ʼಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2ʼ ಶೋನಲ್ಲಿ ಬುಲೆಟ್‌ ರಕ್ಷಕ್‌ ಆಡಿದ ಮಾತೊಂದು ಕೆಲ ಹಿಂದು ಸಂಘಟನೆಗಳ ಕೋಪಕ್ಕೆ ಗುರಿಯಾಗಿತ್ತು. ಈಗ ರಕ್ಷಕ್‌ ಕ್ಷಮೆ ಕೇಳಿದ್ದಾರೆ.  

ನಟ ದರ್ಶನ್‌ ಅಭಿನಯದ ʼಬುಲ್‌ ಬುಲ್ʼ‌ ಸಿನಿಮಾದ ಡೈಲಾಗ್‌ವೊಂದನ್ನು ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಅವರು ʼಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2ʼ ಶೋನಲ್ಲಿ ಮರುಸೃಷ್ಟಿ ಮಾಡಿದ್ದಾರೆ. ಈ ಡೈಲಾಗ್‌ ಈಗ ಕಾಂಟ್ರವರ್ಸಿ ಸೃಷ್ಟಿಸಿದ್ದು, ಕೊನೆಗೂ ರಕ್ಷಕ್‌ ಕ್ಷಮೆ ಕೇಳಿದ್ದಾರೆ.

ರಕ್ಷಕ್‌ ಹೇಳಿದ್ದೇನು? 
ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ರಕ್ಷಕ್‌ ಬುಲೆಟ್.‌ ಇತ್ತೀಚೆಗೆ ಒಂದು ರಿಯಾಲಿಟಿ ಶೋನಲ್ಲಿ ನಾನು ಒಂದು ಹೆಸರಾಂತ ಚಿತ್ರದ ಡೈಲಾಗ್‌ನ್ನು ಒಂದು ಸ್ಕಿಟ್‌ನಲ್ಲಿ ಹೇಳಿದ್ದೆ. ಅದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನನ್ನ ತಂದೆಯವರಾದ ದಿವಂಗತ ಬುಲೆಟ್‌ ಪ್ರಕಾಶ್‌ ಅವರು, ನನ್ನ ತಾಯಿಯವರು ಹಾಗೂ ಎಲ್ಲ ನಮ್ಮ ಕುಟುಂಬದವರು ಪರಮ ದೈವ ಭಕ್ತರು. ನಮ್ಮ ತಂದೆಯವರಿದ್ದಾಗನಿಂದಲೂ ನಾವು ತಾಯಿ ಚಾಮುಂಡೇಶ್ವರಿಗೆ ಪೂಜೆ ಮಾಡುತ್ತ ನಡೆದುಕೊಂಡು ಬಂದಿದ್ದೇವೆ. ನಾನು ಉದ್ದೇಶಪೂರ್ವಕವಾಗಿ ತಾಯಿ ಚಾಮುಂಡೇಶ್ವರಿಯ ಕುರಿತು ಹೇಳುವಷ್ಟು ದೊಡ್ಡವನಲ್ಲ. ಆ ತಾಯಿಯ ಆಶೀರ್ವಾದದಿಂದ ಬೆಳೆಯುತ್ತಿದ್ದೇನೆ. ನಾನು ಉಆವುದೇ ಕಾರ್ಯ ಪ್ರಾರಂಭಿಸಬೇಕಾದರೆ ಮೊದಲು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ನಂತರ ಕೆಲಸವನ್ನು ಪ್ರಾರಂಭ ಮಾಡುತ್ತೇನೆ. ನಾನು ಭಕ್ತಾದಿಗಳ ಭಾವನೆಗಳಿಗಾಗಲಿ, ಮನಸ್ಸಿಗಾಗಲೀ ನೋವನ್ನು ಉಂಟು ಮಾಡುವ ಕೆಲಸ ಮಾಡುವುದಿಲ್ಲ. ಯಾರಿಗಾದರೂ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಮುಂದೆ ಇಂತಹ ಅಚಾತುರ್ಯ ನಡೆಯುವುದಿಲ್ಲ. 

