11:55 AM (IST) Apr 30

Karnataka News Liveಧಾರವಾಡದಲ್ಲಿ ಟಿಬೆಟಿಯನ್ ವ್ಯಕ್ತಿಯ ಕಗ್ಗೊಲೆ! ಉತ್ತರ ಕನ್ನಡದ ಮುಂಡಗೋಡ ಮೂಲದ ತಾಶಿ ಧೋಂಡು ಹತ್ಯೆಗೆ ಕಾರಣವೇನು?

ಧಾರವಾಡದ ಹೊರವಲಯದಲ್ಲಿ ಮುಂಡಗೋಡ ಮೂಲದ ಟಿಬೆಟಿಯನ್ ವ್ಯಕ್ತಿ ತಾಶಿ ಧೋಂಡು ಅವರ ಶವ ಪತ್ತೆಯಾಗಿದೆ. ಆರಂಭದಲ್ಲಿ ರಸ್ತೆ ಅಪಘಾತವೆಂದು ಭಾವಿಸಲಾಗಿದ್ದರೂ, ವೈದ್ಯಕೀಯ ತಪಾಸಣೆ ಬಳಿಕ ಇದು ಕೊಲೆ ಎಂದು ದೃಢಪಟ್ಟಿದೆ. ಧಾರವಾಡ ಗ್ರಾಮೀಣ ಪೊಲೀಸರು ಹತ್ಯೆಯ ಹಿಂದಿನ ಕಾರಣ ಮತ್ತು ಆರೋಪಿಗಳಿಗಾಗಿ ತನಿಖೆ ನಡೆಸುತ್ತಿದ್ದಾರೆ.
Read Full Story
11:38 AM (IST) Apr 30

Karnataka News Liveಹಾಸನ - ಹಸೆಮಣೆ ಏರಲು 10 ದಿನ ಇರುವಾಗಲೇ ವರ ಮೃತ್ಯು, ಪ್ರೀ ವೆಡ್ಡಿಂಗ್ ಶೂಟ್‌ಗೆ ತೆರಳುತ್ತಿದ್ದಾಗ ಭೀಕರ ಅಪಘಾತ!

ಹಾಸನ ಜಿಲ್ಲೆಯಲ್ಲಿ ಮದುವೆಗೆ ಕೇವಲ 10 ದಿನಗಳಿರುವಾಗ ಭೀಕರ ದುರಂತವೊಂದು ಸಂಭವಿಸಿದೆ. ಬೇಲೂರು ತಾಲ್ಲೂಕಿನ ಮನು ಎಂಬ ಯುವಕ, ಪ್ರೀ-ವೆಡ್ಡಿಂಗ್ ಶೂಟ್‌ಗೆ ತೆರಳುತ್ತಿದ್ದಾಗ ಸಕಲೇಶಪುರ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
Read Full Story
11:31 AM (IST) Apr 30

Karnataka News LiveBengaluru Rains - ವರುಣನ ಅರ್ಭಟಕ್ಕೆ ಸಿಎಂ ನಿವಾಸವೂ 'ಶೇಕ್'! ಮರ ಬಿದ್ದು ಕಾವೇರಿ ಬಂಗಲೆಯ ಕಂಪೌಂಡ್‌ಗೆ ಹಾನಿ

ಬುಧವಾರ ಸಂಜೆ ಬೆಂಗಳೂರಿನಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ಕಾವೇರಿ'ಯ ಕಂಪೌಂಡ್ ಮೇಲೆ ಬೃಹತ್ ಮರವೊಂದು ಉರುಳಿಬಿದ್ದಿದ್ದು, ನಗರದಾದ್ಯಂತ ಹಲವೆಡೆ ಮರಗಳು ಧರೆಗುರುಳಿವೆ.
Read Full Story
11:19 AM (IST) Apr 30

Karnataka News Liveನಮ್ಮ-112ಗೆ ಎಐ ಸ್ಪರ್ಶ - ತುರ್ತು ಸಹಾಯವಾಣಿಗೆ 10 ಭಾಷೆಗಳ ಆಯ್ಕೆ ವ್ಯವಸ್ಥೆಗೆ ಗೃಹ ಸಚಿವ ಡಾ. ಪರಮೇಶ್ವರ್ ಚಾಲನೆ

