ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ ಮತ್ತು ಕಾವ್ಯ ಕೇವಲ ಸ್ನೇಹಿತರು ಎನ್ನುತ್ತಲೇ ಬಂದಿದ್ದಾರೆ. ಆದರೆ ಇತ್ತೀಚೆಗೆ ನಡೆದ ಹಂಪಿ ಉತ್ಸವದಲ್ಲಿ, ಗಿಲ್ಲಿ ಮದುವೆಯ 'ಮುಯ್ಯಿ' ಬಗ್ಗೆ ಮಾತನಾಡಿದ್ದು, ಇವರಿಬ್ಬರ ಮದುವೆ ಗಾಸಿಪ್‌ಗೆ ಮತ್ತಷ್ಟು ಪುಷ್ಟಿ ನೀಡಿದೆ.

ಗಿಲ್ಲಿ ನಟ ಮತ್ತು ಕಾವ್ಯ ಜೋಡಿ ಮದುವೆ ಆಗುತ್ತಾರಾ? ಆಗ್ಲಿ ಅನ್ನೋ ಆಸೆ ಇಬ್ಬರ ಅಭಿಮಾನಿ ಬಳಗದಲ್ಲೂ ಇದೆ. ಆದ್ರೆ ಗಿಲ್ಲಿ ಕಾವ್ಯ ಮಾತ್ರ ನಾವಿಬ್ರು ಫ್ರೆಂಡ್ಸ್​​ ಅಷ್ಟೆ. ಮುಂದೇನಾಗುತ್ತೋ ಗೊತ್ತಿಲ್ಲ ಅಂತ ಹೇಳ್ಬಿಟ್ಟಿದ್ದಾರೆ. ಆದ್ರೆ ಹಂಪಿ ಉತ್ಸವದಲ್ಲಿ ಗಿಲ್ಲಿ ಕಾವು ಮ್ಯಾರೇಜ್​ ಮ್ಯಾಟರ್​ ಬಗ್ಗೆ ಹೊಸದೊಂದು ಗುಟ್ಟನ್ನ ಬಿಟ್ಟುಕೊಟ್ಟಿದ್ದಾರೆ. ಅದೇನು ಅಂತ ನೋಡೋಣ ಬನ್ನಿ.

ನನಗೆ ಹೆಚ್ಚು ಮುಯ್ಯಿ, ಬಿದ್ದೇ ಬಿಟ್ಲಾ ಕಾವೂ?

ಕಾವೂ, ಕಾವೂ ಅಂತ ದೊಡ್ಮನೆಯಲ್ಲಿ ಕಾಲೆಳೆಯುತ್ತಾ. ಇರಿಟೇಟ್​ ಮಾಡ್ಬೇಡ ಗಿಲ್ಲಿ ಅಂತ ಕೋಳಿ ಜಗಳ ಆಡ್ತಾ ಇದ್ದ ಗಿಲ್ಲಿ-ಕಾವ್ಯ, ಜೋಡಿ ಆಗ್ಲಿ ಅಂತ ಅಂದವ್ರೇ ಹೆಚ್ಚು. ನಮ್​ ಗಿಲ್ಲಿಗೆ ಕಾವ್ಯ ಒಳ್ಳೆ ಪಾರ್ಟನರ್​ ಈಡು-ಜೋಡು ಸಂದಾಗದೇ. ಒಳ್ಳೆ ಮುಹೂರ್ತ, ಟೈಮ್,​ ಘಳಿಗೆ ನೋಡ್ಕೊಂಡ್​ ವಾಲ್ಗಾ ಊದಿಸಿಬೋಡೋಣ ಅಂತ ನಮ್​ ಮಂಡ್ಯ ಹೈಕ್ಳು ಸ್ಕೆಚ್​ ಹಾಕ್ಕೋಂಡ್​ ಇದ್ರು. ಆದ್ರೆ ಇಲ್ಲ ಇಲ್ಲ. ನಾವ್​ ಇಬ್ರೂ ಫ್ರೆಂಡ್ಸ್​ ಅಂಥದೇನಿಲ್ಲಾ ಅಂತ ಇಬ್ರು ಹಾಕಿದ್ದ ಕ್ಯಾಸೆಟ್ಟನ್ನೇ ತಿರಗಾ-ಮರಗಾ ಹಾಕ್ತಾ ಇದ್ರು. ಆದ್ರೆ ಈಗ್​ ನೋಡಿದ್ರೆ ಮದ್ವೆ ಮುಯ್ಯಿವರೆಗೂ ಲವ್​ ಟ್ರ್ಯಾಕ್​ ಬಂದ್​ ನಿಂತಿದೆ.

ಗಿಲ್ಲಿ ಪ್ಯಾರ್​ಗೆ ಒಪ್ಕೊಂಡ್​ಬಿಟ್ಲಾ ಕಾವು?