ಹೆಂಡ್ತಿ ಜೊತೆಯಾಗಿ ಜಾಯಿಂಟ್ ಲೋನ್ ತಗೊಂಡ್ರೆ ಎಷ್ಟೊಂದು ಲಾಭ! 7 ಲಕ್ಷದವರೆಗೆ ಟ್ಯಾಕ್ಸ್ ಉಳಿಸ್ಬಹುದು

ನಿಜಕ್ಕೂ ಏನಾಗಿತ್ತು?
ʼಬುಲ್‌ ಬುಲ್‌ʼ ಸಿನಿಮಾದಲ್ಲಿ ದರ್ಶನ್‌, ರಚಿತಾ ರಾಮ್‌ ಸ್ವಿಜರ್ಲೆಂಡ್‌ನಲ್ಲಿ ಭೇಟಿಯಾಗುತ್ತಾರೆ. ಅಲ್ಲಿ ಅವರಿಬ್ಬರು ಮಾತುಕತೆ ಮಾಡುತ್ತಾರೆ. ಇದೇ ದೃಶ್ಯವನ್ನು ರಕ್ಷಕ್‌ ರೀ ಕ್ರಿಯೇಟ್‌ ಮಾಡಿದ್ದಾರೆ. ರಕ್ಷಕ್‌ ಬುಲೆಟ್‌ ಅವರು ರಿಯಾಲಿಟಿ ಶೋನಲ್ಲಿ ಮಾತನಾಡುತ್ತ, 'ನಾವು ನಿಮ್ಮವರೇ ಕಣ್ರಿ. ಮಂಡ್ಯದವ್ರು. ನಿಮ್ಮನ್ನ ನೋಡ್ತಾ ಇದ್ದ ಹಾಗೇ ಅಂದ್ಕೊಂಡೆ. ತಾಯಿ ಚಾಮುಂಡೇಶ್ವರಿನೇ ಬೆಟ್ಟದಿಂದ ಇಳಿದು, ಸೀರೆ-ಒಡವೆ ಎಲ್ಲ ಬಿಚ್ಚಿಟ್ಟು, ಪ್ಯಾಂಟು-ಶರ್ಟು ಹಾಕ್ಕೊಂಡು ಸ್ವಿಜರ್ಲೆಂಡ್‌ ಅಲ್ಲಿ ಒಳ್ಳೇ ಟ್ರಿಪ್‌ ಹೊಡೀತಾ ಇದ್ದಾರೆ ಅಂತ..' ಎಂದು ಹೇಳಿದ್ದಾರೆ. ʼಬುಲ್‌ ಬುಲ್‌ʼ ಸಿನಿಮಾ ಟೈಮ್‌ನಲ್ಲಿಯೂ ಈ ಡೈಲಾಗ್ ವಿವಾದ ಸೃಷ್ಟಿಸಿತ್ತು.‌ ಅದಾದ ನಂತರದಲ್ಲಿ ರಕ್ಷಕ್‌ ಕೂಡ ಈ ಮಾತು ಹೇಳಿರೋದು ಕೆಲ ಹಿಂದು ಸಂಘಟನೆಗಳ ಕೋಪಕ್ಕೆ ಗುರಿಯಾಗಿದೆ. ಇನ್ನು ರಚಿತಾ ರಾಮ್‌ ಕೂಡ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದಾರೆ. 

‘ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2’ ಶೋನಲ್ಲಿ ರವಿಚಂದ್ರನ್‌, ರಚಿತಾ ರಾಮ್‌ ಅವರು ಜಡ್ಜ್‌ಗಳಾಗಿದ್ದಾರೆ. ನಿರಂಜನ್‌ ದೇಶಪಾಂಡೆ ಅವರು ನಿರೂಪಕರು. 

View post on Instagram