ಬೆಂಗಳೂರಿನ 'ನಮ್ಮ-112' ಪೊಲೀಸ್ ಸಹಾಯವಾಣಿಗಾಗಿ ಕೃತಕ ಬುದ್ಧಿಮತ್ತೆ ಆಧಾರಿತ ಬಹುಭಾಷಾ ವ್ಯವಸ್ಥೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದ್ದಾರೆ. ಈ ಹೊಸ ವ್ಯವಸ್ಥೆಯು ಕನ್ನಡ, ಇಂಗ್ಲಿಷ್, ಹಿಂದಿ ಜೊತೆಗೆ ತಮಿಳು, ತೆಲುಗು, ಮಲಯಾಳಂ ಸೇರಿದಂತೆ 10 ಹೊಸ ಭಾಷೆಗಳನ್ನು ಬೆಂಬಲಿಸುತ್ತದೆ. ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ಅನ್ಯ ಭಾಷಿಕರು ಭಾಷೆಯ ತೊಡಕಿಲ್ಲದೆ ಸುಲಭವಾಗಿ ಪೊಲೀಸರ ಸಹಾಯ ಪಡೆಯಬಹುದಾಗಿದೆ.
Read Full Story
11:08 AM (IST) Apr 30

Karnataka News Liveಅವಾಂತರಗಳ ಮಧ್ಯೆ ಕೂಲ್ ಆದ ಬೆಂಗಳೂರು, 25 ವರ್ಷಗಳ ದಾಖಲೆ ಮೀರಿದ ಮಳೆ! ಈ ಮೂರು ಜಿಲ್ಲೆಗಳಿಗೆ ಮತ್ತೆ ಹೈ ಅಲರ್ಟ್ ಘೋಷಣೆ

ಏಪ್ರಿಲ್ 29 ರಂದು ಬೆಂಗಳೂರಿನಲ್ಲಿ ಸುರಿದ 111.0 ಮಿ.ಮೀ ಮಳೆಯು ಹಲವು ವರ್ಷಗಳ ದಾಖಲೆಯನ್ನು ಮುರಿದಿದೆ. ಈ ಭಾರೀ ಮಳೆಯೊಂದಿಗೆ ಬಲವಾದ ಗಾಳಿ, ಆಲಿಕಲ್ಲು ಮಳೆ ಕೂಡ ಸಂಭವಿಸಿದ್ದು, ಹವಾಮಾನ ಇಲಾಖೆಯು ಮುಂದಿನ ದಿನಗಳಲ್ಲಿಯೂ ಮಳೆಯಾಗುವ ಮುನ್ಸೂಚನೆ ನೀಡಿದೆ.
Read Full Story
10:59 AM (IST) Apr 30

Karnataka News LiveBengaluru Rains - ಚರ್ಚ್ ಸ್ಟ್ರೀಟ್‌ನ ಜನಪ್ರಿಯ 'ಬುಕ್ ವರ್ಮ್' ಪುಸ್ತಕ ಮಳಿಗೆಗೆ ನುಗ್ಗಿದ ಮಳೆ ನೀರು, ಮಾಲೀಕ ಕಣ್ಣೀರು

ವರುಣನ ಆರ್ಭಟಕ್ಕೆ ಅಕ್ಷರ ಲೋಕವೇ ತತ್ತರವಾಗಿದೆ. ಚರ್ಚ್ ಸ್ಟ್ರೀಟ್‌ನ ಐತಿಹಾಸಿಕ ‘ಬುಕ್ ವರ್ಮ್’ ಮಳಿಗೆಗೆ ಮಳೆ ನೀರು ನುಗ್ಗಿ ಸಾವಿರಾರು ಪುಸ್ತಕಗಳು ನೀರು ಪಾಲಾಗಿವೆ. ಮಾಲೀಕನ ಅಸಹಾಯಕ ಮಾತುಗಳು ಕಣ್ಣಿರು ತರಿಸುತ್ತದೆ.

