ತಮಿಳು 'ಮಿತ್ರನ್' ಜೊತೆ ಯಶ್ ಹೊಸ ಸಿನಿಮಾ? ರಾಕಿಂಗ್‌ ಸ್ಟಾರ್‌ ಮನಗೆದ್ದ ಕಥೆ ಯಾವುದು?

ಕೆಜಿಎಫ್ 1 & 2 ಗ್ಲೋಬಲ್ ಸಕ್ಸಸ್ ನಂತರ ಯಶ್ ಯಾರ ಕೈಗೂ ಸಿಕ್ತಾ ಇಲ್ಲ. ಅದೆಷ್ಟೇ ದೊಡ್ಡ ನಿರ್ಮಾಪಕರು ಬಂದು ಅದೆಷ್ಟೇ ದೊಡ್ಡ ಆಫರ್ ಕೊಟ್ರು ರಾಕಿ ಒಪ್ಪಿಲ್ಲ. ಸದ್ಯ ಕೆವಿಎನ್ ಪ್ರೊಡಕ್ಷನ್ ಮತ್ತು ಖುದ್ದು ಯಶ್ ನಿರ್ಮಾಣ ಮಾಡ್ತಾ ಇರೋ ಟಾಕ್ಸಿಕ್ ಕೊನೆಯ ಹಂತದ ಶೂಟಿಂಗ್‌ನಲ್ಲಿದೆ.

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟನೆಯ 'ಟಾಕ್ಸಿಕ್' ಮತ್ತು 'ರಾಮಾಯಣ ಪಾರ್ಟ್-1' ಸಿನಿಮಾಗಳು ಮುಂದಿನ ವರ್ಷ ತೆರೆಗೆ ಬರಲಿದೆ. ಇವುಗಳ ಬಳಿಕ ಯಶ್ ನಟಿಸಲಿರೋ ಮುಂದಿನ ಸಿನಿಮಾ ಯಾವುದು ಅನ್ನೋ ಪ್ರಶ್ನೆ ಎಲ್ಲರಲ್ಲೂ ಇದೆ. ಸದ್ಯ ಯಶ್ ಹೊಸತೊಂದು ಸಿನಿಮಾಗೆ ಯೆಸ್ ಅಂದಿದ್ದಾರೆ ಅನ್ನೋದು ಸುದ್ದಿ ಕಾಲಿವುಡ್​​ನಲ್ಲಿ ಸದ್ದು ಮಾಡ್ತಾ ಇದೆ. ಈ ಸುದ್ದಿ ಹಿಂದಿನ ಅಸಲೀಯತ್ತು ಏನು..? ಗೊತ್ತಾಗಬೇಕು ಅಂದ್ರೆ ಈ ಸ್ಟೋರಿ ನೋಡಿ.

ಯೆಸ್ ಕೆಜಿಎಫ್ 1 & 2 ಗ್ಲೋಬಲ್ ಸಕ್ಸಸ್ ನಂತರ ಯಶ್ ಯಾರ ಕೈಗೂ ಸಿಕ್ತಾ ಇಲ್ಲ. ಅದೆಷ್ಟೇ ದೊಡ್ಡ ನಿರ್ಮಾಪಕರು ಬಂದು ಅದೆಷ್ಟೇ ದೊಡ್ಡ ಆಫರ್ ಕೊಟ್ರು ರಾಕಿ ಒಪ್ಪಿಲ್ಲ. ಸದ್ಯ ಕೆವಿಎನ್ ಪ್ರೊಡಕ್ಷನ್ ಮತ್ತು ಖುದ್ದು ಯಶ್ ನಿರ್ಮಾಣ ಮಾಡ್ತಾ ಇರೋ ಟಾಕ್ಸಿಕ್ ಕೊನೆಯ ಹಂತದ ಶೂಟಿಂಗ್ ನಲ್ಲಿದೆ.

ಮಾರ್ಚ್ 19, 2026ಕ್ಕೆ ಈ ಗ್ಯಾಂಗ್​​ಸ್ಟರ್ ಮೂವಿ ತೆರೆಗೆ ಬರಲಿದೆ. ಇನ್ನೂ ಇದಾದ ಬಳಿಕ ಯಶ್ ಅಕೌಂಟ್​ನಲ್ಲಿರೋದು ಬಹುಕೋಟಿ ವೆಚ್ಚದ ರಾಮಾಯಣ ಪ್ರಾಜೆಕ್ಟ್. 2026ರ ದೀಪಾವಳಿಗೆ ರಾಮಾಯಣ ಪಾರ್ಟ್-1 ತೆರೆಗೆ ಬಂದ್ರೆ 2027ರ ದೀಪಾವಳಿಗೆ ರಾಮಾಯಣ ಪಾರ್ಟ್-2 ಬರಲಿದೆ.

ಇನ್ನೂ ಇವುಗಳ ಬಳಿಕ ಯಶ್ ಯಾವ ಸಿನಿಮಾಗೂ ಒಪ್ಪಿಗೆ ಕೊಟ್ಟಿಲ್ಲ. ಈ ನಡುವೆ ತಮಿಳು ನಿರ್ದೇಶಕ ಪಿ.ಎಸ್ ಮಿತ್ರನ್ ಅವರ ಸ್ಕ್ರಿಪ್ಟ್​ನ ಯಶ್ ಓಕೆ ಮಾಡಿದ್ದಾರೆ ಅನ್ನೋ ನ್ಯೂಸ್ ಹರಿದಾಡ್ತಾ ಇದೆ. ಇದೊಂದು ಬಿಗ್ ಬಜೆಟ್ ಸೈನ್ಸ್ ಫಿಕ್ಷನ್ ಸಿನಿಮಾ ಎನ್ನಲಾಗ್ತಾ ಇದೆ. ಪಿ.ಎಸ್ ಮಿತ್ರನ್ ಈ ಹಿಂದೆ ಟ್ರಿಗರ್, ಸರ್ದಾರ್, ಸರ್ದಾರ್-2 ನಂತಹ ಸಿನಿಮಾಗಳನ್ನ ಮಾಡಿದ್ರು.

ಕಾಲಿವುಡ್ ಅಂಗಳದಲ್ಲಿ ಈ ಸುದ್ದಿ ಸಖತ್ ಸದ್ದು ಮಾಡ್ತಾ ಇದೆ. ಆದ್ರೆ ಯಶ್ ಕಡೆಯಿಂದ ಈ ನ್ಯೂಸ್ ಇನ್ನೂ ಕನ್ಫರ್ಮ್ ಆಗಿಲ್ಲ. ಯಶ್ ಕಥೆ ಕೇಳ್ತಾ ಇದ್ದಾರಾದ್ರೂ ಸದ್ಯಕ್ಕೆ ಅವರ ಫೋಕಸ್ ಟಾಕ್ಸಿಕ್, ಮತ್ತು ರಾಮಾಯಣ ಮೇಲೆ ಮಾತ್ರವಿದೆಯಂತೆ. ಇದರ ನಡುವೆ ಯಶ್ ಹೊಸ ಕಥೆ ಓಕೆ ಮಾಡಿದ್ರಾ ಗೊತ್ತಿಲ್ಲ. ಆದ್ರೆ ಯಶ್ ಓಕೆ ಮಾಡಿದ್ರೆ ಅದು ಅದ್ಭುತ ಕಥೆಯಾಗಿರುತ್ತೆ ಅನ್ನೋದಂತೂ ಸುಳ್ಳಲ್ಲ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ..

Related Video