"ಲಕ್ಷ್ಮೀ ನಿವಾಸ"ದಲ್ಲಿ ಸಿದ್ದು ಮತ್ತು ಭಾವನಾ ಪ್ರೀತಿ ಒಂದಾಗಿದೆ. ಕುತಂತ್ರದಿಂದ ಮದುವೆಯಾದರೂ, ಭಾವನಾ ಸಿದ್ದು ಮನೆಯವರ ಮನ ಗೆದ್ದಿದ್ದಾಳೆ. ಸಿದ್ದು ಪ್ರೀತಿಗೂ ಭಾವನಾ ಓಕೆ ಎಂದಿದ್ದು, ಸಿದ್ದು ಅಚ್ಚರಿಗೊಂಡಿದ್ದಾನೆ. ಆದರೆ ಶ್ರೀಕಾಂತ್‌ಗೆ ಆದ ಅಪಘಾತ, ವೆಂಕಿ ಜೈಲುವಾಸದ ಹಿಂದೆ ಸಿದ್ದು ಕೈವಾಡವಿದೆ. ಈ ಸತ್ಯ ಭಾವನಾಗೆ ತಿಳಿದರೆ ಪ್ರೀತಿ ಮುರಿದುಬೀಳಬಹುದು ಎಂದು ವೀಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಸಿದ್ದೇಗೌಡ್ರು ಹಾಗೂ ಭಾವನಾ ಒಂದಾಗಿದ್ದಾರೆ. ಈ ಸೀರಿಯಲ್‌ ಶುರು ಆದಾಗಿನಿಂದ ಭಾವನಾ ಮೇಲೆ ಸಿದ್ದುಗೆ ಲವ್‌ ಇತ್ತು. ಆಮೇಲೆ ಕುತಂತ್ರದಿಂದ ಅವನು ಭಾವನಾಳನ್ನು ಮದುವೆ ಆದನು. ಸಿದ್ದು ಮನೆಗೆ ಬಂದ ಭಾವನಾ ಈಗ ಅವನ ತಂದೆ, ಅಣ್ಣನ ಮನಸ್ಸನ್ನು ಗೆದ್ದಿದ್ದಾಳೆ. ಭಾವನಾ ಮನಸ್ಸು ಒಲಿಸಿಕೊಳ್ಳಲು ಸಿದ್ದು ಕೂಡ ತುಂಬ ಪ್ರಯತ್ನ ಮಾಡಿ ಈಗ ಸೈಲೆಂಟ್‌ ಆಗಿದ್ದಾನೆ. ಇವನ ಪ್ರಯತ್ನಕ್ಕೆ ಈಗ ಪ್ರತಿಫಲ ಸಿಕ್ಕಿದೆ. 

ನಂಬದ ಸ್ಥಿತಿಯಲ್ಲಿ ಸಿದ್ದೇಗೌಡ್ರು! 
ಭಾವನಾ ಕೂಡ ಸಿದ್ದು ಪ್ರೀತಿಯಲ್ಲಿ ತೇಲಾಡಿದ್ದಾಳೆ. ಈಗ ಅವಳೇ ಮುಂದೆ ನಿಂತು ಸಿದ್ದು ಬಳಿ ತನ್ನ ಪ್ರೀತಿ ಹೇಳಿಕೊಂಡು ಅಪ್ಪಿಕೊಂಡಿದ್ದಾಳೆ. ಫಾರ್ಮ್‌ಹೌಸ್‌ನಲ್ಲಿ ಸ್ಪೆಷಲ್‌ ಆಗಿ ಡೆಕೋರೇಶನ್‌ ಮಾಡಲಾಗಿದೆ. ಅಲ್ಲಿ ಪ್ರೀತಿಯನ್ನು ಹೇಳಿಕೊಳ್ಳಲಾಗಿದೆ. ಭಾವನಾ ಮಾತು ಕೇಳಿ ಈಗ ಸಿದ್ದೇಗೌಡ್ರು ನಂಬಲಾಗದೆ ದಂಗಾಗಿದ್ದಾರೆ. ನಮ್ಮ ಮೇಡಂ ನನ್ನ ಪ್ರೀತಿಯನ್ನು ಒಪ್ಪಿಕೊಳ್ಳೋದೇ ಇಲ್ಲ, ಹೀಗೆ ಬದುಕು ಸಾಗುತ್ತದೆ ಅಂತ ಗೌಡ್ರು ಅಂದುಕೊಂಡಿದ್ದರು. ಈಗ ಎಲ್ಲವೂ ಒಳ್ಳೆಯದೇ ಆಗ್ತಿದೆ.

