
ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್' ಗೆಲ್ಲಿಸ್ತಾರಾ ಪ್ಯಾನ್ಸ್..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ರಿಲೀಸ್ಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಗುರುವಾರ ಬೆಳ್ಳಂ ಬೆಳಿಗ್ಗೆ ರಾಜ್ಯಾದ್ಯಂತ ಸಿನಿಮಾದ ಪ್ರದರ್ಶನ ಶುರುವಾಗಲಿದೆ. ಬೆಳಗಿನ 6 ರಿಂದ ಶೋಗಳು ಆರಂಭ ಅಗಲಿದ್ದು ಈಗಾಗ್ಲೇ ಬೆಳಗಿನ ಆಟ ಗಳ ಟಿಕೆಟ್ಸ್ಗಳೆಲ್ಲಾ ಸೇಲ್ ಆಗಿವೆ.
ದರ್ಶನ್ (Darshan Thoogudeepa) ನಟನೆಯ ದಿ ಡೆವಿಲ್ (The Devil) ಮೂವಿ ರಿಲೀಸ್ ಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಗುರುವಾರ ಬೆಳ್ಳಂ ಬೆಳಿಗ್ಗೆಯಿಂದಲೇ ಡೆವಿಲ್ ಶೋಗಳು ಶುರುವಾಗಲಿವೆ. ಈಗಾಗ್ಲೇ ಡೆವಿಲ್ ಅಡ್ವಾನ್ಸ್ ಬುಕ್ಕಿಂಗ್ ಹವಾ ಜೋರಾಗಿದೆ. ದರ್ಶನ್ ಜೈಲಿನಲ್ಲಿರೋವಾಗಲೇ ಬರ್ತಾ ಇರೋ ಡೆವಿಲ್ ಮತ್ತೊಂದು ಸಾರಥಿ ಆಗಲಿದೆಯಾ..? ಏನಾಗಲಿದೆ ಡೆವಿಲ್ ಭವಿಷ್ಯ.. ನೋಡೋಣ ಬನ್ನಿ.
‘ದಿ ಡೆವಿಲ್’ ರಿಲೀಸ್ಗೆ ಕೌಂಟ್ ಡೌನ್ ಸ್ಟಾರ್ಟ್; ಗುರುವಾರ ಬೆಳ್ಳಂಬೆಳಿಗ್ಗೆ ಫ್ಯಾನ್ಸ್ಗೆ ದಾಸನ ದರ್ಶನ
ಯೆಸ್ ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ರಿಲೀಸ್ಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಗುರುವಾರ ಬೆಳ್ಳಂ ಬೆಳಿಗ್ಗೆ ರಾಜ್ಯಾದ್ಯಂತ ಸಿನಿಮಾದ ಪ್ರದರ್ಶನ ಶುರುವಾಗಲಿದೆ. ಬೆಳಗಿನ 6 ರಿಂದ ಶೋಗಳು ಆರಂಭ ಅಗಲಿದ್ದು ಈಗಾಗ್ಲೇ ಬೆಳಗಿನ ಆಟ ಗಳ ಟಿಕೆಟ್ಸ್ಗಳೆಲ್ಲಾ ಸೇಲ್ ಆಗಿವೆ.
ಡೆವಿಲ್ ಟ್ರೈಲರ್ ನೋಡ್ತಾ ಇದ್ರೆ ಇದೊಂದು ಮಾಸ್ ಮಸಾಲ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಅದ್ರಲ್ಲೂ ದರ್ಶನ್ ಸಖತ್ ಸ್ಟೈಲಿಶ್ ಅವತಾರದಲ್ಲಿ ಮಿಂಚಿದ್ದಾರೆ. ಈ ಹಿಂದೆ ದರ್ಶನ್ ಜೊತೆಗೆ ತಾರಕ್ ಸಿನಿಮಾ ಮಾಡಿದ್ದ ಪ್ರಕಾಶ್ ವೀರ್ ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ.
2 ವರ್ಷಗಳ ಬಳಿಕ ಬಿಗ್ಸ್ಕ್ರೀನ್ ಮೇಲೆ ದರ್ಶನ್
ದರ್ಶನ್ ನಟನೆಯ ಹಿಂದಿನ ಸಿನಿಮಾ ತೆರೆಗೆ ಬಂದಿದ್ದು, 2023ರ ಡಿಸೆಂಬರ್ನಲ್ಲಿ. 29 ಡಿಸೆಂಬರ್ 2023ರಂದು ಕಾಟೇರ ತೆರೆಗೆ ಬಂದಿತ್ತು. ದರ್ಶನ್ ಕರೀಯರ್ನಲ್ಲೇ ದೊಡ್ಡ ಹಿಟ್ ಅನ್ನಿಸಿಕೊಂಡಿದ್ದ ಈ ಸಿನಿಮಾ ದಾಖಲೆ ಕಲೆಕ್ಷನ್ ಮಾಡಿತ್ತು,
ಇಷ್ಟು ದೊಡ್ಡ ಯಶಸ್ಸಿನ ನಂತರ ಸೆಟ್ಟೇರಿದ ದರ್ಶನ್ ಹೊಸ ಚಿತ್ರವೇ ದಿ ಡೆವಿಲ್. ಭರದಿಂದ ಶೂಟಿಂಗ್ ಆರಂಭಿಸಿದ್ದ ದಿ ಡೆವಿಲ್ ಕಳೆದ ವರ್ಷ ಡಿಸೆಂಬರ್ಗೇನೇ ತೆರೆಗೆ ಬರಬೇಕಿತ್ತು. ಆದ್ರೆ ನಾನಾ ಅಡೆತಡೆಗಳನ್ನ ಎದುರಿಸಿರೋ ಡೆವಿಲ್ ಫೈನಲಿ ನಾಳೆ ರಾಜ್ಯಾದ್ಯಂತ ರಿಲೀಸ್ ಆಗ್ತಾ ಇದೆ.
ಮತ್ತೊಂದು ಸಾರಥಿ ಆಗುತ್ತಾ ದಿ ಡೆವಿಲ್..?
ಹೌದು ಈ ಹಿಂದೆ ಸಾರಥಿ ರಿಲೀಸ್ ಟೈಂನಲ್ಲೂ ದರ್ಶನ್ ಜೈಲಲ್ಲಿ ಇದ್ರು. ನಾಯಕನಟನ ಅನುಪಸ್ಥಿತಿಯಲ್ಲಿ ಬಂದ ಸಿನಿಮಾ ಬಿಗ್ಗೆಸ್ಟ್ ಹಿಟ್ ಆಗಿತ್ತು. ಅಭಿಮಾನಿಗಳು ಸಾರಥಿಯನ್ನ ಗೆಲ್ಲಿಸಿದ್ರು.
ಇದೀಗ ದಿ ಡೆವಿಲ್ಗೂ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಬೆಂಬಲ ನೀಡ್ತಾ ಇದ್ದಾರೆ. ದಿ ಡೆವಿಲ್ ಕೂಡ ಸಾರಥಿಯಂತೆ ದೊಡ್ಡ ಸಕ್ಸಸ್ ಆಗುತ್ತಾ..? ದರ್ಶನ್ ಒಳಗಿರೋವಾಗ, ಹೊರಗೆ ಈ ಸಿನಿಮಾ ಜಯಭೇರಿ ಬಾರಿಸುತ್ತಾ ಕಾದುನೋಡಬೇಕಿದೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..