BBK 12 : ಬಿಗ್ ಬಾಸ್ ಒಳಗೆ ಗಿಲ್ಲಿ ಏನು ಮಾಡ್ಲಿ ಬಿಡಲಿ ಹೊರಗೆ ಮಾತ್ರ ಗಿಲ್ಲಿ ಸದ್ದು ಜೋರಾಗಿದೆ. ಎಲ್ಲ ಕಡೆ ಗಿಲ್ಲಿ ಹೆಸರು ಕೇಳಿ ಬರ್ತಿದೆ. ಇದ್ರ ಬಗ್ಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಿಂದ ಅಭಿಷೇಕ್ ಹೊರ ಬಿದ್ದಿದ್ದಾರೆ. ಬಿಗ್ ಬಾಸ್ ಶೋಗೆ ವಿಲನ್ ಎಂಟ್ರಿಯಾಗಿದ್ದು ಆಟ ಮತ್ತಷ್ಟು ಮಜ ಪಡೆದುಕೊಂಡಿದೆ. ಬಿಗ್ ಬಾಸ್ ಶೋ ಒನ್ ಮ್ಯಾನ್ ಶೋ ಆಗ್ತಿದ್ದು,ಎಲ್ಲರ ಬಾಯಲ್ಲಿ ಗಿಲ್ಲಿ ಹೆಸರೇ ಕೇಳಿ ಬರ್ತಿದೆ. ಮನೆ ಒಳಗೆ ಏನೇ ಇರ್ಲಿ ಹೊರಗೆ ಗಿಲ್ಲಿಗೆ ಸಿಕ್ತಿರುವ ಪ್ರಸಿದ್ಧಿ ಮಧ್ಯೆ ಪಿಆರ್ ಒಗಳ ಕೆಲ್ಸವನ್ನು ಬಿಗ್ ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ಖಂಡಿಸಿದ್ದಾರೆ.
ಗಿಲ್ಲಿ ಪ್ರಸಿದ್ಧಿ ಹಿಂದಿದ್ದಾರಾ ಪಿಆರ್‌ಒಗಳು?
ಒನ್ ಮ್ಯಾನ್ ಶೋ ಆದ ಬಿಗ್ ಬಾಸ್ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಏನೇ ಮಾಡಿದ್ರೂ ಸರಿ ಎನ್ನುವ ಟ್ರೆಂಡ್ ಹೊರಗೆ ಕ್ರಿಯೆಟ್ ಆಗಿದೆ. ಬಿಗ್ ಬಾಸ್ ನ ಯಾವ್ದೇ ಪ್ರೋಮೋ ನೋಡಿ, ಯಾವ್ದೆ ವಿಡಿಯೋ ನೋಡಿ ಅದ್ರ ಕೆಳಗೆ ಗಿಲ್ಲಿ ಬೆಂಬಲಿಗರ ಒಂದಿಷ್ಟು ಕಮೆಂಟ್ ಇದ್ದೇ ಇದೆ. ಗಿಲ್ಲಿ ಮಾಡಿದ್ದು ಸರಿ ಅಂತ ಸ್ಪಷ್ಟವಾಗಿ ವಾದ ಮಾಡುವರು ಸಾಕಷ್ಟು ಮಂದಿ. ಅನೇಕ ಸೆಲೆಬ್ರಿಟಿಗಳು ಕೂಡ ಗಿಲ್ಲಿ ಆಟವನ್ನು ಇಷ್ಟಪಟ್ಟಿದ್ದು, ನಮ್ಮ ಬೆಂಬಲ ಗಿಲ್ಲಿಗೆ ಅಂತ ಬಹಿರಂಗವಾಗಿ ಹೇಳಿಕೆ ಕೂಡ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ವಿಡಿಯೋ ವೈರಲ್ ಆದಷ್ಟು ಮತ್ತ್ಯಾವ ಸ್ಪರ್ಧಿ ವಿಡಿಯೋಗಳು ವೈರಲ್ ಆಗ್ತಿಲ್ಲ. ಮನೆಯಲ್ಲಿ ಗಿಲ್ಲಿಗೆ ಬೆಂಬಲ ನೀಡಿದ್ದ ರಕ್ಷಿತಾ ಹಾಗೂ ರಘುವನ್ನು ಅನೇಕರು ಮೆಚ್ಚಿಕೊಂಡಿದ್ದರು. ಯಾವಾಗ ಗಿಲ್ಲಿ ವಿರುದ್ಧ ರಘು ಹಾಗೂ ರಕ್ಷಿತಾ ಮಾತನಾಡಿದ್ರೋ ಆಗ ಸೋಶಿಯಲ್ ಮೀಡಿಯಾದಲ್ಲಿರುವ ಕೆಲವರು ರಕ್ಷಿತಾ – ರಘು ವಿರುದ್ಧ ತಿರುಗಿ ಬಿದ್ದಿದ್ದರು. ಗಿಲ್ಲಿಗೆ ಬೆಂಬಲ ನೀಡಿಲ್ಲ ಎನ್ನುವ ಕಾರಣಕ್ಕೆ ರಕ್ಷಿತಾ – ರಘುಗೆ ವೋಟು ನೀಡೋದಿಲ್ಲ, ನಮ್ಮ ಬೆಂಬಲವಿಲ್ಲ ಎನ್ನುವ ಕಮೆಂಟ್ ಹಾಕಿದ್ದರು. ಇದು ಎಷ್ಟು ಸರಿ ಎನ್ನುವ ಬಗ್ಗೆ ವಿನಯ್ ಗೌಡ ಚರ್ಚೆ ನಡೆಸಿದ್ದಾರೆ.
ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್
ಬಿಗ್ ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ, ಪಿಆರ್ಒಗಳ ಕೆಲ್ಸವನ್ನು ಖಂಡಿಸಿದ್ದಾರೆ. ಬಿಗ್ ಬಾಸ್ ಒಂದು ಶೋ. ಅಲ್ಲಿ ಸ್ಪರ್ಧಿಗಳು ಹೇಗೆ ಆಟ ಆಡ್ತಾರೆ ಎಂಬುದನ್ನು ನೋಡಿ ಬೆಂಬಲ ನೀಡ್ಬೇಕು. ಆದ್ರೆ ವಾಸ್ತವದಲ್ಲಿ ಹಾಗಾಕ್ತಿಲ್ಲ. ಯಾವುದೇ ಸ್ಪರ್ಧಿಗಳು ಚೆನ್ನಾಗಿ ಆಟ ಆಡಿದ್ರೂ ಒಬ್ಬರ ಹೆಸರು ಮಾತ್ರ ಬರ್ತಿದೆ. ಇದು ಪ್ರೇಕ್ಷಕರಿಂದ ಬರ್ತಿರೋದಲ್ಲ. ಪಿಆರ್ಒಗಳಿಂದ ಬರ್ತಿರೋದು ಅಂತ ವಿನಯ್ ಗೌಡ ಹೇಳಿದ್ದಾರೆ. ಪಿಆರ್ಒಗಳಿಗೆ ಹಣ ನೀಡಲಾಗುತ್ತೆ. ಎಲ್ಲಯೂ ನನ್ನ ಬಗ್ಗೆ ಕೆಟ್ಟ ಕಮೆಂಟ್ ಬರದಂತೆ ನೋಡಿಕೊಳ್ಳಿ ಅಂತ ಹೇಳಲಾಗುತ್ತೆ. ಇದು ಸಾಮಾನ್ಯ. ಅದನ್ನು ಪಿಆರ್ಒಗಳು ಪಾಲಿಸ್ಬೇಕು. ಆದ್ರೆ ಪಿಆರ್ಒಗಳು ದಾರಿ ತಪ್ತಿದ್ದಾರೆ. ಸ್ಪರ್ಧಿ ವಿರುದ್ಧ ಮಾತನಾಡಿದವರ ಹಳೆ ವಿಷ್ಯಗಳನ್ನು ವೈರಲ್ ಮಾಡ್ತಿದ್ದಾರೆ. ಒಬ್ಬರನ್ನು ಒಳ್ಳೆಯವನ್ನಾಗಿ ತೋರಿಸಲು ಇನ್ನೊಬ್ಬನನ್ನು ಕೆಟ್ಟವನನ್ನಾಗಿ ಮಾಡಲಾಗ್ತಿದೆ ಅಂತ ವಿನಯ್ ಗೌಡ ಹೇಳಿದ್ದಾರೆ.
ಮಂತ್ರಾಲಯದ ರಾಯರ ಪವಾಡದಿಂದಲೇ ಮದುವೆಯಾಯ್ತು: Suhana Syed ಎಂದೂ ಹೇಳಿರದ ರಿಯಲ್ ಕಥೆ
ಟಾಪ್ 5ಗೆ ಬರೋರು ಯಾರು?
ವಿನಯ್ ಗೌಡ ಪ್ರಕಾರ ಸದ್ಯದ ಮಟ್ಟಿಗೆ ಟಾಪ್5 ಕಂಟೆಸ್ಟೆಂಟ್ ಅಂದ್ರೆ ರಕ್ಷಿತಾ, ರಘು, ಅಶ್ವಿನಿಗೌಡ, ಧನುಷ್ ಹಾಗೂ ಗಿಲ್ಲಿ. ಲೀಸ್ಟ್ ನಲ್ಲಿ ಇನ್ನೂ ಅನೇಕರಿದ್ದು, ಹೋಗ್ತಾ ಹೋಗ್ತಾ ಇದು ಬದಲಾಗ್ಬಹುದು ಅಂತ ವಿನಯ್ ಗೌಡ ಹೇಳಿದ್ದಾರೆ.
