಗದ ಹೊಸನಗರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ವಿಜಯನಗರ ಕಾಲದ ಸಂಗಮ ವಂಶಕ್ಕೆ ಸೇರಿದ ಅಪರೂಪದ ನಂದಿಗಂಬ ದಾನ ಶಾಸನ ಪತ್ತೆಯಾಗಿದೆ. ಕ್ರಿ.ಶ. 1424ರ ಈ ಶಾಸನವು, ಎರಡನೇ ದೇವರಾಯನು ಹಂಪಿಯ ವಿರೂಪಾಕ್ಷ ದೇವರಿಗೆ ಕಲ್ಲೂರು ನಾಡನ್ನು ದಾನವಾಗಿ ನೀಡಿದ ಐತಿಹಾಸಿಕ ವಿವರಗಳನ್ನು ಒಳಗೊಂಡಿದೆ.
Read Full Story
05:44 AM (IST) Apr 27

Karnataka News Live 27 April 2026ಗೃಹಲಕ್ಷ್ಮಿ ಹಣದಿಂದ ಓದಿ ರಾಜ್ಯಕ್ಕೆ 2ನೇ ಸ್ಥಾನ ಪಡೆದ ಬಾಲಕಿಗೆ ಡಿಕೆಶಿ ಮೆಚ್ಚುಗೆ

ಮಾಧುರಿ ಆರ್., 'ಗೃಹಲಕ್ಷ್ಮಿ ಯೋಜನೆ'ಯ ಹಣದಿಂದ ಟ್ಯೂಷನ್ ಪಡೆದು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಸಾಧನೆಯನ್ನು ಶ್ಲಾಘಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ತರುತ್ತಿವೆ ಎಂದು ಹೇಳಿದ್ದಾರೆ.

Read Full Story
05:35 AM (IST) Apr 27

Karnataka News Live 27 April 2026Mangaluru - ಪ್ರಯಾಣದ ವೇಳೆ ಹೆರಿಗೆ ನೋವು - ರೈಲಿನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಪೊನ್ನಮ್ಮ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಬಿ.ಸಿ.ರೋಡ್ ರೈಲು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ, ವೈದ್ಯರ ಸಹಾಯದಿಂದ ಬೋಗಿಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

Read Full Story