11:27 PM (IST) Feb 08

Karnataka News Live 8 February 2026ರಾಸಲೀಲೆ ರಾಮಚಂದ್ರ ರಾವ್ ಸಸ್ಪೆಂಡ್ ಬೆನ್ನಲ್ಲೇ ಮತ್ತೊಬ್ಬ ಪೊಲೀಸ್ ಅಧಿಕಾರಿ ಅಮಾನತು; ಈ ಬಾರಿ ಕಾರಣವನ್ನೇ ತಿಳಿಸಿಲ್ಲ!

ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ವೃತ್ತದ ಸಿಪಿಐ ಹೆಚ್.ಆರ್. ಪಾಟೀಲ್ ಅವರನ್ನು ಕರ್ತವ್ಯಲೋಪದ ಆರೋಪದ ಮೇಲೆ ಬೆಳಗಾವಿ ಉತ್ತರ ವಲಯದ ಐಜಿಪಿ ಡಾ. ಚೇತನ್ ಸಿಂಗ್ ರಾಠೋರ್ ಅಮಾನತುಗೊಳಿಸಿದ್ದಾರೆ. ಆದರೆ, ಪೊಲೀಸ್ ಇಲಾಖೆಯಿಂದ ಅಮಾನತಿಗೆ ನಿಖರ ಕಾರಣವನ್ನೇ ಬಹಿರಂಗಪಡಿಸಿಲ್ಲ.

Read Full Story
10:28 PM (IST) Feb 08

Karnataka News Live 8 February 2026ಭಾನುವಾರವೆಂದು ಬೀಗರ ಮನೆಗೆ ಹೋಗಿದ್ದ ಅಪ್ಪ-ಅಮ್ಮ-ಮಗಳು ಬೈಕ್ ಡಿಕ್ಕಿಯಾಗಿ ಸೇತುವೆ ಮೇಲೆಯೇ ದುರಂತ ಸಾವು!

ಬೀದರ್ ಜಿಲ್ಲೆ ಹುಮನಾಬಾದ್ ಬಳಿ ಬೈಕ್ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ, ನೆಂಟರ ಮನೆಯಿಂದ ವಾಪಸಾಗುತ್ತಿದ್ದ ಒಂದೇ ಕುಟುಂಬದ ಪತಿ, ಪತ್ನಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ವೇಳೆ ಮತ್ತೊಬ್ಬ ಬಾಲಕ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Read Full Story
08:20 PM (IST) Feb 08

Karnataka News Live 8 February 2026ಕಿರುತೆರೆ ನಟ-ನಟಿಯರ ಮೊದಲ ಕ್ರಷ್​ ಯಾರು? ಕೊನೆಗೂ ರಿವೀಲ್​ ಮಾಡಿದ್ರು ಬಹುದೊಡ್ಡ ಸಿಕ್ರೇಟ್​

ಪ್ರೇಮಿಗಳ ದಿನದ ವಿಶೇಷವಾಗಿ, ಕಿರುತೆರೆಯ ಜನಪ್ರಿಯ ನಟ-ನಟಿಯರ ಮೊದಲ ಕ್ರಷ್ ಯಾರೆಂದು ಕೇಳಲಾಗಿದೆ. ಶಿವು, ಪಾರು, ಕಿರಣ್ ರಾಜ್, ದುರ್ಗಾ ಸೇರಿದಂತೆ ಹಲವು ತಾರೆಯರು ತಮ್ಮ ಶಾಲಾ-ಕಾಲೇಜು ದಿನಗಳ ಪ್ರೀತಿಯ ಗುಟ್ಟನ್ನು ಹಂಚಿಕೊಂಡಿದ್ದಾರೆ. 

