ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!

ಬಿಗ್ ಬಾಸ್ ಮನೆಯಲ್ಲಿ ಮೋಡಿ ಮಾಡಿರೋ ಗಿಲ್ಲಿ ಈಗ ಬಿಗ್ ಸ್ಕ್ರೀನ್​ನಲ್ಲೂ ಮಿಂಚ್ತಾ ಇದ್ದಾನೆ. ಇತ್ತೀಚೆಗೆ ರಿಲೀಸ್ ಆಗಿರೋ ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾದಲ್ಲಿ ಗಿಲ್ಲಿ ಒಂದು ಮುಖ್ಯ ಪಾತ್ರದಲ್ಲಿ ಮಿಂಚಿದ್ದಾನೆ. ಏನಿದು ಗಿಲ್ಲಿ ದರ್ಬಾರ್..? ಈ ಸ್ಟೋರಿ ನೋಡಿ..

Share this Video
  • FB
  • Linkdin
  • Whatsapp

ಈ ಸಾರಿ 'ಬಿಗ್​ ಬಾಸ್​ಕನ್ನಡ 12'ರಲ್ಲಿ ಗಿಲ್ಲಿ ನಟ ಮಾಡಿರೋ ಮೋಡಿ ಗೊತ್ತೇ ಇದೆ. ಬಿಗ್​ ಬಾಸ್​ನಿಂದ ನಾಡಿನಾದ್ಯಂತ ಗಿಲ್ಲಿ ನಟ ಮನೆಮಾತಾಗಿದ್ದಾನೆ. ಈ ನಡುವೆ ದರ್ಶನ್ ನಟನೆಯ ಡೆವಿಲ್ ಮೂವಿನಲ್ಲಿ ಗಿಲ್ಲಿ ಒಂದು ಮುಖ್ಯ ಪಾತ್ರ ಮಾಡಿದ್ದು, ಬಿಗ್​ ಸ್ಕ್ರೀನ್​ನಲ್ಲೂ ಗಿಲ್ಲಿ ಮ್ಯಾಜಿಕ್ ಶುರುವಾಗಿದೆ.

ಬಿಗ್​ ಬಾಸ್​​ನಲ್ಲೂ ಗಿಲ್ಲಿ.. ಬಿಗ್​ ಸ್ಕ್ರೀನ್​ನಲ್ಲೂ ಗಿಲ್ಲಿ..!
ಯೆಸ್ ಈ ಸಾರಿಯ ಬಿಗ್ ಬಾಸ್ ಕನ್ನಡದಲ್ಲಿ ಅತಿ ಹೆಚ್ಚು ಸದ್ದು ಸುದ್ದಿ ಮಾಡಿರೋದು ಒನ್ ಌಂಡ್ ಓನ್ಲಿ ಗಿಲ್ಲಿ. ಗಿಲ್ಲಿಗಂತಲೇ ಬಿಗ್ ಬಾಸ್ ನೋಡುವ ದೊಡ್ಡ ವೀಕ್ಷಕರ ವರ್ಗ ಕ್ರಿಯೇಟ್ ಆಗಿದೆ. ಈ ಸಾರಿಯ ಬಿಗ್ ಬಾಸ್ ಅಂದ್ರೆ ಎಲ್ಲರೂ ಮೊದಲು ಗಿಲ್ಲಿ ಹೆಸರನ್ನೇ ತೆಗೆದುಕೊಳ್ತಾರೆ.

ಹೀಗೆ ಬಿಗ್ ಬಾಸ್ ಮನೆಯಲ್ಲಿ ಮೋಡಿ ಮಾಡಿರೋ ಗಿಲ್ಲಿ ಈಗ ಬಿಗ್ ಸ್ಕ್ರೀನ್​ನಲ್ಲೂ ಮಿಂಚ್ತಾ ಇದ್ದಾನೆ. ಇವತ್ತು ರಿಲೀಸ್ ಆಗಿರೋ ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದಲ್ಲಿ ಗಿಲ್ಲಿ ಒಂದು ಮುಖ್ಯ ಪಾತ್ರದಲ್ಲಿ ಮಿಂಚಿದ್ದಾನೆ.

ದಾಸನ ಡೆವಿಲ್​ ಚಿತ್ರದಲ್ಲಿ ಕಾಮಿಡಿ ಕಿಲಾಡಿ ಗಿಲ್ಲಿ..!
ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದಲ್ಲಿ ಕನ್ನಡ ಕಿರುತೆರೆಯ ಅನೇಕ ಕಾಮಿಡಿ ಕಿಲಾಡಿಗಳು ಇದ್ದಾರೆ. ಅವರೆಲ್ಲರ ನಡುವೆ ಒಂದು ಮುಖ್ಯಪಾತ್ರದಲ್ಲಿ ಗಿಲ್ಲಿ ನಟ ಕೂಡ ನಟನೆ ಮಾಡಿದ್ದಾನೆ. ಬಿಗ್​ಬಾಸ್ ನಲ್ಲಿ ಗಿಲ್ಲಿ ನಟ ದೊಡ್ಡದಾಗಿ ಹವಾ ಕ್ರಿಯೇಟ್ ಮಾಡಿದ ಮೇಲೆ ಡೆವಿಲ್ ತಂಡ ಗಿಲ್ಲಿಯದ್ದೇ ಒಂದು ಸಪರೇಟ್ ಪೋಸ್ಟರ್ ರಿಲೀಸ್ ಮಾಡಿತ್ತು. ಟ್ರೈಲರ್​ನಲ್ಲೂ ಗಿಲ್ಲಿಯ ಸೀನ್​ನ ಇಡಲಾಗಿತ್ತು.

