ವೈಷ್ಣವಿ ಗೌಡ ಅನುಕೂಲ್ ಮಿಶ್ರಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವಾಯುಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಕೂಲ್ ಬೇರೆ ರಾಜ್ಯದವರು. ಮದುವೆಯ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳುವುದಾಗಿ ತಿಳಿಸಿದ ನಟಿ, ತಪ್ಪು ಮಾಹಿತಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. ಅನುಕೂಲ್ ಹೆಸರನ್ನು ಅಕಾಯ್ ಎಂದೂ, ಉದ್ಯೋಗವನ್ನು ವಿಮಾನ ನಿಲ್ದಾಣ ಎಂದೂ ತಪ್ಪಾಗಿ ವರದಿ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಸೀತಾರಾಮ ಸೀತಾ ಉರ್ಫ್ ವೈಷ್ಣವಿ ಗೌಡ ಅಭಿಮಾನಿಗಳಿಗೆ ಅವರ ಮದ್ವೆಯದ್ದೇ ಚಿಂತೆಯಾಗಿತ್ತು. ಯಾವಾಗ ನೋಡಿದ್ರೂ ಅದೇ ಪ್ರಶ್ನೆ ಎದುರಾಗುತ್ತಿತ್ತು. ಆದರೆ ಕೊನೆಗೂ ವೈಷ್ಣವಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇನ್ನು ಸೀತಾರಾಮ ಸೀತೆಯ ಕಲ್ಯಾಣವೂ ಹತ್ತಿರದಲ್ಲಿಯೇ ಇದೆ. ಸದ್ಯ ಎಂಗೇಜ್ಮೆಂಟ್ ರೀತಿಯಲ್ಲಿಯೇ ಮದುವೆಯ ವಿಷಯವನ್ನೂ ಬಿಟ್ಟುಕೊಟ್ಟಿಲ್ಲ ನಟಿ. ಸದ್ಯ ಎಂಗೇಜ್ಮೆಂಟ್ ಮಾಡಿಕೊಂಡು ಉಸಿರು ಬಿಡ್ತಾ ಇದ್ದೇನೆ. ಮದುವೆಯ ಬಗ್ಗೆ ತಿಳಿಸ್ತೇನೆ. ಇನ್ನೂ ಸಾಕಷ್ಟು ಅರೇಂಜ್ಮೆಂಟ್ ಆಗಬೇಕಿದೆ. ಏನೇ ಆದರೂ ಮದುವೆಯ ಸಂಭ್ರಮ ಸಕತ್ ಫನ್ನಿ ಆಗಿರುತ್ತದೆ ಎಂದಿದ್ದಾರೆ ವೈಷ್ಣವಿ ಗೌಡ. ಅಷ್ಟಕ್ಕೂ ಮದ್ವೆ ಫಿಕ್ಸ್ ಆಗಿದ್ದ ವಿಷಯವನ್ನು ಗುಟ್ಟಾಗಿ ಇಟ್ಟಿದ್ದ ನಟಿ ಎಲ್ಲರಿಗೂ ಬಿಗ್ ಸರ್ಪ್ರೈಸ್ ಕೊಟ್ಟಿದ್ದರು. ಕೊನೆಗೂ ಅವರು ಅದನ್ನು ರಿವೀಲ್ ಮಾಡಿದರು.
ಅನುಕೂಲ್ ಮಿಶ್ರಾ ಎನ್ನುವವರ ಜೊತೆ ಎಂಗೇಜ್ ಆಗಿದ್ದಾರೆ. ಅನುಕೂಲ್ ಅವರು ಬೇರೆ ರಾಜ್ಯದವರು ಎನ್ನಲಾಗಿದೆ. ಏರ್‌ಫೋರ್ಸ್‌ನಲ್ಲಿ ಅನುಕೂಲ್ ಕೆಲಸ ಮಾಡುತ್ತಿದ್ದಾರೆ. ಅನುಕೂಲ್ ಅವರಿಂದಲೇ ವೈಷ್ಣವಿ ಈ ಬಾರಿ ಬೆಂಗಳೂರಿನಲ್ಲಿ ನಡೆದಿದ್ದ ಏರ್ ಷೋ ವೀಕ್ಷಣೆ ಮಾಡಿದ್ದರು. ಇದನ್ನೇ ಅವರು ಪರೋಕ್ಷವಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಥ್ಯಾಂಕ್ಯು ಎ. ನಿಮ್ಮಿಂದಲೇ ಏರ್ ಷೋ ನೋಡೋದು ಸಾಧ್ಯ ಆಯ್ತು, ಇದೊಂದು ಅದ್ಭುತ ಅನುಭವ” ಎಂದು ಹೇಳಿದ್ದರು. ಆದರೆ, ಗುಟ್ಟನ್ನು ಮಾತ್ರ ಬಿಟ್ಟು ಕೊಟ್ಟಿರಲಿಲ್ಲ. ಇದೀಗ ಕೊನೆಗೂ ಗುಟ್ಟನ್ನು ಅವರೇ ರಿವೀಲ್ ಮಾಡಿದ್ದು, ಭಾವಿ ಪತಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ಹಿಂದಿವಾಲಾ ಜೊತೆ ರಾಜ್ಯನೇ ಬಿಟ್ಟು ಹೋಗ್ತಾರಾ ವೈಷ್ಣವಿ? ಸೀರಿಯಲ್ ಮುಂದಿನ ಸೀತೆ ಯಾರು?