ಈ ಜೋಡಿ ದೂರ ಮಾಡ್ಬೇಡಿ! 
ಭಾವನಾ ಮದುವೆ ಆಗಬೇಕಿದ್ದ ಶ್ರೀಕಾಂತ್‌ಗೆ ಆಕ್ಸಿಡೆಂಟ್‌ ಆಗುವ ಹಾಗೆ ಮಾಡಿದ್ದು ಇದೇ ಸಿದ್ದೇಗೌಡ್ರು. ಉದ್ದೇಶಪೂರ್ವಕವಾಗಿ ಈ ರೀತಿ ಸಿದ್ದು ಮಾಡಿರಲಿಲ್ಲ. ಈ ವಿಷಯ ಇನ್ನೂ ಭಾವನಾಗೆ ಗೊತ್ತಾಗಿಲ್ಲ. ಅಷ್ಟೇ ಅಲ್ಲದೆ ಈ ಕೇಸ್‌ನಲ್ಲಿ ಭಾವನಾ ಅಣ್ಣ ವೆಂಕಿ ಸಿಕ್ಕಿ ಹಾಕಿಕೊಂಡು, ಅವನು ಜೈಲಿನಲ್ಲಿದ್ದಾನೆ. ವೆಂಕಿ ಎಲ್ಲಿದ್ದಾನೆ ಅಂತ ಎಲ್ಲರೂ ತಲೆಕೆಡಿಸಿಕೊಂಡಿದ್ದಾರೆ. ಯಾರಿಗೂ ವೆಂಕಿ ಜೈಲಿನಲ್ಲಿರುವ ವಿಷಯ ಗೊತ್ತಾಗಿಲ್ಲ. ಈ ವಿಷಯ ಭಾವನಾಗೆ ಗೊತ್ತಾದರೆ ಅವಳು ಸಿದ್ದುಳಿಂದ ದೂರ ಆಗ್ತಾಳೆ. ಹೀಗಾಗಿ ವೀಕ್ಷಕರು ದಯವಿಟ್ಟು ವೆಂಕಿಯನ್ನು ಮಧ್ಯೆ ತಂದು ಈ ಜೋಡಿಯನ್ನು ದೂರ ಮಾಡಬೇಡಿ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಮನವಿ ಮಾಡುತ್ತಿದ್ದಾರೆ. 

ವೀಕ್ಷಕರು ಏನೇನು ಹೇಳ್ತಿದ್ದಾರೆ? 
“ಸಿದ್ದೇಗೌಡ್ರು ಇನ್ನೂ ಮುಂದೆ ಹ್ಯಾಪಿ ಅಲ್ವಾ? ಸಿದ್ದೇ ಗೌಡ್ರೇ ನೀವು ಸೂಪರ್ ಬಿಡಿ. 
ನಮ್ಮ ಕನಸು ಇದೇ ಆಗಿತ್ತು. ನಿಜವಾದ ಪ್ರೀತಿಗೆ ಯಾವತ್ತೂ ಸೋಲಿಲ್ಲ. ಭಾವನಾ ಹೇರ್ ಸ್ಟೈಲ್ ಚೆನ್ನಾಗಿದೆ ಇವತ್ತು. ಇದಕ್ಕೆ ಆಕ್ಸಿಡೆಂಟ್ ಕೇಸ್‌ನ ಮದ್ಯ ತರಬೇಡಿ ವೆಂಕಿಯನ್ನು ಜೈಲಿನಿಂದ ಬಿಡಿಸಿ. ದಯವಿಟ್ಟು ವೆಂಕಿ ವಿಷಯ ಭಾವನಾ ಸಿದ್ದುಗೆ ಗೊತ್ತಾಗಬಾರದು. ಯಾವುದೇ ರೀತಿಯ ತೊಂದರೆಯಾಗದಂತೆ ಸಂಚಿಕೆಗಳನ್ನು ಮುಂದುವರೆಸಿ. ಇಷ್ಟು ದಿನ ಕಾಯುತ್ತಾ ಇದ್ದ ಗಳಿಗೆ ಬಂತು” ಎಂದು ವೀಕ್ಷಕರು ಕಾಮೆಂಟ್‌ ಮಾಡುತ್ತಿದ್ದಾರೆ. 

