ದಾವಣಗೆರೆ ದಕ್ಷಿಣ ಕ್ಷೇತ್ರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ತಲೆದಂಡವಾದರೆ, ಮುಸ್ಲಿಂ ಸಮುದಾಯ ಕಾಂಗ್ರೆಸ್ನಿಂದ ದೂರ ಸರಿದು ಹೊಸ ಪ್ರಾದೇಶಿಕ ಪಕ್ಷವನ್ನು ಕಟ್ಟಲಿದೆ ಎಂದು ವಿಶ್ವ ಮುಸ್ಲಿಂ ಪರಿಷತ್ ರಾಜ್ಯಾಧ್ಯಕ್ಷ ಸುಭಾನ್ ಖಾನ್ ಎಚ್ಚರಿಸಿದ್ದಾರೆ.
- Home
- News
- State
- Karnataka News Live: Davanagere By-Election 2026 - ಕಾಂಗ್ರೆಸ್ ಪಕ್ಷ ನಮಗೆ ಅನಿವಾರ್ಯವಲ್ಲ, ಹೊಸ ಪಕ್ಷ ಕಟ್ಟುವ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡ!
Karnataka News Live: Davanagere By-Election 2026 - ಕಾಂಗ್ರೆಸ್ ಪಕ್ಷ ನಮಗೆ ಅನಿವಾರ್ಯವಲ್ಲ, ಹೊಸ ಪಕ್ಷ ಕಟ್ಟುವ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡ!

ಬೆಂಗಳೂರು (ಏ.18): ಬೆಂಗಳೂರು ವಿದ್ಯುತ್ ಸರಬರಾಜುನಿಗಮ (ಬೆಸ್ಕಾಂ) ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಗಳಿಗೆ (ಸೆಸ್ಟ್-ಮೈಸೂರು) 2024-25ನೇ ಸಾಲಿನಲ್ಲಿ ಉಂಟಾಗಿರುವ ಆದಾಯ ಕೊರತೆ ತುಂಬಿಕೊಳ್ಳಲು 2026-27ನೇ ಸಾಲಿನಲ್ಲಿ ಬೆಸ್ಕಾಂ ಗ್ರಾಹಕರಿಂದ ಪ್ರತಿ ಯುನಿಟ್ಗೆ 56 ಪೈಸೆ ಹಾಗೂ ಸೆಸ್ಕ್ ಗ್ರಾಹಕರಿಂದ ಪ್ರತಿ ಯುನಿಟ್ಗೆ 15 ಪೈಸೆಯಂತೆ ಹೆಚ್ಚುವರಿಯಾಗಿ ಸಂಗ್ರಹಿಸಲು ಕೆಇಆರ್ಸಿ ಆದೇಶ ಮಾಡಿದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್ಡೇಟ್ ಇಲ್ಲಿದೆ.
Karnataka News Live 18th April: Davanagere By-Election 2026 - ಕಾಂಗ್ರೆಸ್ ಪಕ್ಷ ನಮಗೆ ಅನಿವಾರ್ಯವಲ್ಲ, ಹೊಸ ಪಕ್ಷ ಕಟ್ಟುವ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡ!
Karnataka News Live 18th April: ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ಹೊಂಬಾಳೆ ಫಿಲಂಸ್ ಹೆಸರು ಹೇಳದ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ 'ಕಾಂತಾರ ಚಾಪ್ಟರ್ 1' ಚಿತ್ರಕ್ಕೆ ಐಎನ್ಸಿಎ ಪ್ರಶಸ್ತಿ ಲಭಿಸಿದೆ. ಆದರೆ, ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ರಿಷಬ್ ಅವರು ನಿರ್ಮಾಪಕರಾದ ಹೊಂಬಾಳೆ ಫಿಲಂಸ್ ಹೆಸರನ್ನು ಉಲ್ಲೇಖಿಸದೇ ಇರುವುದು, ಇಬ್ಬರ ನಡುವಿನ ಭಿನ್ನಾಭಿಪ್ರಾಯದ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ.
