KSRTC non-Shakti scheme revenue: ಶಕ್ತಿ ಯೋಜನೆಯಿಂದಾಗಿ ನಿಗಮದ ಆದಾಯ ಹೆಚ್ಚಾಗಿದ್ದು, ಇದೀಗ ಕೆಎಸ್ಸಾರ್ಟಿಸಿ ಶಕ್ತಿ ಯೋಜನೇತರ ಆದಾಯವನ್ನು, ಅಂದರೆ ಪುರುಷ ಪ್ರಯಾಣಿಕರಿಂದ ಬರುವ ಟಿಕೆಟ್ ಆದಾಯವನ್ನು ಹೆಚ್ಚಿಸಲು ಮುಂದಾಗಿದೆ.
ಬೆಂಗಳೂರು (ನ.19): ಶಕ್ತಿ ಯೋಜನೆಯಿಂದ ಬರುವ ಆದಾಯ ಹೊರತುಪಡಿಸಿ, ಶಕ್ತಿ ಯೋಜನೇತರ ಆದಾಯ (ಪುರುಷ ಪ್ರಯಾಣಿಕರ ಟಿಕೆಟ್ ಆದಾಯ) ವೃದ್ಧಿಸುವ ಉದ್ದೇಶದಿಂದಾಗಿ ಕೆಎಸ್ಸಾರ್ಟಿಸಿಯು ತನ್ನ ವ್ಯಾಪ್ತಿಯ ಪ್ರತಿ ಘಟಕದಲ್ಲಿ ಸಂಗ್ರಹವಾಗುತ್ತಿರುವ ಆದಾಯದ ವರದಿ ಪಡೆಯಲು ಮುಂದಾಗಿದೆ.
ಶಕ್ತಿ ಯೋಜನೆಯಿಂದ ಆದಾಯ ಹೆಚ್ಚಳ:
ರಾಜ್ಯದಲ್ಲಿ ಶಕ್ತಿ ಯೋಜನೆಯಿಂದಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಅದರಿಂದ ನಿಗಮಗಳಿಗೆ ಬರುವ ಆದಾಯದಲ್ಲೂ ಏರಿಕೆಯಾಗುವಂತಾಗಿದೆ. ಅದರ ಜತೆಗೆ ಶಕ್ತಿ ಯೋಜನೆ ವ್ಯಾಪ್ತಿಗೊಳಪಡದ ಪ್ರಯಾಣಿಕರಿಂದ ನಿಗಮಕ್ಕೆ ಆದಾಯ ಹೆಚ್ಚಿಸಲು ಕೆಎಸ್ಸಾರ್ಟಿಸಿ ಮುಂದಾಗಿದೆ. ಅದಕ್ಕಾಗಿ ಪ್ರತಿ ಘಟಕದಲ್ಲಿ ಕಳೆದ 6 ತಿಂಗಳಲ್ಲಿ ಶಕ್ತಿ ಯೋಜನೆ ಆದಾಯ ಹೆಚ್ಚಾಗಿ ಸಂಗ್ರಹವಾಗುತ್ತಿರುವ 10 ಮಾರ್ಗಗಳ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಅದನ್ನಾಧರಿಸಿ ಆ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿರ್ವಾಹಕರಿಂದ ಅಭಿಪ್ರಾಯ ಸಂಗ್ರಹಿಸಿ, ಆ ಮಾರ್ಗದಲ್ಲಿ ಹೆಚ್ಚಿನ ಬಸ್‌ಗಳನ್ನು ಸೇವೆಗೆ ನೀಡುವುದು ಸೇರಿದಂತೆ ಮತ್ತಿತರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.
ಶಕ್ತಿ ಯೋಜನೆಯ ಆದಾಯ ಹೊರತುಪಡಿಸಿ ಹೆಚ್ಚಿನ ಆದಾಯ:
ಶಕ್ತಿ ಯೋಜನೆಯಿಂದ ಬರುವ ಆದಾಯ ಹೊರತುಪಡಿಸಿ, ಶಕ್ತಿ ಯೋಜನೇತರ ಆದಾಯ (ಪುರುಷ ಪ್ರಯಾಣಿಕರ ಟಿಕೆಟ್ ಆದಾಯ) ವೃದ್ಧಿಸುವ ಉದ್ದೇಶದಿಂದಾಗಿ ಕೆಎಸ್ಸಾರ್ಟಿಸಿಯು ತನ್ನ ವ್ಯಾಪ್ತಿಯ ಪ್ರತಿ ಘಟಕದಲ್ಲಿ ಸಂಗ್ರಹವಾಗುತ್ತಿರುವ ಆದಾಯದ ವರದಿ ಪಡೆಯಲು ಮುಂದಾಗಿದೆ.


