ಅಖಂಡ ಭಾರತದ ಕನಸು ಏನಾಯ್ತು? ಖರ್ಗೆಯಿಂದ ಬಿಜೆಪಿ ವಕ್ತಾರರಿಗೆ ತಿರುಗೇಟು

Share this Video
  • FB
  • Linkdin
  • Whatsapp

ಜನರು ಆತಂಕದಿಂದ ಉತ್ತರಕ್ಕಾಗಿ ಕಾಯುತ್ತಿರುವಾಗ, ಪ್ರಧಾನಿಯವರು ನೇರವಾಗಿ ಸಂವಹನ ನಡೆಸದೆ ತಮ್ಮ 'ಸ್ನೇಹಿತ' ಡೊನಾಲ್ಡ್ ಟ್ರಂಪ್ ಮೂಲಕ ಮಾಹಿತಿ ತಿಳಿಯುವಂತಹ ಪರಿಸ್ಥಿತಿಯನ್ನು ಪ್ರಿಯಾಂಕ್ ಖರ್ಗೆ ಕಟುವಾಗಿ ಟೀಕಿಸಿದ್ದಾರೆ. 'ಪರೀಕ್ಷಾ ಪೇ ಚರ್ಚಾ', 'ಮನ್ ಕೀ ಬಾತ್'ಗಳಿಗೆ ಬರುವ ಪ್ರಧಾನಿ, ರಾಷ್ಟ್ರೀಯ ಮಹತ್ವದ ವಿಷಯಗಳಲ್ಲಿ ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿ, ಉತ್ತರ ಕೇಳುವುದು ಜನರ ಹಕ್ಕು ಎಂದಿದ್ದಾರೆ. ವ್ಯಕ್ತಿ ವೈಭವೀಕರಣ ಹೆಚ್ಚಾಗುತ್ತಿದ್ದು, ರಾಷ್ಟ್ರೀಯ ಟಿವಿಗಳಲ್ಲಿ ಬಿಜೆಪಿ ವಕ್ತಾರರು 'ಪಾಕಿಸ್ತಾನ ನಾಲ್ಕು ತುಂಡಾಗುತ್ತದೆ', 'ಅಖಂಡ ಭಾರತ'ದಂತಹ ಬಾಲಿಶ ಹಾಗೂ ಅಬ್ಬರದ ಹೇಳಿಕೆಗಳನ್ನು ನೀಡುತ್ತಿರುವುದನ್ನು ಖಂಡಿಸಿದ್ದಾರೆ, ಆ ಮಾತುಗಳು ಈಗ ಎಲ್ಲಿ ಹೋದವು ಎಂದು ಕುಟುಕಿದ್ದಾರೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://www.youtube.com/live/R50P2knCQBs?feature=shared

Related Video