04:49 PM (IST) Dec 15

Karnataka News Live15 December 2025 Karna - ಹಿಂದೆ ಯಮರಾಯ ನಿಂತಿರೋದು ಗೊತ್ತಿಲ್ದೇ ಹಾಯಾಗಿದ್ದಾನೆ ಪಾಪಿ ಸಂಜಯ್​! ಮುಂದಿದೆ ಮಾರಿಹಬ್ಬ

ಸಂಜಯ್‌ನ ಮೋಸದಿಂದ ಜೈಲು ಸೇರಿದ್ದ ನಿಧಿಯನ್ನು ಕರ್ಣ ರಕ್ಷಿಸಿದ್ದಾನೆ. ಆಘಾತದಲ್ಲಿರುವ ನಿಧಿಗೆ ಸಮಾಧಾನ ಹೇಳಿ, ಇದಕ್ಕೆ ಕಾರಣನಾದ ಸಂಜಯ್‌ಗೆ ತಕ್ಕ ಪಾಠ ಕಲಿಸಲು ಕರ್ಣ ಜಿಮ್‌ಗೆ ತೆರಳಿದ್ದಾನೆ, ಅಲ್ಲಿ ಅವನಿಗೆ ಯಮರೂಪಿಯಾಗಿ ದರ್ಶನ ನೀಡಿದ್ದಾನೆ.
Read Full Story
04:10 PM (IST) Dec 15

Karnataka News Live15 December 2025 BBK 12 - ಧ್ರುವಂತ್‌ ಹೆದರಬೇಕು- ಸೀಕ್ರೆಟ್‌ ರೂಮಲ್ಲಿ ಸಣ್ಣ ಪ್ರಶ್ನೆಗೆ ರಣಚಂಡಿಯಾದ ರಕ್ಷಿತಾ ಶೆಟ್ಟಿ

Bigg Boss Kannada Season 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಧ್ರುವಂತ್‌, ರಕ್ಷಿತಾ ಶೆಟ್ಟಿ ಅವರು ದೊಡ್ಮನೆಯಲ್ಲಿಲ್ಲ, ಬದಲಾಗಿ ಸೀಕ್ರೇಟ್‌ ರೂಮ್‌ ಪ್ರವೇಶ ಮಾಡಿದ್ದಾರೆ. ಮನೆಯೊಳಗಡೆ ಏನು ನಡೆಯುತ್ತಿದೆ ಎಂದು ಅವರು ರೂಮ್‌ನಲ್ಲಿ ನೋಡುತ್ತಿದ್ದಾರೆ.

Read Full Story
04:06 PM (IST) Dec 15

Karnataka News Live15 December 2025 ದಿಢೀರ್​ ಲೈವ್​ಗೆ ಬಂದ ಉಪೇಂದ್ರ, ಫ್ಯಾನ್ಸ್​ಗೆ ಕೊಟ್ಟರೊಂದು ಗುಡ್​​ನ್ಯೂಸ್​ - ಇಂಥ ಛಾನ್ಸ್ ಮತ್ತೆ ಸಿಗಲ್ಲ ನೋಡಿ

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ '45' ಚಿತ್ರದ ಟ್ರೈಲರ್ ಬಿಡುಗಡೆಗೆ ಸಜ್ಜಾಗಿದೆ. ನಟ ಉಪೇಂದ್ರ ಅವರು ಶಿವರಾಜ್​ಕುಮಾರ್ ಮತ್ತು ರಾಜ್ ಬಿ. ಶೆಟ್ಟಿ ಅವರೊಡನೆ ತಾವೂ ಭಾಗವಹಿಸುವ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ.

Read Full Story
04:05 PM (IST) Dec 15

Karnataka News Live15 December 2025 ಭಾರತದ ಈ ರೈಲಿನಲ್ಲಿ ಊಟಕ್ಕೆ ದುಡ್ಡೇ ಬೇಡ! ಇದು ಉಚಿತ ಊಟ ನೀಡುವ ದೇಶದ ಏಕೈಕ ರೈಲು, ನೀವು ಪ್ರಯಾಣಿಸಿದ್ದೀರಾ?

