ಜಿಎಸ್‌ಟಿ ಸರಳೀಕರಣ ಹಾಗೂ ರಾಜ್ಯಗಳ ಸ್ವಾಯತ್ತತೆ’ಗೆ ಸಂಬಂಧಿಸಿ ಶುಕ್ರವಾರ ದೆಹಲಿಯ ಕರ್ನಾಟಕ ಭವನದಲ್ಲಿ ಎಂಟು ರಾಜ್ಯಗಳ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಲಾಯಿತು.
- Home
- News
- State
- Karnataka News Live: ಜಿಎಸ್‌ಟಿ ಸ್ಲ್ಯಾಬ್ ಕಡಿತ - ರಾಜ್ಯಗಳಿಗೆ 2.5 ಲಕ್ಷ ಕೋಟಿ ನಷ್ಟ - ಸಚಿವ ಕೃಷ್ಣ ಬೈರೇಗೌಡ
Karnataka News Live: ಜಿಎಸ್‌ಟಿ ಸ್ಲ್ಯಾಬ್ ಕಡಿತ - ರಾಜ್ಯಗಳಿಗೆ 2.5 ಲಕ್ಷ ಕೋಟಿ ನಷ್ಟ - ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ನಮ್ಮ ದೇಶದ ಪ್ರಧಾನಮಂತ್ರಿ ಪ್ರತಿ ವರ್ಷ ಅಜೇರ್ ಶರೀಫ್ಗೆ ಒಂದು ಚಾದರ್ ಕಳುಹಿಸುತ್ತಾರೆ. ಅಲ್ಲಿಂದ ಆಶೀರ್ವಾದ ಪಡೆಯುತ್ತಾರೆ. ಚಾದರ್ ಕಳುಹಿಸಿದ ಮಾತ್ರಕ್ಕೆ ಪ್ರಧಾನಮಂತ್ರಿ ಮುಸ್ಲಿಂ ಆಗಿಬಿಟ್ಟರೇ? ಹಾಗೆಯೇ ಬುಕರ್ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಮಾಡುವುದು ಅಥವಾ ಮಾಡದಿರುವುದು ಅವರ ವೈಯಕ್ತಿಕ ವಿಚಾರ. ನಾವು ಮಧ್ಯ ಪ್ರವೇಶಿಸುವುದಿಲ್ಲ ಎಂದು ನಗರದ ಜಾಮಿಯಾ ಮಸೀದಿಯ ಮೌಲಾನಾ ಇಮ್ರಾನ್ ಮನ್ಸೂದ್ ಹೇಳಿದ್ದಾರೆ.
ಬಾನು ಮುಷ್ತಾಕ್ ವಿರುದ್ಧ ಫತ್ವಾ ಹೊರಡಿಸಬೇಕು ಎಂದು ಕೆಲ ಮುಸ್ಲಿಮರು ಜಾಲತಾಣಗಳಲ್ಲಿ ನೀಡಿದ್ದಾರೆ ಎನ್ನಲಾದ ಹೇಳಿಕೆ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟಪಡಿಸಿದ ಅವರು, ದಸರಾ ಉದ್ಘಾಟನೆ ಸಂಬಂಧಿಸಿ ಲೇಖಕಿ ವಿರುದ್ಧ ನಾವು ಯಾವುದೇ ಫತ್ವಾ ಹೊರಡಿಸು ವುದಿಲ್ಲ. ಮುಸ್ಲಿಂ ವಿಚಾರಗಳಿಗೆ ಸಂಬಂಧಿಸಿ ಏನಾದರೂ ಸಮಸ್ಯೆ ಇದ್ದರೆ ಫತ್ವಾ ಹೊರಡಿಸಲಾಗುತ್ತದೆ. ಅದಕ್ಕೆ ಲಿಖಿತ ದೂರು ನೀಡಬೇಕಾಗುತ್ತದೆ. ಯಾರು ಬೇಕಾದವರೂ ಫತ್ವಾ ಹೊರಡಿಸಲಾಗದು ಎಂದರು. ದೇಗುಲ, ಮಸೀದಿ, ಗುರುದ್ವಾರ, ಚರ್ಚ್ ಎಲ್ಲವೂ ಇವೆ. ಅವರವರ ನಂಬಿಕೆಗೆ ತಕ್ಕಂತೆ ಒಟ್ಟಾಗಿ ನಡೆದುಕೊಳ್ಳುತ್ತಾರೆ ಎಂದರು.
