ChatGPT, ಗ್ರೋಕ್‌ನಂತಹ AI ಚಾಟ್‌ಬಾಟ್‌ಗಳು ಉಪಯುಕ್ತವಾಗಿದ್ದರೂ, ಅವುಗಳೊಂದಿಗೆ ನಿಮ್ಮ ಸೂಕ್ಷ್ಮ ಮಾಹಿತಿ ಹಂಚಿಕೊಳ್ಳುವುದು ಗೌಪ್ಯತೆ ಉಲ್ಲಂಘನೆ ಮತ್ತು ಡೇಟಾ ಕಳ್ಳತನಕ್ಕೆ ಕಾರಣವಾಗಬಹುದು. ಹಾಗಾದರೆ ಈವುಗಳೊಂದಿಗೆ ಯಾವುದನ್ನು ಹಂಚಿಕೊಳ್ಳಬಾರದು?
ChatGPT, ಗ್ರೋಕ್, ಜೆಮಿನಿಯಂತಹ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್‌ಗಳು ದೈನಂದಿನ ಜೀವನದ ಭಾಗವಾಗುತ್ತಿವೆ. ಜನರು ಇಮೇಲ್‌ಗಳನ್ನು ಬರೆಯಲು, ತ್ವರಿತ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ಒಡನಾಟವನ್ನು ಒದಗಿಸಲು ಸಹಾಯ ಮಾಡುತ್ತವೆ. ಮನುಷ್ಯನಂತೆಯೇ ಉತ್ತರಿಸುವ ಅದರ ಪ್ರತಿಕ್ರಿಯೆಗಳು ಅವುಗಳನ್ನು ನಂಬಿಕಸ್ಠ ಎಂದು ಕಾಣುವಂತೆ ಮಾಡುತ್ತದೆ. ಆದರೆ ತಜ್ಞರು, ಈ ಬಗ್ಗೆ ಹುಷಾರಾಗಿರಿ ಎಂದು ಎಚ್ಚರಿಸುತ್ತಾರೆ. AI ಯೊಂದಿಗೆ ಅತಿಯಾಗಿ ಕೆಲವು ವಿಷಯಗಳನ್ನು ಹಂಚಿಕೊಳ್ಳುವುದರಿಂದ ಗೌಪ್ಯತೆ ಉಲ್ಲಂಘನೆ, ನಿಮ್ಮ ಮಾಹಿತಿ ಕಳ್ಳತನ ಮತ್ತು ಸೂಕ್ಷ್ಮ ಡೇಟಾದ ದುರುಪಯೋಗ ಸೇರಿದಂತೆ ಗಂಭೀರ ಅಪಾಯಗಳಿವೆ. ಇದು ಖಾಸಗಿ ಸಂಭಾಷಣೆಗಳ ಹಾಗಲ್ಲ. ಚಾಟ್‌ಬಾಟ್‌ಗಳೊಂದಿಗಿನ ಸಂವಹನಗಳು ಗೌಪ್ಯವಾಗಿರುವುದಿಲ್ಲ. ಅವುಗಳನ್ನು ಯಾರೋ ಸಂಗ್ರಹಿಸಬಹುದು, ವಿಶ್ಲೇಷಿಸಬಹುದು ಅಥವಾ ಬಹಿರಂಗಪಡಿಸಬಹುದು. AI ಚಾಟ್‌ಬಾಟ್‌ನೊಂದಿಗೆ ನೀವು ಎಂದಿಗೂ ಹಂಚಿಕೊಳ್ಳಬಾರದ 10 ವಿಷಯಗಳು ಇಲ್ಲಿವೆ.
