Saregamapa Kannada Show: ಮತ್ತೆ ಹೊಸದಾಗಿ ಮಕ್ಕಳಿಗೋಸ್ಕರ ಸರಿಗಮಪ ಶೋ ಪ್ರಸಾರ ಆಗಲಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಆಡಿಷನ್ ನಡೆಯಲಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಅತಿ ಹೆಚ್ಚು ವೀಕ್ಷಕರನ್ನು ಪಡೆದಿರೋ ಸರಿಗಪ ಶೋ ಈಗ ಈಗ ತನ್ನ ಹೊಸ ಆವೃತ್ತಿಯೊಂದಿಗೆ ಕನ್ನಡಿಗರ ಮುಂದೆ ಬರಲು ಸಜ್ಜಾಗಿದೆ. ಈ ಬಾರಿಯ ಸರಿಗಮಪ ಮಕ್ಕಳಿಗಾಗಿ ನಡೆಯಲಿದ್ದು 3 ವರುಷದಿಂದ 15 ವರುಷದ ಒಳಗಿನ ಮಕ್ಕಳು ಈ ಆವೃತ್ತಿಯಲ್ಲಿ ಭಾಗವಹಿಸಬಹುದಾಗಿದೆ.
ಸರಿಗಮಪ Little Champs ಆಡಿಷನ್ಗಳು ಕರ್ನಾಟಕ 31 ಜಿಲ್ಲೆಗಳಲ್ಲಿ ನಡೆಯಲಿದೆ. ಚೆನ್ನಾಗಿ ಹಾಡುವ ಮಕ್ಕಳು, 3 ರಿಂದ 15 ವರ್ಷದ ಒಳಗಿದ್ದರೆ 3 ವಿಭಿನ್ನವಾದ ಹಾಡುಗಳನ್ನು ಕಲಿತು ಆಡಿಷನ್ ನಲ್ಲಿ ಭಾಗವಹಿಸಬಹುದಾಗಿದೆ. ಹಾಗೆಯೇ ಈ ಆಡಿಷನ್ ನಲ್ಲಿ ಭಾಗವಹಿಸಲು ಪಾಸ್ಪೋರ್ಟ್ ಸೈಜ್ ಫೋಟೋ, ಅಡ್ರೆಸ್ ಪ್ರೂಫ್ ಜಿರೋಸ್ ಕಡ್ಡಾಯ.
ಆಡಿಷನ್ ನಡೆಯುವ ಸ್ಥಳಗಳು ಮತ್ತು ದಿನಾಂಕಗಳು
ಫೆಬ್ರವರಿ 14 ಶನಿವಾರದಂದು ಕೊಪ್ಪಳ, ಶಿವಮೊಗ್ಗ, ತುಮಕೂರು, ಫೆಬ್ರವರಿ 15 ಭಾನುವಾರದಂದು ಬಳ್ಳಾರಿ, ಉಡುಪಿ ಮತ್ತು ಬೆಂಗಳೂರು, ಫೆಬ್ರವರಿ 16 ಸೋಮವಾರದಂದು ರಾಯಚೂರು, ಮಂಗಳೂರು, ಫೆಬ್ರವರಿ 17 ಮಂಗಳವಾರದಂದು ಯಾದಗಿರಿ, ಚಿತ್ರದುರ್ಗ ಮತ್ತು ಮಡಿಕೇರಿ, ಫೆಬ್ರವರಿ 18 ಬುಧವಾರದಂದು ಚಿಕ್ಕಮಗಳೂರು, ದಾವಣಗೆರೆ, ಫೆಬ್ರವರಿ 19 ಗುರುವಾರ ಬೀದರ್, ಹಾವೇರಿ, ಫೆಬ್ರವರಿ 20 ಶುಕ್ರವಾರ ಕಲುಬುರಗಿ, ಮಂಡ್ಯ, ಶಿರಸಿ, ಫೆಬ್ರವರಿ 21 ಶನಿವಾರದಂದು ವಿಜಯಪುರ, ಬೆಳಗಾವಿ, ಹಾಸನ, ಫೆಬ್ರವರಿ 22 ಭಾನುವಾರದಂದು ಬಾಗಲಕೋಟೆ, ಮೈಸೂರು, ಹುಬ್ಬಳ್ಳಿ, ಫೆಬ್ರವರಿ 23 ಸೋಮವಾರದಂದು ಗದಗ್, ಫೆಬ್ರವರಿ 24 ಮಂಗಳವಾರ ವಿಜಯನಗರ, ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ, ಫೆಬ್ರವರಿ 25 ಬುಧವಾರದಂದು ರಾಮನಗರ ಮತ್ತು ಕೋಲಾರದಲ್ಲಿ ನಡೆಯಲಿದೆ.
ಸ್ಪರ್ದಿಗಳು ಯಾವುದೇ ಟ್ರ್ಯಾಕ್ಸ್ ಬಳಸುವಂತಿಲ್ಲ. ಇನ್ನು ಈ ಆಡಿಷನ್ನಲ್ಲಿ ಭಾಗವಹಿಸಲು ಜೀ ಕನ್ನಡ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ. ಹಾಡೋ ಮಕ್ಕಳ ದನಿಗೆ ಜೀ ಕನ್ನಡ ವೇದಿಕೆಯ ಕೊಡುಗೆ; ಮತ್ಯಾಕೆ ತಡ, ಆಡಿಷನ್ನಲ್ಲಿ ಭಾಗವಹಿಸಿ ಮುಂದಿನ ಸುತ್ತಿಗೆ ಆಯ್ಕೆಯಾಗಿ!


