Goa trip places: ಅನೇಕರಿಗೆ ಪ್ರವಾಸ ಹೋಗೋದು ಅಂದ್ರೆ ತುಂಬ ಇಷ್ಟ. ಇನ್ನೂ ಕೆಲವರಿಗೆ ಗೋವಾ ಪ್ರವಾಸಕ್ಕೆ ಹೋಗಲು ತುಂಬ ಹಣ ಬೇಕಾಗುವುದು ಎಂಬ ಆಲೋಚನೆ ಇರಬಹುದು, ಅಷ್ಟೆಲ್ಲ ಖರ್ಚು ಆಗೋದಿಲ್ಲ. ಹಾಗಾದರೆ ಏನೇನು ಟಿಪ್ಸ್‌ ಪಾಲಿಸಬೇಕು?

ಅನೇಕರು ಗೋವಾ ( Goa trip places ) ಹೋಗಬೇಕು ಎಂದುಕೊಳ್ತಾರೆ. ಅನೇಕರಿಗೆ ಪ್ರವಾಸ ಮಾಡಬೇಕು ಎನ್ನೋದು ಸುಂದರ ಕನಸು ಆಗಿರುತ್ತದೆ. ಒಂದು ಕಡೆ ಬೀಚ್‌, ಇನ್ನೊಂದು ಕಡೆ ರೆಸ್ಟೋರೆಂಟ್‌, ಮತ್ತೊಂದು ಕಡೆ ಮದ್ಯ. ಒಟ್ಟಿನಲ್ಲಿ ಮೋಜು-ಮಸ್ತಿಗೆ ಗೋವಾ ಮಾತ್ರ ಹೆಸರುವಾಸಿ. ಹಾಗಾದರೆ ಗೋವಾ ಪ್ರವಾಸಕ್ಕೆ ಮಿನಿಮಮ್‌ ಎಷ್ಟು ಹಣ ಖರ್ಚು ಆಗುವುದು?

ಗೋವಾ ಪ್ರವಾಸದ ಅಂದಾಜು ವೆಚ್ಚ (Budget)

3 ರಿಂದ 4 ದಿನಗಳ ಪ್ರವಾಸಕ್ಕೆ ಎಷ್ಟು ಖರ್ಚು ಆಗುವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಆದರೆ ನೀವು ಯಾವ ಲೆವೆಲ್‌ಗೆ ಸೌಲಭ್ಯ ಬಯಸ್ತೀರಿ ಎನ್ನೋದರ ಮೇಲೆ ಡಿಪೆಂಡ್‌ ಆಗುವುದು.

ಒಬ್ಬರಿಗೆ ಅಂದಾಜು ವೆಚ್ಚ

ಪ್ರಯಾಣ (ಬಸ್/ಟ್ರೈನ್) ₹1,500 - ₹3,000

ಹೋಟೆಲ್/ಹೋಮ್ ಸ್ಟೇ ₹2,000 - ₹5,000

ಊಟ ತಿಂಡಿ ₹2,500 - ₹5,000

ವಾಹನ ಬಾಡಿಗೆ (ಸ್ಕೂಟರ್/ಕಾರ್) ₹1,500 - ₹2,500

ಒಟ್ಟು ಅಂದಾಜು ₹7,500 - ₹15,000

ಕಡಿಮೆ ಖರ್ಚಿನಲ್ಲಿ ಪ್ರವಾಸ ಮುಗಿಸಬೇಕು ಎಂಬ ಯೋಚನೆಯಿದ್ದ ಜೂನ್‌ನಿಂದ ಸೆಪ್ಟೆಂಬರ್ ಒಳಗಡೆ ಹೋಗಿ ಬನ್ನಿ, ಸೀಸನ್‌ ಟೈಮ್‌ನಲ್ಲಿ ಎಲ್ಲ ಖರ್ಚು ಜಾಸ್ತಿ ಆಗಿರುತ್ತದೆ.

ನೋಡಲೇಬೇಕಾದ ಪ್ರಮುಖ ಸ್ಥಳಗಳು

ಕಲಂಗುಟ್ ಮತ್ತು ಬಾಗಾ ಬೀಚ್-ಇಲ್ಲಿ ವಾಟರ್ ಸ್ಪೋರ್ಟ್ಸ್, ನೈಟ್ ಲೈಫ್ ತುಂಬ ಫೇಮಸ್ ಆಗಿದೆ.

ಅಂಜುನಾ ಬೀಚ್- ಇಲ್ಲಿನ ಬುಧವಾರದ ಸಂತೆ (Flea Market) ಪ್ರಸಿದ್ಧ.

ಅಗುಡಾ ಕೋಟೆ (Aguada Fort)-ಸಮುದ್ರದ ಸುಂದರ ನೋಟವನ್ನು ನೋಡಬಹುದು

ಚಪೋರಾ ಕೋಟೆ-ಇದನ್ನು 'ದಿಲ್ ಚಾಹ್ತಾ ಹೈ' ಕೋಟೆ ಎಂದೂ ಕರೆಯುತ್ತಾರೆ.

ಪಾಲೋಲೆಮ್ ಬೀಚ್- ತುಂಬಾ ಶಾಂತವಾಗಿರುವ ಜಾಗ ಇದಾಗಿದೆ.

ಕೋಲ್ವಾ ಬೀಚ್- ಬಿಳಿ ಮರಳಿನ ಸುಂದರ ತೀರವಾಗಿದೆ

ದೂದ್ ಸಾಗರ್ ಜಲಪಾತ-ಹಾಲಿನಂತೆ ಕಾಣುವ ಜಲಪಾತವನ್ನು ನೋಡಲು ಟ್ರೆಕ್ಕಿಂಗ್ ಅಥವಾ ಜೀಪ್ ಸಫಾರಿ ಮಾಡಬೇಕು.

ಐತಿಹಾಸಿಕ ಸ್ಥಳಗಳು

ಬೆಸಿಲಿಕಾ ಆಫ್ ಬಾಮ್ ಜೀಸಸ್- ಇದು ಯುನೆಸ್ಕೋ ಮಾನ್ಯತೆ ಪಡೆದ ಪುರಾತನ ಚರ್ಚ್.

ಮಂಗೇಶಿ ದೇವಸ್ಥಾನ-ಗೋವಾದ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಒಂದು.

ಈ ಟಿಪ್ಸ್‌ ಫಾಲೋ ಮಾಡಿ

ವಾಹನ ಬಾಡಿಗೆ

ಗೋವಾದಲ್ಲಿ ಓಡಾಡಲು ಸ್ಕೂಟರ್ ಬಾಡಿಗೆಗೆ ಪಡೆಯುವುದು ಅತ್ಯಂತ ಲಾಭದಾಯಕ. ದಿನಕ್ಕೆ ₹400 ರಿಂದ ₹600 ರವರೆಗೆ ಬಾಡಿಗೆ ಇರುತ್ತದೆ.

ಗೋವಾ ಬಿಸಿಲು ಹೆಚ್ಚಿರುವುದರಿಂದ ಸನ್ ಸ್ಕ್ರೀನ್ ಹಚ್ಚಿಕೊಳ್ಳಿ, ಹಗುರವಾದ ಕಾಟನ್ ಬಟ್ಟೆ ಹಾಕಿಕೊಳ್ಳಿ