ಟ್ವಿಸ್ಟ್ ಕೊಡೋ ಸಿಬಿಐ ಶಂಕರ್ ಪಾತ್ರದಲ್ಲಿ ಗಿಲ್ಲಿ..!
ಹೌದು ಡೆವಿಲ್ ಸಿನಿಮಾದಲ್ಲಿ ಗಿಲ್ಲಿ ಮಾಡಿರೋ ಪಾತ್ರದ ಹೆಸರು ಸಿಬಿಐ ಶಂಕರ್ ಅಂತ. ಅಯ್ಯಯ್ಯೋ ಗಿಲ್ಲಿ ನಟನ ಪರ್ಸನಾಲಿಟಿಗೆ ಅದು ಹೇಗೆ ಸಿಬಿಐ ಪಾತ್ರ ಕೊಟ್ರು ಅಂತೀರಾ.. ಸಿಬಿಐ ಅಂದ್ರೆ ಸೆಂಟ್ರಲ್ ಬ್ಯೂರೋ ಆಫ್ ಇನ್​ವೆಸ್ಟಿಗೇಷನ್ ಅಲ್ಲ. ಸಿಬಿಐ ಅನ್ನೋದು ಅವನ ಇನೀಶಿಯಲ್ ಅಷ್ಟೇ. ಇಂಥದ್ದೊಂದು ಹೆಸರಿಟ್ಟುಕೊಂಡು ಆಗಾಗ ಎಂಟ್ರಿ ಕೊಡೋ ಗಿಲ್ಲಿ, ಚಿತ್ರಕ್ಕೆ ಒಂದು ಟ್ವಿಸ್ಟ್ ಕೊಡುವ ಮುಖ್ಯ ಸನ್ನಿವೇಶದಲ್ಲಿ ನಟನೆ ಮಾಡಿದ್ದಾನೆ.

ದೊಡ್ಮನೆಯಿಂದ ಗಿಲ್ಲಿಗೆ ಮತ್ತಷ್ಟು ಫೇಮ್; ಸಿನಿದುನಿಯಾದಲ್ಲೀಗ ಗಿಲ್ಲಿಯದ್ದೇ ನೇಮ್
ಬಿಗ್ ಬಾಸ್​​ನಲ್ಲಿ ಗಿಲ್ಲಿ ಗಳಿಸಿರೋ ಫೇಮ್ ಎಷ್ಟಿದೆ ಅಂದ್ರೆ ಸಿನಿದುನಿಯಾದಲ್ಲೂ ಗಿಲ್ಲಿ ನೇಮ್ ಜೋರಾಗಿ ಓಡಾಡ್ತಾ ಇದೆ. ಗಿಲ್ಲಿ ಏನೂ ಸಿನಿಲೋಕಕ್ಕೆ ಹೊಸಬ ಅಲ್ಲ. ಈತ ಮಾಡಿದ ಕಿರುಚಿತ್ರಗಳು ಮತ್ತು ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋದ ಪರ್ಫಾರ್ಮೆನ್ಸ್ ನೋಡಿ ಗಿಲ್ಲಿಗೆ ಸಾಕಷ್ಟು ಸಿನಿಮಾ ಆಫರ್​ಗಳು ಆಗಲೇ ಬಂದಿದ್ವು.

ಸಮರ್ಜೀತ್ ಲಂಕೇಶ್ ನಟನೆಯ ಗೌರಿ, ಲಂಗೋಟಿ ಮ್ಯಾನ್ ಸೇರಿದಂತೆ ಒಂದಿಷ್ಟು ಚಿತ್ರಗಳಲ್ಲಿ ಗಿಲ್ಲಿ ಕಾಮಿಡಿಯನ್ ಪಾತ್ರಗಳನ್ನ ಮಾಡಿದ್ದ. ಸದ್ಯ ಸೂಪರ್ ಹಿಟ್ ಅನ್ನೋ ಗಿಲ್ಲಿ ನಟನ ಇನ್ನೊಂದು ಚಿತ್ರ ರಿಲೀಸ್ ಗೆ ರೆಡಿ ಇದೆ. ಇದ್ರಲ್ಲಿ ಎರಡನೇ ನಾಯಕನಾಗಿ ನಟಿಸಿದ್ದಾನೆ ಗಿಲ್ಲಿ ನಟ.

ಗಿಲ್ಲಿಗಾಗಿ ಕಾಯ್ತಿವೆ ಹಲವು ಚಿತ್ರತಂಡಗಳು..!
ಹೌದು ಗಿಲ್ಲಿ ಈಗಾಗ್ಲೇ ನಟನೆ ಮಾಡಿರೋ ಕೆಲ ಸಿನಿಮಾ ತಂಡಗಳು ಗಿಲ್ಲಿ ಹೊರಬರ್ತಾನೆ ಆತನನ್ನ ಇಟ್ಟುಕೊಂಡು ಪ್ರಚಾರ ಮಾಡಬೇಕು ಅನ್ನೋ ತಯಾರಿಯಲ್ಲಿವೆ. ಇನ್ನೂ ಅನೇಕರು ತಮ್ಮ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ಗಿಲ್ಲಿಯನ್ನ ಕಾಸ್ಟ್ ಮಾಡಿಕೊಳ್ಳೋದಕ್ಕೆ ಕಾಯ್ತಾ ಇದ್ದಾರೆ. ಒಟ್ನಲ್ಲಿ ಬಿಗ್​ಬಾಸ್ ಜೊತೆಗೆ ಬಿಗ್ ಸ್ಕ್ರೀನ್​ನಲ್ಲೂ ಗಿಲ್ಲಿ ಹವಾ ಜೋರಾಗಿದೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ..

Related Video