ಇದರ ವಿಷಯ ರಿವೀಲ್ ಆಗುತ್ತಲೇ ಹಲವಾರು ಯೂಟ್ಯೂಬ್ಗಳಲ್ಲಿ ವೈಷ್ಣವಿ ಅವರ ಭಾವಿ ಪತಿಯ ಬಗ್ಗೆ ವಿಭಿನ್ನ ರೀತಿಯಲ್ಲಿ ವಿಷಯಗಳು ಬಂದವು. ಆರಂಭದಲ್ಲಿ ಅನುಕೂಲ್ ಅವರ ಹೆಸರು ಅಕಾಯ್ ಎಂದೇ ಹೇಳಿದ್ದರಿಂದ ಬಹುತೇಕ ಎಲ್ಲಾ ಕಡೆ ಅಕಾಯ್ ಎಂದೇ ಹೇಳಲಾಗಿತ್ತು. ಇವರು ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ನಟಿ ಹೇಳಿದ್ದರೂ, ಅದನ್ನು ಹಲವರು ಏರ್ಪೋರ್ಟ್ ಎಂದು ತಿಳಿಸಿದರು. ಕೆಲವು ಪರ್ಸನಲ್ ಯೂಟ್ಯೂಬ್ ಚಾನೆಲ್ ಮಾಡುವವರು ಪೈಪೋಟಿಗೆ ಬಿದ್ದವರಂತೆ ಬಾಯಿಗೆ ಬಂದಂತೆ ವೈಷ್ಣವಿ ಅವರ ಭಾವಿ ಪತಿಯ ಬಗ್ಗೆ ವರ್ಣಿಸಿದರು. ಹಲವರು ಅವರನ್ನು ಉದ್ಯಮಿ ಎಂದು ಕರೆದರು. ಇದಕ್ಕೆಲ್ಲಾ ವೈಷ್ಣವಿ ಗೌಡ ಈಗ ಬೇಸರ ವ್ಯಕ್ತಪಡಿಸಿದ್ದಾರೆ.
ಇದಾಗಲೇ ಅವರು ಏರ್ಪೋರ್ಟ್ನಲ್ಲಿ ಕೆಲಸ ಮಾಡ್ತಿರೋದಲ್ಲ ಎಂದು ನೋವಿನಿಂದಲೇ ನುಡಿದಿದ್ದರು. ಇದೀಗ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟಿ, ನನ್ನ ಭಾವಿ ಪತಿಯ ಹೆಸರು ಅಕಾಯ್ ಎನ್ನುತ್ತಾರೆ. ಉದ್ಯಮಿ ಎಂದು ಕೆಲವು ಯೂಟ್ಯೂಬ್ ಚಾನೆಲ್ಗಳಲ್ಲಿ ಬರೆಯಲಾಗಿದೆ ಎನ್ನುತ್ತಲೇ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಹೆಸರು ಅಕಾಯ್ ಅಲ್ಲ, ಅನುಕೂಲ್ ಎಂದು. ದಯವಿಟ್ಟು ಏನೇನೋ ಪ್ರಸಾರ ಮಾಡಬೇಡಿ. ಅದೆಷ್ಟು ಕಾನ್ಫಿಡೆಂಟ್ ಆಗಿ ಹೇಳಿಬಿಡುತ್ತಾರೆ ಎಂದು ಕಂಡರೆ ನನಗೇ ಅಚ್ಚರಿಯಾಗುತ್ತದೆ, ಯಾವುದೇ ಕ್ರಾಸ್ ಚೆಕ್ ಮಾಡಿಕೊಳ್ಳುವುದಿಲ್ಲ. ಸಂಬಂಧಪಟ್ಟವರನ್ನು ಕೇಳುವುದೂ ಇಲ್ಲ. ಮನಸ್ಸಿಗೆ ಬಂತಂತೆ ಹೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿರುವ ನಟಿ, ಪ್ಲೀಸ್ ಹಾಗೆಲ್ಲಾ ಮಾಡಬೇಡಿ. ಸರಿಯಾದ ವಿಷಯ ಕೇಳಿ ತಿಳಿದುಕೊಂಡು ಬರೆಯಿರಿ. ಈ ಬಗ್ಗೆ ನನ್ನ ಅಮ್ಮನೂ ಇದಾಗಲೇ ಹೇಳಿದ್ದಾರೆ. ಆದರೂ ಹೆಸರು, ಉದ್ಯೋಗ ಸೇರಿದಂತೆ ಬಹುತೇಕ ವಿಷಯಗಳನ್ನು ತಪ್ಪುತಪ್ಪಾಗಿ ಪ್ರಸಾರ ಮಾಡಲಾಗ್ತಿದೆ ಎಂದು ನೋವಿನಿಂದ ನುಡಿದಿದ್ದಾರೆ ವೈಷ್ಣವಿ ಗೌಡ.
ವೈಷ್ಣವಿ ಗುಟ್ಟಾದ ನಿಶ್ಚಿತಾರ್ಥದ ಹಿಂದಿದ್ಯಾ ಈ ವೈರಲ್ ವಿಡಿಯೋ? ಏನದು ಭವಿಷ್ಯವಾಣಿ?
