
RCB ಸಂಭ್ರಮದಲ್ಲಿ ಸಾವಿನ ಸೂತಕ! ನಡೆಯಬಾರದ ದುರಂತ ನಡೆದು ಹೋಯ್ತು, ಇದಕ್ಕೆ ಹೊಣೆ ಯಾರು?
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 11 ಮಂದಿ ಬಲಿಯಾಗಿದ್ದಾರೆ. ಈ ಸಾವಿಗೆ ಹೊಣೆಯಾರು? ಈ ಘಟನೆಗೆ ಕಾರಣವೇನು ನೋಡೋಣ ಬನ್ನಿ
ಬೆಂಗಳೂರು: ಸತತ 18 ವರ್ಷಗಳ ಕಾಯುವುಕೆ, ಕಳೆದ 17 ವರ್ಷಗಳಿಂದ ಪ್ರತಿ ವರ್ಷವೂ ನಿರಾಶೆ, ನೋವು, ಬೇಸರ. 2016ರಲ್ಲಿ ಇನ್ನೇನು ಕಪ್ ಗೆದ್ದೇ ಬಿಟ್ವಿ ಅನ್ನುವಷ್ಟರಲ್ಲಿ ಮತ್ತೆ ಸೋಲು. ಆದರೆ ಇದೀಗ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಅಹಮದಾಬಾದ್‌ನಲ್ಲಿ ಟ್ರೋಫಿ ಗೆದ್ದು, ತವರಿನಲ್ಲಿ ಸಂಭ್ರಮಾಚರಣೆ ಮಾಡಲು ಬೆಂಗಳೂರಿಗೆ ಬಂದಿಳಿದ ಆರ್‌ಸಿಬಿ ಆಟಗಾರರನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದರು. ನಿನ್ನೆ ಸಂಜೆ ವಿಧಾನಸೌಧದ ಮುಂಬಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಆಟಗಾರರಿಗೆ ಸನ್ಮಾನ ಕೂಡಾ ಮಾಡಲಾಯಿತು. ಆದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭೀಕರ ಕಾಲ್ತುಳಿತಕ್ಕೆ ಬರೋಬ್ಬರಿ 11 ಮಂದಿ ಪ್ರಾಣತೆತ್ತಿದ್ದಾರೆ. ಈ ಸಾವು ನ್ಯಾಯವೇ? ಈ ಸಾವಿಗೆ ಹೊಣೆ ಯಾರು?
ಈ ದುರಂತಕ್ಕೆ ನಿಜವಾದರ ಕಾರಣವೇನು? ಘಟಿಸಿದ ದುರಂತಕ್ಕೆ ಸರ್ಕಾರ ಹೇಳೋದೇನು? ವಿರೋಧ ಪಕ್ಷದವರ ಆರೋಪವೇನು? ಹಾಗೆನೇ ಅಭಿಮಾನಿಗಳ ಆರೋಪವೇನು? ಈ ದುರಂತ ಸಂಭವಿಸಿದ ಮೇಲೆ ಸಿಎಂ ಸಿದ್ದರಾಮಯ್ಯ ಪ್ರೆಸ್ ಮೀಟ್ ಮಾಡಿದ್ರು. ಪ್ರೆಸ್ಮೀಟ್ನಲ್ಲಿ ಸಿಎಂ ಏನೆಲ್ಲ ಮಾತ್ನಾಡಿದ್ದಾರೆ ಅನ್ನೋದನ್ನು ನೋಡಿ