Karnataka News Live 30 August 2025ಜಿಎಸ್‌ಟಿ ಸ್ಲ್ಯಾಬ್ ಕಡಿತ - ರಾಜ್ಯಗಳಿಗೆ 2.5 ಲಕ್ಷ ಕೋಟಿ ನಷ್ಟ - ಸಚಿವ ಕೃಷ್ಣ ಬೈರೇಗೌಡ
Karnataka News Live 30 August 2025ಕಾಂಗ್ರೆಸ್‌ನವರಿಗೆ ಕೇಸರಿ, ಹಿಂದುತ್ವ ಕಂಡರೆ ಅಲರ್ಜಿ - ಎಂ.ಪಿ.ರೇಣುಕಾಚಾರ್ಯ
ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಾಗಿದೆ. ಈ ಬಗ್ಗೆ ಎರಡು ಮಾತಿಲ್ಲ. ಆದರೆ, ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರದ ನಾಯಕರ ಓಲೈಕೆಗಾಗಿ ಚಾಮುಂಡಿಬೆಟ್ಟದ ಕುರಿತು ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ.
Karnataka News Live 30 August 2025ಸಂಸಾರ ಕಲಹ.. ಪತಿಯ ಅನುಮಾನಕ್ಕೆ ಬಿತ್ತು ಶುಂಠಿ ಹೊಲದ ಕಾವಲುಗಾರನ ಹೆಣ
ಆತ ಕಳೆದ ನಾಲ್ಕೈದು ವರ್ಷಗಳಿಂದ ಸ್ವಂತ ಚಿಕ್ಕಮ್ಮನೊಂದಿಗೆ ಸಂಸಾರ ಮಾಡ್ತಾ ಇದ್ದ. ಆದರೆ ಇತ್ತೀಚೆಗೆ ಆಕೆಗೆ ಅಕ್ರಮ ಸಂಬಂಧ ಇದೆ ಎನ್ನೋ ಅನುಮಾನ ಶುರುವಾಗಿತ್ತು.
Karnataka News Live 30 August 2025ಸಂಕಷ್ಟಕ್ಕೆ ಹಿಮ್ಮೆಟ್ಟದೆ ಒಗ್ಗೂಡಿ ಶ್ರಮಿಸೋಣ - ಮಧ್ಯಪ್ರಾಚ್ಯದ ಸಂಕಟಕ್ಕೆ ಮಿಡಿದ ಸದ್ಗುರು ಮಧುಸೂದನ ಸಾಯಿ
ಮಧ್ಯಪ್ರಾಚ್ಯದ ಅನೇಕ ದೇಶಗಳಲ್ಲಿ ಜನರಿಗೆ ಜೀವನವು ಸುಲಭವಾಗಿಲ್ಲ. ನಾಳೆ ನೋಡುತ್ತೇವೆಯೇ ಎನ್ನುವುದೇ ಅವರಿಗೆ ಪ್ರಶ್ನೆ. ಮುಂದಿನ ಊಟ, ಔಷಧಿ ಸಿಗುತ್ತದೆಯೇ ಎಂಬುದರ ಖಾತರಿ ಇರುವುದಿಲ್ಲ.
Karnataka News Live 30 August 2025ಕಾಂಗ್ರೆಸ್ ಮಾಜಿ ನಾಯಕಿ ಜೊತೆ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಟ್ವಿಟ್ ಜಟಾಪಟಿ!
ಬೆಂಗಳೂರು ಮೆಟ್ರೋ ನಿಲ್ದಾಣಗಳ ನಾಮಕರಣ ವಿಚಾರದಲ್ಲಿ ಕಿರಣ್ ಮಜುಂದಾರ್ ಶಾ ಮತ್ತು ಕವಿತಾ ರೆಡ್ಡಿ ನಡುವೆ ಟ್ವಿಟರ್‌ನಲ್ಲಿ ವಾಗ್ಯುದ್ಧ ನಡೆದಿದೆ. ಕಂಪನಿಗಳ ಹೆಸರಿಡುವ ಬದಲು ಐತಿಹಾಸಿಕ ವ್ಯಕ್ತಿಗಳ ಹೆಸರಿಡಬೇಕೆಂದು ಕವಿತಾ ರೆಡ್ಡಿ ವಾದಿಸಿದ್ದಾರೆ.
