ಜಯದೇವ್ ಲೇಆಫ್ ಮಾಡಿದ್ದನ್ನು ತಿಳಿದ ಗೌತಮ್, ಕೆಲಸ ಕಳೆದುಕೊಂಡವರಿಗೆ ಬೋನಸ್ ಕೊಡಲು ಆದೇಶಿಸಿದ್ದಾನೆ. ಆನಂದ್ ಜೊತೆಗಿನ ಗೆಳೆತನಕ್ಕೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಭೂಮಿಕಾಳ ಮೇಕಪ್ ಟೀಕೆಗೆ ಗುರಿಯಾಗಿದೆ. ಗೌತಮ್-ಭೂಮಿಕಾ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದು, ಆಸ್ತಿಗಾಗಿ ಷಡ್ಯಂತ್ರಗಳು ನಡೆಯುತ್ತಿವೆ. ಧಾರಾವಾಹಿ ಟಿಆರ್‌ಪಿಯಲ್ಲಿ ಟಾಪ್ 5ರಲ್ಲಿದೆ.

‘ಅಮೃತಧಾರೆ’ ಧಾರಾವಾಹಿಯಲ್ಲಿ ಆನಂದ್‌ ಸೇರಿ ತನ್ನ ವಿರುದ್ಧ ಇದ್ದವರನ್ನೆಲ್ಲ ಜಯದೇವ್‌ ಲೇಆಫ್‌ ಹೆಸರಿನಲ್ಲಿ ಕೆಲಸದಿಂದ ತೆಗೆದು ಹಾಕಿದ್ದನು. ಈಗ ಈ ವಿಷಯ ಎಲ್ಲವೂ ಗೌತಮ್‌ಗೆ ಗೊತ್ತಾಗಿದೆ. “ಎಲ್ಲರೂ ನನ್ನ ಮನೆಯವರೇ. ಲೇಆಫ್‌ ಆಗಿರೋ ವಿಷಯವನ್ನು ನನಗ್ಯಾಕೆ ಹೇಳಲಿಲ್ಲ?” ಎಂದು ಗೌತಮ್‌ ಎಲ್ಲರಿಗೂ ಬೈದಿದ್ದಾನೆ. ಅಧಿಕಾರ ಕೊಟ್ಟ ಮಾತ್ರಕ್ಕೆ ನನಗೆ ಹೇಳದೆ ಯಾಕೆ ಲೇಆಫ್‌ ಮಾಡಿದೆ ಎಂದು ಅವನು ಜಯದೇವ್‌ಗೆ ಬೈದಿದ್ದಾನೆ. ಅಷ್ಟೇ ಅಲ್ಲದೆ ಈ ಕೆಲಸಕ್ಕೆ ಪ್ರಾಯಶ್ತಿತ್ತದ ನೆಪದಲ್ಲಿ ಅವನು ಎಲ್ಲರಿಗೂ ಬೋನಸ್‌ ಕೊಡುವಂತೆ ಹೇಳಿದ್ದಾನೆ. ಹೀಗಿರುವಾಗ ಭೂಮಿಕಾ ಮೇಕಪ್‌ ವೀಕ್ಷಕರಿಗೆ ಕಿರಿಕಿರಿ ಮಾಡಿದೆ.

ಆನಂದ್‌ಗೆ ಕ್ಲಾಸ್‌ ತಗೊಂಡ ಗೌತಮ್!‌ 
ಲೇಆಫ್‌ ಆಗಿರೋ ಗೆಳೆಯ ಆನಂದ್‌ ತನ್ನಿಂದ ದೂರ ಆಗ್ತಿದ್ದಾನೆ, ನನ್ನ ಕಂಪೆನಿ ಬಿಟ್ಟು ವಿದೇಶಕ್ಕೆ ಹೋಗ್ತಾನೆ ಎಂದಾಗ ಗೌತಮ್‌ ತುಂಬ ಬೇಸರ ಮಾಡಿಕೊಂಡಿದ್ದನು. ಇವರಿಬ್ಬರು ದೂರ ಆಗ್ತಿರೋದು ನಿಜಾನಾ ಅಂತ ಕೆಲ ವೀಕ್ಷಕರು ಬೇಸರ ಮಾಡಿಕೊಂಡಿದ್ದರು. ಲೇಆಫ್‌ ವಿಷಯ ಹೇಳದೆ, ಕಂಪೆನಿ ಬಿಟ್ಟು ಹೊರಹೋಗ್ತಿದ್ದ ಗೆಳೆಯನಿಗೆ ಗೌತಮ್‌ ಸರಿಯಾಗಿ ಕ್ಲಾಸ್‌ ತಗೊಂಡಿದ್ದಾನೆ. ಇದನ್ನು ವೀಕ್ಷಕರು ಮೆಚ್ಚಿದ್ದಾರೆ.