Read Full Story
07:09 PM (IST) Feb 08

Karnataka News Live 8 February 2026ಲಕ್ಕುಂಡಿ ನಿಧಿ ಆಯ್ತು, ಜನರ ಕಣ್ಣು ಬಳ್ಳಾರಿಯ ತೆಕ್ಕಲಕೋಟೆ ಮೇಲೆ - ಉತ್ಖನನದ ಸಮಯದಲ್ಲಿ ಸಂಚಲನ

ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆಯಲ್ಲಿ,ನಡೆದ ಉತ್ಖನನದಲ್ಲಿ 5 ಸಾವಿರ ವರ್ಷಗಳಷ್ಟು ಹಳೆಯದಾದ ಮಾನವ ಅಸ್ಥಿಪಂಜರ ಪತ್ತೆಯಾಗಿದೆ. ಇದರೊಂದಿಗೆ ನವಶಿಲಾಯುಗದ ಜನರ ಆಯುಧಗಳು ಮತ್ತು ವಿಶಿಷ್ಟ ಶವಸಂಸ್ಕಾರ ಪದ್ಧತಿಯ ಕುರುಹುಗಳು ದೊರೆತಿದ್ದು, ಇದು ಕರ್ನಾಟಕದ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದೆ.

Read Full Story
06:31 PM (IST) Feb 08

Karnataka News Live 8 February 2026ಕೇಕ್​ ಕಟ್​ ಮಾಡಿ ರಕ್ಷಿತಾ ಶೆಟ್ಟಿ ಪ್ರೇಮಿಗಳ ದಿನ ಆಚರಣೆ - ಕೊನೆಗೂ ಗುಟ್ಟು ರಟ್ಟು ಮಾಡಿದ Bigg Boss ಪುಟ್ಟಿ ಹೇಳಿದ್ದೇನು?

ಬಿಗ್​ಬಾಸ್​ ಖ್ಯಾತಿಯ ರಕ್ಷಿತಾ ಶೆಟ್ಟಿ, ಸ್ನೇಹಿತನಿಗೆ ಕೇಕ್ ತಿನ್ನಿಸುತ್ತಿರುವ ವಿಡಿಯೋ ಪ್ರೇಮಿಗಳ ದಿನದ ಸಂದರ್ಭದಲ್ಲಿ ವೈರಲ್ ಆಗಿದೆ. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದ್ದು, ಈ ಬಗ್ಗೆ ಸ್ವತಃ ರಕ್ಷಿತಾ ಅವರೇ ಮಾಹಿತಿ ನೀಡಿದ್ದಾರೆ. ಅವರು ಹೇಳಿದ್ದೇನು? 

Read Full Story
06:23 PM (IST) Feb 08

Karnataka News Live 8 February 2026Kamalakar Bhat Case - ಜಮೀನ್ದಾರನಿಗೆ ಗಾಳ, ಅಪ್ಪು ಆರ್ಕೆಸ್ಟ್ರಾ ಶುರು; ಸುಚಿತ್ರಾಳ ಮತ್ತೊಂದು ಕರ್ಮಕಾಂಡ ಬಯಲು

Astrologer Kamalakar Bhat News: ಜ್ಯೋತಿಷಿ ಕಮಲಾಕರ್‌ ಭಟ್‌ ಹಾಗೂ ಸುಚಿತ್ರಾ ಸಂಬಂಧವು ಈಗ ವಸಂತ್‌ ನಾಯ್ಕ್‌ ಎನ್ನುವವರ ಕೊಲೆಯಲ್ಲಿ ಅಂತ್ಯವಾಗಿದೆ. ಈಗ ಇವರಿಬ್ಬರು ಜೈಲಿನಲ್ಲಿದ್ದಾರೆ. ಈಗ ಸುಚಿತ್ರಾ ಅವರ ಇನ್ನೊಂದು ಸಂಬಂಧ ಬಯಲಾಗಿದೆ.

Read Full Story
05:48 PM (IST) Feb 08

Karnataka News Live 8 February 2026'ಗಂಡನಿಲ್ಲದ ಸಮಯದಲ್ಲಿ....!' ಸುಚಿತ್ರಾ ಖಾಸಗಿ ಕ್ಷಣದ ಫೋಟೋಗಳು ವೈರಲ್! ಕಮಲಾಕರ ಭಟ್‌ಗಿಂತ ಮೊದಲು ಈ ಜಮೀನ್ದಾರನ ಜತೆ ಲವ್ವಿಡವ್ವಿ!

