11:10 PM (IST) Feb 06

karnataka news liveಕರ್ನಾಟಕದ ಗುರೂಜಿ ಕಮಲಾಕರ ಭಟ್ ಅನೈತಿಕ ಸಂಬಂಧ ಬೆಳೆಸಿದರೆ, ತೆಲಂಗಾಣ ಸ್ವಾಮೀಜಿ ದೇವಸ್ಥಾನದಲ್ಲೇ ಗಾಂಜಾ ಬೆಳೆಸಿದ!

ನಮ್ಮ ರಾಜ್ಯದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಅನೈತಿಕ ಸಂಬಂಧ ಬೆಳೆಸಿ ಜೈಲು ಸೇರಿದರೆ, ತೆಲಂಗಾಣದ ಸ್ವಾಮೀಜಿಯೊಬ್ಬರು ದೇವಸ್ಥಾನದ ಆವರಣದ ಹೂವಿನ ತೋಟದಲ್ಲಿ ಗಾಂಜಾ ಗಿಡ ಬೆಳೆಸಿ ಜೈಲು ಸೇರಿದ ಪ್ರಸಂಗ ನಡೆದಿದೆ. ಇಂತಹ ಸ್ವಾಮೀಜಿ, ಜ್ಯೋತಿಷಿಗಳ ಬಗ್ಗೆ ಭಕ್ತರು ಜಾಗೃತರಾಗಬೇಕು.

Read Full Story
10:43 PM (IST) Feb 06

karnataka news liveಮೈಸೂರಿನ ಹುಡುಗನಿಗೆ ಡಿವೋರ್ಸ್;‌ 'ಮುಕೇಶ್‌ ಅಂಬಾನಿ ಜೊತೆ ಮದುವೆಯಾಗ್ತೀನಿ' ಎಂದ 47ರ ರಾಖಿ ಸಾವಂತ್!

Bigg Boss Rakhi Sawant: ಈ ಹಿಂದೆ ಮೈಸೂರಿನ ಆದಿಲ್‌ ಖಾನ್‌ ಅವರನ್ನು ಮದುವೆ ಆಗಿದ್ದ ರಾಖಿ ಸಾವಂತ್‌ ಅವರು ರಿಲಾಯನ್ಸ್‌ ಸಾಮ್ರಾಜ್ಯದ ಮಾಲೀಕ ಮುಕೇಶ್‌ ಅಂಬಾನಿ ಜೊತೆ ಮದುವೆ ಆಗಲು ಹಾರ ಹಿಡಿದು ರೆಡಿ ಆಗಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

Read Full Story
10:31 PM (IST) Feb 06

karnataka news liveಕಮಲಾಕರ್ ಭಟ್, ಸುಚಿತ್ರಾ 'ಕಾಮಾಯಣ' ದೂರಿನ ನಿರ್ಲಕ್ಷ್ಯ - ಇಬ್ಬರು ಪೊಲೀಸರ ಎತ್ತಂಗಡಿ-ಎಸ್ಪಿ ದೀಪನ್ ಮಾಹಿತಿ!

ಉತ್ತರ ಕನ್ನಡದ ಸಿದ್ದಾಪುರದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಗ್ಯಾಂಗ್‌ನಿಂದ ನಡೆದ ವಸಂತ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಸಿಬ್ಬಂದಿಯನ್ನು ವರ್ಗಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಆದೇಶ ಹೊರಡಿಸಿದ್ದಾರೆ.

Read Full Story
08:42 PM (IST) Feb 06

karnataka news liveAR Rahman ಕೋಮುವಾದಿ ವಿವಾದ - ಜನರು ಬೊಗಳೋಕೆ ಶುರು ಮಾಡಿದ್ದಾರೆ - ಟೀಕಿಸಿದ PraKash Raj!

ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಕುರಿತ ಕಂಗನಾ ರಣಾವತ್ ಹೇಳಿಕೆಗೆ ನಟ ಪ್ರಕಾಶ್ ರಾಜ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕೇರಳ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ರೆಹಮಾನ್ ಅವರನ್ನು ದೇಶದ್ರೋಹಿ ಎಂದವರನ್ನು ಟೀಕಿಸಿದ್ದು, ಈ ಬೆಳವಣಿಗೆಯನ್ನು 'ಬೊಗಳುವಿಕೆ' ಎಂದು ಕರೆದಿದ್ದಾರೆ.
Read Full Story
07:53 PM (IST) Feb 06

karnataka news liveKarna Serial - ಆ ಎರಡು ತಪ್ಪಿಗೆ, ಸಾಕ್ಷಿ ಸಮೇತ ನಿರ್ದೇಶಕರನ್ನು ತರಾಟೆಗೆ ತಗೊಂಡ ವೀಕ್ಷಕರು

ಕರ್ಣ ಧಾರಾವಾಹಿಯಲ್ಲಿ ಇತ್ತೀಚೆಗೆ ಕರ್ಣ ರೋಗಿಯೋರ್ವರಿಗೆ ಮೆಡಿಸಿನ್‌ ಚೀಟಿ ಬರೆದುಕೊಟ್ಟಿದ್ದು, ಆ ಬಳಿಕ ನಿಧಿ, ನಿತ್ಯಾ ನಡುವೆ ಚರ್ಚೆ ಆದ ವಿಷಯದ ಬಗ್ಗೆ ವೀಕ್ಷಕರು ಪ್ರಶ್ನೆ ಮಾಡಿದ್ದಾರೆ. ಅದೆಲ್ಲ ಹೇಗೆ ಸಾಧ್ಯ ಎಂಬ ಚರ್ಚೆ ಆಗುತ್ತಿದೆ. ವೀಕ್ಷಕರ ಪ್ರಕಾರ ನಿರ್ದೇಶಕರು ಮಾಡಿದ ತಪ್ಪೇನು?

Read Full Story
07:51 PM (IST) Feb 06

karnataka news liveಬಿಗ್ ಬಾಸ್ ಮನೆಯ ಇಬ್ಬರು ಹುಡ್ಗೀರೂ ನನ್ನ ಮದುವೆಯಾಗಬೇಕು; ಸ್ಪರ್ಧಿಗಳಿದ್ದ ರೆಸಾರ್ಟ್‌ಗೆ ನುಗ್ಗಿದ ಆಗಂತುಕ!

ಬಿಗ್ ಬಾಸ್ ಮಹಿಳಾ ಸ್ಪರ್ಧಿಗಳನ್ನು ಮದುವೆಯಾಗುವುದಾಗಿ ವ್ಯಕ್ತಿಯೊಬ್ಬ ಪೀಡಿಸುತ್ತಿದ್ದ. ಸಾಮಾಜಿಕ ಜಾಲತಾಣದಿಂದ ಆರಂಭವಾದ ಈ ಕಿರುಕುಳವು, ಅವರು ತಂಗಿದ್ದ ರೆಸಾರ್ಟ್‌ಗೆ ನುಗ್ಗಿದ್ದಾನೆ. ತಮ್ಮ ಸುರಕ್ಷತೆಗೆ ಹೆದರಿ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

Read Full Story
07:35 PM (IST) Feb 06

karnataka news liveಕೋವಿಡ್ ಬಳಿಕ ಸ್ಥಗಿತಗೊಂಡಿದ್ದ ದಾಂಡೇಲಿ-ಅಳ್ನಾವರ ಪ್ಯಾಸೆಂಜರ್ ರೈಲು ಫೆ.7ರಿಂದ ಸಂಚಾರ ಪುನರಾರಂಭ