ವೀಕ್ಷಕರು ಏನು ಹೇಳಿದ್ರು?
“ಹಾಸ್ಯದ ಅಂತರಂಗದಲ್ಲಿ ಮುಗ್ದವಾಗಿ ಅಡಗಿರುವ ನಲುಮೆಯ ಗೆಳೆತನವಿದು.
ಜನುಮ ಜನುಮದ ಗೆಳೆಯರು ಈ ಸೀರಿಯಲ್ ಅಷ್ಟೇ ಅಲ್ಲ ಇಡೀ ಜೀವನದಲ್ಲಿ ಹೀಗೆ ಇರಬೇಕು ಅನ್ನೋ ಒಂದು ಸಣ್ಣ ಆಸೆ ಅಷ್ಟೇ. ಗುಂಡು ಸರ್, ಆನಂದ್ ಇಬ್ಬರ ಜಗಳದ ಮಧ್ಯದಲ್ಲಿ ಹೋದವರು ಪಾಪದವರು. ಇಂಥ ಗೆಳೆಯರು ಸಿಗಲ್ಲ..ಎಲ್ಲ ಅವರವರ ಸ್ವಾರ್ಥಕ್ಕೆ ಅಷ್ಟೇ. ಈ ಸ್ನೇಹಕ್ಕೆ ಯಾರ ದೃಷ್ಟಿಯೂ ಬೀಳದೆ ಇರಲಿ. ಗೆಳೆತನ ಅನ್ನೋದು ಚೆನ್ನಾಗಿದೆ ಆನಂದ್, ಡುಮ್ಮ ಸರ್‌ ಸೀರಿಯಲ್ ಸೂಪರ್. ಅಯ್ಯೋ ಕೋಳಿ ಜಗಳ ಚೆನ್ನಾಗಿದೆ. ಗೆಳೆತನ ಅಂದ್ರೆ ಏನೂ ಹೇಗಿರಬೇಕು ಅನ್ನೋದು ಇವರಿಬ್ಬರನ್ನು ನೋಡಿದ್ರೇನೇ ಅರ್ಥ ಆಗುತ್ತೆ, ಗೆಳೆತನ ಯಾವಾಗ್ಲೂ ಹಿಂಗೆ ಇದ್ರೆ ಎಷ್ಟು ಚೆನಾಗಿರುತ್ತೆ ಅಲ್ಲವಾ” ಎಂದು ನೆಟ್ಟಿಗರು ಹೇಳಿದ್ದಾರೆ. 

ಭೂಮಿಕಾ ಬಗ್ಗೆ ವೀಕ್ಷಕರ ದೂರು ಏನು?
ಈ ಹಿಂದೆಯೂ ಕೂಡ ಭೂಮಿಕಾಗೆ ಮೇಕಪ್‌ ಜಾಸ್ತಿ ಆಗ್ತಿದೆ ಎಂದು ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದರು. ಈಗ ಮತ್ತೆ ಅವರು ಭೂಮಿಕಾ ಬಗ್ಗೆ ಕಾಮೆಂಟ್‌ ಮಾಡಿದ್ದಾರೆ. “ಭೂಮಿಕಾ ಏನಮ್ಮಾ ಲಿಪ್‌ಸ್ಟಿಕ್ ಈ ರೇಂಜ್‌ಗೆ ಹಾಕೊಂಡಿದೀಯ. ಲಿಪ್‌ಸ್ಟಿಕ್ ಓವರ್ ಆಯ್ತು‌, ಭೂಮಿಕಾ ಲೈಟ್ ಆಗಿ ಇರಲಿ” ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. 

ಧಾರಾವಾಹಿ ಕಥೆ ಏನು?
ಗೌತಮ್‌ ಹಾಗೂ ಭೂಮಿಕಾ ಮದುವೆಯಾಗಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನೊಂದು ಕಡೆ ಗೌತಮ್‌ ಮಲತಾಯಿ ಶಕುಂತಲಾ ಹಾಗೂ ಅವನ ಮಕ್ಕಳು ಇವನ ಆಸ್ತಿ ಹೊಡೆಯಲು ಹೊಂಚು ಹಾಕುತ್ತಿದ್ದಾರೆ. ಅವರಲ್ಲಿ ಜಯದೇವ್‌ ಮುಂಚೂಣಿಯಲ್ಲಿದ್ದಾನೆ. ಇನ್ನೊಂದು ಕಡೆ ಭೂಮಿಕಾ ಇದೆಲ್ಲ ಸತ್ಯವನ್ನು ಬಯಲು ಮಾಡಬೇಕಿದೆ. ಗೌತಮ್‌ ಗೆಳೆಯ ಆನಂದ್‌ ಮಾತ್ರ ಇವರ ಒಳಿತನ್ನೇ ಬಯಸುತ್ತಾನೆ. ಒಟ್ಟಿನಲ್ಲಿ ಗೌತಮ್‌ ರಿಯಲ್‌ ತಾಯಿ ಭಾಗ್ಯ ಏನಾದರೂ ಬಾಯಿ ಬಿಟ್ಟರೆ ಮಾತ್ರ ಇವರೆಲ್ಲ ಜೈಲು ಸೇರೋದು ಪಕ್ಕಾ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಇನ್ನು ಈ ವಾರದ ಟಿಆರ್‌ಪಿಯಲ್ಲಿ ಟಾಪ್‌ 5 ಸ್ಥಾನಗಳಲ್ಲಿ ಈ ಧಾರಾವಾಹಿ ಕೂಡ ಸೇರಿದೆ. 

ಪಾತ್ರಧಾರಿಗಳು
ಗೌತಮ್-ರಾಜೇಶ್‌ ನಟರಂಗ
ಭೂಮಿಕಾ- ಛಾಯಾ ಸಿಂಗ್‌
ಶಕುಂತಲಾ- ವನಿತಾ ವಾಸು
ಆನಂದ್‌- ಆನಂದ್‌