Anchor Jhanvi R: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಸ್ಪರ್ಧಿ ಜಾಹ್ನವಿ ಅವರು ಪತಿ ಕಾರ್ತಿಕ್ ಕುಡಿದು ಹೊಡೆಯುತ್ತಿದ್ದರು, ಅವರಿಗೆ ಮೊದಲೇ ಮದುವೆಯಾಗಿ ಮಗು ಇತ್ತು ಎಂದು ಆರೋಪ ಮಾಡಿದ್ದರು. ಈ ಆರೋಪಕ್ಕೆ ಕಾರ್ತಿಕ್‌ ಎರಡನೇ ಪತ್ನಿ ಪ್ರತಿಕ್ರಿಯೆ ನೀಡಿದ್ದಾರೆ. 

ಸುದ್ದಿ ನಿರೂಪಕಿ ಜಾಹ್ನವಿ ಅವರು ಡಿವೋರ್ಸ್‌ ತಗೊಂಡಿರುವ ವಿಷಯವನ್ನು ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಈಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಸ್ಪರ್ಧಿಯಾಗಿರುವ ಅವರು, ದೊಡ್ಮನೆಯಲ್ಲಿ ಕೂಡ ಗಂಡನಿಗೆ ಮೊದಲೇ ಮದುವೆಯಾಗಿ ಮಗು ಕೂಡ ಇತ್ತು, ಕುಡಿದು ಹೊಡೆದರು ಎಂದು ಹೇಳಿದ್ದರು. ಈಗ ಕಾರ್ತಿಕ್‌ ಅವರ ಎರಡನೇ ಪತ್ನಿ ಮಾಧ್ಯಮದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ಡಿವೋರ್ಸ್‌ ಆದ್ಮೇಲೆ ಮದುವೆ ಆಯ್ತು

“ಜಾಹ್ನವಿ ಹಾಗೂ ಕಾರ್ತಿಕ್‌ ಮನಸ್ತಾಪ ಆಗಿ, ದೂರವಾಗಿ ನಾಲ್ಕು ವರ್ಷಗಳು ಕಳೆದಿವೆ. ಅವರಿಬ್ಬರ ಡಿವೋರ್ಸ್‌ ಆದ್ಮೇಲೆ ನಾನು ಮದುವೆಯಾದೆ. ಡಿವೋರ್ಸ್‌ ಆಗಿ ಒಂದು ತಿಂಗಳಾದಮೇಲೆ ನಾನು ಮದುವೆಯಾದೆ. ವೈಯಕ್ತಿಕವಾಗಿ ನನಗೆ ಜಾಹ್ನವಿ ಗೊತ್ತು. ಹೀಗೆ ಸಂಬಂಧ ಬಂದಾಗ, ನಾನು ತಂದೆ-ತಾಯಿಗೂ ಕೂಡ ಇದನ್ನು ಪರಿಹರಿಸೋಣ ಅಂತ ಅಂದೆ” ಎಂದು ಕಾರ್ತಿಕ್‌ ಎರಡನೇ ಪತ್ನಿ ಹೇಳಿದ್ದಾರೆ.

ಕಾರ್ತಿಕ್‌ ಕುಟುಂಬಸ್ಥರು ಒಳ್ಳೆಯವರು

“ಕಾರ್ತಿಕ್‌ ಹಾಗೂ ಜಾಹ್ನವಿ ಡಿವೋರ್ಸ್‌ ಆಗಿದೆ ಎಂದಾಗ ತಪ್ಪು ಇರಬೇಕು ಅಂತ ಅಂದುಕೊಂಡೆ. ನಾವು ಕಾರ್ತಿಕ್‌ ಕುಟುಂಬದ ಬಗ್ಗೆ ಚೆಕ್ ಮಾಡಿದೆವು. ಚಿತ್ರದುರ್ಗದಲ್ಲಿ ಕಾರ್ತಿಕ್‌ ಮಹಡಿ ಕುಟುಂಬದವರು, ಅಲ್ಲಿ ಅವರ ತಾತ ಸಿಕ್ಕಾಪಟ್ಟೆ ದಾನಗಳನ್ನು ಕೂಡ ಮಾಡಿದ್ದಾರೆ” ಎಂದು ಕಾರ್ತಿಕ್‌ ಎರಡನೇ ಪತ್ನಿ ಹೇಳಿದ್ದಾರೆ.