ದಾಂಡೇಲಿ-ಅಳ್ನಾವರ ರೈಲು ಸೇವೆ ಪುನರಾರಂಭಗೊಳ್ಳಲಿದ್ದು, ಹಾಸನ ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ಮತ್ತು ಕಲಬುರ್ಗಿ-ಲಾತೂರ್ ಹೊಸ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಈ ಬೆಳವಣಿಗೆಗಳು ರಾಜ್ಯದ ವಿವಿಧ ಭಾಗಗಳಲ್ಲಿ ರೈಲ್ವೆ ಸಂಪರ್ಕವನ್ನು ಸುಧಾರಿಸುವ ನಿರೀಕ್ಷೆ ಮೂಡಿಸಿವೆ.
Read Full Story
07:08 PM (IST) Feb 06

karnataka news liveಗಿಲ್ಲಿ ನಟ ಸಿನಿಮಾ ಡೈರೆಕ್ಟರ್ ಆಗುವ ಆಸೆ ಆರಂಭದಲ್ಲಿಯೇ ಕಮರಿ ಹೋಗುತ್ತಾ? ಫಿಲ್ಮ್ ಚೇಂಬರ್‌ನಲ್ಲಿ ದೂರು ದಾಖಲು!

'ಸರ್ಕಾರಿ ಶಾಲೆ ಹೆಚ್-8' ಸಿನಿಮಾದ ಪ್ರಚಾರಕ್ಕೆ ಗೈರಾದ ಕಾರಣ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ ನಟನ ವಿರುದ್ಧ ನಿರ್ಮಾಪಕರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಫಿಲ್ಮ್ ಚೇಂಬರ್ ನಿಯಮ ಉಲ್ಲಂಘನೆಗೆ ಚಿತ್ರರಂಗದಿಂದ ಬ್ಯಾನ್ ಮಾಡಿದಲ್ಲಿ ನಿರ್ದೇಶಕನಾಗುವ ಕನಸಿಗೆ ಕುತತು ಬರಲಿದೆ.

Read Full Story
06:56 PM (IST) Feb 06

karnataka news liveBhagyalakshmi - ಲೈವ್​ಗೆ ಬಂದ ತಾಂಡವ್​ ಫುಲ್​ ಸ್ಟೋರಿ ಹೇಳೇಬಿಟ್ರು! ಸಿಕ್ರೆ ಸಾಯಿಸಿಬಿಡ್ತೇನೆ ಎಂದ ಫ್ಯಾನ್​

ಮುಕ್ತಾಯದ ಹಂತದಲ್ಲಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿಯ ತಾಂಡವ್ ಪಾತ್ರಧಾರಿ ಸುದರ್ಶನ್, ನೇರಪ್ರಸಾರದಲ್ಲಿ ಬಂದು ಕ್ಷಮೆ ಯಾಚಿಸಿದ್ದಾರೆ. ತನ್ನ ತಪ್ಪಿನ ಅರಿವಾಗಿದೆ, ಭಾಗ್ಯ ಕ್ಷಮಿಸಿದರೆ ಸಾಕು ಎಂದಿರುವ ತಾಂಡವ್ ಮಾತಿನಿಂದ, ಕಥೆಯ ಅಂತ್ಯದಲ್ಲಿ ಭಾಗ್ಯ ಮತ್ತು ಆದಿ ಒಂದಾಗಬಹುದು ಎಂಬ ಕುತೂಹಲ ಹೆಚ್ಚಾಗಿದೆ.
Read Full Story
06:55 PM (IST) Feb 06

karnataka news liveಆರೋಪಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ ಭಟ್ ಪುತ್ರಿ ಸುಮಶ್ರೀಗೆ ಟಾರ್ಚರ್! ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ

ಖ್ಯಾತ ಜ್ಯೋತಿಷಿ ಕಮಲಾಕರ ಭಟ್‌ ಅವರ ಅನೈತಿಕ ಸಂಬಂಧ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಇದೀಗ ಶಿರಸಿ ಉಪವಿಭಾಗದ ಡಿವೈಎಸ್‌ಪಿಗೆ ವಹಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯದ ಬಗ್ಗೆಯೂ ತನಿಖೆ ನಡೆಯಲಿದೆ.

