ಕಿರುತೆರೆ ನಿರೂಪಕಿ ಅನುಶ್ರೀ ಅವರ ಮದುವೆ ಸಂಭ್ರಮದ ನಡುವೆ ಅಭಿಮಾನಿಯೊಬ್ಬರ ವಿಶಿಷ್ಟ ಶುಭಾಶಯ ವೈರಲ್ ಆಗಿದೆ. ಅನುಶ್ರೀ ಅವರನ್ನು ಮದುವೆಯ ಫೋಟೋ ಪ್ರಿಂಟ್ ಮಾಡಿಸಿ ಶುಭ ಕೋರಿದ ಅಭಿಮಾನಿಯ ನಡೆಗೆ ಅನುಶ್ರೀ ಭಾವುಕರಾಗಿ ಧನ್ಯವಾದ ತಿಳಿಸಿದ್ದಾರೆ.
ಬೆಂಗಳೂರು (ಸೆ.1): ಕನ್ನಡದ ಪ್ರಖ್ಯಾತ ನಿರೂಪಕಿ ಅನುಶ್ರೀ ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರೋಶನ್ ರಾಮಮೂರ್ತಿ ಅವರೊಂದಿಗೆ ಸಪ್ತಪದಿ ತುಳಿದ ಅನುಶ್ರೀ ಈಗ ಕಿರುತೆರೆಗೆ ಮರಳಲು ಸಜ್ಜಾಗಿದ್ದಾರೆ. ಮದುವೆಯ ದಿನವೇ ನಡೆದ ಸುದ್ದಿಗೋಷ್ಠಿಯಲ್ಲಿ ಒಂದೆರಡು ದಿನಗಳ ಬಳಿಕ ಕೆಲಸಕ್ಕೆ ಮರಳುವುದಾಗಿ ಹೇಳಿದ್ದರು. ಕನಕಪುರದ ಖಾಸಗಿ ರೆಸಾರ್ಟ್‌ನಲ್ಲಿ ಎರಡು ದಿನಗಳ ಕಾಲ ನಡೆದ ಮದುವೆ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು, ಅನುಶ್ರೀ ಅವರ ಆಪ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮದುವೆ ಬೆನ್ನಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಅನುಶ್ರೀ ಹಳದಿ ಶಾಸ್ತ್ರ ಹಾಗೂ ಮದುವೆ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಮದುವೆಗೆ ವಿಶ್ ಮಾಡಿದ್ದ ಅಭಿಮಾನಿ
ಇದರ ನಡುವೆ ಅನುಶ್ರೀ ಇನ್ಸ್‌ಟಾಗ್ರಾಮ್‌ನ ಅಕೌಂಟ್‌ವೊಂದಕ್ಕೆ ಮಾಡಿರುವ ಕಾಮೆಂಟ್ಸ್ ಸಖತ್ ವೈರಲ್ ಆಗುತ್ತಿದೆ. ಮೂರು ದಿನಗಳ ಹಿಂದೆ ಮಹೇಶ್ ನಾಯಕ್ ಎನ್ನುವ ವ್ಯಕ್ತಿ ಇನ್ಸ್‌ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಮಾಡಿ ಅನುಶ್ರೀ ಅವರ ಮದುವೆಗೆ ಶುಭ ಕೋರಿದ್ದರು. ಅನುಶ್ರೀ ಹಾಗೂ ರೋಶನ್ ಅವರ ಮದುವೆಯ ಚಿತ್ರವನ್ನು ಪ್ರಿಂಟ್ ಮಾಡಿಸಿ ಅದರ ಕೆಳಗೆ, 'ಸರಿಯಾದ ವ್ಯಕ್ತಿ ಜೀವನದಲ್ಲಿ ಯಾವಾಗಲೂ ತಡವಾಗಿಯೇ ಸಿಗುತ್ತಾರೆ..' ಎಂದು ಬರೆದು ಹಾರ್ಟ್ ಸಿಂಬಲ್ ಇಮೋಜಿ ಪ್ರಿಂಟ್ ಮಾಡಿಸಿದ್ದರು. ಈ ಹಾಳೆಯನ್ನುರಸ್ತೆಯ ಪಕ್ಕದ ವಿದ್ಯುತ್ ಕಂಬದ ಮೇಲೆ ಅಂಟಿಸಿ ರೀಲ್ಸ್ ಮಾಡಿದ್ದರು. ಇದಕ್ಕೆ ನಿಮ್ಮ ವೈವಾಹಿಕ ಜೀವನ ಶುಭವಾಗಲಿ ಎಂದು ಪೋಸ್ಟ್ ಮಾಡಿದ್ದರು.