ಶಿವಮೊಗ್ಗ: ಕಿಲಾಡಿ ಲೇಡಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಗ್ಯಾಂಗ್ ಸೇರಿ ಅಮಾಯಕ ವಸಂತ ನಾಯ್ಕ ಅವರನ್ನು ಹ*ತ್ಯೆ ಮಾಡಿರುವ ವಿಚಾರ ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿದೆ. ಇದರ ನಡುವೆ ಈ ಸುಚಿತ್ರಾ ನವರಂಗಿ ಆಟದ ಮತ್ತೊಂದು ವಿಚಾರ ಬಯಲಾಗಿದೆ.

Read Full Story
05:43 PM (IST) Feb 08

Karnataka News Live 8 February 2026ಮೈಸೂರು ಹುಡುಗನಿಗೆ ಅದೃಷ್ಟ ತಂದ ಮಹಾರಾಷ್ಟ್ರದ ಮರಾಠಿ ಸುಂದರಿ - ಕಾಲಿಡುತ್ತಿದ್ದಂತೇ ಡಬಲ್​ ಇನ್​ಕಮ್!

Social Media Influencer: ಇಂದು ಸೋಶಿಯಲ್‌ ಮೀಡಿಯಾವನ್ನು ಅನೇಕರು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಜೋಡಿಯೊಂದು ತಮ್ಮ ಪ್ರೀತಿಯನ್ನು ಹೇಳಿಕೊಳ್ಳುತ್ತ, ಹೊಸ ಆದಾಯದ ಮೂಲವನ್ನು ಕಂಡುಕೊಂಡಿದೆ.

Read Full Story
04:56 PM (IST) Feb 08

Karnataka News Live 8 February 2026ರಕ್ಷಿತಾಗೂ ಕಟ್​ ಮಾಡಲು ಬರಲ್ಲ, ಫ್ಯಾನ್​ಗೂ ಬರಲ್ಲ! ಕಾಲ್​ ಕಟ್​ ಆಗದೇ ಲೈವ್​ನಲ್ಲಿ ಗೋಳು - ಫನ್ನಿ ವಿಡಿಯೋ ವೈರಲ್​

ಬಿಗ್​ಬಾಸ್​ ಖ್ಯಾತಿಯ ರಕ್ಷಿತಾ ಶೆಟ್ಟಿ ಮತ್ತು ಮಲ್ಲಮ್ಮ ಅವರು ಇತ್ತೀಚೆಗೆ ಇನ್​ಸ್ಟಾಗ್ರಾಮ್​ ಲೈವ್​ ಬಂದಿದ್ದರು. ಈ ವೇಳೆ ಅಭಿಮಾನಿಯೊಬ್ಬರ ಕರೆ ಸ್ವೀಕರಿಸಿದ ಅವರಿಗೆ, ಅದನ್ನು ಕಟ್ ಮಾಡಲು ತಿಳಿಯದೆ ತಬ್ಬಿಬ್ಬಾದರು. ಈ ಮೋಜಿನ ಪ್ರಸಂಗದ ವಿಡಿಯೋ ಇದೀಗ ವೈರಲ್ ಆಗಿದೆ.
Read Full Story
04:23 PM (IST) Feb 08

Karnataka News Live 8 February 2026ಆ 35 ನಿಮಿಷದ ಕರಾಳತೆ ಬಿಚ್ಚಿಟ್ಟ ಸಂತ್ರಸ್ಥೆ; ಆ ಕಾರಣಕ್ಕೆ ಸುಪಾರಿ ಕೊಟ್ಟು ಗ್ಯಾಂಗ್‌ ರೇ*ಪ್‌ ಮಾಡಿಸಿದ್ರಾ?

Women Spa Assault: ಕೇರಳದಲ್ಲಿ ನಡೆದ ಅತ್ಯಾ*ಚಾರವೊಂದು ನಿಜಕ್ಕೂ ಎಲ್ಲರಿಗೂ ಭಯ ಹುಟ್ಟಿಸಿದೆ. ದ್ವೇಷದ ಕಾರಣಕ್ಕೆ ಸುಪಾರಿ ಕೊಟ್ಟು ಸಾಮೂಹಿಕ ಅತ್ಯಾ*ಚಾರ ಮಾಡಿಸಿದರಾ ಎಂಬ ಪ್ರಶ್ನೆ ಮೂಡಿಸಿದೆ. ಹಾಗಾದರೆ ನಿಜಕ್ಕೂ ಏನಾಯ್ತು?

