
ಸೊಂಡಿಲೆತ್ತಿ ಕಬ್ಬು ಲಾರಿ ಮುಂಭಾಗದ ಗಾಜಿನ ಮೇಲೆ ಕಾಲಿಟ್ಟ ಆನೆ: ಲಾರಿ ಚಾಲಕ ಗ್ರೇಟ್ ಎಸ್ಕೇಪ್!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಲವು ವೀಡಿಯೋಗಳ ಸಣ್ಣ ಝಲಕ್ ಇಲ್ಲಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಲವು ವೀಡಿಯೋಗಳ ಸಣ್ಣ ಝಲಕ್ ಇಲ್ಲಿದೆ. ಆನೆಯೊಂದು ಕಾಡಿನಿಂದ ರಸ್ತೆಗೆ ನುಗ್ಗಿದ್ದು, ರಸ್ತೆಯಲ್ಲಿ ಸಾಗುತ್ತಿದ್ದ ಕಬ್ಬು ತುಂಬಿದ ಲಾರಿಯೊಂದರಿಂದ ಸುಂಕ ವಸೂಲಿ ಮಾಡಿದೆ. ಸಾಗುತ್ತಿದ್ದ ಲಾರಿಯನ್ನು ನಿಲ್ಲಿಸುವುದಕ್ಕಾಗಿ ಕಾಡಾನೆ ತನ್ನ ಸೊಂಡಿಲನ್ನು ಮೇಲೆತ್ತಿ ತನ್ನ ಕಾಲನ್ನು ಗಾಜಿನ ಮೇಲಿಟ್ಟಿದೆ. ಆನೆಯ ಹೀಗೆ ಗಾಜಿನ ಮೇಲೆ ಕಾಲಿಡುತ್ತಿದ್ದಂತೆ ಲಾರಿಯ ಮುಂಭಾಗದ ಗಾಜು ಛಿದ್ರಗೊಂಡಿದ್ದು ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗೆಯೇ ಮತ್ತೊಂದು ವೀಡಿಯೋದಲ್ಲಿ ತಾಯಿಯ ಬಳಿ ನಿಂತಿದ್ದ ಮಗುವಿನ ಮೇಲೆಯೇ ಬೀದಿನಾಯೊಂದು ದಾಳಿ ಮಾಡಿದೆ. ಮಗುವನ್ನು ನಾಯಿಯಿಂದ ರಕ್ಷಿಸಲು ತಾಯಿ ಪರದಾಟ ನಡೆಸಿದ್ದಾಳೆ. ಇವು ಸೇರಿದಂತೆ ಹಲವು ವೈರಲ್ ವೀಡಿಯೋಗಳು ಇಲ್ಲಿವೆ ನೋಡಿ...