ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!

ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ಇತ್ತ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣ್ತಾ ಇದ್ರೆ, ಅತ್ತ ದರ್ಶನ್ ಎ-2 ಆಗಿರೋ ರೇಣುಕಾಸ್ವಾಮಿ ಕೊಲೆ ಕೇಸ್ನ ವಿಚಾರಣೆ ಆರಂಭವಾಗಿದೆ. ಈ ಕೇಸ್ನಲ್ಲಿ ಮೊದಲ ಸಾಕ್ಷಿಯ ವಿಚಾರಣೆ ನಡೆದಿದೆ.

Share this Video
  • FB
  • Linkdin
  • Whatsapp

ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ಇತ್ತ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣ್ತಾ ಇದ್ರೆ, ಅತ್ತ ದರ್ಶನ್ ಎ-2 ಆಗಿರೋ ರೇಣುಕಾಸ್ವಾಮಿ ಕೊಲೆ ಕೇಸ್ನ ವಿಚಾರಣೆ ಆರಂಭವಾಗಿದೆ. ಈ ಕೇಸ್ನಲ್ಲಿ ಮೊದಲ ಸಾಕ್ಷಿಯ ವಿಚಾರಣೆ ನಡೆದಿದೆ. ದರ್ಶನ್ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದು, ಮುಂದೇನಾಗುತ್ತೋ ಅನ್ನೋ ಆತಂಕದಲ್ಲೇ ಟ್ರಯಲ್ ವೀಕ್ಷಿಸಿದ್ದಾರೆ. ಯೆಸ್ ಡೆವಿಲ್ ಸಿನಿಮಾ ತೆರೆಕಂಡು ಒಂದು ವಾರ ಕಂಪ್ಲೀಟ್ ಆಗಿದೆ, ಇದೂವರೆಗೂ ಸಿನಿಮಾ 25 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ದರ್ಶನ್ ಜೈಲಿನಲ್ಲಿದ್ದಾಗ ತೆರೆಕಂಡ ಡೆವಿಲ್ ಕಾಟೇರನಷ್ಟು ಯಶಸ್ಸು ಕಾಣದೇ ಹೋದರೂ ಬಾಕ್ಸಾಫೀಸ್ನಲ್ಲಿ ದೊಡ್ಡ ಗಳಿಕೆಯನ್ನಂತೂ ಮಾಡಿದೆ. ಇನ್ನೂ ಇತ್ತ ಚಿತ್ರಮಂದಿರದಲ್ಲಿ ಡೆವಿಲ್ ಆಟ ಸಾಗ್ತಾ ಇದ್ರೆ ಅತ್ತ ಕೋರ್ಟ್ನಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್ ಟ್ರಯಲ್ ಶುರುವಾಗಿದೆ.

ಬುಧವಾರ ಸೆಷೆನ್ಸ್ ಕೋರ್ಟ್ನಲ್ಲಿ ಸಾಕ್ಷಿಗಳ ಮರುವಿಚಾರಣೆ ಪ್ರಕ್ರಿಯೆ ಆರಂಭಗೊಂಡಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸ್ಥಳೀಯ ನ್ಯಾಯಾಲಯ ಒಟ್ಟು ಮೂವರಿಗೆ ಪಾಟೀ ಸವಾಲಿಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದೆ. ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ, ತಾಯಿ ರತ್ನಪ್ರಭಾ ಹಾಗೂ ಮೃತದೇಹವನ್ನ ಮೊದಲು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದ ಅಪಾರ್ಟ್‌ಮೆಂಟ್ ವಾಚ್‌ಮ್ಯಾನ್‌ಗೆ ಈ ನೋಟಿಸ್ ನೀಡಲಾಗಿದ್ದು, ಇವರು ಮೊದಲ ದಿನ ಕೋರ್ಟ್ಗೆ ಹಾಜರಾಗಿದ್ದಾರೆ. ಎ-1 ಪವಿತ್ರಾ ಗೌಡ ಪರ ವಕೀಲ ಬಾಲನ್, ರೇಣುಕಾಸ್ವಾಮಿ ತಾಯಿ ರತ್ನಪ್ರಭ ಅವರನ್ನ ಪಾಟಿ ಸವಾಲಿಗೆ ಒಳಪಡಿಸಿದ್ದು, ಅವರ ಮಗನ ಬಗ್ಗೆ ಅನೇಕ ಪ್ರಶ್ನೆ ಕೇಳಿದ್ದಾರೆ. ಬಹಳಷ್ಟು ಪ್ರಶ್ನೆಗಳಿಗೆ ರತ್ನಪ್ರಭ ಗೊತ್ತಿಲ್ಲ ಅನ್ನೋ ಉತ್ತರ ನೀಡಿದ್ದಾರೆ.