ಖುಷಿಯಾದ ಅನುಶ್ರೀಯಿಂದ ಕಾಮೆಂಟ್
ಮದುವೆ ನಂತರದ ಶಾಸ್ತ್ರಗಳಲ್ಲಿ ಬ್ಯುಸಿ ಇದ್ದ ನಡುವೆಯೂ ಅನುಶ್ರೀ ಅಭಿಮಾನಿಯ ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ. 'ಮಹೇಶ್ ನಾಯಕ್ ಸರ್ ಬರೀ ನೆಗೆಟಿವ್ ಕಾಮೆಂಟ್ಸ್ ಮತ್ತು ಪೋಸ್ಟ್ ಮಾಡೋ ಯುಗದಲ್ಲಿ ಎಷ್ಟು ಸುಂದರವಾಗಿ ಮನಸ್ಸಾರೆ ಹಾರೈಸಿದ್ದಕ್ಕೆ ಧನ್ಯವಾದಗಳು. ನಿಮ್ಮಂತ ಉತ್ತಮ ಹೃದಯದವರು ಇರಬೇಕು' ಎಂದು ನಮಸ್ಕಾರದ ಇಮೋಜಿ ಹಾಕಿ ಕಾಮೆಂಟ್ ಮಾಡಿದ್ದಾರೆ.
ಅನುಶ್ರೀ ಅವರ ಮಾತಿಗೆ ನೂರಾರು ಮಂದಿ ಸಹಮತ ವ್ಯಕ್ತಪಡಿಸಿದ್ದಾರೆ. 'ಇದು ಅಕ್ಷರಶಃ ಸತ್ಯವಾದ ಮಾತು ಅಕ್ಕ' ಎಂದು ಒಬ್ಬರು ಬರೆದಿದ್ದಾರೆ. 'ನಿಜವಾಗ್ಲೂ ಒಳ್ಳೆಯವರಿಗೆ ಒಳ್ಳೇದೇ ಆಗೋದು ಅಕ್ಕ ನೂರು ಕಾಲ ಸಂತೋಷದಿಂದ ಇರಿ' ಎಂದು ಮತ್ತೊಬ್ಬರು ಬರೆದಿದ್ದಾರೆ. 'ನಿಧಾನವಾದರೂ ಸರಿ ಅನುಶ್ರೀ ಮೇಡಂ ನಮ್ಮನ್ನ ಮನಸಾರೆ ಅರ್ಥ ಮಾಡ್ಕೊಳೋ ಅಂತ ಬಾಳಸಂಗಾತಿ ಸಿಗ್ಬೇಕು. ನಿಮಗೆ ಸಿಕ್ಕಿದ್ದಾರೆ. .ಅಭಿನಂದನೆಗಳು. ಒಳ್ಳೇದಾಗ್ಲಿ' ಎಂದು ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ.
ಮದುವೆಗೆ ಹಲವರ ಶುಭಹಾರೈಕೆ
'ಅಪ್ಪ ಇಲ್ಲದೆ ಇದ್ರು ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಸಮಾಜದಲ್ಲಿ ಒಂದೊಳ್ಳೆ ಸ್ಥಾನಮಾನ ಗಳಿಸಿ ಇಷ್ಟು ಎತ್ತರಕ್ಕೆ ಬೆಳೆದು ನಿಂತ ಅನುಶ್ರೀ ಧೈರ್ಯವನ್ನು ಮೆಚ್ಚಲೇಬೇಕು. ಇವತ್ತು ರೋಷನ್ ಜೊತೆ ಹಸೆಮಣೆ ಏರಿರುವ ಅನುಶ್ರೀ ಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತಾ ನವ ದಂಪತಿಗಳು ನೂರ್ಕಾಲ ಅರ್ಥಪೂರ್ಣವಾಗಿ ಬದುಕಲಿ ಎಂದು ಆಶಿಸೋಣ. ಆಲ್ ದಿ ಬೆಸ್ಟ್ ಅನುಶ್ರೀ' ಎಂದು ಮತ್ತೊಬ್ಬರು ನಟಿಗೆ ಹಾರೈಸಿದ್ದಾರೆ.


