ಮೂರು ಕೋಟಿ ರೂಪಾಯಿ ಖರ್ಚು ಮಾಡಿ ಮಂಗಳೂರು ಮೂಲದ ಕುಟುಂಬವೊಂದು ಮನೆ ಕಟ್ಟಿತ್ತು. ಆದರೆ ಮನೆ ಕಟ್ಟಿದ ತಿಂಗಳಿಗೆ ಇಂಟಿರಿಯರ್‌ ಎಲ್ಲವೂ ಫಂಗಸ್‌ ಆಗಿ, ಹಾಳಾಗಿತ್ತು. ಈಗ ಮತ್ತೆ ಹೊಸದಾಗಿ ಇಂಟಿರಿಯರ್‌ ಡಿಸೈನ್‌ ಮಾಡಿ ಮನೆ ಕಟ್ಟಿಸಿದ್ದಾರೆ. 

ಮಂಗಳೂರು ಮೂಲದ ಕನ್ನಡದ ಯುಟ್ಯೂಬರ್ ಪ್ರಿಯಾ ಮೋನಿಕಾ ಅವರು ಮನೆ ಕಟ್ಟಿಸಿ ತಿಂಗಳಿಗೆ ಮನೆ ಹಾಳಾಗಿತ್ತು. ಹೌದು, ಇಂಟಿರಿಯರ್‌ ಡಿಸೈನ್‌ ಪೂರ್ತಿ ಫಂಗಸ್‌ ಆಗಿತ್ತು. ಇಂಟಿರಿಯರ್‌ ಮಾಡಿಸಿಕೊಟ್ಟವರು ಮೋಸ ಮಾಡಿದ್ದಾರೆ ಎಂದು ಪ್ರಿಯಾ ಆರೋಪ ಮಾಡಿದ್ದರು ಎಂದು ಪ್ರಿಯಾ ಮೋನಿಕಾ ಹೇಳಿದ್ದಾರೆ.

ಹೊಸದಾಗಿ ಡಿಸೈನ್‌ ಮಾಡಿಸಿದ್ದರು

ಮಂಗಳೂರು ಮೂಲದ ಕನ್ನಡ ಯುಟ್ಯೂಬರ್‌ ಪ್ರಿಯಾ ಅವರು ಒಂದು ವರ್ಷದ ಹಿಂದೆ ಮನೆ ಕಟ್ಟಿಸಿದ್ದಾರೆ. ಅಂದು ಕೂಡ ಅವರು ಗೃಹ ಪ್ರವೇಶ ಮಾಡಿದ್ದರು. ಈಗ ಮತ್ತೆ ಹೊಸದಾಗಿ ಇಂಟಿರಿಯರ್‌ ಡಿಸೈನ್‌ ಮಾಡಿಸಿದ್ದಾರೆ. ಇದಕ್ಕೂ ಕೂಡ ಖರ್ಚಾಗಿದೆ. ಒಂದಿಷ್ಟು ಲೋನ್‌ ಮಾಡಿ, ಬಂಗಾರವನ್ನು ಅಡವಿಟ್ಟು ಮೂರು ಕೋಟಿ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿದ್ದರು. ಆದರೆ ಇಂಟಿರಿಯರ್‌ ಡಿಸೈನ್‌ ಪೂರ್ತಿ ಹಾಳಾಗಿದ್ದಕ್ಕೆ ಹೊಸ ಮನೆ ಮಾಡಿದ್ದರು ಎಂದು ಪ್ರಿಯಾ ಮೋನಿಕಾ ಹೇಳಿದ್ದಾರೆ.

