ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಯಜಮಾನ ಧಾರಾವಾಹಿಯಲ್ಲಿ ರಾಘು-ಝಾನ್ಸಿ ದೂರ ದೂರ ಆಗಿದ್ದಾರೆ. ಎಲ್ಲ ಸಂಘರ್ಷ, ಸಮಸ್ಯೆ ದೂರಾದ ಬಳಿಕ ಒಂದಾಗಬೇಕಿದ್ದ ಈ ಜೋಡಿಗೆ ಆಘಾತವಾಗಿದೆ. ಝಾನ್ಸಿಗೆ ಅಪಘಾತ ಆದ ಬೆನ್ನಲ್ಲೇ ಹೊಸ ಟ್ವಿಸ್ಟ್ ಸಿಕ್ಕಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿ, ನಟಿ ಯಮುನಾ ಶ್ರೀನಿಧಿ, ಈಗ “ಯಜಮಾನ” ಕನ್ನಡ ಧಾರಾವಾಹಿಯಲ್ಲಿ ಹೊಸ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಭಿನಯ ಮತ್ತು ಪ್ರತಿಭೆಯಿಂದ ಪ್ರಸಿದ್ಧರಾದ ಯಮುನಾ, ಸುಮಿತ್ರಾ ಪಾತ್ರದ ಮೂಲಕ ಧಾರಾವಾಹಿಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ಸೀರಿಯಲ್‌ಗೆ ಕುತೂಹಲದ ಜೊತೆಯಲ್ಲಿ ರೋಮಾಂಚನವನ್ನು ತರಲು ಸಿದ್ಧರಾಗಿದ್ದಾರೆ.
ಈ ಧಾರಾವಾಹಿಯಲ್ಲಿ, ಯಮುನಾ ಅಭಿನಯಿಸುತ್ತಿರುವ ಸುಮಿತ್ರಾ ಪಾತ್ರವು ಕುಟುಂಬದ ಶಾಂತಿ, ಏಕತೆಯನ್ನು ಬಲಪಡಿಸುವುದು, ಅಷ್ಟೇ ಅಲ್ಲದೆ ಅವಳ ಸೂಕ್ಷ್ಮ ಸಂವೇದನೆ ಕಥೆಗೆ ಹೊಸ ತಿರುವುಗಳನ್ನು ನೀಡುತ್ತವೆ. ವಿಶೇಷವಾಗಿ, ಧಾರಾವಾಹಿಯ ಖಳನಾಯಕಿಯಾದ ತುಳಸಿ, ತನ್ನ ಮಗ ಪ್ರಣವ್ ಝಾನ್ಸಿಯನ್ನು ಮದುವೆಯಾಗಬೇಕೆಂದು ಒತ್ತಾಯಿಸುತ್ತಿದ್ದಾಳೆ.
ಈ ಧಾರಾವಾಹಿ ಕಥೆ ಏನು?
ತುಳಸಿಯ ಯೋಜನೆಗಳು ಪ್ರೇಕ್ಷಕರನ್ನು ಕುತೂಹಲದ ಅಂಚಿನಲ್ಲಿ ಇಡುತ್ತವೆ. ಝಾನ್ಸಿಯ ತಾಯಿ ಸುಮಿತ್ರಾಳನ್ನು ತುಳಸಿ ಗುಪ್ತವಾಗಿ ಬಂಧಿಸಿರುವುದು ಕಥೆಯ ರೋಚಕತೆ ಕಥೆಗೆ ಇನ್ನಷ್ಟು ಭಾವನಾತ್ಮಕ ಓಗವನ್ನು ನೀಡುತ್ತದೆ. ತಾಯಿ ಸುಮಿತ್ರಾ ಮಗಳು ಝಾನ್ಸಿಯನ್ನು ಹೇಗೆ ಸೇರುತ್ತಾಳೆ? ಎಂಬುದು ಈ ಧಾರಾವಾಹಿ ಕಥೆಯ ಸ್ವಾರಸ್ಯ.
