ನಟಿ ಮೇಘನಾ ಶಂಕರಪ್ಪ ಅವರು ತಮ್ಮ ಬ್ಯಾಗ್ಗಳ ಕಲೆಕ್ಷನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬ್ಯಾಗ್ಗಳು ತಮಗೆ ಮಕ್ಕಳಿದ್ದಂತೆ ಎಂದು ಭಾವಿಸುತ್ತಾರೆ. ಜಾಹೀರಾತಿನ ಜೊತೆಗೆ ತಮ್ಮ ಕಲೆಕ್ಷನ್ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.
ಕೆಲವರಿಗೆ ಕೆಲವು ವಸ್ತುಗಳ ಮೇಲೆ ಕ್ರೇಜ್ ಹೆಚ್ಚಿಗೆ ಇರುತ್ತದೆ. ಅವುಗಳ ಕಲೆಕ್ಷನ್ ಮಾಡುವುದು ಎಂದರೆ ಎಗ್ಗಿಲ್ಲದ ಪ್ರೀತಿ. ಕೆಲವರಿಗೆ ಬ್ಯಾಗ್, ಡ್ರೆಸ್, ಚಿನ್ನಾಭರಣ, ಬೆಳ್ಳಿ ಮತ್ತೆ ಕೆಲವರಿಗೆ ಕರಕುಶಲ ವಸ್ತುಗಳು, ಆಟಿಕೆ ಸಾಮಾನುಗಳು... ಹೀಗೆ ಏನೇನೋ ಕ್ರೇಜ್ ಇರುತ್ತವೆ. ಅವುಗಳು ಬೇರೆಯವರಿಗೆ ಬೆಲೆ ಬಾಳುವ ವಸ್ತುಗಳು ಎನ್ನಿಸದೇ ಹೋದರೂ, ಅದರ ಮೇಲೆ ಪ್ರೀತಿ ಇರುವವರಿಗೆ ಅದು ಅವರ ಜೀವನವನೇ ಆಗಿರುತ್ತದೆ. ಅವರವರ ಅಂತಸ್ತಿಗೆ ತಕ್ಕಂತೆ ತಮ್ಮ ಹಾಬಿಗಳನ್ನು ಮಾಡುವ ದೊಡ್ಡ ವರ್ಗವೇ ಇದೆ. ಅದೇ ರೀತಿ ಇದೀಗ ಸೀತಾರಾಮ ಪ್ರಿಯಾ ಅರ್ಥಾತ್ ಮೇಘನಾ ಶಂಕರಪ್ಪ ಅವರು ತಮ್ಮ ಹಾಬಿಯಾಗಿರುವ ಬ್ಯಾಗ್ ಕಲೆಕ್ಷನ್ ಬಗ್ಗೆ ಯುಟ್ಯೂಬ್ನಲ್ಲಿ ಮಾಹಿತಿ ನೀಡಿದ್ದಾರೆ.