Karnataka News Live 18th April: women reservation bill defeat - ಕಾಂಗ್ರೆಸ್ಸಿಂದ ಇಡೀ ವಿಶ್ವದ ಮಹಿಳಾ ಕುಲಕ್ಕೆ ಅಪಮಾನ -ವಿಜಯೇಂದ್ರ
ನಾರಿ ಶಕ್ತಿ ವಂದನಾ ಮಸೂದೆಗೆ ಉಂಟಾದ ಸೋಲು ಪ್ರಜಾಪ್ರಭುತ್ವದ ಕರಾಳ ದಿನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಮಹಿಳಾ ಕುಲಕ್ಕೆ ಅಪಮಾನ ಮಾಡಿವೆ ಎಂದು ಆರೋಪಿಸಿದ ಅವರು, ಭವಿಷ್ಯದಲ್ಲಿ ಮಹಿಳಾ ಮೀಸಲಾತಿ ಜಾರಿಯಾಗಲಿದೆ ಎಂದರು..
Karnataka News Live 18th April: ಹಿಂದಿಗೆ ಅಂಕ - ಆದೇಶ ಮರು ಪರಿಶೀಲಿಸಲು ರಾಜ್ಯ ಸರ್ಕಾರದಿಂದ ಅರ್ಜಿ ಸಲ್ಲಿಕೆ
ಎಸ್ಎಸ್ಎಲ್ಸಿ ಪರೀಕ್ಷೆಯ ತೃತೀಯ ಭಾಷೆಗೆ ಗ್ರೇಡ್ ಬದಲಿಗೆ ಅಂಕ ನೀಡಬೇಕೆಂಬ ಹೈಕೋರ್ಟ್ ಆದೇಶವನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರವು ಅರ್ಜಿ ಸಲ್ಲಿಸಿದೆ. ಪರೀಕ್ಷಾ ಒತ್ತಡ ಕಡಿಮೆ ಮಾಡಲು ಗ್ರೇಡಿಂಗ್ ವ್ಯವಸ್ಥೆ ಸುಧಾರಣಾ ಕ್ರಮವಾಗಿದೆ.
Karnataka News Live 18th April: Women Reservation Bill - ಸ್ವಾರ್ಥ, ಅಪಸ್ವರವಿಲ್ಲದೆ ಮಹಿಳಾ ಮೀಸಲಾತಿ ಜಾರಿಯಾಗಲಿ
ರಾಜಕಾರಣಿಗಳು ಶಕ್ತಿ ದೇವತೆಗಳ ಆರಾಧಿಸುವುದಕ್ಕೂ, ರಾಜಕೀಯದಲ್ಲಿ ಮಹಿಳೆಯರ ಪ್ರವೇಶಕ್ಕೆ ದಶಕಗಳ ಕಾಲ ಅಡ್ಡಿಪಡಿಸಿದ್ದಕ್ಕೂ ಇರುವ ವಿಪರ್ಯಾಸವನ್ನು ಈ ಲೇಖನ ಚರ್ಚಿಸುತ್ತದೆ. ಅಂಬೇಡ್ಕರ್ರಿಂದ ಹಿಡಿದು, ಪಿ.ವಿ.ನರಸಿಂಹ ರಾವ್ ಮತ್ತು ಮೋದಿಯವರ ಕಾಲದವರೆಗೆ ಮಹಿಳಾ ಮೀಸಲಾತಿಯ ಐತಿಹಾಸಿಕ ಹಾದಿ ವಿವರಿಸುತ್ತದೆ.
Karnataka News Live 18th April: ಮೈಸೂರು: ಮನೆಗೆ ನುಗ್ಗಿದ ಚಿರತೆ ಎರಡು ಗಂಟೆ ಕಾಲ ಅಜ್ಜಿ ಮಲಗಿದ್ದ ಮಂಚದ ಕೆಳಗೆ ವಿಶ್ರಾಂತಿ!
ಮೈಸೂರಿನ ಸಿದ್ದಾರ್ಥನಗರದ ಮನೆಯೊಂದಕ್ಕೆ ನುಗ್ಗಿದ ಚಿರತೆಯು, ವೃದ್ಧೆಯೊಬ್ಬರು ಮಲಗಿದ್ದ ಮಂಚದ ಕೆಳಗೆ ಎರಡು ಗಂಟೆಗಳ ಕಾಲ ಅವಿತುಕೊಂಡಿತ್ತು. ಯಾರಿಗೂ ಯಾವುದೇ ಹಾನಿ ಮಾಡದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಚುಚ್ಚುಮದ್ದು ನೀಡಿ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.