Read Full Story
10:13 AM (IST) Apr 30

Karnataka News Liveಜೈಲಿಗೆ ಹೋಗಿ ಬಂದ್ರೂ ಬುದ್ಧಿ ಕಲಿಯದ ಬಿಗ್ ಬಾಸ್ ಪುಡಾರಿ ರಜತ್, ರೀಲ್ಸ್ ಹುಚ್ಚಿಗೆ ಪೆಟ್ರೋಲ್ ಬಾಂಬ್ ಸಿಡಿಸಿ ಹುಚ್ಚಾಟ, FIR ದಾಖಲು

ಬಿಗ್ ಬಾಸ್ ಖ್ಯಾತಿಯ ರಜತ್, ಸೋಶಿಯಲ್ ಮೀಡಿಯಾ ರೀಲ್ಸ್‌ಗಾಗಿ ಬೆಂಗಳೂರಿನ ವಡೇರಹಳ್ಳಿ ರಸ್ತೆಯಲ್ಲಿ ಪೆಟ್ರೋಲ್ ಸ್ಫೋಟಿಸಿ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ಈ ಕೃತ್ಯಕ್ಕಾಗಿ ಕಗ್ಗಲೀಪುರ ಪೊಲೀಸರು ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ಜನರಿಗೆ ತೊಂದರೆ ನೀಡಿದ ಆರೋಪದ ಮೇಲೆ ಅವರ ವಿರುದ್ಧ ಎಫ್‌ಐಆರ್ ದಾಖಲು.

Read Full Story
09:40 AM (IST) Apr 30

Karnataka News Liveಹರಿಹರ ಪೀಠದಲ್ಲಿ ಶಾಂತಿಭಂಗಕ್ಕೆ ಯತ್ನ - 20 ಜನರ ಮೇಲೆ ಪ್ರಕರಣ

ಹರಿಹರದ ಪಂಚಮಸಾಲಿ ಪೀಠದ ವಿವಾದಕ್ಕೆ ಸಂಬಂಧಿಸಿ, ಶಾಂತಿಭಂಗ ತಡೆಯಲು ಪೊಲೀಸರು ಉಭಯ ಬಣಗಳ 20 ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಿಎನ್‌ಎಸ್‌ಎಸ್‌ ಕಲಂ 126ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ತಹಸೀಲ್ದಾರರು ಮುಂದಿನ ವಿಚಾರಣೆ ನಡೆಸಲಿದ್ದಾರೆ.
Read Full Story
09:23 AM (IST) Apr 30

Karnataka News Liveಇಂದು ಸಚಿವ ಸಂಪುಟ ಸಭೆ - ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲಿಗೆ ಒಪ್ಪಿಗೆ?

ಕೇಂದ್ರ ಬಜೆಟ್‌ನಲ್ಲಿ ಘೋಷಿತ ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ಸಿಗುವ ನಿರೀಕ್ಷೆಯಿದೆ. ಇದರೊಂದಿಗೆ, ಅಲ್ಪಸಂಖ್ಯಾತ ಕಾಲೋನಿಗಳ ಅಭಿವೃದ್ಧಿ, ರಾಮನಗರದಲ್ಲಿ ಉಪನಗರ ಯೋಜನೆ ಮತ್ತು ವಿಮಾನ ಸೇವೆಗೆ ಪ್ರೋತ್ಸಾಹಧನ ನೀಡುವ ಪ್ರಮುಖ ಪ್ರಸ್ತಾವನೆಗಳು ಚರ್ಚೆಗೆ ಬರಲಿವೆ.
Read Full Story
09:05 AM (IST) Apr 30

Karnataka News Liveಕಾಂಗ್ರೆಸ್‌ನಲ್ಲಿ ರಾಜಕೀಯ ಇನ್ನೂ ಬಿರುಸು! ಮಲ್ಲಿಕಾರ್ಜುನ ಖರ್ಗೆ ಸಿಎಂ ಆದರೆ ಎಲ್ಲರೂ ಸ್ವಾಗತಿಸುತ್ತಾರೆಂದ ಡಾ. ಪರಮೇಶ್ವರ್

ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವದ ಬದಲಾವಣೆಯ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಪ್ರಸ್ತಾಪಕ್ಕೆ ಪರಮೇಶ್ವರ್ ಸ್ವಾಗತ ವ್ಯಕ್ತಪಡಿಸಿದ್ದು, ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಸೇರಿದ್ದು ಎಂದು ಎಂ.ಬಿ. ಪಾಟೀಲ್ ಮತ್ತು ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ.
Read Full Story
09:03 AM (IST) Apr 30

Karnataka News LiveKollegala Incident - ಪ್ರೀತಿ ಗೆದ್ದಿತ್ತು, ಆದರೆ ಹಣದ ಮುಂದೆ ಮದುವೆ ಸೋತಿತು! ಕೊಳ್ಳೇಗಾಲದ ಕಲ್ಯಾಣ ಮಂಟಪದಲ್ಲಿ ನಡುರಾತ್ರಿ ರಕ್ತಪಾತ!