ಪಾಟೀ ಸವಾಲು ನಡೆಸುವಷ್ಟರಲ್ಲಿ ನ್ಯಾಯಾಲಯದ ಕಲಾಪದ ಅವಧಿ ಮುಗಿದಿದ್ದು, ಇಂದು ಮಧ್ಯಾಹ್ನ ಕೂಡ ಟ್ರಯಲ್ ಮುಂದುವರೆಯಲಿದೆ. ಇತ್ತೀಚಿಗೆ ದರ್ಶನ್ ಌಂಡ್ ಗ್ಯಾಂಗ್ ಕೋರ್ಟ್ನಲ್ಲಿ ಮನವಿ ಸಲ್ಲಿಸಿ, ಟಿವಿಯನ್ನ ಪಡೆದುಕೊಂಡಿತ್ತು. ಇದೀಗ ಪವಿತ್ರಾ ಗೌಡ ಪರ ವಕೀಲರು ಕೂಡ ಪವಿತ್ರಾಗೆ ಜೈಲಿನಲ್ಲಿ ಟಿವಿ ಕೊಡಿ ಅಂತ ಮನವಿ ಮಾಡಿದ್ದಾರೆ. ಜೊತೆಗೆ ಮನೆಊಟಕ್ಕೆ ಅವಕಾಶ ಕೊಡಿ ಅಂತ ಕೇಳಿಕೊಂಡಿದ್ದಾರೆ. ಜೈಲ್ ಮ್ಯಾನುವೆಲ್ ಪ್ರಕಾರ ಸೌಲಭ್ಯ ಕೊಡುವಂತೆ ಕೋರ್ಟ್ ಸೂಚನೆ ಕೊಟ್ಟಿದೆ. ಆದ್ರೆ ದರ್ಶನ್ ಟಿವಿ ಪಡೆದುಕೊಂಡಿದ್ದು, ಡೆವಿಲ್ ಸಿನಿಮಾ ಕುರಿತ ಸುದ್ದಿಗಳನ್ನ ನೋಡ್ಲಿಕ್ಕೆ, ಆದ್ರೆ ಅಷ್ಟರಲ್ಲಿ ಟ್ರಯಲ್ ಶುರುವಾಗಿದ್ದು, ದಾಸನಿಗೆ ಕೋರ್ಟ್ ಕಲಾಪದ ಸುದ್ದಿ ನೋಡೋ ಪರಿಸ್ಥಿತಿ ಬಂದಿದೆ. ಪವಿತ್ರಾಗೂ ಟಿವಿ, ದಿನಪತ್ರಿಕೆ ಸೌಲಭ್ಯ ಸಿಗಲಿದ್ದು, ಅವು ನೆಮ್ಮದಿ ಕೊಡ್ತಾವಾ ಅಥವಾ ಕೇಸ್ ಕುರಿತ ವಿವರ ತಿಳಿಸಿ ನೆಮ್ಮದಿ ಕಿತ್ತುಕೊಳ್ತಾವಾ.. ಕಾದುನೋಡಬೇಕು.

Related Video