ಸಚ್ಖಂಡ್ ಎಕ್ಸ್‌ಪ್ರೆಸ್, ನಾಂದೇಡ್ ಮತ್ತು ಅಮೃತಸರ ನಡುವೆ ಸಂಚರಿಸುವ ಒಂದು ವಿಶಿಷ್ಟ ರೈಲು. ಇದರಲ್ಲಿ ಸಿಖ್ ಧರ್ಮದ ಲಂಗರ್ ಸಂಪ್ರದಾಯದಂತೆ, ಗುರುದ್ವಾರಗಳ ಸ್ವಯಂಸೇವಕರು ಎಲ್ಲ ಪ್ರಯಾಣಿಕರಿಗೂ ಉಚಿತವಾಗಿ ಬಿಸಿ ಊಟವನ್ನು ವಿತರಿಸುತ್ತಾರೆ. ಈ ಸೇವೆ ಸುಮಾರು ಮೂರು ದಶಕಗಳಿಂದ ನಿರಂತರವಾಗಿ ನಡೆಯುತ್ತಿದೆ.
Read Full Story
03:43 PM (IST) Dec 15

Karnataka News Live15 December 2025 ಬೆಂಗಳೂರು ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ರಸ್ತೆಯಲ್ಲಿ ಅಗ್ನಿ ಅವಘಡ - ನಡುರಸ್ತೆಯಲ್ಲೇ ಭಸ್ಮವಾದ ಕಾರು

ಬೆಂಗಳೂರಿನ ವಿಜಯನಗರ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದು ಏಕಾಏಕಿ ಹೊತ್ತಿ ಉರಿದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಬರುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಗೆ ತಾಂತ್ರಿಕ ದೋಷ ಕಾರಣವಿರಬಹುದೆಂದು ಶಂಕಿಸಲಾಗಿದೆ.
Read Full Story
03:32 PM (IST) Dec 15

Karnataka News Live15 December 2025 BBK 12 - ಕರ್ಮ ರಿಟರ್ನ್ಸ್..‌ ಬಂದು ಹೊಡೆಯತ್ತೆ - ದೊಡ್ಮನೆಯಲ್ಲಿ ಶಾಪ ಹಾಕಿದ ಚೈತ್ರಾ ಕುಂದಾಪುರ

Bigg Boss Kannada Season 12 Episode Update: ಬಿಗ್‌ ಬಾಸ್‌ ಮನೆಯಲ್ಲಿ ಹೊಸ ಟಾಸ್ಕ್‌ ನೀಡಲಾಗಿದೆ. ಈ ಟಾಸ್ಕ್‌ ಸೋತವರು ಮನೆಯಿಂದ ಹೊರಗಡೆ ಹೋಗಲು ನಾಮಿನೇಟ್‌ ಆಗುತ್ತಾರೆ. ಈಗ ಈ ಟಾಸ್ಕ್‌ ವಿಚಾರವಾಗಿ ದೊಡ್ಡ ಜಗಳವೇ ಆಗಿದೆ. ಸದ್ಯ ಪ್ರೋಮೋ ರಿಲೀಸ್‌ ಆಗಿದೆ. 

Read Full Story
03:23 PM (IST) Dec 15

Karnataka News Live15 December 2025 ಬೆಂಗಳೂರು ಹೋಟೆಲ್‌ನಲ್ಲಿ ಭರ್ಜರಿ ಪಾರ್ಟಿ, ಪೊಲೀಸ್ ಬಂದಾಕ್ಷಣ ಬಾಲ್ಕನಿಯಿಂದ ಜಿಗಿದ ಯುವತಿ!