Kollegal wedding dowry fight ಕೊಳ್ಳೇಗಾಲದಲ್ಲಿ ನಡೆಯಬೇಕಿದ್ದ ಪ್ರೇಮ ವಿವಾಹ, ವರದಕ್ಷಿಣೆ ವಿಚಾರವಾಗಿ ನಡೆದ ಗಲಾಟೆಯಿಂದಾಗಿ ನಿಂತುಹೋಗಿದೆ. ಚಿನ್ನಾಭರಣ ಮತ್ತು ಕಾರಿನ ಬೇಡಿಕೆಯಿಂದಾಗಿ ಎರಡೂ ಕುಟುಂಬಗಳ ನಡುವೆ ಮಾರಾಮಾರಿ ನಡೆದು, ಆರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 

Read Full Story
08:46 AM (IST) Apr 30

Karnataka News Liveಮೆಟ್ರೋದಲ್ಲಿ ಮಹಿಳೆಯರ ಶರೀರದ ಭಾಗಗಳನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚುತ್ತಿದ್ದ ಕಿಡಿಗೇಡಿ; ಬಿಸಿ ಮುಟ್ಟಿಸಿದ ಕರ್ನಾಟಕ ಹೈಕೋರ್ಟ್

ಮೆಟ್ರೋದಲ್ಲಿ ಮಹಿಳೆಯರ ಶರೀರದ ಭಾಗಗಳನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದ ಆರೋಪಿಯೊಬ್ಬನ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಸಾರ್ವಜನಿಕ ಸಾರಿಗೆಯು ಎಲ್ಲರಿಗೂ ಸುರಕ್ಷಿತ ತಾಣವಾಗಿರಬೇಕು ಮತ್ತು ಇಂತಹ ಕೃತ್ಯಗಳು ಮಹಿಳೆಯರ ಘನತೆಗೆ ಧಕ್ಕೆ ತರುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
Read Full Story
08:36 AM (IST) Apr 30

Karnataka News Liveರಾಜಕೀಯದ ನಡುವೆ ಪೊಲೀಸ್ ಆಪರೇಷನ್; ಮಾವ ಕೆಎನ್ ರಾಜಣ್ಣ ಸಲುವಾಗಿ ಅಳಿಯನಿಗೆ ಉನ್ನತ ಸ್ಥಾನ?

ರಾಜ್ಯ ಗುಪ್ತದಳದ ಮುಖ್ಯಸ್ಥರಾಗಿದ್ದ ಎಸ್. ರವಿ ಅವರನ್ನು ದಿಢೀರ್ ವರ್ಗಾವಣೆ ಮಾಡಿ, ನೂತನ ಸಾರಥಿಯಾಗಿ ಲಾಭೂ ರಾಮ್ ಅವರನ್ನು ನೇಮಿಸಲಾಗಿದೆ. ಇದೇ ವೇಳೆ, ಸಚಿವ ಕೆ.ಎನ್. ರಾಜಣ್ಣ ಅವರ ಅಳಿಯ ಎಸ್. ಗಿರೀಶ್ ಅವರಿಗೆ ಪ್ರಭಾವಿ ಕೇಂದ್ರ ವಲಯ ಡಿಐಜಿ ಹುದ್ದೆ ನೀಡಲಾಗಿದೆ. 

Read Full Story
08:26 AM (IST) Apr 30

Karnataka News Liveಬೆಂಗಳೂರು ಸಿಸಿಬಿ, ನಗರ ಪೊಲೀಸರ ಭರ್ಜರಿ ಬೇಟೆ - ₹36 ಕೋಟಿ ಡ್ರಗ್ಸ್‌ ಜಪ್ತಿ, 16 ಮಂದಿ ಬಂಧನ

ಬೆಂಗಳೂರಿನಲ್ಲಿ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿ, ನಾಲ್ವರು ವಿದೇಶಿಯರು ಸೇರಿದಂತೆ 16 ಮಂದಿಯನ್ನು ಬಂಧಿಸಿದ್ದಾರೆ. ಈ ದಾಳಿಯಲ್ಲಿ ಸುಮಾರು 36 ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ, ಎಲ್‌ಎಸ್‌ಡಿ, ಕೊಕೇನ್‌ನಂತಹ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಡಾರ್ಕ್‌ನೆಟ್‌ ಮೂಲಕ ಡ್ರಗ್ಸ್ ತರಿಸಿ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರು.
Read Full Story