BBK 12 Updates: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟಿರುವ ರಿಷಾ ಗೌಡಗೂ ಹಾಗೂ ಗಿಲ್ಲಿ ನಟನಿಗೂ ಜಗಳ ಶುರುವಾಗಿದೆ. ಇದಕ್ಕೆ ಕಾರಣ ಏನು? ಅಂಥದ್ದೇನಾಯ್ತು? 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಿಷಾ ಗೌಡ ಬಂದಿದ್ದೇ ಬಂದಿದ್ದು, ಗಿಲ್ಲಿ ಹಾಗೂ ಚಂದ್ರಪ್ರಭ ಜೊತೆ ಕ್ಲೋಸ್‌ ಆದರು. ಈಗ ರಿಷಾ ಹಾಗೂ ಗಿಲ್ಲಿ ನಡುವೆ ಫೈಟ್‌ ಶುರುವಾಗಿದೆ. ಗಿಲ್ಲಿ ಈ ಬಾರಿ ಬಹಳ ಸೀರಿಯಸ್‌ ಆಗಿ ಕೂಗಾಡಿದ್ದಾರೆ.

ರಿಷಾ ಗೌಡ, ಗಿಲ್ಲಿ ನಟ ಸ್ನೇಹ ಕಟ್‌

ರಿಷಾ ಗೌಡ ಜೊತೆ ಗಿಲ್ಲಿ ನಟ ತಮಾಷೆ ಮಾಡಿದ್ದು, ಆಟ ಆಡಿದ್ದು ನೋಡಿ ಮನೆಯಲ್ಲಿದ್ದವರು ಕೂಡ ಆಶ್ಚರ್ಯಪಟ್ಟಿದ್ದರು. ಕಾವ್ಯ ಶೈವ ಬಿಟ್ಟು, ರಿಷಾ ಜೊತೆ ಗಿಲ್ಲಿ ತಿರುಗಾಡುತ್ತಿದ್ದಾರೆ ಎಂದು ಸ್ಪರ್ಧಿಗಳು ಹೇಳಿದ್ದರು. ಈಗ ಕಥೆ ಉಲ್ಟಾ ಆಗಿದೆ.

ಕಾವ್ಯಾಳನ್ನು ಹೊಗಳಿದ ಗಿಲ್ಲಿ

ಬೆಡ್‌ ರೂಮ್‌ ಏರಿಯಾದಲ್ಲಿ ಗಿಲ್ಲಿ ನಟ, ಚಂದ್ರಪ್ರಭ, ರಿಷಾ ಗೌಡ ಕೂತಿದ್ದರು. ಆ ವೇಳೆ ಗಿಲ್ಲಿ ನಟ ಅವರು, “ಕಾವ್ಯಾ ಒಂದು ಸಲ ಜಗಳ ಆಡಿದರೆ ಮುಗೀತು, ಆಮೇಲೆ ಮಾತನಾಡೋದಿಲ್ಲ. ಮಾತು ಬಿಟ್ಟರೆ ಮುಗೀತು. ಬೇಕು ಅಂದರೆ ಬೇಕು, ಬೇಡ ಅಂದರೆ ಬೇಡ” ಎಂದು ಹೇಳಿದ್ದಾರೆ.

ಗಿಲ್ಲಿ ನಟ ಹೇಳಿದ್ದೇನು?

ಗಿಲ್ಲಿ ನಟ ಈ ರೀತಿ ಹೇಳಿರೋದು ರಿಷಾ ಗೌಡ ಪಿತ್ತ ನೆತ್ತಿಗೇರಿಸಿದೆ. “ನೀನು ಕಾವ್ಯಾಗೆ ಬಕೆಟ್‌ ಹಿಡಿತಿದ್ಯಾ?” ಎಂದು ರಿಷಾ ಗೌಡ ಪ್ರಶ್ನೆ ಮಾಡಿದ್ದಾರೆ. ಆಗ ಗಿಲ್ಲಿ ನಟ, “ನೀನು ಇಲ್ಲಿರೋ ಹದಿನೈದು ಜನರಿಗೆ ಬಕೆಟ್‌ ಹಿಡಿತಿದ್ದೀರಾ?” ಎಂದು ಕೇಳಿದ್ದಾರೆ. ಆಗ ರಿಷಾ ಅವರು, “ನೀನು ಫ್ರೀ ಪ್ರೊಡಕ್ಟ್‌, ಅವಳಲ್ಲ, ನೀನು ಅಂದಾಗ ಅಂದಿಸಿಕೊಳ್ಳೋದಿಲ್ಲ. ಬಂದಾಗಿಂದ ಯಾವಾಗ ನೋಡಿದರೂ ಐವತ್ತು ಸಲ ಕಾವ್ಯಾ, ಕಾವ್ಯಾ” ಎಂದು ರಿಷಾ ಹೇಳಿದಾಗ, ಗಿಲ್ಲಿ ನಟ ಅವರು, “ನನ್ನಿಷ್ಟ” ಎಂದಿದ್ದಾರೆ. “ನೀನು ಬಂದಾಗಲೇ ಕಾಮಿಡಿ ಪೀಸ್‌ ಆಗಿಬಿಟ್ಟೆ, ಕೂತ್ಕೋ” ಎಂದಿದ್ದಾರೆ.