Karnataka News Live 30 August 2025ಸಭಾಪತಿ ಸ್ಥಾನದಿಂದ ನನ್ನನ್ನು ಕೆಳಗಿಳಿಸಿದರೆ ಚಿಂತಿಸುವುದಿಲ್ಲ - ಬಸವರಾಜ ಹೊರಟ್ಟಿ
ಅಧಿಕಾರ ಶಾಶ್ವತವಲ್ಲ. ಅಧಿಕಾರ ಬಿಟ್ಟು ಹೋಗಲು ನಾನು ಯಾವಾಗಲೂ ಹಿಂಜರಿದವನಲ್ಲ. ನಾನು ರಾಜಕೀಯದಲ್ಲಿ ರಾಮಕೃಷ್ಣ ಹೆಗಡೆ ಅವರಂತೆ ಮೌಲ್ಯವನ್ನು ಇಟ್ಟುಕೊಂಡು ಬಂದವನು.
Karnataka News Live 30 August 2025ಮೈಸೂರ ಜನತೆಗೆ ಬಿಗ್ ನ್ಯೂಸ್, 300 ಕೋಟಿ ಹೂಡಿಕೆ ಮಾಡ್ತೀವಿ ಎಂದ ಸ್ವಿಜರ್ಲೆಂಡ್ ಕಂಪನಿ!
ಈ ಯೋಜನೆಯು 2027 ರ ಮಧ್ಯಭಾಗದ ವೇಳೆಗೆ ಪೂರ್ಣಗೊಳ್ಳಲಿದ್ದು, ಭಾರತದಲ್ಲಿ ಹಿಟಾಚಿ ಎನರ್ಜಿಯ ದೀರ್ಘಕಾಲೀನ ಬೆಳವಣಿಗೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.
Karnataka News Live 30 August 2025ಎಸ್‌ಐಟಿ ತನಿಖೆ ಸ್ವಾಗತಿಸಿದ್ದ ಬಿಜೆಪಿ ಈಗ ವಿರೋಧಿಸುತ್ತಿರುವುದೇಕೆ? - ಸಚಿವ ಸಂತೋಷ್ ಲಾಡ್
ಧರ್ಮಸ್ಥಳ ಗ್ರಾಮ ಪ್ರಕರಣದಲ್ಲಿ ಎಸ್ಐಟಿ ತನಿಖೆಯನ್ನು ಅಂದು ಸ್ವಾಗತಿಸಿದ್ದ ಬಿಜೆಪಿ ನಾಯಕರು ಈಗ ವಿರೋಧ ಮಾಡುತ್ತಿರುವುದೇಕೆ? ಎಸ್‌ಐಟಿ ರಚನೆ ಮಾಡಿದಾಗಲೇ ವಿರೋಧಿಸಬೇಕಿತ್ತಲ್ಲವೇ ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.
Karnataka News Live 30 August 2025ಸಬ್ ಅರ್ಬನ್ ರೈಲ್ವೆ ಯೋಜನೆ 2026ರಲ್ಲಿ ಪೂರ್ಣಗೊಳ್ಳುವುದು ಅನುಮಾನ - ವಿ.ಸೋಮಣ್ಣ
ರಾಜ್ಯ ಸರ್ಕಾರದ ಶೇ.51 ರಷ್ಟು ಹಾಗೂ ಕೇಂದ್ರ ಸರ್ಕಾರದ ಶೇ.49 ರಷ್ಟು ಬಂಡವಾಳದಲ್ಲಿ ಯೋಜನೆ ಪೂರ್ಣಗೊಳಿಸುವುದಕ್ಕೆ ನಿರ್ಧರಿಸಲಾಗಿತ್ತು. 2026ರ ಡಿಸೆಂಬರ್ ಅಂತ್ಯದ ವೇಳೆಗೆ 4 ಕಾರಿಡಾರ್ ಪೈಕಿ 2 ಕಾರಿಡಾರ್ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿತ್ತು.
Karnataka News Live 30 August 2025ಜನಪ್ರತಿನಿಧಿಗಳು, ಅಧಿಕಾರಿ ಒಟ್ಟಿಗೆ ಸೇರಿ ಸಮಸ್ಯೆ ಬಗೆಹರಿಸಬೇಕು - ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ
ರಾಜ್ಯ, ಕೇಂದ್ರ ಸರ್ಕಾರದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಮುಂದಿನ ಪೀಳಿಗೆಗೆ ಇಲ್ಲಿನ ಸಮಸ್ಯೆ ಇರದಂತೆ ನೋಡಿಕೊಳ್ಳಬೇಕು ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
Karnataka News Live 30 August 2025ಕೊನೆಗೂ ಬಂತು ಆಪ್ತ ಸ್ನೇಹಿತನಿಂದ ಮದುವೆಯ ವಿಶ್, ಖುಷ್ ಖುಷಿಯಾದ ನಿರೂಪಕಿ ಅನುಶ್ರೀ!