ಪಾಸ್‌ವರ್ಡ್‌ಗಳು
ನಿಮ್ಮ ಲಾಗಿನ್ ಪಾಸ್‌ವರ್ಡ್‌ಗಳನ್ನು ಚಾಟ್‌ಜಿಪಿಟಿ, ಗ್ರೋಕ್, ಜೆಮಿನಿ ಸೇರಿದಂತೆ ಯಾವುದೇ ಚಾಟ್‌ಬಾಟ್ ಜೊತೆ ಎಂದಿಗೂ ಹಂಚಿಕೊಳ್ಳಬಾರದು. ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳುವುದು ನಿಮ್ಮ ಬ್ಯಾಂಕಿಂಗ್, ಇಮೇಲ್ ಅಥವಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಹಿರಂಗಪಡಿಸುವ ಅಪಾಯವನ್ನುಂಟುಮಾಡುತ್ತದೆ. ಬದಲಿಗೆ ಸುರಕ್ಷಿತ ಪಾಸ್‌ವರ್ಡ್ ನಿರ್ವಾಹಕರನ್ನು ಬಳಸಲು ಸೈಬರ್ ಭದ್ರತಾ ತಜ್ಞರು ಸಲಹೆ ನೀಡುತ್ತಾರೆ.
ಹಣಕಾಸಿನ ವಿವರಗಳು
ಬ್ಯಾಂಕ್ ಖಾತೆ ಸಂಖ್ಯೆಗಳು, ಕ್ರೆಡಿಟ್ ಕಾರ್ಡ್ ಮಾಹಿತಿ, ಅಥವಾ ಸಾಮಾಜಿಕ ಭದ್ರತಾ ಸಂಖ್ಯೆಗಳಂತಹ ಸರ್ಕಾರಿ ಐಡಿಗಳನ್ನು ಎಂದಿಗೂ ಹಂಚಿಕೊಳ್ಳಬಾರದು. ಅಂತಹ ಡೇಟಾವನ್ನು ಅದರ ಮೂಲಕ ಬ್ಲಾಕ್ ಮಾಡಬಹುದು, ಸಂಗ್ರಹಿಸಬಹುದು ಅಥವಾ ದುರುಪಯೋಗಪಡಿಸಿಕೊಳ್ಳಬಹುದು. ಇದು ನಿಮ್ಮನ್ನು ವಂಚನೆ ಮತ್ತು ಕಳ್ಳತನಕ್ಕೆ ಈಡುಮಾಡಬಹುದು. ಹಣಕಾಸಿನ ಮಾಹಿತಿಗಾಗಿ ಯಾವಾಗಲೂ ಸುರಕ್ಷಿತ, ಅಧಿಕೃತ ಚಾನಲ್‌ಗಳನ್ನು ಬಳಸಿ.
ಸೂಕ್ಷ್ಮ ಚಿತ್ರಗಳು ಅಥವಾ ದಾಖಲೆಗಳು
ಐಡಿಗಳು, ಪಾಸ್‌ಪೋರ್ಟ್‌ಗಳು, ಚಾಲನಾ ಪರವಾನಗಿಗಳು ಅಥವಾ ಖಾಸಗಿ ಫೋಟೋಗಳನ್ನು ಅಪ್‌ಲೋಡ್ ಮಾಡುವುದು ಅಸುರಕ್ಷಿತ. ಅಳಿಸಿದರೂ ಸಹ, ಡಿಜಿಟಲ್ ಕುರುಹುಗಳು ಉಳಿಯಬಹುದು, ಇದು ನಿಮ್ಮನ್ನು ಹ್ಯಾಕಿಂಗ್, ಕಳ್ಳತನ ಅಥವಾ ದುರುಪಯೋಗಕ್ಕೆ ಒಡ್ಡಿಕೊಳ್ಳುತ್ತದೆ. ಸೂಕ್ಷ್ಮ ಫೈಲ್‌ಗಳನ್ನು AI ಚಾಟ್‌ಗಳಲ್ಲಿ ಅಲ್ಲ, ಸುರಕ್ಷಿತ ಸಂಗ್ರಹದಲ್ಲಿ ಇರಿಸಿ.