ಬೆಂಗಳೂರಿನಲ್ಲಿ ಪೊಲೀಸ್ ಕಿರುಕುಳಕ್ಕೆ ಹೆದರಿ ಹೋಟೆಲ್ ಬಾಲ್ಕನಿಯಿಂದ ಇಳಿಯಲು ಯತ್ನಿಸಿದ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ಘಟನೆಯಲ್ಲಿ ತಮ್ಮ ಲೋಪ ಮುಚ್ಚಿಕೊಳ್ಳಲು ಪೊಲೀಸರು ಹೋಟೆಲ್ ಮಾಲೀಕರ ಮೇಲೆ ನಿರ್ಲಕ್ಷ್ಯದ ಆರೋಪ ಹೊರಿಸಿ ಎಫ್‌ಐಆರ್ ದಾಖಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Read Full Story
02:57 PM (IST) Dec 15

Karnataka News Live15 December 2025 BBK 12 ಮನೆಯಲ್ಲಿ ಕಾವ್ಯ ಶೈವ ಪಾಲಕರು; ಆ ಕಾರಣಕ್ಕೆ ಭಯ ಬಿದ್ದು ಕಾಲ್ಕೀಳಲಿರೋ ಗಿಲ್ಲಿ ನಟ

Bigg Boss Kannada Season 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕಾವ್ಯ ಶೈವ ಹಾಗೂ ಗಿಲ್ಲಿ ನಟನ ಸ್ನೇಹ, ತಮಾಷೆ, ಜಗಳ, ಮುನಿಸು ಕೂಡ ಹೈಲೈಟ್‌ ಆಗಿದೆ. ಯಾವಾಗ ನೋಡಿದರೂ ಕಾವು ಕಾವು ಎಂದು ಹೇಳಿಕೊಂಡು ಓಡಾಡುತ್ತಿದ್ದ ಗಿಲ್ಲಿ ನಟನಿಗೆ ಭಯ ಶುರುವಾಗಿದೆ. 

Read Full Story
01:46 PM (IST) Dec 15

Karnataka News Live15 December 2025 Bhagyalakshmi - ಆ ಪ್ರಶ್ನೆಯನ್ನು ಆದಿಗೆ ಕೇಳಿ ಬಿರುಗಾಳಿ ಎಬ್ಬಿಸಿದ ಕುಸುಮಾ! ಫ್ಯಾನ್ಸ್​ ಬೇಸರ

ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ, ಭಾಗ್ಯಳ ಸರಳ ಜೀವನದಿಂದ ಪ್ರೇರಿತನಾದ ಆದಿ ತನ್ನೆಲ್ಲಾ ಆಸ್ತಿ ತ್ಯಜಿಸಿ ಹೊಸ ಬದುಕು ಆರಂಭಿಸಿದ್ದಾನೆ. ಈ ನಡುವೆ, ಅತ್ತೆ ಕುಸುಮಾ ಇವರಿಬ್ಬರ ಮದುವೆಯ ಪ್ರಸ್ತಾಪವನ್ನು ಆದಿಯ ಮುಂದಿಟ್ಟಿದ್ದು, ಇದು ಆತನಿಗೆ ಆಘಾತ ನೀಡಿದೆ ಮತ್ತು ವೀಕ್ಷಕರಲ್ಲಿಯೂ ಚರ್ಚೆ ಹುಟ್ಟುಹಾಕಿದೆ.
Read Full Story
01:22 PM (IST) Dec 15

Karnataka News Live15 December 2025 ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲೇ ದಾಖಲೆಯ ಚಳಿ, ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಬೆಂಗಳೂರಿನಲ್ಲಿ ಮುಂದಿನ 1 ವಾರ ಹೇಗಿರಲಿದೆ?

