Karnataka News Live: ಅಧಿಕಾರ ಹಂಚಿಕೆ ಗೊಂದಲ ಶೀಘ್ರ ಬಗೆಹರಿಸಿ - ಕೈ ಹೈಕಮಾಂಡ್‌ಗೆ ಮನವಿ

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ‘ಪಂದ್ರಹ ದಿನ್ ಕಿ ಸರದಾರ’. ಅವರು 15 ದಿನದ ಬಳಿಕ ಈ ರಾಜ್ಯದ ಮುಖ್ಯಮಂತ್ರಿ ಆಗಿರುವುದಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಭವಿಷ್ಯ ನುಡಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕುರ್ಚಿ ಕಿತ್ತಾಟದಲ್ಲಿ ತೊಡಗಿದ್ದು, ವಿಧಾನಸೌಧದಲ್ಲಿ ಆಡಳಿತವೇ ಇಲ್ಲದಂತಾಗಿದೆ.
ಮೇ 4ರಂದು 5 ರಾಜ್ಯಗಳ ಚುನಾವಣಾ ಫಲಿತಾಂಶ ಬರಲಿದ್ದು, ಅಂದು ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯ ಫಲಿತಾಂಶ ಕೂಡ ಬರುತ್ತದೆ. ಅದರ ಜೊತೆಗೆ ಸಿದ್ದರಾಮಯ್ಯ ಅವರ ಕುರ್ಚಿಯ ಫಲಿತಾಂಶ ಕೂಡ ಪ್ರಕಟವಾಗುತ್ತದೆ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಬೆಂಬಲಿಗರಾದ 40 ಶಾಸಕರು ಹೈಕಮಾಂಡ್ ಬಳಿ ಹೋಗಿ ಲಾಬಿ ಮಾಡುತ್ತಿದ್ದು, ಡಿ.ಕೆ.ಶಿವಕುಮಾರ್ ಅವರ ಪರವಾಗಿ 50 ಜನ ಲಾಬಿ ಮಾಡುತ್ತಿದ್ದಾರೆ. ಆಡಳಿತ ಸಂಪೂರ್ಣವಾಗಿ ಕುಸಿದು ಹೋಗಿದೆ ಎಂದು ಕಿಡಿಕಾರಿದರು.
Karnataka News Live 29 April 2026ಅಧಿಕಾರ ಹಂಚಿಕೆ ಗೊಂದಲ ಶೀಘ್ರ ಬಗೆಹರಿಸಿ - ಕೈ ಹೈಕಮಾಂಡ್‌ಗೆ ಮನವಿ
Karnataka News Live 29 April 2026Bengaluru - ರಾಜಧಾನಿಯ ಮೂಲಸೌಕರ್ಯ ನಿರ್ವಹಣೆಗೆ 1 ದಿನಕ್ಕೆ ₹100 ಕೋಟಿ, ವರ್ಷಕ್ಕೆ 38,455 ಕೋಟಿ
ಬೆಂಗಳೂರಿನ ಮೂಲಸೌಕರ್ಯ ನಿರ್ವಹಣೆಗೆ ವಾರ್ಷಿಕವಾಗಿ 38,455 ಕೋಟಿ ರೂ.ಗೂ ಹೆಚ್ಚು ಖರ್ಚಾಗುತ್ತಿದೆ ಎಂದು ಜನಾಗ್ರಹ ಸಂಸ್ಥೆ ವರದಿ ಮಾಡಿದೆ. ಈ ಅಪಾರ ಪ್ರಮಾಣದ ಸಾರ್ವಜನಿಕ ಹಣದ ಖರ್ಚಿನ ಬಗ್ಗೆ ಬಿಬಿಎಂಪಿ, ಬೆಸ್ಕಾಂ ಸೇರಿದಂತೆ ಸರ್ಕಾರಿ ಸಂಸ್ಥೆಗಳು ಜನರಿಗೆ ಯಾವುದೇ ಸೂಕ್ತ ಮಾಹಿತಿ ಅಥವಾ ಲೆಕ್ಕವನ್ನು ನೀಡುತ್ತಿಲ್ಲ ಎಂದು ಆರೋಪಿಸಿದೆ.
Karnataka News Live 29 April 2026ಬೆಂಗಳೂರಿನಲ್ಲಿ ಗಾಂಜಾ ಸಿಗದ್ದಕ್ಕೆ ಸಿಟ್ಟಿಗೆದ್ದು 12 ಶೆಡ್‌ಗೆ ಬೆಂಕಿ ಹಚ್ಚಿದ ಪುಂಡರು!