Karnataka News Live 30 August 2025ಜೈಲಿನಲ್ಲಿ ಇರಲು ಕಷ್ಟ ಹಾಸಿಗೆಗಾಗಿ ದರ್ಶನ್ ಮನವಿ, ಮೈಸೂರಲ್ಲಿ ಕಾಣಿಸಿದ ಪತ್ನಿ ತಾಯಿ, ಪವಿತ್ರಾ ಜಾಮೀನಿಗೆ ಅರ್ಜಿ!
Karnataka News Live 30 August 2025ಒಳ ಮೀಸಲಾತಿ ಶತಮಾನದ ನೋವಿಗೆ ಸಿಕ್ಕ ನ್ಯಾಯ - ಸಚಿವ ತಿಮ್ಮಾಪೂರ
ನಮ್ಮ ಸಮುದಾಯದ ಜನರು ಜನಸಂಖ್ಯೆಗನುಗುಣವಾಗಿ ಶೇ.6ರಷ್ಟು ಮೀಸಲಾತಿ ಪಡೆದಿದ್ದಾರೆ. ಯಾರಿಂದಲೂ ಕಸಿದುಕೊಂಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
Karnataka News Live 30 August 2025ಅಮೆರಿಕ ಅಧ್ಯಕ್ಷ ಟ್ರಂಪ್ ನಿಧನ, ಕಿಚ್ಚೆಬ್ಬಿಸಿದ ಸುದ್ದಿ, ಆರೋಗ್ಯದ ಕುರಿತ ಚರ್ಚೆ ನಿಂತಿಲ್ಲ!
Karnataka News Live 30 August 2025ಕೆಜಿಎಫ್ ‘ಚಾಚಾ’ ಹರೀಶ್ ರಾಯ್‌ಗೆ ಕ್ಯಾನ್ಸರ್ - ಚಿಕಿತ್ಸೆ ವೆಚ್ಚ ಭರಿಸುವುದಾಗಿ ಘೋಷಿಸಿದ ಧ್ರುವ ಸರ್ಜಾ
ನನಗೆ ಚಿರು ಸರ್ಜಾ ಅವರಷ್ಟು ಧ್ರುವ ಸರ್ಜಾ ಕ್ಲೋಸ್ ಇರಲಿಲ್ಲ. ಆದರೂ ಅವರ ಕಾಳಜಿ ಕಂಡು ಮನಸ್ಸು ತುಂಬಿಬಂತು ಎಂದಿದ್ದಾರೆ ನಟ ಹರೀಶ್ ರಾಯ್.
Karnataka News Live 30 August 2025ಕಾಡಿನ ಮಧ್ಯೆ ಸಣ್ಣತನ, ದ್ರೋಹ ಮತ್ತು ಪ್ರತೀಕಾರ - ರಿಪ್ಪನ್ ಸ್ವಾಮಿ ಸಿನಿಮಾ ವಿಮರ್ಶೆ
ಸಿನಿಮಾ ನಾಯಕ ಎಂದರೆ ಒಳ್ಳೆಯವನೇ ಆಗಿರಬೇಕು ಎಂಬ ಸಿದ್ಧಸೂತ್ರವನ್ನು ಈ ಸಿನಿಮಾ ಒಡೆದು ಹಾಕಿದೆ. ಇಲ್ಲಿ ಒಳ್ಳೆಯದು, ಕೆಟ್ಟದ್ದು ಅನ್ನುವುದು ಪರಿಸ್ಥಿತಿಗೆ ಬಿಟ್ಟಿದ್ದು.
Karnataka News Live 30 August 2025ಉಸಿರು ಸಿನಿಮಾ ವಿಮರ್ಶೆ - ಸೈಕೋ ಥ್ರಿಲ್ಲರ್ ಚಿತ್ರದಲ್ಲಿ ಗರ್ಭಿಣಿಯರು ಕಾಣೆಯಾಗುತ್ತಾರೆ!
ತನ್ನ ತಾಯಿಯನ್ನು ಕಳೆದುಕೊಂಡಿರುವ ವ್ಯಕ್ತಿ ಅಮ್ಮನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆಯೇ ಎನ್ನುವುದರ ಜೊತೆಗೆ ಅಪಾಯದಲ್ಲಿರುವ ತನ್ನ ಪತ್ನಿಯನ್ನು ಪೊಲೀಸ್ ಅಧಿಕಾರಿ ಹೇಗೆ ರಕ್ಷಿಸಿಕೊಳ್ಳುತ್ತಾನೆ ಎನ್ನುವುದು ಕತೆಯ ಸಣ್ಣ ತಿರುಳು.