Read Full Story
03:52 PM (IST) Feb 08

Karnataka News Live 8 February 2026ವಿಜಯಪುರದ ಮಂಗಳೂರಿನಲ್ಲಿ ರೆಡ್ ಬರ್ಡ್ ಪ್ರವೇಟ್ ಜೆಟ್ ಪತನ

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಖಾಸಗಿ ಲಘು ವಿಮಾನವೊಂದು ಪತನಗೊಂಡಿದೆ. ಕಲಬುರ್ಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಈ ವಿಮಾನ ಇಂಧನ ಖಾಲಿಯಾದ ಕಾರಣ ಅಪಘಾತಕ್ಕೀಡಾಗಿದೆ.

Read Full Story
03:44 PM (IST) Feb 08

Karnataka News Live 8 February 2026Bhagyalakshmi Serial - ಕೊನೆಯಲ್ಲಿ ಆದಿಯೂ ಬೇಡ, ತಾಂಡವ್‌ನೂ ಬೇಡ; ಕಥೆಗೆ ರೋಚಕ ಟ್ವಿಸ್ಟ್ ಕೊಟ್ಟ ಭಾಗ್ಯ!

Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ ಈಗ ಭಾಗ್ಯ ಮನೆಗೆ ಬಂದು ಕ್ಷಮಿಸು ಎಂದು ಭಿಕ್ಷೆ ಬೇಡುತ್ತಿದ್ದಾನೆ. ಎರಡನೇ ಮದುವೆ ಯೋಚನೆಯಲ್ಲಿದ್ದ ಭಾಗ್ಯಗೆ ಈಗ ತಾಂಡವ್‌ನನ್ನು ಕ್ಷಮಿಸಬೇಕಾ? ಆದಿಯನ್ನು ಮದುವೆ ಆಗಬೇಕಾ ಎಂಬ ಪ್ರಶ್ನೆ ಬಂದಿದೆ.

Read Full Story
03:38 PM (IST) Feb 08

Karnataka News Live 8 February 2026Bengaluru ಜಿಬಿಎ ‘ಬಿ’ ಖಾತಾ ನಿವೇಶನ ಮಾಲೀಕರಿಗೆ ಸಿಹಿ ಸುದ್ದಿ; ಸಿಗಲಿದೆ 'ಎ' ಖಾತಾದ ಬಲ

'ಭೂಮಿ ಸ್ವಯಂ ಪರಿವರ್ತನೆ' ತಂತ್ರಾಂಶವನ್ನು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಮಾಸ್ಟರ್ ಪ್ಲಾನ್ ವ್ಯಾಪ್ತಿಯಲ್ಲಿನ ಲಕ್ಷಾಂತರ 'ಬಿ' ಖಾತಾ ನಿವೇಶನಗಳನ್ನು 'ಎ' ಖಾತಾಗೆ ಸುಲಭವಾಗಿ ಪರಿವರ್ತಿಸಲು ಅವಕಾಶ ಕಲ್ಪಿಸಲಾಗಿದ್ದು, ಇದು ಸಮಯ, ವೆಚ್ಚ ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡಲಿದೆ.