ಸಾಲ ಮಾಡಿದ್ದೇವೆ

ನಮಗೆ ಯಾರೂ ಆಸ್ತಿ ಮಾಡಿಟ್ಟಿಲ್ಲ, ನಮಗೆ ದುಡ್ಡಿದೆ ಎಂದು ಕೆಲವರು ಹೇಳಿದ್ದರು. ಮೊದಲು ಮನೆ ಕಟ್ಟುವಾಗ ದುಡ್ಡಿತ್ತು, ಮನೆಗೆಂದು ದುಡ್ಡು ಇಟ್ಟಿದ್ದೆವು. ಈಗ ಆ ರೀತಿ ಇಲ್ಲ. ಮತ್ತೆ ಅಷ್ಟೇ ಖರ್ಚು ಮಾಡಿ ಮನೆ ಕಟ್ಟಿದ್ದೇವೆ. ಈಗ ಮತ್ತೆ ಸಾಲ ಮಾಡಿದ್ದೇವೆ, ಕೆಲವರು ಸಹಾಯವನ್ನು ಮಾಡಿದ್ದಾರೆ. ಈ ಕಷ್ಟ ನಮಗೆ ಮಾತ್ರ ಗೊತ್ತಿದೆ. ಮತ್ತೆ ಮನೆ ಕಟ್ಟಲೇಬೇಕಿತ್ತು ಎಂದು ಪ್ರಿಯಾ ಮೋನಿಕಾ ಅವರು ಹೇಳಿದ್ದಾರೆ.

ಎಲ್ಲ ಹಣವನ್ನು ಆ ಹೆಂಗಸಿನ ಎದೆಗೆ ಹಾಕಿದ್ವಿ

ಪ್ರಿಯಾ ಮೋನಿಕಾ ಅವರು ಮಧ್ಯಮ ಕುಟುಂಬ ಎಂಬ ಯುಟ್ಯೂಬ್‌ ಚಾನೆಲ್‌ ನಡೆಸುತ್ತಿದ್ದಾರೆ. ಆ ಮನೆಯನ್ನು ಹಾಗೆ ಬಿಟ್ಟರೆ, ಇನ್ನೊಂದಿಷ್ಟು ಹಾಳಾಗುತ್ತದೆ, ಎಲ್ಲ ಹಣವನ್ನು ಇಂಟಿರಿಯರ್‌ ಡಿಸೈನ್‌ ಮಾಡಿದ ಆ ಹೆಂಗಸಿನ ಎದೆಗೆ ಹಾಕಿದ್ದಕ್ಕೆ ಬೇಸರ ಆಗಿದೆ. ಇಂದು ಕೂಡ ಮನೆ ಕಟ್ಟಿದ ಕೆಲವರ ಬಿಲ್‌ನ್ನು ಇನ್ನು ಕ್ಲಿಯರ್‌ ಮಾಡಿಲ್ಲ ಎಂದು ಪ್ರಿಯಾ ಮೋನಿಕಾ ಹೇಳಿದ್ದಾರೆ.

ಇನ್ನೊಂದು ಸಮಸ್ಯೆ ಬಂತು!

ಹಳೆ ಮನೆಯ ಇಂಟಿರಿಯರ್‌ ಡಿಸೈನ್‌ ಎಲ್ಲವನ್ನು ಡೆಮೊಲಿಶ್‌ ಮಾಡಿ, ಮತ್ತೆ ಕಟ್ಟೋದು ಹೆಚ್ಚು ಖರ್ಚಾಗುವುದು. ಒಂದು ಕಡೆಯಿಂದ ಮನೆಯನ್ನು ಸರಿ ಮಾಡೋಕೆ ಹೋದರೆ, ಇನ್ನೊಂದು ಕಡೆ ಸಮಸ್ಯೆ ಬರುತ್ತಿತ್ತು. ಎಲೆಕ್ಟ್ರಿಕ್‌ ಸಮಸ್ಯೆ, ಪ್ಲಂಬಿಂಗ್‌ ಸಮಸ್ಯೆ ಎಂದು ತುಂಬ ಸಮಸ್ಯೆ ಇತ್ತು. ನಾನು ಹಾಗೂ ನನ್ನ ಗಂಡ ಇದ್ದರೆ ಓಕೆ, ಆದರೆ ಅಪ್ಪ-ಅಮ್ಮ, ಮಕ್ಕಳು ಕೂಡ ಇರುತ್ತಾರೆ. ಹೀಗಾಗಿ ನಮ್ಮ ಮನೆಯಲ್ಲಿ ವ್ಯವಸ್ಥೆ ಬೇಕು ಎಂದು ಪ್ರಿಯಾ ಮೋನಿಕಾ ಹೇಳಿದ್ದಾರೆ.

YouTube video player