Bigg Boss Kannada Season 12 Show: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಾಶಿಕಾ ಶೆಟ್ಟಿ ಹಾಗೂ ಸೂರಜ್‌ ಅವರು ಒಂದೇ ವಾರಕ್ಕೆ ತುಂಬ ಕ್ಲೋಸ್‌ ಆಗಿದ್ದಾರೆ. ಈಗ ಈ ಜೋಡಿ ಮಧ್ಯೆ ಬಿರುಕು ಬಂದಿದೆ. ಇದಕ್ಕೆ ಕಾರಣ ಏನು? ನಿಜಕ್ಕೂ ಏನು ಆಯ್ತು? 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಸ್ನೇಹಿತರಾಗಿದ್ದವರು, ಶತ್ರುಗಳಾಗುತ್ತಾರೆ, ಶತ್ರುಗಳಾಗಿದ್ದವರು, ಸ್ನೇಹಿತರಾಗುತ್ತಾರೆ. ಈಗ ರಾಶಿಕಾ ಶೆಟ್ಟಿ ಹಾಗೂ ಸೂರಜ್‌ ಅವರು ಕೂಡ ಒಂದು ವಾರದೊಳಗಡೆ ತುಂಬ ಆತ್ಮೀಯತೆಯಿಂದ ಇದ್ದರು, ಈಗ ಬೇರೆ ಬೇರೆ ಆದಂತಿದೆ.

ರಾಶಿಕಾ ಬ್ಯೂಟಿಫುಲ್‌ ಅಂತೆ!

ಹೌದು, ಬಿಗ್‌ ಬಾಸ್‌ ಮನೆಗೆ ಬರುವ ಹದಿನೈದು ದಿನಕ್ಕೂ ಮುನ್ನ ಸೂರಜ್‌ ಅವರ ಇನ್‌ಸ್ಟಾಗ್ರಾಮ್‌ ವಿಡಿಯೋಗಳನ್ನು ರಾಶಿಕಾ ಶೆಟ್ಟಿ ನೋಡಿ, “ಯಾರಪ್ಪಾ ಇದು ಹ್ಯಾಂಡ್ಸಮ್‌” ಎಂದುಕೊಂಡಿದ್ದರು. ಅದಾದ ಬಳಿಕ ಇದೇ ವಿಷಯವನ್ನು ಅವರು ಸೂರಜ್‌ ಬಳಿ ಹೇಳಿಕೊಂಡಿದ್ದರು. ದೊಡ್ಮನೆಯಲ್ಲಿ ಯಾರು ಬ್ಯೂಟಿಫುಲ್‌ ಎಂಬ ಬಿಗ್‌ ಬಾಸ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೂರಜ್‌ ಅವರು, ರಾಶಿಕಾಗೆ ರೋಸ್‌ ಕೊಟ್ಟರು.

ಸ್ಪಂದನಾ ಸೋಮಣ್ಣಗೆ ಹೊಟ್ಟೆಕಿಚ್ಚು?

ಆಮೇಲೆ ರಾಶಿಕಾ ಶೆಟ್ಟಿ, ಸೂರಜ್‌ ಅವರು ಫುಲ್‌ ಕ್ಲೋಸ್‌ ಆದರು. ರಾಶಿಕಾ ಹಾಗೂ ಸೂರಜ್‌ ಒಟ್ಟಿಗಿರೋದು ನೋಡಿ ಸ್ಪರ್ಧಿಗಳು ರೇಗಿಸುತ್ತಿದ್ದರು. ರಾಶಿಕಾ ನನ್ನ ಸೊಸೆ, ಸೂರಜ್‌ ನನ್ನ ಮಗ ಎಂದು ಅಶ್ವಿನಿ ಗೌಡ ಅವರೇ ಹೇಳಿದ್ದರು. ಅವರಿಬ್ಬರು ಚಿಕ್ಕ ವಯಸ್ಸಿನವರು, ಟೈಮ್‌ ಕಳೆಯಲಿ ಎಂದು ಜಾಹ್ನವಿ, ಅಶ್ವಿನಿ ಗೌಡ ಮಾತನಾಡಿಕೊಂಡಿದ್ದೂ ಇದೆ. ಸೂರಜ್‌, ರಾಶಿಕಾ ಕ್ಲೋಸ್‌ ಆಗಿರೋದು ನೋಡಿ ಸ್ಪಂದನಾ ಸೋಮಣ್ಣಗೆ ಹೊಟ್ಟೆಕಿಚ್ಚು ಎಂದು ರಾಶಿಕಾ ಬಳಿ ಅಶ್ವಿನಿ ಗೌಡ ಕೂಡ ಮಾತನಾಡಿದ್ದರು.