ರಾಜ್ಯಾದ್ಯಂತ ಚಳಿಯ ತೀವ್ರತೆ ಹೆಚ್ಚಾಗಿದ್ದು, ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ವಾರ ಬಿಸಿಲು, ಮೋಡ ಹಾಗೂ ಮಳೆಯ ಮಿಶ್ರ ವಾತಾವರಣ ಇರಲಿದ್ದು, ವಾಯು ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ನಿರೀಕ್ಷಿಸಲಾಗಿದೆ.
Read Full Story
01:22 PM (IST) Dec 15

Karnataka News Live15 December 2025 Share Market - ರಿಲಯನ್ಸ್ ಷೇರಿನ ಹೆಸರಲ್ಲಿ ಬೆಂಗಳೂರು ಉದ್ಯಮಿಗೆ ₹8 ಕೋಟಿ ವಂಚನೆ!

ಅಯೋಧ್ಯೆ ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದ ಬೆಂಗಳೂರಿನ ಉದ್ಯಮಿ ರಾಜೇಂದ್ರ ನಾಯ್ಡು ಸೈಬರ್ ವಂಚನೆಗೆ ಒಳಗಾಗಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭದ ಆಮಿಷವೊಡ್ಡಿದ ವಂಚಕರು, ನಕಲಿ 'RARCllpro' ಆ್ಯಪ್ ಮೂಲಕ ಅವರಿಂದ ₹8.03 ಕೋಟಿ ಹಣ ದೋಚಿದ್ದಾರೆ.

Read Full Story
01:12 PM (IST) Dec 15

Karnataka News Live15 December 2025 BBK 12 - ಅಜ್ಜಿ ಸಾವಿನಲ್ಲೂ ಗಟ್ಟಿಯಾಗಿ ನಿಂತಿದ್ದ ಗಿಲ್ಲಿ ನಟನಿಗೆ ಕಣ್ಣೀರು ಹಾಕಿಸಿದ ರಕ್ಷಿತಾ ಶೆಟ್ಟಿ!

Bigg Boss Kannada Season 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಎಲಿಮಿನೇಟ್‌ ಆಗಿದ್ದಾರೆ. ಆ ವೇಳೆ ಅಶ್ವಿನಿ ಗೌಡ ಅವರು ಕೂಡ ಕಣ್ಣೀರು ಹಾಕಿದ್ದಾರೆ. ಆ ವೇಳೆ ಇನ್ನುಳಿದ ಇಬ್ಬರು ಆರಾಮಾಗಿರೋದು ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

Read Full Story
12:59 PM (IST) Dec 15

Karnataka News Live15 December 2025 ಸೌಂದರ್ಯ ಸಿನಿಮಾ ನೋಡಿ ಕೈ ಸುಟ್ಟುಕೊಂಡ ಚಿರಂಜೀವಿ, ತಲೆಕೆಡಿಸಿಕೊಂಡ ಆ ನಿರ್ದೇಶಕ - ಆಗಿದ್ದೇನು?

ಸೌಂದರ್ಯ ಅವರ ಒಂದು ಸಿನಿಮಾದಿಂದಾಗಿ ಚಿರಂಜೀವಿ ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಫ್ಲಾಪ್ ಎದುರಿಸಬೇಕಾಯ್ತು. ಆ ಸಿನಿಮಾ ಬೇಡ ಅಂತ ನಿರ್ದೇಶಕರು ಎಷ್ಟು ಹೇಳಿದ್ರೂ ಚಿರಂಜೀವಿ ಕೇಳಲಿಲ್ಲವಂತೆ. ಅಷ್ಟಕ್ಕೂ ಆ ಸಿನಿಮಾ ಯಾವುದು ಅಂತ ಈ ಸ್ಟೋರಿ ಓದಿ.

Read Full Story
12:53 PM (IST) Dec 15

Karnataka News Live15 December 2025 ಜೀವನದಲ್ಲಿ ಮರೆಯಲಾರದ ಫೆವರೆಟ್​ ದಿನದ ಗುಟ್ಟು ರಿವೀಲ್​ ಮಾಡಿದ ಸುದೀಪ್​ - ಯಾರೂ ಊಹಿಸದೇ ಇರುವ ದಿನವಿದು!

ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಚಿತ್ರದ ಟ್ರೈಲರ್ ದಾಖಲೆ ಬರೆದಿದೆ. ಈ ಚಿತ್ರದ ಯಶಸ್ಸಿನ ನಡುವೆ, ಸುದೀಪ್ ತಮ್ಮ ಬದುಕಿನ ಅತ್ಯಂತ ಮಹತ್ವದ ದಿನ ಬಹಿರಂಗಪಡಿಸಿದ್ದಾರೆ, ಏಕೆಂದರೆ ಆ ದಿನದಿಂದಲೇ ತಮ್ಮ ಜೀವನದ ಪಯಣ ಆರಂಭವಾಯಿತು ಎಂದು ಅವರು ಹೇಳಿದ್ದಾರೆ.

Read Full Story
12:36 PM (IST) Dec 15

Karnataka News Live15 December 2025 BBK 12 - ರಕ್ಷಿತಾ ಶೆಟ್ಟಿ ಮನೆಯಿಂದ ಹೋಗುವಾಗ ದೊಡ್ಡತನ ಮೆರೆದ ಅಶ್ವಿನಿ ಗೌಡ - ಭಾವುಕರಾದ ವೀಕ್ಷಕರು

ಈ ವಾರ ಬಿಗ್‌ಬಾಸ್ ಮನೆಯಲ್ಲಿ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆಂದು ಭಾವಿಸಿದ ಸದಸ್ಯರು ಭಾವುಕರಾದರು, ಅದರಲ್ಲೂ ಅಶ್ವಿನಿ ಗೌಡ ಕಣ್ಣೀರಿಟ್ಟರು. ಆದರೆ, ಇಬ್ಬರೂ ಸ್ಪರ್ಧಿಗಳು ಸೀಕ್ರೆಟ್ ರೂಮ್‌ನಿಂದ ಎಲ್ಲವನ್ನೂ ಗಮನಿಸುತ್ತಿದ್ದಾರೆ.
Read Full Story
12:33 PM (IST) Dec 15

Karnataka News Live15 December 2025 ಡೈಲಾಗ್‌, ಪಾತ್ರಗಳಿಂದ ಜನ ಮೆಚ್ಚುಗೆ ಗಳಿಸಿದ್ದ ಆಸೆ ಧಾರಾವಾಹಿಯಿಂದ ಏಕಾಏಕಿ ಹೊರಬಂದ ನಟಿ! ಯಾರದು?

Aase Kannada Serial Episode: ಡೈಲಾಗ್‌, ನಟನೆ, ಕಥೆಯಿಂದಲೇ ಆಸೆ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳಿರುವ ಈ ಸೀರಿಯಲ್‌ಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಈಗ ಈ ಸೀರಿಯಲ್‌ನಿಂದ ಓರ್ವ ನಟಿ ಹೊರಬಂದಿದ್ದಾರೆ.

Read Full Story
12:31 PM (IST) Dec 15

Karnataka News Live15 December 2025 ನನ್ನನ್ನು ನೋಡಿ ಬೆಚ್ಚಿಬಿದ್ದು ಸಾಯ್ತಾರೆ.. ಅಖಂಡ 2 ಸಕ್ಸಸ್‌ ಮೀಟ್‌ನಲ್ಲಿ ಬಾಲಯ್ಯ ಆವೇಶ!

ನಂದಮೂರಿ ಬಾಲಕೃಷ್ಣ ನಟನೆಯ ಅಖಂಡ 2 ಸಿನಿಮಾ ಡಿಸೆಂಬರ್ 12 ರಂದು ಬಿಡುಗಡೆಯಾಗಿದೆ. ಇತ್ತೀಚೆಗೆ ಈ ಚಿತ್ರದ ಯಶಸ್ಸಿನ ಸಂಭ್ರಮಾಚರಣೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಆವೇಶದಿಂದ ಮಾಡಿದ ಮಾತುಗಳು ವೈರಲ್ ಆಗುತ್ತಿವೆ.