Read Full Story
06:09 PM (IST) Feb 06

karnataka news liveಮೈಸೂರಿನಲ್ಲಿ ಹೆಚ್ಚುತ್ತಿರುವ ಡ್ರಗ್ ಜಾಲ, ಪತ್ತೆ ಹಚ್ಚುವಲ್ಲಿ ಇಲಾಖೆ ವಿಫಲ, ಸಿಸಿಬಿಗೆ ಬಿತ್ತು ಕಮಿಷನರ್ ಬರೆ!

ಮೈಸೂರಿನಲ್ಲಿ ಹೆಚ್ಚುತ್ತಿರುವ ಡ್ರಗ್ ಹಾವಳಿ ನಿಯಂತ್ರಣದಲ್ಲಿ ವಿಫಲವಾದ ಆರೋಪದ ಮೇಲೆ, ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು ಸಿಸಿಬಿ ವಿಭಾಗಕ್ಕೆ 'ಮೇಜರ್ ಸರ್ಜರಿ' ನಡೆಸಿದ್ದಾರೆ. ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ 10ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಏಕಕಾಲದಲ್ಲಿ ವರ್ಗಾವಣೆ ಮಾಡಿದ್ದಾರೆ.

Read Full Story
06:08 PM (IST) Feb 06

karnataka news liveರಕ್ಷಿತ್​ ಶೆಟ್ಟಿಯ ಇನ್ನೊಂದು ಮುಖ ಬಿಚ್ಚಿಟ್ಟ ರುಕ್ಮಿಣಿ ವಸಂತ್​ - 'ಸಪ್ತಸಾಗರದಾಚೆ' ಶೂಟಿಂಗ್​ನಲ್ಲಿ ರಾತ್ರಿ ನಡೆದದ್ದೇನು?

'ಸಪ್ತಸಾಗರದಾಚೆ ಎಲ್ಲೋ' ಸಹನಟ ರಕ್ಷಿತ್ ಶೆಟ್ಟಿ ಅವರ ವಿಭಿನ್ನ ವ್ಯಕ್ತಿತ್ವದ ಬಗ್ಗೆ ನಟಿ ರುಕ್ಮಿಣಿ ವಸಂತ್ ಮಾತನಾಡಿದ್ದಾರೆ. ಸಿನಿಮಾ ಶೂಟಿಂಗ್​ನಲ್ಲಿ ಮಧ್ಯರಾತ್ರಿ 2 ಗಂಟೆಗೆ ನಡೆದ ಘಟನೆಯ ಬಗ್ಗೆಯೂ ಅವರು ವಿವರಿಸಿದ್ದಾರೆ. 

Read Full Story
06:04 PM (IST) Feb 06

karnataka news liveಬೇಸಿಗೆಗೂ ಮುನ್ನವೇ ಬೆಂಗಳೂರಲ್ಲಿ ಪವರ್ ಕಟ್ - ವಿದ್ಯುತ್ ವ್ಯತ್ಯಯವಾಗುವ ಏರಿಯಾಗಳ ಪಟ್ಟಿ ಇಲ್ಲಿದೆ!

ಬೆಂಗಳೂರಿನ ಹೃದಯಭಾಗದ ಹಲವು ಪ್ರದೇಶಗಳಲ್ಲಿ ಫೆಬ್ರವರಿ 8, ಭಾನುವಾರದಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ, ಗಾಂಧಿನಗರ, ಶೇಷಾದ್ರಿಪುರಂ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ.
Read Full Story
05:28 PM (IST) Feb 06

karnataka news liveರಾಜ್ಯವನ್ನೇ ಬೆಚ್ಚಿಬೀಳಿಸಿದ ಅಕ್ರಮ ಶಸ್ತ್ರಾಸ್ತ್ರ ಜಾಲ, ಶಿಕಾರಿಪುರದಲ್ಲಿ ನಾಡ ಬಂದೂಕು ತಯಾರಿಕಾ ಜಾಲ ಪತ್ತೆ!