Karnataka News Live 29 April 2026ಬೆಂಗಳೂರ ದಕ್ಷಿಣ ಜಿಲ್ಲೆಯಲ್ಲಿ 995 ಉಪಗ್ರಾಮಗಳ ರಚನೆ; ಯಾವ ತಾಲೂಕಿನಲ್ಲಿ ಎಷ್ಟು?
ದಾಖಲೆಗಳಿಲ್ಲದ 995 ಜನವಸತಿ ಪ್ರದೇಶಗಳನ್ನು ಗ್ರಾಮ ಠಾಣಾ ವ್ಯಾಪ್ತಿಗೆ ತರಲು ಉಪಗ್ರಾಮಗಳಾಗಿ ರಚಿಸಲಾಗುತ್ತಿದೆ. ಈ ಯೋಜನೆಯು ನಿವಾಸಿಗಳಿಗೆ ಇ-ಖಾತೆ, ನಮೂನೆ 11 ನಂತಹ ಅಧಿಕೃತ ದಾಖಲೆಗಳನ್ನು ಒದಗಿಸಿ, ಸರ್ಕಾರದ ಸೌಲಭ್ಯಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸುಲಭಗೊಳಿಸುವ ಗುರಿ ಹೊಂದಿದೆ
Karnataka News Live 29 April 2026ಗೂಗಲ್ ಟಾಪ್-10ರಲ್ಲಿ ಕ್ಯಾಂಪ್ಕೋ ಚಾಕೋಲೆಟ್; ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಅಧಿಕೃತ ಸ್ಥಾನ
ಅಡಕೆ ಬೆಳೆಗಾರರ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋ ಚಾಕೋಲೆಟ್, ಗೂಗಲ್‌ನಲ್ಲಿ ಪ್ರಕಟವಾದ ಸಮೀಕ್ಷೆಯಲ್ಲಿ ಭಾರತದ ಟಾಪ್-10 ಚಾಕೋಲೆಟ್ ಬ್ರ್ಯಾಂಡ್‌ಗಳಲ್ಲಿ ಸ್ಥಾನ ಪಡೆದಿದೆ. ಈ ಯಶಸ್ಸಿನೊಂದಿಗೆ, ಸಂಸ್ಥೆ ಮಿಲೆಟ್ ಎನರ್ಜಿ ಬಾರ್ ಮತ್ತು ಡಾರ್ಕ್ ಚಾಕೋಲೆಟ್‌ಗಳಂತಹ ಹೊಸ ಉತ್ಪನ್ನಗಳನ್ನು ಪರಿಚಯಿಸಲು ಸಜ್ಜಾಗಿದೆ
Karnataka News Live 29 April 2026ಮೇ 15ಕ್ಕೆ ಬರ್ತಾರಾ ಹೊಸ ಸಿಎಂ? ದೆಹಲಿಗೆ ಶಾಸಕರ ದೌಡು, ಕಾಂಗ್ರೆಸ್‌ನಲ್ಲಿ ಹೊಸ ಲೆಕ್ಕಾಚಾರ
ಶಾಸಕ ಇಕ್ಬಾಲ್ ಹುಸೇನ್ ಅವರು ಮೇ 15 ರಂದು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಈ ಹೇಳಿಕೆಯನ್ನು ಇತರ ನಾಯಕರು ಅಲ್ಲಗಳೆದಿದ್ದು, ನಾಯಕತ್ವ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದಿದ್ದಾರೆ.
Karnataka News Live 29 April 2026ಅಮಿತ್ ಶಾ ವಿಶೇಷ ಕರ್ತವ್ಯಾಧಿಕಾರಿ ಎಂದು ನಂಬಿಸಿ ವೈದ್ಯನಿಗೆ 2.70 ಕೋಟಿ ರು. ವಂಚನೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಶೇಷ ಕರ್ತವ್ಯಾಧಿಕಾರಿ ಎಂದು ಹೇಳಿಕೊಂಡು ಜಮ್ಮು ಕಾಶ್ಮೀರದ ವೈದ್ಯರಿಗೆ ಜಮೀನು ಕೊಡಿಸುವುದಾಗಿ ನಂಬಿಸಿ 2.70 ಕೋಟಿ ರೂ. ವಂಚಿಸಿದ್ದ ಪ್ರಕರಣದಲ್ಲಿ, ಆರೋಪಿ ಎಚ್.ಎನ್.ಸುಜಯೇಂದ್ರ ವಿರುದ್ಧ ವಿಜಯನಗರ ಠಾಣೆ ಪೊಲೀಸರು ದೋಷಾರೋಪಟ್ಟಿ ಸಲ್ಲಿಸಿದ್ದಾರೆ.