ಜೀ ಕನ್ನಡದ 'ಅಣ್ಣಯ್ಯ' ಧಾರಾವಾಹಿಯು ಅಣ್ಣ-ತಂಗಿಯರ ಬಾಂಧವ್ಯ ಮತ್ತು ಪ್ರೀತಿಯ ಕಥೆ. ನಟ ವಿಕಾಶ್ ಉತ್ತಯ್ಯ ಅವರು 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ, ಇದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ವೃತ್ತಿಯಲ್ಲಿ ವಕೀಲರಾಗಿದ್ದ ವಿಕಾಶ್, ನಟನೆಯ ಆಸಕ್ತಿಯಿಂದ ಚಿತ್ರರಂಗಕ್ಕೆ ಬಂದರು. ಈ ಹಿಂದೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಅಣ್ಣಯ್ಯ ಎಂದ್ರೆ ಸದ್ಯ ಸೀರಿಯಲ್ ಪ್ರೇಮಿಗಳ ಗಮನ ಹರಿಯುವುದು ಜೀ ಕನ್ನಡದ ಸೀರಿಯಲ್ ಮೇಲೆ. ಮಾಕಾಳಮ್ಮನ ಪರಮ ಭಕ್ತ ಈ ಅಣ್ಣಯ್ಯ. ತನ್ನ ನಾಲ್ವರು ತಂಗಿಯರು ಈತನಿಗೆ ಪಂಚ ಪ್ರಾಣ. ನೋವು ನುಂಗಿ ನಗು ಹಂಚುವ ಕ್ಯಾರೆಕ್ಟರ್ ಇವನದ್ದು. ಅದೇ ಇನ್ನೊಂದೆಡೆ, ವಿಷಕಾರೋ ವೀರಭದ್ರನ ಮನೆತನ. ವೀರಭದ್ರನ ಮೊದಲನೇ ಹೆಂಡತಿ ಸೌಭಾಗ್ಯಳ ಮಗಳೇ ಪಾರ್ವತಿ ಉರ್ಫ್ ಪಾರು. ವೃತ್ತಿಯಲ್ಲಿ ವೈದ್ಯೆ. ಅಣ್ಣಯ್ಯನ ಬಾಲ್ಯದ ಲವ್ ಈಕೆ. ಆದರೆ ಶಿಕ್ಷಣವೇ ಎಲ್ಲ ಅಂತಿರೋ ಪಾರ್ವತಿ, ಅದ್ಯಾವುದೋ ಘಳಿಗೆಯಲ್ಲಿ ಶಿವುನ ಮದುವೆಯಾಗ ಬೇಕಾಗಿ ಬರುತ್ತದೆ. ಆದರೆ ಅವಳು ಲವ್ ಮಾಡ್ತಿರೋದೇ ಬೇರೆಯವನನ್ನು. ಕೊನೆಗೆ ಅವನು ಮೋಸಗಾರ ಎಂದು ತಿಳಿಯುತ್ತದೆ. ಈಗ ಪಾರುಗೆ ಶಿವು ಮೇಲೆ ಲವ್ ಶುರುವಾಗಿದೆ. ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ.
ಇನ್ನು ನಟ ವಿಕಾಶ್ ಉತ್ತಯ್ಯ ಅವರ ಕುರಿತು ಹೇಳುವುದಾದರೆ, ಸದ್ಯ ಇವರು, ಅಪಾಯವಿದೆ ಎಚ್ಚರಿಕೆ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಇದೇ 28ರಂದು ಚಿತ್ರ ಬಿಡುಗಡೆಯಾಗಲಿದೆ. ಇನ್ನು ಮೂಲತಃ ಕೊಡಗಿನವರಾಗಿರುವ ವಿಕಾಶ್ ಉತ್ತಯ್ಯ ಅವರು ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ವಕೀಲರಾಗಿ ಕೆಲಸ ಮಾಡುತ್ತಿದ್ದರು. ನಟನೆ ಮೇಲಿನ ಆಸಕ್ತಿಯಿಂದ ಕೆಲಸ ಬಿಟ್ಟು ನಟರಾಗಿದ್ದಾರೆ. ವಿಕಾಶ್ ಉತ್ತಯ್ಯ ಅವರು ಸೀರಿಯಲ್ ಗೆ ಬರುವ ಮುನ್ನ ಕೆಲ ಸಿನಿಮಾಗಳಲ್ಲಿ ಅಭಿನಯಿದ್ದಾರೆ. ಈ ಹಿಂದೆ ಮೇರಿ ಎಂಬ ಸಿನಿಮಾದಲ್ಲಿ ನಟಿಸಿದ್ದ ಇವರು, ಇತ್ತೀಚೆಗೆ 2023ರಲ್ಲಿ ದ್ವಂದ್ವ ದ್ವಯಂ, ಆನೆ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಅಲ್ಲದೇ, ಕನಸಿನ ಮಳೆಯಾದವರು ಎಂಬ ಶಾರ್ಟ್ ಫಿಲ್ಮನಲ್ಲೂ ನಟಿಸಿದ್ದಾರೆ.
ಅಣ್ಣಯ್ಯನ ಮೇಲೆ ಪಾರುಗೆ ಈಗಷ್ಟೇ ಶುರುವಾಗಿದೆ ಲವ್: ಅಬ್ಬಬ್ಬಾ ಇಲ್ಲಿ ನೋಡಿ ಈ ಪರಿ ರೊಮಾನ್ಸ್...