ಕೆಲಸಕ್ಕೆ ಸಂಬಂಧಿಸಿದ ಗೌಪ್ಯ ಡೇಟಾ
ನಿಮ್ಮ ಕಂಪನಿಗಳ ಆಂತರಿಕ ವರದಿಗಳು, ತಂತ್ರಗಳು ಅಥವಾ ವ್ಯಾಪಾರ ರಹಸ್ಯಗಳನ್ನು AI ವ್ಯವಸ್ಥೆಗಳಲ್ಲಿ ಪೇಸ್ಟ್ ಮಾಡುವುದು ಅಪಾಯಕರ. ಈ ಇನ್‌ಪುಟ್‌ಗಳನ್ನು ಕೆಲವೊಮ್ಮೆ ಮಾದರಿಗಳಿಗೆ ತರಬೇತಿ ನೀಡಲು ಬಳಸಬಹುದು. ಆದರೆ ಸೋರಿಕೆಯ ಸಾಧ್ಯತೆ ಹೆಚ್ಚು. ಗೌಪ್ಯ ಕೆಲಸದ ಮಾಹಿತಿಯನ್ನು ಹಂಚಿಕೊಳ್ಳುವುದು ಕಾರ್ಪೊರೇಟ್ ಭದ್ರತೆಗೆ ಧಕ್ಕೆ ತರಬಹುದು.
ಕಾನೂನು ಸಮಸ್ಯೆಗಳು
ಚಾಟ್‌ಬಾಟ್‌ಗಳು ವಕೀಲರಿಗೆ ಪರ್ಯಾಯ ಅಲ್ಲ. ಅಗ್ರಿಮೆಂಟ್‌ಗಳು, ತಗಾದೆಗಳು ಅಥವಾ ಮೊಕದ್ದಮೆಗಳ ಬಗ್ಗೆ ವಿವರಗಳನ್ನು ಹಂಚಿಕೊಂಡರೆ ಹಾನಿಕಾರಕ ಪರಿಣಾಮಗಳಿಗೆ ಕಾರಣವಾಗಬಹುದು. ಈ ಕ್ಷೇತ್ರದಲ್ಲಿ AI ಸಲಹೆಯು ಹೆಚ್ಚಾಗಿ ಅಪೂರ್ಣ ಅಥವಾ ದಾರಿ ತಪ್ಪಿಸುವಂತಿರುತ್ತದೆ.
ಆರೋಗ್ಯ ಅಥವಾ ವೈದ್ಯಕೀಯ ಮಾಹಿತಿ
ಅನಾರೋಗ್ಯ ಲಕ್ಷಣಗಳು ಅಥವಾ ಚಿಕಿತ್ಸೆಗಳ ಬಗ್ಗೆ ಚಾಟ್‌ಬಾಟ್‌ಗಳನ್ನು ಕೇಳುವುದು ತಪ್ಪು ಮಾಹಿತಿಗೆ ಕಾರಣವಾಗಬಹುದು. ಪ್ರಿಸ್ಕ್ರಿಪ್ಷನ್‌ಗಳು ಅಥವಾ ದಾಖಲೆಗಳಂತಹ ವೈಯಕ್ತಿಕ ಆರೋಗ್ಯ ಡೇಟಾ ಹಂಚಿಕೊಂಡು ಅದು ಸೋರಿಕೆಯಾದರೆ ಅಪಾಯ ಉಂಟುಮಾಡುತ್ತದೆ. ವೈದ್ಯಕೀಯ ಸಲಹೆಗಾಗಿ ಯಾವಾಗಲೂ ಪರವಾನಗಿ ಪಡೆದ ವೈದ್ಯರನ್ನು ಸಂಪರ್ಕಿಸಿ.
ವೈಯಕ್ತಿಕ ಮಾಹಿತಿ
ನಿಮ್ಮ ಪೂರ್ಣ ಹೆಸರು, ವಿಳಾಸ, ಫೋನ್ ಸಂಖ್ಯೆ ಅಥವಾ ಇಮೇಲ್ ವಿವರ ನೀಡುವುದು ನಿರುಪದ್ರವಿ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಇವನ್ನೆಲ್ಲ ಒಟ್ಟುಗೂಡಿಸಿದರೆ, ಈ ವಿವರಗಳು ನಿಮ್ಮ ಗುರುತನ್ನು ಬಹಿರಂಗಪಡಿಸಬಹುದು. ಇದು ನಿಮ್ಮನ್ನು ಆನ್‌ಲೈನ್ ವಂಚನೆ, ಫಿಶಿಂಗ್, ಹ್ಯಾಕಿಂಗ್ ಅಥವಾ ಡಿಜಿಟಲ್ ಆರೆಸ್ಟ್‌ಗೆ ಗುರಿಯಾಗಿಸುತ್ತದೆ. ಚಾಟ್‌ಬಾಟ್‌ಗಳು ನಿಮ್ಮ ಖಾಸಗಿತನವನ್ನು ಖಾತರಿಪಡಿಸುವುದಿಲ್ಲ, ಆದ್ದರಿಂದ ಇದನ್ನು ಖಾಸಗಿಯಾಗಿ ಇಟ್ಟುಕೊಳ್ಳುವುದು ಅತ್ಯಗತ್ಯ.