ಮುಂದೆ ಏನಾಗುವುದು?
ಇನ್ನು ಮುಂದಿನ ದಿನಗಳಲ್ಲಿ ಭಾವನಾಗೆ ಶ್ರೀಕಾಂತ್‌ ಸಾಯಲು ಕಾರಣ ಯಾರು? ವೆಂಕಿ ಜೈಲಿನಲ್ಲಿರೋದು ಯಾಕೆ ಎನ್ನೋದು ಗೊತ್ತಾಗುತ್ತದೆ. ಇದೆಲ್ಲದಕ್ಕೂ ಸಿದ್ದು ಕಾರಣ ಅಂತ ಗೊತ್ತಾದರೂ ಕೂಡ ಮುಂದೆ ಎಲ್ಲವೂ ಸರಿಹೋಗಲೂಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿವೆ.

ಧಾರಾವಾಹಿ ಕಥೆ ಏನು?
ಈ ಧಾರಾವಾಹಿಯಲ್ಲಿ ಲಕ್ಷ್ಮೀ ಕುಟುಂಬ ಒಂದು ಕಡೆಯಾದರೆ, ಸಿದ್ದು ಕುಟುಂಬ ಇನ್ನೊಂದು ಕಡೆ. ಲಕ್ಷ್ಮೀ-ಶ್ರೀನಿವಾಸ್‌ಗೆ ಮೂವರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು. ಮಗಳು ಭಾವನಾ-ಸಿದ್ದು ಸಂಸಾರದಲ್ಲಿ ಸಮಸ್ಯೆ ಇದೆ, ಇನ್ನೋರ್ವ ಮಗಳು ಜಾಹ್ನವಿ ತೀರಿಕೊಂಡಿದ್ದಾಳೆ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಜಾಹ್ನವಿ ಗಂಡ ಜಯಂತ್‌ ಸೈಕೋ ಎನ್ನೋದು ಎಲ್ಲರಿಗೂ ಗೊತ್ತಿಲ್ಲ. ಇನ್ನು ಇಬ್ಬರು ಮಕ್ಕಳಾದ ಸಂತೋಷ್, ಹರೀಶ್‌ ಮಾತ್ರ ಅಪ್ಪ-ಅಮ್ಮನನ್ನು ಕೇರ್‌ ಮಾಡೋದಿಲ್ಲ. ಮುಂದೆ ಈ ಮನೆ ಕಥೆ ಏನಾಗತ್ತೋ ಏನೋ!

ಪಾತ್ರಧಾರಿಗಳು
ಲಕ್ಷ್ಮೀ- ಶ್ವೇತಾ
ಸಂತೋಷ್‌-ಮಧು ಹೆಗಡೆ
ಸಿದ್ದು- ಧನಂಜಯ
ಭಾವನಾ-ದಿಶಾ ಮದನ್‌
ಜಾಹ್ನವಿ- ಚಂದನಾ ಅನಂತಕೃಷ್ಣ
ಜಯಂತ್‌ -ದೀಪಕ್‌ ಸುಬ್ರಹ್ಮಣ್ಯ!