ಈ ಬ್ಯಾಗ್ಗಳು ನನಗೆ ಮಕ್ಕಳು ಇದ್ದ ರೀತಿ ಎಂದಿರುವ ನಟಿ, ಅವುಗಳನ್ನು ಜತನದಿಂದ ಮಕ್ಕಳ ರೀತಿಯೇ ಕಾಪಾಡಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ಜಾಹೀರಾತು ಕಂಪೆನಿಗಳು ತಮ್ಮ ಪ್ರಾಡಕ್ಟ್ಗಳನ್ನು ಸೇಲ್ ಮಾಡಲು ಕಿರುತೆರೆ ನಟಿಯರನ್ನು ಬಳಸಿಕೊಳ್ಳುವುದು ಇದೆ. ಇದೇ ಕಾರಣಕ್ಕೆ ಯುಟ್ಯೂಬ್ಗಳಲ್ಲಿ ನಟಿಯರು ಸದ್ದಿಲ್ಲದೇ ತಮ್ಮ ಅಭಿಮಾನಿಗಳ ತಲೆಗೆ ಆ ಪ್ರಾಡಕ್ಟ್ಗಳ ಬಗ್ಗೆ ಹುಳು ಬಿಡುವುದು ಇದೆ. ಅಷ್ಟಕ್ಕೂ ಜಾಹೀರಾತು ಎಂದರೆ ಅದೇ ಅಲ್ವಾ? ನೋಡುಗರ ತಲೆಗೆ ಹುಳು ಬಿಡುವುದೇ ಆಗಿರುತ್ತದೆ. ಎಷ್ಟೋ ಸಲ, ಆ ಪ್ರಾಡಕ್ಟ್ಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳು ದಿನನಿತ್ಯದ ಜೀವನದಲ್ಲಿ ಅದನ್ನು ಕಣ್ಣೆತ್ತಿ ಕೂಡ ನೋಡುವುದಿಲ್ಲ. ಆದ್ದರಿಂದ ಜನರು ಅದರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ತಲೆಗೆ ಹುಳು ಬಿಟ್ಟುಕೊಳ್ಳದೇ ಆರಿಸುವ ವಸ್ತುಗಳ ಸತ್ಯಾಸತ್ಯತೆ ತಿಳಿಯಬೇಕಾಗುತ್ತದೆ.
ಸೀತಾರಾಮ ಶೂಟಿಂಗ್ ವೇಳೆ ಸೆಟ್ನಲ್ಲಿಯೇ ರೊಚ್ಚಿಗೆದ್ದ ಪ್ರಿಯಾ: ನಟಿಯರ ಗಲಾಟೆ ವಿಡಿಯೋ ವೈರಲ್
ಜಾಹೀರಾತಿನ ವಿಷಯ ಇರಲಿ ಬಿಡಿ. ಇಲ್ಲಿಯೂ ಕೂಡ ಮೇಘನಾ ಅವರು ಪ್ರಾಡಕ್ಟ್ನ ಜಾಹೀರಾತು ಮಾಡಿದ್ದಾರೆ. ಅದರ ಜೊತೆಗೆ, ತಮ್ಮ ಬ್ಯಾಗ್ ಕಲೆಕ್ಷನ್ ಬಗ್ಗೆ ತೆರೆದಿಟ್ಟಿದ್ದಾರೆ. ಇವರ ಬಳಿ ಅಸಮಾನ್ಯ ಎನ್ನುವ ಹಲವಾರು ರೀತಿಯ ಹ್ಯಾಂಡ್ಬ್ಯಾಗ್ಗಳು ಇವೆ. ಅವುಗಳ ಪ್ರಯೋಜನಗಳ ಬಗ್ಗೆ ನಟಿ ಹೇಳಿದ್ದಾರೆ. ಆ ಪ್ರಾಡಕ್ಟ್ಗಳ ಮಾಹಿತಿಗಳನ್ನೂ ನೀಡಿದ್ದಾರೆ. ಇದರಿಂದ ಮೇಘನಾ ಅವರಿಗೆ ಬ್ಯಾಗ್ ಕ್ರೇಜ್ ಎಷ್ಟು ಇದೆ ಎನ್ನುವುದು ತಿಳಿಯುತ್ತದೆ.
ಇನ್ನು ನಟಿ ಮೇಘನಾ ಶಂಕರಪ್ಪ ಕುರಿತು ಹೇಳುವುದಾದರೆ, ಸೀತಾರಾಮ' ಸೀರಿಯಲ್ಗೂ ಮುನ್ನ ಅವರು, ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು. ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.
ನನ್ನ ಸಕ್ಸಸ್ಗೆ ಕಾರಣ ಪಲಾವ್ ಎಲೆ: ಯಶಸ್ಸಿನ ಗುಟ್ಟು ತಿಳಿಸಿಕೊಟ್ಟ ಸೀತಾರಾಮ ನಟಿ ವೈಷ್ಣವಿ ಗೌಡ- ವಿಡಿಯೋ ವೈರಲ್