ರಹಸ್ಯಗಳು ಅಥವಾ ತಪ್ಪೊಪ್ಪಿಗೆಗಳು
ಈ ವಿಷಯಗಳಲ್ಲಿ ಚಾಟ್‌ಬಾಟ್‌ಗೆ ಹೋಗುವುದು ಸುರಕ್ಷಿತವೆಂದು ಭಾವಿಸಬಹುದಾದರೂ, AI ನಲ್ಲಿ ಟೈಪ್ ಮಾಡಲಾದ ಯಾವುದೂ ನಿಜವಾಗಿಯೂ ಖಾಸಗಿಯಲ್ಲ. ವೈಯಕ್ತಿಕ ರಹಸ್ಯಗಳನ್ನು ಅನಿರೀಕ್ಷಿತ ರೀತಿಯಲ್ಲಿ ಲಾಗ್ ಮಾಡಬಹುದು ಅಥವಾ ಮರುಕಳಿಸಬಹುದು. ಆಪ್ತಮಿತ್ರ ಅಥವಾ ಚಿಕಿತ್ಸಕನಂತಲ್ಲದೆ, AI ಗೌಪ್ಯತೆಯನ್ನು ಖಾತರಿಪಡಿಸುವುದಿಲ್ಲ.
ಲೈಂಗಿಕ ಅಥವಾ ಅನುಚಿತ ವಿಷಯ
ಲೈಂಗಿಕ ವಿಷಯ, ಆಕ್ಷೇಪಾರ್ಹ ಹೇಳಿಕೆಗಳು ಅಥವಾ ಕಾನೂನುಬಾಹಿರ ವಿಷಯವನ್ನು ಫ್ಲ್ಯಾಗ್ ಮಾಡಬಹುದು ಅಥವಾ ನಿರ್ಬಂಧಿಸಬಹುದು. ಆದರೆ ಅದರ ಕುರುಹುಗಳು ಸಿಸ್ಟಮ್ ಲಾಗ್‌ಗಳಲ್ಲಿ ಉಳಿಯಬಹುದು. ಅಂತಹ ಚಟುವಟಿಕೆಯು ನಿಮ್ಮ ಖಾತೆಯನ್ನು ಅಮಾನತುಗೊಳಿಸುವ, ಸೂಕ್ಷ್ಮ ವಿಷಯದ ಸಂಭಾವ್ಯ ಬಹಿರಂಗಪಡಿಸುವಿಕೆಯ ಅಪಾಯವನ್ನುಂಟುಮಾಡುತ್ತದೆ.
ನೀವು ಸಾರ್ವಜನಿಕಗೊಳಿಸಲು ಬಯಸದ ಸಂಗತಿ
ಗೋಲ್ಡನ್ ರೂಲ್ ಅಂದರೆ, ನೀವು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲು ಬಯಸದ ಯಾವುದೇ ಸಂಗತಿಯನ್ನು AIನೊಂದಿಗೆ ಹಂಚಿಕೊಳ್ಳಬೇಡಿ. ಸಾಂದರ್ಭಿಕ ಕಾಮೆಂಟ್‌ಗಳನ್ನು ಸಹ ಲಾಗ್ ಮಾಡಬಹುದು ಮತ್ತು ನಿಮ್ಮ ನಿಯಂತ್ರಣ ಮೀರಿ ಮತ್ತೆ ಕಾಣಿಸಿಕೊಳ್ಳಬಹುದು. ಚಾಟ್‌ಬಾಟ್ ಸಂವಹನಗಳನ್ನು ಒಂದು ದಿನ ಸಾರ್ವಜನಿಕಗೊಳಿಸಬಹುದು ಎಂಬಂತೆ ಯಾವಾಗಲೂ ಪರಿಗಣಿಸಿ.