Read Full Story
03:18 PM (IST) Feb 08

Karnataka News Live 8 February 2026Bhagyalakshmi Serial - ಅತ್ತು ಕರೆದು, ತಾಂಡವ್ ಕಾಲು ಹಿಡ್ಕೊಂಡ್ರೂ ಇದೇ ಕಾರಣಕ್ಕೆ ಕ್ಷಮಿಸಲ್ಲ ಎಂದ ಭಾಗ್ಯ

Bhagyalakshmi kannada Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ ಈಗ ಸಂಪೂರ್ಣ ಬದಲಾಗಿದ್ದಾನೆ. ಭಾಗ್ಯಳ ಬಳಿ ಬಂದು ಕ್ಷಮಿಸಿ ಎಂದು ಬೇಡಿಕೊಳ್ಳುತ್ತಿದ್ದಾನೆ. ಎರಡನೇ ಮದುವೆ ಆಗೋ ಆಲೋಚನೆಯಲ್ಲಿದ್ದ ಭಾಗ್ಯ ಈಗ ತಾಂಡವ್‌ನನ್ನು ದೂರ ಮಾಡಿದ್ದಾಳೆ.

Read Full Story
03:14 PM (IST) Feb 08

Karnataka News Live 8 February 2026Karnataka - ಒಂದು ವರ್ಷದಲ್ಲಿ 42 ಸಾವಿರ ಖಾತೆ ಬಳಸಿ ಬರೋಬ್ಬರಿ ₹100 ಕೋಟಿ ವಂಚನೆ!

ಕಳೆದ ಒಂದು ವರ್ಷದಲ್ಲಿ ಕರ್ನಾಟಕದಲ್ಲಿ 42,000 ನಕಲಿ ಬ್ಯಾಂಕ್ ಖಾತೆಗಳನ್ನು ಬಳಸಿ ₹100 ಕೋಟಿಗೂ ಅಧಿಕ ಮೊತ್ತದ ಸೈಬರ್ ವಂಚನೆ ನಡೆದಿದೆ. ಈ ಸಂಬಂಧ 14 ಮಂದಿಯನ್ನು ಬಂಧಿಸಲಾಗಿದ್ದು, ಹಣದ ಆಮಿಷವೊಡ್ಡಿ ತೆರೆಯಲಾದ ಖಾತೆಗಳನ್ನು ಆನ್‌ಲೈನ್ ವಂಚನೆ ಮತ್ತು ಬೆಟ್ಟಿಂಗ್‌ಗೆ ಬಳಸಿಕೊಳ್ಳಲಾಗಿದೆ.

Read Full Story
03:02 PM (IST) Feb 08

Karnataka News Live 8 February 2026Aadi Lakshmi Purana - ತಾಳಿ ಕಟ್ಟುವಾಗ ಅಪ್ಪಿತಪ್ಪಿ 3 ಗಂಟು ಹಾಕಿಬಿಟ್ರೆ ಎನ್ನೋ ಭಯ ಇತ್ತು - ಆ ಘಟನೆ ನೆನೆದ ನಟಿ

ಜೀ ಕನ್ನಡದ 'ಆದಿ ಲಕ್ಷ್ಮಿ ಪುರಾಣ' ಧಾರಾವಾಹಿಯಲ್ಲಿ ಆದಿ ಮತ್ತು ಲಕ್ಷ್ಮಿಯ ಅನಿವಾರ್ಯ ಮದುವೆಯ ಕಥೆ ಸಾಗುತ್ತಿದೆ. ಈ ಮದುವೆಯ ಚಿತ್ರೀಕರಣದ ವೇಳೆ, ನಾಯಕಿ ಆಶಾ ಅಯ್ಯನರ್‌ಗೆ ನಾಯಕ ರಜನೀಶ್ ನಿಜವಾಗಿಯೂ ಮೂರು ಗಂಟು ಹಾಕಿಬಿಡುತ್ತಾರೇನೋ ಎಂಬ ಭಯ ಕಾಡಿತ್ತಂತೆ. ಈ ಬಗ್ಗೆ ನಟಿ ಹೇಳಿದ್ದೇನು?

