Bigg Boss Kannada Season 12 Winner: ದಿನದಿಂದ ದಿನಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಕುತೂಹಲದಿಂದ ಕೂಡಿದೆ. ಇನ್ನು ಫಿನಾಲೆಯಲ್ಲಿ ಯಾರು ಗೆಲ್ಲಲಿದ್ದಾರೆ? ಯಾರು ಟ್ರೋಫಿ ಪಡೆಯಲಿದ್ದಾರೆ ಎಂಬ ಕುತೂಹಲವಿದೆ. ಈ ಬಗ್ಗೆ ಮಂತ್ರಾಲಯ ಗಿಣಿ ಹೇಳಿದ್ದೇನು?
ಬಿಗ್ ಬಾಸ್ ಕನ್ನಡ ಸೀಸನ್ 12 ( Bigg Boss Kannada Season 12 ) ಗ್ರ್ಯಾಂಡ್ ಫಿನಾಲೆಗೆ ಇನ್ನು 4 ವಾರಗಳು ಇವೆ. ಯಾರು ಟ್ರೋಫಿ ಗೆಲ್ಲುತ್ತಾರೆ ಎಂಬ ಕುತೂಹಲ ಇದೆ. ಮಂತ್ರಾಲಯದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಲಾಗಿದ್ದು, ಗಿಣಿ ಭವಿಷ್ಯ ನುಡಿದಿದೆ.
ಮಂತ್ರಾಲಯದಲ್ಲಿ ಗಿಣಿ ಭವಿಷ್ಯ
ಮಂತ್ರಾಲಯದಲ್ಲಿ ಗಿಣಿ ಭವಿಷ್ಯ ಹೇಳುವವರ ಬಳಿ ಒಬ್ಬರು, ಗಿಲ್ಲಿ ನಟನ ಬಗ್ಗೆ ಪ್ರಶ್ನೆ ಮಾಡಿದ್ದರು. ಆ ವೇಳೆ ಗಿಣಿ ಭವಿಷ್ಯ ನುಡಿದಿದೆ ಎನ್ನಲಾಗಿದೆ. ಬಣ್ಣದ ಜಗತ್ತು ಕನ್ನಡ ಎನ್ನುವ ಇನ್‌ಸ್ಟಾಗ್ರಾಮ್ ಈ ವಿಡಿಯೋವನ್ನು ಹಂಚಿಕೊಂಡಿದೆ. ಅದರಲ್ಲಿ ಗಿಲ್ಲಿ ನಟನ ಭವಿಷ್ಯ ಹೊರಬಿದ್ದಿದೆ. ಈ ಸತ್ಯ ನಿಜವಾಗುತ್ತಾ? ಇಲ್ಲವಾ ಎಂದು ಕಾದು ನೋಡಬೇಕಿದೆ.
ಒಬ್ಬರು ಗಿಲ್ಲಿ ಗೆಲ್ಲಲ್ಲ ಎಂದಿದ್ರು
ಈ ಹಿಂದೆ ಒಬ್ಬರು ಗಿಲ್ಲಿ ನಟ ಈ ಬಾರಿ ಬಿಗ್ ಬಾಸ್ ಶೋ ಗೆಲ್ಲೋದಿಲ್ಲ ಎಂದು ಹೇಳಿದ್ದರು. ಬಹುತೇಕ ವೀಕ್ಷಕರು ಗಿಲ್ಲಿ ನಟನೇ ವಿನ್ನರ್ ಎಂದು ಕೂಡ ಹೇಳಿದ್ದರು. ಅಂದಹಾಗೆ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಕಾವ್ಯ ಶೈವ, ಧ್ರುವಂತ್, ರಘು ಅವರು ಫಿನಾಲೆಗೆ ಹೋಗಲಿದ್ದಾರೆ ಎನ್ನಲಾಗ್ತಿದೆ.
ಗಿಣಿ ಶಾಸ್ತ್ರದಲ್ಲಿ ಏನು ಬಂತು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋವನ್ನು ಗಿಲ್ಲಿ ನಟ ಗೆಲ್ಲುತ್ತಾರಾ? ಅವರ ಜಾತಕ ಹೇಗಿದೆ ಎಂದು ಪ್ರಶ್ನೆ ಕೇಳಲಾಗಿದೆ. ಆಗ ಗಿಣಿಯು ರಾಘವೇಂದ್ರ ಸ್ವಾಮಿ, ಶಿವನ ಕಾರ್ಡ್ ತೆರೆದಿಟ್ಟಿದೆ. “ಗಿಲ್ಲಿ ನಟ ಏನು ಮಾಡಿದ್ರೂ ಅದು ಸಕ್ಸಸ್ ಆಗಲಿದೆ, ಅಪಜಯವೇ ಇಲ್ಲ. ರಾಘವೇಂದ್ರ ಸ್ವಾಮಿ ಕೃಪೆ ಇದೆ, ಭಗವಂತನ ಕೃಪೆ ಇದೆ, ಶಾಸ್ತ್ರದಲ್ಲಿ ಅವರಿಗೆ ದೇವರ ಫೋಟೋ ಬಂದಿದೆ. ಮುಂದೆ ಅವರು ಗೆಲ್ಲುತ್ತಾರೆ ಅಂತಲ್ಲ, ಜಯ ಆಗುತ್ತದೆ ಎಂದು ಬಂದಿದೆ” ಎಂದು ಹೇಳಿದ್ದಾರೆ.
“ಮುಂದೆ ಎಲ್ಲಿಯೂ ಇವರ ಬಗ್ಗೆ ಪ್ರಶ್ನೆ ಕೇಳಬೇಡಿ. ಚಿಂತೆಯೇ ಮಾಡಬೇಡಿ, ಅವರು ಗೆಲ್ಲುತ್ತಾರೆ, ಎಲ್ಲ ಕಡೆ ಜಯ ಆಗಲಿದೆ” ಎಂದು ಹೇಳಿದೆ. ಒಟ್ಟಿನಲ್ಲಿ ಗಿಲ್ಲಿ ನಟ ಅವರೇ ಬಿಗ್ ಬಾಸ್ ಶೋ ಗೆಲ್ಲುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.
ಗಿಲ್ಲಿ ನಟ ಹೇಗೆ ಆಟ ಆಡ್ತಿದ್ದಾರೆ?
ಆರಂಭದಿಂದ ಇಲ್ಲಿಯವರೆಗೆ ತನ್ನ ಆಟವನ್ನು ಚೆನ್ನಾಗಿ ಆಡುತ್ತ, ಬೇರೆಯವರ ತಪ್ಪುಗಳನ್ನು ಎತ್ತಿ ಹೇಳುವ ಗಿಲ್ಲಿ ನಟ ಅವರು ಇತರ ಸ್ಪರ್ಧಿಗಳನ್ನು ಕೆಳಗಡೆ ಹಾಕಿ ಕಾಮಿಡಿ ಮಾಡ್ತಾರೆ, ತೇಜೋವಧೆ ಮಾಡುತ್ತಾರೆ, ಮನೆ ಕೆಲಸ ಮಾಡೋದಿಲ್ಲ, ಫಿಸಿಕಲ್ ಟಾಸ್ಕ್ ಆಡೋದಿಲ್ಲ ಎಂಬ ಆರೋಪ ಇದೆ. ಇದನ್ನೆಲ್ಲ ಬಿಟ್ಟರೆ ಗಿಲ್ಲಿ ನಟ ಬೆಸ್ಟ್ ಎಂದು ಎಲ್ಲರೂ ಒಪ್ಪುತ್ತಾರೆ.