ನನ್ನ ಗಂಡ ಅದ್ಭುತವಾಗಿ ನೋಡಿಕೊಳ್ತಿದ್ದಾರೆ

“ಕಾರ್ತಿಕ್‌ ಎಲ್ಲ ವಿಷಯವನ್ನು ಹೇಳಿ ಮದುವೆಯಾಗಿದ್ದಾರೆ. ಕಾರ್ತಿಕ್‌ ಹಾಗೂ ಜಾಹ್ನವಿ ನಡುವೆ ಯಾಕೆ ಡಿವೋರ್ಸ್‌ ಆಯ್ತು ಎಂದು ನನಗೆ ಗೊತ್ತಿದೆ. ಈ ವಿಷಯದ ಬಗ್ಗೆ ನಾನು ಏನೂ ಹೇಳಿಲ್ಲ. ನನ್ನ ಮಗುಗೆ ಈಗ 9 ತಿಂಗಳು, ಅವಳಿಗೆ ಹಾಲುಣಿಸಬೇಕು ಎಂದು ನಾನು ಒಂದು ರಾತ್ರಿಯೂ ಕೂಡ ಎದ್ದಿಲ್ಲ, ನನಗೆ ಅನಾರೋಗ್ಯ ಆಗಿದ್ದಾಗ ನನ್ನ ಗಂಡ ತುಂಬ ಚೆನ್ನಾಗಿ ನೋಡಿಕೊಳ್ತಿದ್ದಾರೆ, ನಾವಿಬ್ಬರೂ ಆರಾಮಾಗಿದ್ದೇವೆ” ಎಂದು ಹೇಳಿದ್ದಾರೆ.

ನನ್ನ ಗಂಡ ಕುಡಿದಿದ್ದು ಸತ್ಯ

“ನನ್ನ ಗಂಡ ಎರಡು ಬಾರಿ ಕುಡಿದಿದ್ದರು. ಒಮ್ಮೆ ತಂದೆ ತೀರಿಕೊಂಡಾಗ ಬೇಸರದಲ್ಲಿ ಕಾರ್ತಿಕ್‌ ಕುಡಿದಿದ್ದರು, ಆಮೇಲೆ ಜಾಹ್ನವಿಯು ಕಾರ್ತಿಕ್‌ ವಿರುದ್ಧ ಹೇಳಿಕೆ ಕೊಟ್ಟರು ಎಂದು ಕುಡಿದರು, ನಾನು ಅವರಿಗೆ ಕುಡಿಯೋದು ನಿಲ್ಲಿಸಿ, ಇದರಿಂದ ಯಾರಿಗೂ ಒಳ್ಳೆಯದಲ್ಲ ಅಂತ ಹೇಳಿದಮೇಲೆ ಇವತ್ತಿನವರೆಗೂ ಕಾರ್ತಿಕ್‌ ಒಮ್ಮೆಯೂ ಕುಡಿದಿಲ್ಲ. ಹೆಂಡ್ತಿ ತಪ್ಪಿದ್ದಾಗ ಗಂಡ ಕುಡಿಯುತ್ತಾನೆ” ಎಂದು ಕಾರ್ತಿಕ್‌ ಎರಡನೇ ಪತ್ನಿ ಹೇಳಿದ್ದಾರೆ.

