Renukaswamy Case: ಸುಪ್ರೀಂ ಎದುರು ದರ್ಶನ್ ದರ್ಬಾರ್ ಕತೆ ರಿವೀಲ್..; ರೇಣುಕಾಸ್ವಾಮಿ ಪರ ಧ್ವನಿಯೆತ್ತಿದ ರಮ್ಯಾ!

ದರ್ಶನ್ & ಗ್ಯಾಂಗ್​​ನ ಬೇಲ್ ರದ್ದತಿ ಕುರಿತಂತೆ ಸುಪ್ರೀಂ ಕೋರ್ಟ್​ನಲ್ಲಿ ನಡೆದ ವಿಚಾರಣೆಯಲ್ಲಿ ದರ್ಶನ್​ಗೆ ಹಲವು ಹಿನ್ನಡೆ ಆಗಿವೆ. ಒಂದು ಕಡೆ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಮಾಡಿದ ಮೋಜು-ಮಸ್ತಿ ಸುಪ್ರೀಂ ಗಮನಕ್ಕೆ ಬಂದಿದೆ. 

Share this Video
  • FB
  • Linkdin
  • Whatsapp

ಗುರುವಾರ ಸುಪ್ರೀಂ ಕೋರ್ಟ್​ನಲ್ಲಿ ನಡೆದ ವಿಚಾರಣೆಯಲ್ಲಿ ಪ್ರಾಸಿಕ್ಯೂಶನ್ ಪರ ವಕೀಲ ದರ್ಶನ್​ಗೆ ಹೈಕೋರ್ಟ್ ನೀಡಿರುವ ಬೇಲ್ ಯಾಕೆ ರದ್ದು ಮಾಡಬೇಕು ಅನ್ನೋ ಸಂಗತಿಗಳನ್ನ ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ. ದರ್ಶನ್ ಒಬ್ಬ ಪ್ರಭಾವಿ ವ್ಯಕ್ತಿ, ಜನಪ್ರೀಯ ನಟ ಆತ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಅನ್ನೋದನ್ನ ಕೋರ್ಟ್​ಗೆ ಮನವರಿಕೆ ಮಾಡಿಸಿದ್ದಾರೆ. ಹೌದು ಈ ಹಿಂದೆ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಅಲ್ಲಿರುವ ಕೆಲ ರೌಡಿಗಳ ಜೊತೆ ಸೇರಿ ಐಷಾರಾಮಿ ಲೈಫ್ ಲೀಡ್ ಮಾಡಿಕೊಂಡಿದ್ರು. ದರ್ಶನ್ ಸಿಗರೇಟ್ ಹೊಡೀತಾ ಕುಳಿತಿದ್ದ ಫೋಟೋ ಹೊರಬಂದು ದಾಸನ ದರ್ಬಾರ್ ಹೊರಗೆ ಬಂದಿತ್ತು. ಅಲ್ಲಿಂದ ಮುಂದೆ ದರ್ಶನ್​ನ ಬಳ್ಳಾರಿ ಜೈಲಿಗೆ ಕಳಿಸಿದ್ರೆ, ಡಿ ಗ್ಯಾಂಗ್​​ನ ಒಬ್ಬೊಬ್ಬ ಸದಸ್ಯರನ್ನೂ ಒಂದೊಂದು ಜೈಲಿಗೆ ವರ್ಗಾಯಿಸಲಾಗಿತ್ತು. ಇದನ್ನ ಸುಪ್ರೀಂ ಗಮನಕ್ಕೆ ತಂದಿದ್ದಾರೆ ನ್ಯಾಯವಾದಿ ಸಿದ್ದಾರ್ಥ್ ಲೂತ್ರಾ.

Related Video