ಯಮುನಾ ಶ್ರೀನಿಧಿ ಎಂಟ್ರಿ ಕೊಟ್ಟ ಬಳಿಕ, “ಯಜಮಾನ” ಧಾರಾವಾಹಿ ಹೊಸ ಟ್ವಿಸ್ಟ್‌ಗೆ ಸಜ್ಜಾಗಿದೆ. ಪಾತ್ರಧಾರಿಗಳ ಶಕ್ತಿಯುತ ನಟನೆ, ಹೆಚ್ಚುತ್ತಿರುವ ಕುಟುಂಬ ಸಂಘರ್ಷಗಳು, ಭಾವನಾತ್ಮಕ ಕತೆ, ತಿರುವು-ಮರುತಿರುವುಗಳಿಂದ ಕೂಡಿದ ಕಂತುಗಳು ಪ್ರೇಕ್ಷಕರನ್ನು ಕಟ್ಟಿ ಹಾಕಲಿವೆ.
ಸೂಪರ್ ಹಿಟ್ಟಾರುವ ರಾಘು ಕ್ರೇಜಿ ಲುಕ್!
ಝಾನ್ಸಿಗೆ ಆಕ್ಸಿಡೆಂಟ್ ಆದ ಮೇಲೆ ಅವಳ ನೆನಪಿನ ಶಕ್ತಿ ಹೋಗಿದೆ. ಅವಳಿಗೆ ಈಗ ರಾಘು ನೆನಪಿಲ್ಲ. ಈಗ ಝಾನ್ಸಿಗೆ ಹಳೆಯ ನೆನಪು ಬರಬೇಕು ಅಥವಾ ಮತ್ತೆ ಝಾನ್ಸಿ ರಾಘುವನ್ನು ಪ್ರೀತಿಸಲು ಆರಂಭಿಸಬೇಕು. ಹೀಗಾಗಿ ಅವನು ಅವಳ ಕ್ಯಾಬ್ ಡ್ರೈವರ್ ಆಗೋದಲ್ಲದೆ ಹೊಸ ಹೇರ್‌ಸ್ಟೈಲ್ ಜೊತೆಗೆ ಅವಳ ಆಫೀಸ್‌ಗೆ ಹೋಗುತ್ತಾನೆ. ಇನ್ನೊಂದು ಕಡೆ ತುಳಸಿ ಸಂಚು ಮಾಡಿರುವುದನ್ನು ತಪ್ಪಿಸಬೇಕಾದ ರಾಘು ಹೊಸ ಲುಕ್‌ನೊಂದಿಗೆ ಬಂದಿರೋದು ಜನರಿಗೆ ಬಹಳ ಇಷ್ಟವಾಗಿದೆ. ಇನ್ನೊಂದು ಕಡೆ ಅನಿತಾ ಕೂಡ ಮತ್ತೆ ರಾಘುನನ್ನು ಪಡೆದುಕೊಳ್ಳಲು ಕುತಂತ್ರ ಮಾಡುತ್ತಿದ್ದಾಳೆ.
ಈ ಧಾರಾವಾಹಿ ಯಾವಾಗ ಪ್ರಸಾರ ಆಗಲಿದೆ?
ಕಲರ್ಸ್ ಕನ್ನಡದಲ್ಲಿ ಪ್ರತಿ ಸಂಜೆ 6ಕ್ಕೆ ಪ್ರಸಾರವಾಗುತ್ತಿರುವ “ಯಜಮಾನ” ಧಾರಾವಾಹಿಯಲ್ಲಿ ಸುಮಿತ್ರ ಎನ್ನುವ ಹೊಸ ಪಾತ್ರದಲ್ಲಿ ಯಮುನಾ ಶ್ರೀನಿಧಿಯ ಅಭಿನಯವನ್ನು ತಪ್ಪದೆ ನೋಡಿ