ನಟನೆ ಮುಖ್ಯ

ಬಿಗ್‌ ಬಾಸ್‌ ಮನೆಯಲ್ಲಿ ಅಶ್ವಿನಿ ಗೌಡ, ಜಾಹ್ನವಿ ಜೊತೆ ಗಿಲ್ಲಿ ನಟ ಜಗಳ ಆಗಿತ್ತು. ಆದರೂ ಕೂಡ ಅವರು ತಮಾಷೆ ಮಾಡುತ್ತ ಮಾತನಾಡುತ್ತಿದ್ದರು. ಆಮೇಲೆ ರಿಷಾ ಜೊತೆ ಕ್ಲೋಸ್‌ ಆದರು. ಇವರಿಬ್ಬರು ಆಡಿದ್ದು ಜಾಹ್ನವಿಗೆ ಸಿಟ್ಟು ತರಿಸಿತ್ತು. “ಕಲಾವಿದರಿಗೆ ನಟನೆ ಎಷ್ಟು ಮುಖ್ಯವೋ ನಡವಳಿಕೆ ಕೂಡ ಅಷ್ಟೇ ಮುಖ್ಯ. ಎಲ್ಲವೂ ಲಿಮಿಟ್‌ನಲ್ಲಿ ಇರಬೇಕು, ರಿಷಾ ಮಾಡೋದು ನಮಗೆ ಮುಜುಗರ ತರುತ್ತದೆ” ಎಂದು ಹೇಳಿದ್ದರು.

ರಿಷಾ ಗೌಡ ಅವರು ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟ ಬಳಿಕ ಹಾಗೆ ಮಾಡ್ತೀನಿ, ಹೀಗೆ ಮಾಡ್ತೀನಿ ಎಂದು ಹೇಳಿದ್ದರು. ಎಲ್ಲ ಸ್ಪರ್ಧಿಗಳ ಬಗ್ಗೆ ಅವರು ಅಭಿಪ್ರಾಯ ಹೇಳಿದ್ದರು. ಆದರೆ ಅವರು ಏನೂ ಮಾಡಿಲ್ಲ ಎನ್ನುವಂತೆ ಕಿಚ್ಚ ಸುದೀಪ್‌ ಮಾತನಾಡಿದ್ದರು. ರಿಷಾ ಗೌಡ ಬಾಯಿ ಮುಂದೆ, ತಲೆಯಲ್ಲಿ ಬುದ್ಧಿ ಇಲ್ಲ ಎಂದು ಜಾಹ್ನವಿ ಹೇಳಿದ್ದರು.

ಆರ್‌ಜೆ ಅಮಿತ್‌, ಕರಿಬಸಪ್ಪ, ಸತೀಶ್‌ ಕ್ಯಾಡಬಮ್ಸ್‌, ಮಂಜುಭಾಷಿಣಿ, ಅಶ್ವಿನಿ ಎಸ್‌ ಎನ್‌ ಅವರು ಎಲಿಮಿನೇಟ್‌ ಆಗಿದ್ದಾರೆ. ಅಂದಹಾಗೆ ಈಗಾಗಲೇ ಮಲ್ಲಮ್ಮ ಎಲಿಮಿನೇಶನ್‌ ಆಗಿದೆ ಎನ್ನಲಾಗುತ್ತಿದೆ. ಈಗಾಗಲೇ ಬಿಗ್‌ ಬಾಸ್‌ ಶೋ ಶುರುವಾಗಿ ನಾಲ್ಕು ವಾರಗಳು ಕಳೆದಿವೆ. ಮುಂದಿನ ದಿನಗಳಲ್ಲಿ ಆಟ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.