Read Full Story
12:16 PM (IST) Dec 15

Karnataka News Live15 December 2025 ಖ್ಯಾತ ಚಿತ್ರನಟ, ರಾಜ್ಯಸಭಾ ಸಂಸದ, ಕೋಟಿ ಕೋಟಿ ಕಾಸಿದ್ರೂ, ತಳ್ಳೋ ಗಾಡಿಯಲ್ಲಿ ರಾತ್ರಿ ಊಟ ಸವಿದ ನಟ ಜಗ್ಗೇಶ್!

ಖ್ಯಾತ ನಟ ಹಾಗೂ ಸಂಸದ ಜಗ್ಗೇಶ್ ಅವರು ತಡರಾತ್ರಿ ಬೆಂಗಳೂರಿನ ಬಸವನಗುಡಿಯಲ್ಲಿ ತಳ್ಳುಗಾಡಿಯ ತಿಂಡಿ ಸವಿದಿದ್ದಾರೆ. ಈ ಅನುಭವವನ್ನು 'ಅಮ್ಮನ ಕೈತುತ್ತು' ಎಂದು ಬಣ್ಣಿಸಿ ಅವರು ಹಂಚಿಕೊಂಡ ವಿಡಿಯೋ, ಅವರ ಸರಳತೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
Read Full Story
11:55 AM (IST) Dec 15

Karnataka News Live15 December 2025 2025ರಲ್ಲಿ ಪ್ಯಾನ್ ಇಂಡಿಯಾ ಸಕ್ಸಸ್‌ಗಳೊಂದಿಗೆ ಮಿಂಚಿದ ಟಾಪ್ 5 ನಟಿಯರು - ಮೊದಲ ಸ್ಥಾನ ಯಾರಿಗೆ?

ಪ್ಯಾನ್‌ ಇಂಡಿಯಾ ಚಿತ್ರಗಳ ಮೂಲಕ ಈ ವರ್ಷ ಬೇಡಿಕೆಯ ನಟಿ ಎನಿಸಿಕೊಂಡವರು. ‘ಕಾಂತಾರ 1’ ಚಿತ್ರದಲ್ಲಿ ಕನಕವತಿಯಾಗಿ 2025ರಲ್ಲಿ ಬೆಂಚ್‌ ಮಾರ್ಕ್‌ ಹಾಕಿಕೊಂಡವರು. ಸದ್ಯ ದಕ್ಷಿಣ ಭಾರತೀಯ ಚಿತ್ರರಂಗದ ಕಣ್ಮಣಿ ರುಕ್ಮಿಣಿ ವಸಂತ್‌.

Read Full Story
11:43 AM (IST) Dec 15

Karnataka News Live15 December 2025 ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ; 200ಕ್ಕೂ ಹೆಚ್ಚು ಸ್ಯಾಂಪಲ್ ಪರೀಕ್ಷೆಗೆ ರವಾನೆ- ಸಚಿವ ಗುಂಡೂರಾವ್

ಮೊಟ್ಟೆಗಳಲ್ಲಿ ಕ್ಯಾನ್ಸರ್-ಕಾರಕ ಅಂಶವಿದೆ ಎಂಬ ವೈರಲ್ ವಿಡಿಯೋ ಹಿನ್ನೆಲೆಯಲ್ಲಿ, ರಾಜ್ಯ ಆರೋಗ್ಯ ಇಲಾಖೆಯು 200ಕ್ಕೂ ಹೆಚ್ಚು ಮೊಟ್ಟೆ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ. ಸಚಿವ ದಿನೇಶ್ ಗುಂಡೂರಾವ್ ಅವರು ವರದಿ ಬರುವವರೆಗೆ ಸಾರ್ವಜನಿಕರು ಆತಂಕಪಡಬೇಕಾಗಿಲ್ಲ ಎಂದು ಭರವಸೆ ನೀಡಿದ್ದಾರೆ.
Read Full Story