
Suvarna Special: ಭಾರತಕ್ಕೆ ನಂಬಿಕೆ ದ್ರೋಹ ಮಾಡಿದ್ರಾ ಡೊನಾಲ್ಡ್ ಟ್ರಂಪ್?
ಭಾರತ-ಪಾಕ್ ಕದನ ವಿರಾಮದಲ್ಲಿ ಟ್ರಂಪ್ ಪಾತ್ರ ಅನುಮಾನ ಹುಟ್ಟಿಸಿದೆ. ಪಾಕ್ ಸೇನಾ ಮುಖ್ಯಸ್ಥನನ್ನು ರಕ್ಷಿಸಿ ಲಾಭ ಪಡೆಯಲು ಟ್ರಂಪ್ ಯುದ್ಧ ನಿಲ್ಲಿಸಿದ್ರಾ? ಟ್ರಂಪ್ ಮಕ್ಕಳ ಕ್ರಿಪ್ಟೋ ಒಪ್ಪಂದದಿಂದ ಯುದ್ಧ ನಿಲುಗಡೆಯಾಯಿತೇ?
ಬೆಂಗಳೂರು (ಮೇ.19): ಭಾರತ ಮತ್ತು ಪಾಕ್ ನಡುವೆ ಕದನ ವಿರಾಮದ ಕುರಿತಾಗಿ ಟ್ರಂಪ್ ನಡೆದುಕೊಂಡ ರೀತಿಯಲ್ಲಿ ಒಂದಿಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ನಾನೇ ಯುದ್ಧ ನಿಲ್ಲಿಸಿದ್ದು ಎಂದು ಟ್ರಂಪ್ ಹೇಳಿದ್ದರ ಹಿಂದೆ ಟ್ರಂಪ್‌ನ ಮತ್ತೊಂದು ಭಯಾನಕ ನೀತಿ ಇದೆ ಎಂದೆನಿಸುತ್ತಿದೆ.
ಈ ಕದನ ವಿರಾಮಕ್ಕೂ ಮುನ್ನ ಟ್ರಂಪ್ ಪಾಕಿಸ್ತಾನದೊಂದಿಗೆ ವ್ಯವಹಾರವೊಂದನ್ನು ನಡೆಸಿರುವ ಕುರಿತು ಅನುಮಾನಗಳು ಹುಟ್ಟಿಕೊಂಡಿವೆ. ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್‌ನನ್ನು ಬಚಾವ್ ಮಾಡಿ ಟ್ರಂಪ್ ಲಾಭ ಪಡೆಯಲು ಹೀಗೆ ಮಾಡಿದ್ರಾ ಎಂದು ಹೇಳಲಾಗುತ್ತಿದೆ. ಹಾಗಿದ್ದಲ್ಲಿ ಟ್ರಂಪ್‌ನ ಈ ನಡೆ ಹಿಂದಿರುವ ಇನ್ನೊಂದು ಮುಖ ಯಾವುದು?
ಲಷ್ಕರ್‌ನ ಇಬ್ಬರು ಉಗ್ರರು ಟ್ರಂಪ್‌ಗೀಗ ಸಲಹೆಗಾರರು! ಯಾರು ಈ ಎಕ್ಸ್-ಜಿಹಾದಿಸ್ಟ್?
ಡೊನಾಲ್ಡ್ ಟ್ರಂಪ್ ಶಕುನಿ ಪಾಕಿಸ್ತಾನದೊಳಗೆ ಆತನ ಮಕ್ಕಳು ಮಾಡಿಕೊಂಡ ಈ ಕ್ರಿಪ್ಟೋ ಒಪ್ಪಂದದಿಂದಾಗಿಯೇ ಭಾರತ ಮತ್ತು ಪಾಕ್ ನಡುವೆ ಯುದ್ಧ ನಡೆಯೋದನ್ನು ನಿಲ್ಲಿಸಿದ್ರಾ? ಒಂದು ವೇಳೆ ಯುದ್ಧ ಮುಂದುವರೆದಿದ್ರೆ ಈ ಒಪ್ಪಂದಕ್ಕೆ ದೊಡ್ಡ ಮಟ್ಟದ ತೊಂದರೆಗಳು ಆಗುತ್ತಿದ್ದವಾ ಅನ್ನೋ ಪ್ರಶ್ನೆಗಳು ಎದ್ದಿವೆ.