ಕೊಪ್ಪಳ ಆರ್‌ಟಿಒ ಕಚೇರಿಯಲ್ಲಿ ಶೋರೂಮ್ ಟ್ರೇಡ್ ಲೈಸನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಸ್‌ಡಿಎ ರಂಜಿತ್ ಎಂಬ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಯೀಮ್ ಎಂಬುವವರ ದೂರಿನ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಸಿಬ್ಬಂದಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಶೋರೂಮ್ ಟ್ರೇಡ್ ಲೈಸನ್ಸ್ ನೀಡಲು ಲಂಚಕ್ಕೆ ಸತಾಯಿಸುತ್ತಿದ್ದ ಎಸ್‌ಡಿಎ
ಕೊಪ್ಪಳ: ಕೊಪ್ಪಳದಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ಲಂಚ ಸ್ವೀಕರಿಸುತ್ತಿದ್ದ ಆರ್‌ಟಿಒ ಅಧಿಕಾರಿ ಬಲೆಗೆ ಬಿದ್ದಿದ್ದಾರೆ.ಶೋರೂಮ್ ಟ್ರೇಡ್ ಲೈಸನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರ್‌ಟಿಒ ಅಧಿಕಾರಿಯೊಬ್ಬರನ್ನು ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡ್ ಆಗಿ ಬಲೆಗೆ ಬೀಳಿಸಿದ್ದಾರೆ. ಕೊಪ್ಪಳ ಆರ್‌ಟಿಒ ಕಚೇರಿಯಲ್ಲಿ ಘಟನೆ ನಡೆದಿದೆ. 21 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ದಾಳಿ ನಡೆದಿದ್ದು, ಕೊಪ್ಪಳ ಆರ್‌ಟಿಒ ಕಚೇರಿಯ ಸಿಬ್ಬಂದಿ ಎಸ್‌ಡಿಎ ರಂಜಿತ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಯೀಮ್ ಎಂಬುವವರು ಎಸ್‌ಡಿಎ ರಂಜಿತ್ ವಿರುದ್ಧ ಲೋಕಾಯುಕ್ತಗೆ ದೂರು ನೀಡಿದ್ದರು. ಶೋರೂಮ್ ಒಪನ್ ಮಾಡಲು ಟ್ರೇಡ್ ಲೈಸೆನ್ಸ್‌ಗಾಗಿ ನಯೀಮ್ 3 ತಿಂಗಳ ಹಿಂದೆ ಆರ್‌ಟಿಒ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಲೈಸೆನ್ಸ್ ನೀಡದೇ ಲಂಚಕ್ಕಾಗಿ ಪೀಡಿಸುತ್ತಿದ್ದ ಹಿನ್ನೆಲೆ ನಯೀಮ್ ಲೋಕಾಯುಕ್ತಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಯಚೂರು ಲೋಕಾಯುಕ್ತ ಡಿವೈಎಸ್‌ಪಿ ಲೊಕೇಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, 21 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಆರ್‌ಟಿಒ ಕಚೇರಿಯ ಎಸ್‌ಡಿಎಯನ್ನು ರೆಡ್‌ಹ್ಯಾಂಡ್ ಆಗಿ ಬಲೆಗೆ ಬೀಳಿಸಿದ್ದಾರೆ. ನಯೀಮ್ ಅವರು ಕುಷ್ಟಗಿ, ಕಾರಟಗಿ ಹಾಗೂ ಹುಲಿಗಿಯಲ್ಲಿ ಶೋರೂಮ್ ಮಾಡುವುದಕ್ಕೆ ಟ್ರೇಡ್ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಭ್ರೂಣ ಲಿಂಗ ಪತ್ತೆಗಾಗಿ ಸ್ಕ್ಯಾನಿಂಗ್ ಮಾಡಿದ ಆರೋಪ: 3 ವೈದ್ಯರ ಬಂಧನ: 17 ಆರೋಪಿಗಳ ವಿರುದ್ಧ 12 FIR