ಏನು ಇಲ್ಲ ಅನ್ಕೊಂಡೇ ಮುಯ್ಯಿ ಬಗ್ಗೆ ಓಪನ್​ ಆಗಿ ಮಾತಾಡ್ತಾ ಇರೋದು, ಅದು ನಮ್​ ಕಾವೂ ಮುಂದೇನೆ. ಇದಕ್ಕೆ ಕಾವ್ಯ ರಿಯಾಕ್ಷನ್​ ಹೇಗಿತ್ತು ಅಂತಾನೂ ನೋಡ್ಬಿಡಿ. ಬಿಗ್​ಬಾಸ್​ ಮುಗಿದ್ಮೇಲೆ ದೊಡ್ಮನೆ ಸ್ಪರ್ಧಿಗಳು ಒಂದಲ್ಲ ಒಂದು ಕಾರ್ಯಕ್ರಮದಲ್ಲಿ, ಪ್ರಮೋಷನ್​ನಲ್ಲಿ ಬ್ಯುಸಿ ಆಗಿದ್ದಾರೆ. ನಿಜ ಹೇಳ್ಬೇಕು ಅಂದ್ರೆ ಎಲ್ ನೋಡಿದ್ರೂ ಬಿಗ್​ ಮನೆ ಅವ್ರೇ ಕಾಣಿಸ್ತಾ ಇದ್ದಾರೆ.. ಈಗ ಅಂತದ್ದೇ ಒಂದು ಇವೇಂಟ್​ನಲ್ಲಿ ನಮ್​ ಗಿಲ್ಲಿ ಕಾವ್ಯ ಸಮ್ಮಿಲನ ಆಗಿದೆ. ಇಬ್ರು ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ.

ಗಿಲ್ಲಿ ಮಾತನ್ನ ಕೇಳ್ತಾ ಇದ್ರೆ ಕಾವು ದೊಡ್ಡದಾಗೇ ಗ್ರೀನ್​ ಸಿಗ್ನಲ್​ ಕೊಟ್ಟಂಗೆ ಕಾಣಿಸ್ತಾ ಇಲ್ವಾ? ಗಿಲ್ಲೀನ ಹೆಣ್ಣಿನ ಮನೆ ಕಡೆ ಗಂಡಿನ ಮನೆ ಕಡೆ ಅಂತೆಲ್ಲಾ ಮಾತಾಡ್ತಾ ಇದ್ದಾರೆ ಏನಿದು ವಿಷ್ಯ? ಅಂತ ನಿರಂಜನ್​ ಕೇಳಿ, ಗಂಡಿನ ಕಡೆ ಎಷ್ಟು ಜನ? ಹೆಣ್ಣಿನ ಕಡೆ ಎಷ್ಟು ಜನ? ಅಂತ ಕೇಳಿ ಗಿಲ್ಲಿ ಕಾಲ್​ ಎಳಿಯೋ ಕೆಲಸವನ್ನ ನಿರಂಜನ್​ ಮಾಡ್ತಾರೆ. ಆಗ ಗಂಡಿನ ಕಡೆ ಎಷ್ಟು ಜನ ಎಂದಾಗ ಗಿಲ್ಲಿ ಫ್ಯಾನ್ಸ್​ ಕಿಕ್ಕಿರಿದು ಕಿರುಚಿದ್ದಾರೆ. ಆಗ ಗಿಲ್ಲಿ ಸೌಂಡ್​ ಕೇಳಿದ್ರೇ ಮುಯ್ಯಿ ನನಗೆ ಜಾಸ್ತಿ ಅನ್ನೋ ಮಾತನ್ನ ಹೇಳಿದ್ದಾರೆ.

ನಿಲ್ಲದ ಮದ್ವೆ ಗಾಸಿಪ್​, ಸೆಟ್ಟೇರಲಿದೆ ಸಿನಿಮಾ!

ಅಂದ್ಹಾಗೆ ಬಿಗ್​ಬಾಸ್ ಪ್ರತಿ ಸೀಸನ್​ನಲ್ಲೂ ಒಂದಲ್ಲಾ ಒಂದು ಜೋಡಿಗಳು ಫೇಮಸ್​ ಆಗ್ತಾರೆ. ಹೀಗೆ ಫೇಮಸ್​ ಆದ ಜೋಡಿಗಳಲ್ಲಿ ಕೆಲವ್ರು ಸೀರಿಯಸ್​ ಆದ್ರೆ ಇನ್ನು ಕೆಲವರು ಶೋ ಮುಗಿದ ಮೇಲೆ ತಮ್ಮ ದಾರಿ ನೋಡಿಕೊಳ್ತಾರೆ. ಸೀರಿಯಸ್​ ಆಗಿದ್ದು ಮದ್ವೆ ಆಗಿ ಡಿವೋರ್ಸ್​​ ತೆಗೆದುಕೊಂಡ ಜೋಡಿಗಳು ಇವೆ. ಅದೇನೇ ಆದ್ರೂ ಈ ಎಲ್ಲಾ ಜೋಡಿಗಳ ಮಧ್ಯೆ ಗಿಲ್ಲಿ-ಕಾವ್ಯ ಜೋಡಿ ಕೂಡ ಸಖತ್​ ಫೇಮಸ್​ ಆಗಿದ್ದು. ಆಗಿದ್ದಾಗ್ಲಿ ಮದ್ವೆ ಮಾಡ್ಸಿಬಿಡೋಣ ಅಂತ ಫ್ಯಾನ್ಸ್​ ಕಾಯ್ತಾ ಇದ್ದಾರೆ. ಈಗ ಹೋಗ್ತಿರೋ ಸ್ಪೀಡ್​ ನೋಡ್ತಾ ಇದ್ರೆ. ಮುಂದಿನ ದಿನಗಳಲ್ಲಿ ಗುಡ್‌ ನ್ಯೂಸ್​ ಕೋಟ್ರೆ ಅಚ್ಚರಿ ಇಲ್ಲ.

- ವಿನುತ ಪರಮೇಶ್​ ಏಷ್ಯಾನೆಟ್​ ಸುವರ್ಣ ನ್ಯೂಸ್​​