Read Full Story
02:58 PM (IST) Feb 08

Karnataka News Live 8 February 2026Koppal - ಕುಡಿಯಲು ಯೋಗ್ಯವಲ್ಲದ ಸ್ಪಿರಿಟ್ ಸೇವಿಸಿ 25 ವರ್ಷದ ಯುವಕನ ದುರಂತ ಸಾವು; ಇಬ್ಬರ ಬಂಧನ

ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ, ಸಾರಾಯಿ ಎಂದು ಭಾವಿಸಿ ಕುಡಿಯಲು ಯೋಗ್ಯವಲ್ಲದ ಸ್ಪಿರಿಟ್ ಸೇವಿಸಿದ ಪರಿಣಾಮ ರಮೇಶ್ ಹೊಸಳ್ಳಿ (25) ಎಂಬ ಯುವಕ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ಇತರ ಇಬ್ಬರು ಅಸ್ವಸ್ಥರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Read Full Story
02:38 PM (IST) Feb 08

Karnataka News Live 8 February 2026Tumakuru - ಚೆಂದದ ಮಂಟಪ, ಸುತ್ತಲೂ ಮಂತ್ರಘೋಷ; ತಾಳಿ ಕಟ್ಟುವ ಹೊತ್ತಿಗೆ ವರನಿಗೆ ಬಿಗ್‌ ಶಾಕ್

ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯದೆ ಎರಡನೇ ಮದುವೆಗೆ ಸಿದ್ಧನಾಗಿದ್ದ ಹರಿಪ್ರಸಾದ್‌ಗೆ ಆತನ ಮೊದಲ ಪತ್ನಿ ಲೇಪಾಕ್ಷಿ ಶಾಕ್ ನೀಡಿದ್ದಾರೆ. ತಾಳಿ ಕಟ್ಟುವ ಸಮಯದಲ್ಲಿ ಪೊಲೀಸರೊಂದಿಗೆ ಕಲ್ಯಾಣಮಂಟಪಕ್ಕೆ ಆಗಮಿಸಿದ ಆಕೆ, ನಡೆಯುತ್ತಿದ್ದ ಮೋಸದ ಮದುವೆಯನ್ನು ತಡೆದಿದ್ದಾರೆ.
Read Full Story
02:10 PM (IST) Feb 08

Karnataka News Live 8 February 2026Karna Serial - ಕುತಂತ್ರಿಗಳ ಅಟ್ಟಹಾಸಕ್ಕೆ ಜಯ; ನಿಧಿ ಬಾಳಿಗೆ ಕೊನೆಗೂ ಕೊಳ್ಳಿ ಇಟ್ಟ ಸಂಜಯ್!‌ ಛೇ...!

ಕರ್ಣ ಧಾರಾವಾಹಿಯಲ್ಲಿ ಕರ್ಣ, ನಿಧಿ ಬಾಳು ಬಗೆಹರಿಯೋ ಹಾಗೆ ಕಾಣ್ತಿಲ್ಲ. ಇನ್ನೊಂದು ಕಡೆ ನಿಧಿಗೂ ಕಷ್ಟ ತಪ್ಪುತ್ತಿಲ್ಲ. ಹೌದು, ಒಂದಾದ ಮೇಲೆ ಒಂದರಂತೆ ಸಮಸ್ಯೆಗಳು ಬರುತ್ತವೇ ಇವೆ. ಈಗ ನಿಧಿ ಬಾಳಿಗೆ ಕೊಳ್ಳಿ ಇಡೋಕೆ ಸಂಜಯ್‌ ರೆಡಿಯಾಗಿದ್ದಾನೆ.

Read Full Story
02:09 PM (IST) Feb 08

Karnataka News Live 8 February 2026ಮೆಟ್ರೋ ದರ ಏರಿಕೆ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಆಕ್ರೋಶ - Mr. CM Cut the Dram ಎಂದು ಬರೆದ ಕಪ್ಪು ಟೀ ಶರ್ಟ್ ಧರಿಸಿ ವಿನೂತನ ಪ್ರತಿಭಟನೆ!

ಬೆಂಗಳೂರು ಮೆಟ್ರೋ ದರ ಏರಿಕೆಯನ್ನು ವಿರೋಧಿಸಿ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಆರ್‌ವಿ ರೋಡ್ ನಿಲ್ದಾಣದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು. ಪ್ರಯಾಣಿಕರ ಸಂಕಷ್ಟಗಳನ್ನು ಆಲಿಸಿದ ಅವರು, ದರ ಏರಿಕೆ ಮುಂದುವರೆಸಿದರೆ ಬೃಹತ್ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
Read Full Story