Karnataka News Live 18th April: ಯೋಗೇಶ್ ಗೌಡ ಕೊಲೆ ಪ್ರಕರಣ: ಜನಪ್ರತಿನಿಧಿ ಕೋರ್ಟ್ ತೀರ್ಪು, ವಿನಯ್ ಕುಲಕರ್ಣಿಗೆ ಜೀವಾವಧಿ ಎನ್ನುತ್ತಿದ್ದಂತೆ ಗಳಗಳನೆ ಅತ್ತ ಶಾಸಕ
ಧಾರವಾಡದ ಜಿಪಂ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ ಮತ್ತು ಓರ್ವ ಅಪರಾಧಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
Karnataka News Live 18th April: ರಾಜಧಾನಿಯಲ್ಲೀಗ ಹೀಟ್ ಸ್ಟ್ರೋಕ್ ಆತಂಕ; ಬಿಸಿಲಿನ ತಾಪದಿಂದ ತಿಂಗಳೊಳಗೆ 10 ಮಂದಿ ಅಸ್ವಸ್ಥ!
ಉದ್ಯಾನ ನಗರಿ ಬೆಂಗಳೂರು ತೀವ್ರ ಬಿಸಿಲಿನ ತಾಪಕ್ಕೆ ತುತ್ತಾಗಿದ್ದು, ಹೀಟ್ ಸ್ಟ್ರೋಕ್ ಶಂಕೆಯಿಂದ 10 ಮಂದಿ ಅಸ್ವಸ್ಥರಾಗಿದ್ದಾರೆ. ಈ ಹಿನ್ನೆಲೆ ಪಾಲಿಕೆಯ ಆರೋಗ್ಯ ಇಲಾಖೆಯು ಕಟ್ಟೆಚ್ಚರ ವಹಿಸಿದ್ದು, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದೆ.
Karnataka News Live 18th April: ನಸುಕಿನಲ್ಲಿ ಪಿಜಿಗಳಿಗೆ ಕನ್ನಾಹಾಕುತ್ತಿದ್ದ ಖದೀಮ ಅರೆಸ್ಟ್; 5 ಲ್ಯಾಪ್ಟಾಪ್, ಮೊಬೈಲ್, 3 ಬೈಕ್ ಜಪ್ತಿ
ಬೆಂಗಳೂರಿನ ಪಿಜಿಗಳನ್ನು ಗುರಿಯಾಗಿಸಿಕೊಂಡು ಮೊಬೈಲ್, ಲ್ಯಾಪ್ಟಾಪ್ ಮತ್ತು ಬೈಕ್ಗಳನ್ನು ಕದಿಯುತ್ತಿದ್ದ ತಮಿಳುನಾಡು ಮೂಲದ ಶಕ್ತಿವೇಲು ಎಂಬಾತನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.6 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Karnataka News Live 18th April: ವಿದ್ಯುತ್ ದರ ಮತ್ತೆ ಹೆಚ್ಚಳ: ಬೆಸ್ಕಾಂ ಪ್ರತಿ ಯುನಿಟ್ಗೆ 56 ಪೈಸೆ, ಸೆಸ್ಕ್ನಿಂದ 15 ಪೈಸೆ ಏರಿಕೆ
2026-27ನೇ ಸಾಲಿನಲ್ಲಿ ಆದಾಯ ಕೊರತೆ ಸರಿದೂಗಿಸಲು ಬೆಸ್ಕಾಂ ಮತ್ತು ಸೆಸ್ಕ್ ಗ್ರಾಹಕರಿಗೆ ವಿದ್ಯುತ್ ದರ ಕ್ರಮವಾಗಿ 56 ಮತ್ತು 15 ಪೈಸೆ ಹೆಚ್ಚಳವಾಗಲಿದೆ. ಇದೇ ವೇಳೆ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಮತ್ತು ಹುಕ್ಕೇರಿ ಎಸ್ಕಾಂ ಗ್ರಾಹಕರಿಗೆ ಹೆಚ್ಚುವರಿ ಆದಾಯದ ಹಿನ್ನೆಲೆಯಲ್ಲಿ ದರ ಇಳಿಕೆಯಾಗಿದೆ.