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ತವರು ಕ್ಷೇತ್ರ ಶಿಕಾರಿಪುರದಲ್ಲಿ ಅಕ್ರಮ ನಾಡ ಬಂದೂಕು ತಯಾರಿಕಾ ಜಾಲವೊಂದು ಪತ್ತೆಯಾಗಿದೆ. ಭದ್ರಾಪುರ ಗ್ರಾಮದ ಕಾರ್ಪೆಂಟರ್ ಲಕ್ಷ್ಮಣಪ್ಪ ಎಂಬಾತನನ್ನು ಬಂಧಿಸಿದ್ದು, ಈತ ಗುಜರಿ ಸಾಮಾನು ಬಳಸಿ ಬಂದೂಕು ತಯಾರಿಸಿ ರೈತರಿಗೆ ಮಾರಾಟ ಮಾಡುತ್ತಿದ್ದ. 

Read Full Story
05:25 PM (IST) Feb 06

karnataka news liveಹಾವೇರಿ ಹೆದ್ದಾರಿಯಲ್ಲಿ ಹೈಟೆಕ್ ದರೋಡೆ - ಮೂವಿಂಗ್ ಲಾರಿಯಿಂದಲೇ 25 ಲಕ್ಷದ ಫ್ಲಿಪ್‌ಕಾರ್ಟ್ ಮಾಲು ಮಂಗಮಾಯ!

ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಚಲಿಸುತ್ತಿದ್ದ ಫ್ಲಿಪ್‌ಕಾರ್ಟ್ ಲಾರಿಯಿಂದ ಸಿನಿಮೀಯ ಶೈಲಿಯಲ್ಲಿ ಕಳ್ಳತನ ನಡೆದಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಬಳಿ, ಖದೀಮರು ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story
05:10 PM (IST) Feb 06

karnataka news liveಮೆಟ್ರೋ ದರ ಏರಿಕೆ ಕೇಂದ್ರ ಸರ್ಕಾರದ ಆದೇಶ, ರಾಜ್ಯದ ಪಾತ್ರವಿಲ್ಲ; ಬಿಜೆಪಿ ಮೊಸಳೆ ಕಣ್ಣೀರು ನಿಲ್ಲಿಸಲಿ- ಸಿದ್ದರಾಮಯ್ಯ

ಬೆಂಗಳೂರು ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರ ಕಾರಣವಲ್ಲ, ಇದು ಕೇಂದ್ರ ಸರ್ಕಾರ ನೇಮಿಸಿದ ಸಮಿತಿಯ ಆದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ವಿಚಾರದಲ್ಲಿ ಜನರನ್ನು ದಾರಿ ತಪ್ಪಿಸುತ್ತಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Read Full Story
04:59 PM (IST) Feb 06

karnataka news liveStrawberries - ಬರೀ ರುಚಿಯಲ್ಲ, ಆರೋಗ್ಯಕ್ಕೂ ಸೂಪರ್‌ಫುಡ್! ಇಲ್ಲಿದೆ ಅಚ್ಚರಿಯ ಲಾಭಗಳು

ಸ್ಟ್ರಾಬೆರಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಒಂದು ಸೂಪರ್‌ಫುಡ್. ಇದರಲ್ಲಿ ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್ ಹೇರಳವಾಗಿದ್ದು, ಹೃದಯದ ಆರೋಗ್ಯ, ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ಚರ್ಮದ ಆರೋಗ್ಯಕ್ಕೆ ಅಗತ್ಯವಾಗಿದೆ.

Read Full Story
04:44 PM (IST) Feb 06

karnataka news liveಮೇಘಾಲಯದಲ್ಲಿ ಕರ್ನಾಟಕ ಮಾಧ್ಯಮ ತಂಡ - ನೈಸರ್ಗಿಕ ಸೇತುವೆ ನಿರ್ಮಾತೃ ಶ್ರೀ ಹ್ಯಾಲಿ ವಾರ್ ಜೊತೆ ಸಂವಾದ.