ಸೂರಜ್‌ ಜೊತೆ ಕ್ಲೋಸ್‌

ಇದೆಲ್ಲ ಆದ್ಮೇಲೆ ಕಿಚ್ಚ ಸುದೀಪ್‌ ಅವರು ಎಪಿಸೋಡ್‌ನಲ್ಲಿ ಸೂರಜ್‌ ಬಂದಾದಮೇಲೆ ಇಬ್ಬರು ಆಟ ಆಡೋದನ್ನು ನಿಲ್ಲಿಸಿದ್ದಾರೆ, ಆದಷ್ಟು ಬೇಗ ಅವರು ಹೊರಗಡೆ ಬರ್ತಾರೆ ಎಂದು ಹೇಳಿದ್ದುಂಟು. ಆದರೆ ಅದು ನನಗೆ ಎಂದು ರಾಶಿಕಾಗೆ ಅರ್ಥವೇ ಆಗಿಲ್ಲ. ರಾಶಿಕಾ ಶೆಟ್ಟಿ ಎಲಿಮಿನೇಶನ್‌ ಆಗ್ತಾರೆ ಎಂದಾದಾಗ ಸೂರಜ್‌ ಬಂದು, ಲಾಂಗ್‌ ಹಗ್‌ ಕೊಟ್ಟಿದ್ದರು. ಇದು ಕೂಡ ದೊಡ್ಡ ಮಟ್ಟದಲ್ಲಿ ಟ್ರೋಲ್‌ ಆಗಿತ್ತು. ಅದಾದ ಬಳಿಕ ರಾಶಿಕಾ ಶೆಟ್ಟಿ ಅವರು ಮತ್ತೆ ಸೂರಜ್‌ ಜೊತೆ ಕ್ಲೋಸ್‌ ಆಗಿದ್ದಾರೆ.

ಸ್ಪಂದನಾ ಜೊತೆ ಅಷ್ಟೊತ್ತು ಮಾತನಾಡಿದೆ?

ಕಾಲೇಜು ಟಾಸ್ಕ್‌ನಲ್ಲಿ ರಾಶಿಕಾ ಶೆಟ್ಟಿ ಹಾಗೂ ಸೂರಜ್‌ ಅವರು ಕ್ಲೋಸ್‌ ಆಗಿದ್ದರು. ರಾಶಿಕಾಗೆ ಸೂರಜ್‌ ಕಿಸ್‌ ಕೂಡ ಕೊಟ್ಟಿದ್ದರು. ಟಾಸ್ಕ್‌ನಲ್ಲಿ ಇಲ್ಲದಿರೋದನ್ನು ಇವರಿಬ್ಬರು ಮಾಡುತ್ತಿದ್ದಾರೆ ಎಂದು ಕೂಡ ಕೆಲವರು ರೇಗಿಸಿದ್ದರು. ಈಗ ರಾಶಿಕಾ ಶೆಟ್ಟಿ ಅವರು, ಸೂರಜ್‌ ದೂರ ದೂರ ಆಗಿದ್ದಾರೆ. “ನನ್ನ ಜೊತೆ ಕ್ಲೋಸ್‌ ಆಗಿದ್ದವನು ಯಾಕೆ ದೂರ ಹೋದೆ? ನಾನು ಬೇಸರ ಆಗಿದ್ದಾಗ, ಯಾಕೆ ನೀನು ಬಂದು ಮಾತನಾಡಿಸಲಿಲ್ಲ? ಸ್ಪಂದನಾ ಜೊತೆ ಮಾತನಾಡುತ್ತ ಕೂತಿದ್ದೆ” ಎಂದೆಲ್ಲ ರಾಶಿಕಾ ಶೆಟ್ಟಿ ಹೇಳಿದ್ದರು. ಆಗ ಸೂರಜ್‌ ಅವರು, “ಇದು ಎಲ್ಲೆಲ್ಲೋ ಹೋಗ್ತಿದೆ” ಎಂದು ಹೇಳಿ ಸುಮ್ಮನಾಗಿದ್ದಾರೆ. ಇನ್ನೊಂದು ಕಡೆ ಸೂರಜ್‌ ಜೊತೆ ಮಾತು ನಿಲ್ಲಿಸು, ಅವನು ಏನು ಮಾಡ್ತಾನೆ ಎಂದು ಕಾದು ನೋಡು ಎಂದು ರಾಶಿಕಾಗೆ ರಿಷಾ ಕೂಡ ಸಲಹೆ ಕೊಟ್ಟಿದ್ದರು. ಒಟ್ಟಿನಲ್ಲಿ ಇವರ ಸಲಹೆ ಎಲ್ಲೆಲ್ಲಿ ಹೋಗತ್ತೋ ಏನೋ!