ಸಿನಿಮಾ ಸ್ಟೈಲ್‌ನಲ್ಲಿ ಜಿಮ್ ಟ್ರೈನರ್ ಮೇಲೆ ಡೆಡ್ಲಿ ಅಟ್ಯಾಕ್: ಯುವತಿಗೆ ಮೆಸೇಜ್​ ಮಾಡಿದ್ದೇ ಕಾರಣವಾಯ್ತಾ?

ಸಿನಿಮಾ ಸ್ಟೈಲ್‌ನಲ್ಲಿ ಜಿಮ್ ಟ್ರೈನರ್ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿರುವ ಘಟನೆ ಹೆಬ್ಬಗೋಡಿಯ ಅನಂತನಗರದ ಜಿಮ್‌ನಲ್ಲಿ ನಡೆದಿದೆ. ಜಿಮ್‌ಗೆ ನುಗ್ಗಿದ ಐವರು ಟ್ರೈನರ್ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದು, ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Share this Video
  • FB
  • Linkdin
  • Whatsapp

ಆನೇಕಲ್ (ಅ.01): ಸಿನಿಮಾ ಸ್ಟೈಲ್‌ನಲ್ಲಿ ಜಿಮ್ ಟ್ರೈನರ್ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿರುವ ಘಟನೆ ಹೆಬ್ಬಗೋಡಿಯ ಅನಂತನಗರದ ಜಿಮ್‌ನಲ್ಲಿ ನಡೆದಿದೆ. ಜಿಮ್‌ಗೆ ನುಗ್ಗಿದ ಐವರು ಟ್ರೈನರ್ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದು, ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ 23ನೇ ತಾರೀಖಿನಂದು ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದ್ದು, ಆನೇಕಲ್ ಪಟ್ಟಣ ವಾಸಿ ಜಿಮ್ ಟ್ರೈನರ್ ಸಂದೀಪ್ ಮೇಲೆ ಹಲ್ಲೆಯಾಗಿದೆ. ಅನಂತನಗರದ ರಿಪ್ಡ್ ಜಿಮ್ ಟ್ರೈನರ್ ಆಗಿದ್ದ ಸಂದೀಪ್ ಮೇಲೆ ಏಕಾಏಕಿ ಜಿಮ್‌ಗೆ ನುಗ್ಗಿದ ಅರುಣ್, ಗೌತಮ್, ಅನುಷಾ, ಮೇಘನಾ ಸೇರಿದಂತೆ ಇತರರು ಹಲ್ಲೆ ನಡೆಸಿದ್ದಾರೆ.

ಜಿಮ್‌ನಲ್ಲಿ ಟ್ರೈನರ್ ಸಂದೀಪ್ ಕ್ಲೈಂಟ್ ಆಗಿದ್ದ ಅನುಷಾ, ಸ್ನೇಹಿತರಾಗಿ ವಾಟ್ಸಾಪ್‌ನಲ್ಲಿ ಚಾಟಿಂಗ್ ಕೂಡ ಮಾಡುತ್ತಿದ್ರು. ಈ ನಡುವೆ ಅನುಷಾ ಮೊಬೈಲ್ ಚೆಕ್ ಮಾಡಿದ್ದ ಸಹೋದರರಾದ ಗೌತಮ್, ಅರುಣ್, ಅನುಷಾ ಮೊಬೈಲ್ ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿ ಜಿಮ್‌ಗೆ ನುಗ್ಗಿ ರಾಡ್ ಮತ್ತು ಕೈಗಳಿಂದ ಟ್ರೈನರ್ ಸಂದೀಪ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡ ಸಂದೀಪ್‌ರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಇನ್ನು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ದ ಪ್ರಕರಣ ದಾಖಲಾಗಿದೆ.

Related Video