ಮೇಘಾಲಯದ ದುರ್ಗಮ ಸೀಜ್ ಗ್ರಾಮದಲ್ಲಿ ಮರದ ಬೇರುಗಳಿಂದ ನೈಸರ್ಗಿಕ ಸೇತುವೆ ನಿರ್ಮಿಸಿ ಪದ್ಮಶ್ರೀ ಪುರಸ್ಕೃತ ಹ್ಯಾಲಿ ವಾರ್ ಅವರ ಸಾಧನೆಯನ್ನು ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳ ತಂಡ ವೀಕ್ಷಿಸಿತು. ಪ್ರಕೃತಿಯ ಒಡನಾಟದಿಂದ 70 ಅಡಿ ಉದ್ದದ ಬೇರಿನ ಸೇತುವೆ ನಿರ್ಮಿಸಿರುವ ಅವರ ಜೀವನಗಾಥೆ ಇಲ್ಲಿದೆ.

Read Full Story
04:20 PM (IST) Feb 06

karnataka news liveಸಾಣಾಪುರ ಬಳಿ ಇಸ್ರೇಲ್ ಮಹಿಳೆ ಮೇಲೆ ಬಲತ್ಕಾರ - ಪ್ರಕರಣದ ಆರೋಪಿಗಳು ದೋಷಿ, ಗಂಗಾವತಿ ಕೋರ್ಟ್ ಮಹತ್ವದ ಆದೇಶ, 16ಕ್ಕೆ ಅಂತಿಮ ತೀರ್ಪು!

ಗಂಗಾವತಿ ತಾಲೂಕಿನ ಸಾಣಾಪೂರ ಬಳಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾ೧ಚಾರ ಮತ್ತು ಯುವಕನ ಕೊಲೆ ಪ್ರಕರಣದಲ್ಲಿ, ಗಂಗಾವತಿ ನ್ಯಾಯಾಲಯವು ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿದೆ. ಘಟನೆ ನಡೆದ 9 ತಿಂಗಳೊಳಗೆ ತನಿಖೆ ಪೂರ್ಣಗೊಂಡಿದ್ದು, ಫೆಬ್ರವರಿ 16 ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

Read Full Story
04:19 PM (IST) Feb 06

karnataka news live101 ದೇವಸ್ಥಾನ, 101 ಬಾವಿಗಳ ಲಕ್ಕುಂಡಿ ಜನರನ್ನು ಊರಿಂದಾಚೆ ಕಳಿಸೋದು ಅನಿವಾರ್ಯ; ಎಚ್.ಕೆ. ಪಾಟೀಲ

ಐತಿಹಾಸಿಕ ಲಕ್ಕುಂಡಿಯಲ್ಲಿ ₹10 ಕೋಟಿ ವೆಚ್ಚದಲ್ಲಿ 'ಪಂಚ ದೇವಾಲಯ' ಮತ್ತು 'ಪಂಚ ಬಾವಿ' ಅಭಿವೃದ್ಧಿ ಯೋಜನೆಗೆ ಸಚಿವ ಎಚ್.ಕೆ. ಪಾಟೀಲ ಚಾಲನೆ ನೀಡಿದರು. ಲಕ್ಕುಂಡಿಯ 101 ದೇವಾಲಯಗಳು ಮತ್ತು 101 ಬಾವಿಗಳ ಉತ್ಖನನಕ್ಕಾಗಿ ಗ್ರಾಮವನ್ನು ಸ್ಥಳಾಂತರಿಸಿ 'ನವ ಲಕ್ಕುಂಡಿ' ನಿರ್ಮಿಸುವ ಪ್ರಸ್ತಾಪವೂ ಚರ್ಚೆಯಲ್ಲಿದೆ.

Read Full Story