
ಆಂಧ್ರ ಶಾಸಕನ ಬಯೋಪಿಕ್ನಲ್ಲಿ ಶಿವಣ್ಣ: 'ಗುಮ್ಮಡಿ ನರಸಯ್ಯ'ನಾದ ಹ್ಯಾಟ್ರಿಕ್ ಹೀರೋ!
ದೀಪಾವಳಿಗೆ ಶಿವರಾಜ್ಕುಮಾರ್ ನಟನೆಯ 2 ಹೊಸ ಸಿನಿಮಾ ಅನೌನ್ಸ್ ಆಗಿವೆ. ಅದ್ರಲ್ಲೂ ಶಿವಣ್ಣ ಒಬ್ಬ ಹೆಸರಾಂತ ರಾಜಕಾರಣಿಯ ಬಯೋಪಿಕ್ ಸಿನಿಮಾದಲ್ಲಿ ನಟಿಸ್ತಾ ಇದ್ದು, ಅದು ಪ್ಯಾನ್ ಇಂಡಿಯಾ ಸದ್ದು ಮಾಡೋ ಸೂಚನೆ ನೀಡಿದೆ.
ಸೆಂಚುರಿ ಸ್ಟಾರ್ ಶಿವಣ್ಣ ಡಜನ್ ಗಟ್ಟಳೇ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರ ನಡುವೆ ದೀಪಾವಳಿಗೆ ಶಿವರಾಜ್ಕುಮಾರ್ ನಟನೆಯ 2 ಹೊಸ ಸಿನಿಮಾ ಅನೌನ್ಸ್ ಆಗಿವೆ. ಅದ್ರಲ್ಲೂ ಶಿವಣ್ಣ ಒಬ್ಬ ಹೆಸರಾಂತ ರಾಜಕಾರಣಿಯ ಬಯೋಪಿಕ್ ಸಿನಿಮಾದಲ್ಲಿ ನಟಿಸ್ತಾ ಇದ್ದು, ಅದು ಪ್ಯಾನ್ ಇಂಡಿಯಾ ಸದ್ದು ಮಾಡೋ ಸೂಚನೆ ನೀಡಿದೆ. ಯೆಸ್ ದೀಪಾವಳಿಗೆ ಶಿವಣ್ಣನ ಎರಡು ಹೊಸ ಸಿನಿಮಾ ಅನೌನ್ಸ್ ಆಗಿವೆ. ಪದವಿ ಪೂರ್ವ ಸಿನಿಮಾ ನಿರ್ದೇಶನ ಮಾಡಿದ್ದ ಹರಿ ಜಯಣ್ಣ ನಿರ್ದೇಶನದಲ್ಲಿ ಶಿವಣ್ಣ 135 ಮೂವಿ ಬರಲಿದ್ದು ಅದರ ಪೋಸ್ಟರ್ ರಿಲೀಸ್ ಆಗಿದೆ. ಇದರ ಜೊತೆಗೆ ‘ಗುಮ್ಮಡಿ ನರಸಯ್ಯ' ಫಸ್ಟ್ ಲುಕ್ ರಿಲೀಸ್ ಆಗಿದ್ದು ಶಿವಣ್ಣನ ಲುಕ್ ನೋಡಿ ಫ್ಯಾನ್ಸ್ ವಾರೇವ್ಹಾ ಅಂತಿದ್ದಾರೆ. ಗುಮ್ಮಡಿ ನರಸಯ್ಯ' ಒಂದು ಬಯೋಪಿಕ್ ಆಗಿದ್ದು, ತೆಲಂಗಾಣದ ಯಲ್ಲಂದು ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಗುಮ್ಮಡಿ ನರಸಯ್ಯ ಅವರ ಜೀವನ ಚರಿತ್ರೆಯನ್ನ ಇದು ತೆರೆಗೆ ತರಲಿದೆ.
ಶಿವಣ್ಣ ಇಲ್ಲಿ ಗುಮ್ಮಡಿ ನರಸಯ್ಯ ಅವರ ಪಾತ್ರದಲ್ಲಿ ಕಾಣಿಸಿಕೊಳ್ತಾ ಇದ್ದಾರೆ. ರಿಯಲ್ ನರಸಯ್ಯನನ್ನ ನೋಡಿದವರು ಶಿವಣ್ಣನ ಲುಕ್ ಥೇಟ್ ಅವರಂತೆಯೇ ಇದೆ ಅಂತಿದ್ದಾರೆ. ಹೌದು ಗುಮ್ಮಡಿ ನರಸಯ್ಯ ತನ್ನ ಸರಳತೆಗೆ ಹೆಸರಾಗಿದ್ದ ಕಮ್ಯುನಿಸ್ಟ್ ರಾಜಕಾರಣಿ. ವಿಧಾನಸಭೆಗೆ ಗುಮ್ಮಡಿ ನರಸಯ್ಯ ಸೈಕಲ್ ನಲ್ಲಿ ಬರ್ತಾ ಇದ್ರಂತೆ. ಐದು ಬಾರಿ ಶಾಸಕರಾಗಿದ್ದರೂ ಇವರು ಸೈಕಲ್ ನಲ್ಲಿಯೇ ಓಡಾಟ, ರಸ್ತೆ ಬದಿಯಲ್ಲಿ ಊಟ, ಹಳೆ ಮನೆಯಲ್ಲಿಯೇ ವಾಸ ಮಾಡ್ತಿದ್ದ ಈ ಶುದ್ದಹಸ್ತ, ಸರಳ ರಾಜಕಾರಣಿಯ ಬಯೋಪಿಕ್ನ ತೆರೆಗೆ ತರಲಾಗ್ತಾ ಇದೆ. ಈಗಾಗಲೇ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಎಲ್ಲರ ಗಮಸನೆಳೆದಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ. ಎನ್ ಸುರೇಶ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದು, ನಿರ್ದೇಶನದ ಹೊಣೆ ಪರಮೇಶ್ವರ್ ಹಿವರಾಲೆ ಅವರದ್ದು. ಒಟ್ಟಾರೆ ಶಿವಣ್ಣ ದೀಪಾವಳಿಗೆ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದು, ವಿಭಿನ್ನ ಪಾತ್ರದ ಮೂಲಕ ನಿಮ್ಮೆದುರು ಬರ್ತಿನಿ ಅಂದಿದ್ದಾರೆ.