ಇದೀಗ ಕೀರ್ತಿ ಎಂಟರ್ಟೇನ್ಮೆಂಟ್ ಚಾನೆಲ್ ಜೊತೆ ಮಾತನಾಡಿದ ವಿಕಾಶ್ ಅವರು ತಮ್ಮ ಜೀವನದ ಕೆಲವು ವಿಷಯ ಹಾಗೂ ಅಪಾಯವಿದೆ ಎಚ್ಚರಿಕೆಯ ಬಗ್ಗೆ ಮಾತನಾಡಿದ್ದೇನೆ. ಅಷ್ಟಕ್ಕು ವಿಕಾಶ್ ಅವರು, ಕೆಲ ದಿನಗಳ ಹಿಂದೆ ನಾನು ಲವ್ನಲ್ಲಿ ಬಿದ್ದಿದ್ದೇನೆ, ಅವಳಿಗೆ ಹೇಳುವ ಮುನ್ನ ನಿಮಗೆ ಹೇಳುತ್ತೇನೆ ಎಂದು ವಿಡಿಯೋ ಹರಿಬಿಟ್ಟು ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಆ ಹೆಸರನ್ನು ಕಲ್ಪನೆ ಮಾಡಿಕೊಂಡು ವಿಡಿಯೋಗಳೆಲ್ಲಾ ಹರಿದಾಡಿಬಿಟ್ಟಿದ್ದವು. ಆ ಹುಡುಗಿ ಇವಳೇ ಇರಬೇಕು ಎಂದು ಯಾರದ್ಯಾರದ್ದೋ ಫೋಟೋ ಹಾಕಿಬಿಟ್ಟಿದ್ದರು. ಇದರಿಂದ ನಟ ಕೈಲಾಶ್ ಫುಲ್ ಸುಸ್ತಾಗಿ ಹೋದ್ರಂತೆ. ಇದೀಗ ಕೀರ್ತಿ ಅವರು ನಿಮಗೆ ಲವ್ ಆಗಿದ್ಯಾ ಕೇಳಿದಾಗ ಹೌದು ಎಂದಿದ್ದಾರೆ. ಯಾರ ಮೇಲೆ ಎಂದಾಗ ಅಪಾಯವಿದೆ ಎಚ್ಚರಿಕೆ ಮೇಲೆ ಎಂದಿದ್ದಾರೆ. ಮೋಸ್ಟ್ ಎಲಿಜಿಬಲ್ ಬ್ಯಾಚಲರ್ಗೆ ಯಾರ ಮೇಲೆ ಕ್ರಷ್ ಆಗಿದೆ ಎಂದು ತಿಳಿದುಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರೆ, ಈಗ ಹೀಗೆ ಹೇಳುವ ಭಾರಿ ನಿರಾಸೆ ಮೂಡಿಸಿದ್ದಾರೆ.
ಕೊಡಗಿನವರಾಗಿರುವ ವಿಕಾಶ್, ವಕೀಲರಾಗಿ ಕೆಲಸ ಮಾಡುತ್ತಿದ್ದರು. ನಟನೆ ಮೇಲಿನ ಆಸಕ್ತಿಯಿಂದ ಬಣ್ಣದ ಲೋಕ ಆರಿಸಿಕೊಂಡಿದ್ದಾರೆ. ಇದಾಗಲೇ ಕೆಲವು ಸೀರಿಯಲ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೇರಿ ಎಂಬ ಸಿನಿಮಾದಲ್ಲಿಯೂ ನಟಿಸಿದ್ದರು. 2023ರಲ್ಲಿ ದ್ವಂದ್ವ ದ್ವಯಂ, ಆನೆ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿರುವ ಇವರು, ಕನಸಿನ ಮಳೆಯಾದವರು ಎಂಬ ಶಾರ್ಟ್ ಫಿಲ್ಮನಲ್ಲೂ ನಟಿಸಿದ್ದಾರೆ. ಅಪಾಯವಿದೆ ಎಚ್ಚರಿಕೆಯಲ್ಲಿ ವಿಕಾಶ್ ಜೊತೆಯಾಗಿ ಅಮೃತಧಾರೆಯ ಮಲ್ಲಿ ಅಂದ್ರೆ ನಟಿ ರಾಧಾ ಭಾಗವತಿ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಮಂಜುನಾಥ್ ವಿ ಜಿ ಹಾಗೂ ಪೂರ್ಣಿಮಾ ಗೌಡ ಅವರು ಹಣ ಹೂಡಿದ್ದಾರೆ. ಸುನಾದ್ ಗೌತಮ್ ಅವರ ಸಂಗೀತ ಈ ಚಿತ್ರಕ್ಕಿದೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದೆ.
ಯುಕೆಜಿಯಲ್ಲೇ ಪ್ರಪೋಸ್ ಮಾಡಿದ್ದ... ಏಣಿ ಹತ್ತಿ ತಾಳಿ ಕಟ್ಟೋ ಹಾಗಿದ್ದ... ನಟಿ ನೇಹಾ ಗೌಡ ಲವ್ ಸ್ಟೋರಿ ಕೇಳಿ..