ನಾನು ಹುಳಿ ಹಿಂಡಿಲ್ಲ

“ನಾವು ಆರಾಮಾಗಿದ್ದೇವೆ, ಬಿಗ್‌ ಬಾಸ್‌ ಶೋ ನೋಡೋದಿಲ್ಲ. ಹೀಗಿರುವಾಗ ಎಲ್ಲರೂ ನಮಗೆ ಫೋನ್‌ ಮಾಡಿ, ಮೆಸೇಜ್‌ ಮಾಡಿ ಕಾರ್ತಿಕ್‌ ವಿರುದ್ಧ ಮಾತನಾಡಿದ್ದಾರೆ ಅಂತ ಹೇಳಿದರು. ನಮ್ಮ ತಂದೆ-ತಾಯಿ ಕೂಡ ಇದನ್ನೆಲ್ಲ ನೋಡುತ್ತಿರುವುದಕ್ಕೆ ಬೇಸರ ಆಗ್ತಿದೆ. ಜಾಹ್ನವಿ ಹಾಗೂ ಕಾರ್ತಿಕ್‌ ಚೆನ್ನಾಗಿದ್ದಾಗ, ನಾನು ಬಂದು ಹುಳಿ ಹಿಂಡಿ ಸಂಸಾರ ಒಡೆದೆ ಎನ್ನೋ ಥರ ಮಾತನಾಡಿದ್ದಾರೆ” ಎಂದಿದ್ದಾರೆ.

“ಇಂದು ನಾನು, ಕಾರ್ತಿಕ್‌ ಹೊರಗಡೆ ಹೋಗಿ ಹೇಗೆ ಕೆಲಸ ಮಾಡೋದು? ಮೂರು ದಿನದಿಂದ ನಾನು ನಮ್ಮ ಮನೆಯಲ್ಲಿ ಒಲೆ ಉರಿಸಿಲ್ಲ. ಡಿವೋರ್ಸ್‌ ಆಗಿ ಎಲ್ಲವನ್ನು ಕಿತ್ಕೊಂಡು, ಕಾರ್ತಿಕ್‌ನನ್ನು ಬರೀ ಬಟ್ಟೆಯಲ್ಲಿ ಕಳಿಸಿದ್ಮೇಲೆ ಇನ್ನೂ ಕಿತ್ಕೊಳೋದು ಏನಿದೆ? ಬೆಂಗಳೂರಿನಲ್ಲಿ ಮನೆ ಮಾಡೋದು ಸಾಧನೆ. ಹೀಗಿರುವಾಗ ಮನೆ ಆಗಿದೆ, ಎಲ್ಲವೂ ಸಿಕ್ಕಿದೆ ಅವರಿಗೆ” ಎಂದಿದ್ದಾರೆ.

“ಜಾಹ್ನವಿ ನನಗೆ ವೈಯಕ್ತಿಕವಾಗಿ ಮೂರು-ನಾಲ್ಕು ವರ್ಷಗಳಿಂದ ಪರಿಚಯ ಇತ್ತು. ನಾನು ಹೆಣ್ಣು, ಅವಳ ಬಗ್ಗೆ ಹೀನಾಯವಾಗಿ ಮಾತನಾಡೋದನ್ನು ನನ್ನ ಮನೆಯಲ್ಲಿ ಕಲಿಸಿಲ್ಲ. ಕಾರ್ತಿಕ್‌ ಸಮಾಜಕ್ಕೆ ಹೆದರಿ ಎಲ್ಲಿಯೂ ಹೇಳಿಕೊಳ್ಳಲ್ಲ ಅಂತ ಅವರು ಅಂದುಕೊಂಡಿದ್ದಾರೆ. ಈಗ ಕಾರ್ತಿಕ್‌ ಹಿಂದೆ ನಾನು ಇದೀನಿ, ಕಾರ್ತಿಕ್‌ ಜೊತೆಗೆ ನಾನು ನಿಲ್ಲುವೆ” ಎಂದು ಕಾರ್ತಿಕ್‌ ಎರಡನೇ ಪತ್ನಿ ಹೇಳಿದ್ದಾರೆ.

YouTube video player